ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜೂನ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಭಾರತದ ಚಿನ್ಹೆಗಳು

ಭಾರತದ ಚಿನ್ಹೆಗಳು     ‪#‎ ರಾಷ್ಟ್ರಧ್ವಜ‬ => ಭಾರತದ ರಾಷ್ಟ್ರ ಧ್ವಜದ ಉದ್ದ & ಅಗಲದ ಅನುಪಾತ 3:2 => ಭಾರತದ ರಾಷ್ಟ್ರಧ್ವಜದ ಬಣ್ಣ ಕೆಸರಿ,ಬಿಳಿ,ಹಸಿರು ಹೊಂದಿದೆ => ಭಾರತದ ರಾಷ್ಟ್ರಧ್ವಜದ ಮಧ್ಯಭಾಗದಲ್ಲಿ 24 ಕಡ್ಡಿಗಳನ್ನು ಹೊಂದಿರುವ ಅಶೋಕನು ಹೊರಡಿಸಿದ ಸಾರನಾಥ ಸೂಪ್ತದಿಂದ ಪಡೆದಿರುವ ಧರ್ಮ ಚಕ್ರವಿದೆ.ಇದು ನಿಲಿ ಬಣ್ಣದಿಂದ ಕೂಡಿದೆ. => ಭಾರತದ ಸಂವಿಧಾನ ರಚನಾ ಸಭೆಯು 22 ಜುಲೈ 1947 ರಲ್ಲಿ ರಾಷ್ಟ್ರಧ್ವಜವನ್ನು ಅಳವಡಿಸಿಕೊಂಡಿತು. => ಭಾರತದ ಧ್ವಜಸಂಹಿತೆ(flag code) 26 ಜನೆವರಿ 2002 ರಂದು ಜಾರಿಗೆ ಬಂದಿತು. => ಭಾರತದ ಪ್ರತಿಯೊಬ್ಬ ರಾಷ್ಟ್ರಧ್ವಜ ಹಾರಿಸುವುದು ಮೂಲಭೂತ ಹಕ್ಕು ಎಂದು ಕಲಂ 19(i) ವಿವರಿಸುವುದು. => ಭಾರತದ ತ್ರಿವರ್ಣ ಧ್ವಜವನ್ನು ಮೊಟ್ಟಮೊದಲಿಗೆ ತಯಾರಿಸಿದವರು ಮೇಡಂ ಭೀಕಾಜಿ ಕಾಮಾ. => ಭಾರತದ ಧ್ವಜವನ್ನು ಮೊದಲಿಗೆ ಲಾಹೋರದ ರಾವಿ ನದಿಯ ದಂಡೆ ಮೇಲೆ 1928 ರ ಕಾಂಗ್ರೆಸ್ಸ ಅಧಿವೇಶನದಲ್ಲಿ ಜವಾಹರಲಾಲ ನೆಹರೂ ಹಾರಿಸಿದರು. => ಕೆಂಪು ಕೋಟೆಯ ಮೇಲೆ ಪ್ರತಿ ವರ್ಷ ರಾಷ್ಟ್ರೀಯ ಧ್ವಜ ಹಾರಿಸುವವರು ಪ್ರಧಾನಮಂತ್ರಿಗಳು => ತ್ರಿವರ್ಣ ಧ್ವಜದ ವಿನ್ಯಾಸಗೊಳಿಸಿದವರು ಪಿಂಗಳಿ ವೆಂಕಯ್ಯ. => ರಾಷ್ಟ್ರ ಧ್ವಜ ಕರ್ನಾಟಕದಲ್ಲಿ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ತಯಾರಿಸಲಾಗುತ್ತದೆ. 2}  ‪#‎ ರಾಷ್ಟ್ರೀಯ_ಚಿನ್ಹೆ‬ => ಭಾರತದ ರಾಷ್ಟ್ರೀಯ ಚಿನ್ಹೆಯನ್ನು ...

ಮಹಾಚಂಪೋ ಅವರ ಭಾವಗೀತೆಗಳ ಧ್ವನಿ ಸುರುಳಿ

ಖಾನಟ್ಟಿಯ ಕವಿ ಡಾ. ಮಹಾದೇವ ಪೋತರಾಜ್ ಅವರ ಭಾವಗೀತೆಗಳನ್ನು ಖ್ಯಾತ ಯುವ ಗಾಯಕ ಶ್ರೀಕಾಂತ  ನಾಯಕ ಅವರ ಧ್ವನಿಯಲ್ಲಿ ಕೇಳಿ ಆನಂದಿಸಿ..... ಭಾವಗೀತೆ ಕೇಳಲು ಇಲ್ಲಿ ಕ್ಲಿಕ್ಕಿಸಿ

ಸಂಬಂಧಗಳೇ ಹಾಗೆ......! ಸುರೇಶ ಮುದ್ದಾರ

ಸಂಬಂಧಗಳೆ ಹಾಗೆ ಎಷ್ಟೋ ವರ್ಷ ಒಟ್ಟಿಗಿದ್ದ  ಗಟ್ಟಿ ಸಂಬಂಧಗಳು ಯಾವುದೋ ಬಿರುಗಾಳಿಗೆ ಸಿಕ್ಕು ನೆಲಕ್ಕುರುಳಿವೆ ಯಾವುದೋ ಗತಕಾಲದ ವೈಭವದ ಸಾಮ್ರಾಜ್ಯದಂತೆ ಎಂದೂ ಶಿಥಿಲಗೊಳ್ಳುವುದಿಲ್ಲವೆಂಬ ಸಂಬಂಧಗಳೂ ಸ್ವಾರ್ಥಕ್ಕೊ, ಸೆಳೆತಕ್ಕೊ, ಅನುಮಾನಕ್ಕೊ ಅವಮಾನಕ್ಕೊ ಸಿಲುಕಿ ನಲುಗಿ ಹೋಗಿವೆ ಚಾಡಿ ಮಾತಿಗೆ ಕಿವಿಗೊಟ್ಟ ಅರಮನೆಗಳಂತೆ ಅಂದು ಅರಮನೆಯ ಸಿಂಹಾಸನಕ್ಕೆ ಹೃದಯವಿದ್ದಿದ್ದರೆ ಕಿಟಕಿ, ಬಾಗಿಲುಗಳೆಲ್ಲ ತೆರೆದುಕೊಂಡಿದ್ದರೆ ಅರಮನೆಯಲ್ಲಿ  ಸ್ವಚ್ಛ ಗಾಳಿ ಶುಭ್ರ ಬೆಳಕು ತುಂಬಿಕೊಂಡಿರುತ್ತಿತ್ತು ಆದರೆ, ಅರಮನೆಯ ಸಿಂಹಾಸನಕ್ಕಂದು ತುಕ್ಕು ಹಿಡಿದೂ ಕಿಟಕಿ, ಬಾಗಿಲು, ಗೋಡೆಳೆಲ್ಲ ಬಿರುಕು ಬಿಟ್ಟವು ಅದಕ್ಕಾಗಿ ಅಲ್ಲವೆ ಅರಮನೆಗೊಂದು ಮಹಾಮನೆ ಹುಟ್ಟಿಕೊಂಡಿದ್ದು, ನೆತ್ತರ ಕೋಡಿ ಹರಿದ್ದದ್ದು, ಕಲ್ಯಾಣದ ತುಂಬೆಲ್ಲ ಬೆಳಕು ಚೆಲ್ಲಿದ್ದು  ವಜ್ರ ವೈಡೂರ್ಯಗಳಿಂದ ಮೆರೆದ ವೈಭವದ ಸಾಮ್ರಾಜ್ಯವಿಂದು ಪಾಳು ಬಿದ್ದ ಅರಮನೆಗಳನ್ನು ಕೋಟೆಗಳನ್ನು ಸುತ್ತುತ್ತ ಕರುಳು ಹಿಂಡಿದ ಒಂದೊಂದು ಕತೆ ಹೇಳುತ್ತ ವ್ಯಥೆ ಪಡುತ್ತಿದೆ  ನಮ್ಮವರೆ ನನಗೆ ಈ ಗತಿ ತಂದರಲ್ಲ ಎಂದು.  ಹೌದು ಈ ಸಂಬಂಧಗಳೆ ಹಾಗೆ..... ನಿನ್ನೆ ಇದ್ದದ್ದು ಇಂದು ಯಾರದೋ ಇಂದು ಇದ್ದದ್ದು ನಾಳೆ ಇನ್ನ್ಯಾರದೊ  ಕೋಟೆ ಕೊತ್ತಲು ಅರಮನೆಗಳ   ಸಂಬಂಧ ಶಿಥಿಲುಗೊಂಡಿದೆ  ಗೋಡೆಗಳ ಬಿರುಕಿನಿಂದ  ಹಕ್ಕಿಗಳು ಕಟ್ಟಿದ   ಗೂಡುಗಳಲ್ಲಿನ ಸಂಬಂಧ...

ಸುರೇಶ ಮುದ್ದಾರರ "ಗಡಿಯಾರ ಮತ್ತು ಕಾಲನ ಕರೆ" ಕವಿತೆ

ಗಡಿಯಾರ ಮತ್ತು ಕಾಲನ ಕರೆ ಗಡಿಯಾರದಂಗಡಿಯಲ್ಲಿ  ಭಿನ್ನ ಭಿನ್ನ ಗಡಿಯಾರಗಳು ಸಮಯವೂ ಭಿನ್ನ ವಿಭಿನ್ನ ಭಿನ್ನತೆಯಿಲ್ಲದಿರುವುದು ಕಾಯಕದಲ್ಲಿ ಗಡಿಯಾರದಿಂದ ಗಡಿಯಾರಕ್ಕೆ ಸಮಯದಲ್ಲಿ ವ್ಯತ್ಯಾಸವಿದ್ದರೂ ಸಮಯ ಮಾತ್ತ ಚಲಿಸುತ್ತಿದೆ ನಿರಂತರವಾಗಿ  ಕಾಲನ ಸರದಿಯ ಕರೆಗಾಗಿ ಗೂಡು ಕಟ್ಟುತ್ತಿವೆ ಹಕ್ಕಿಗಳು ಮರದಲ್ಲಿ ಗೂಡಿನಿಂದ ಗೂಡಿಗೆ ವ್ಯತ್ಯಾಸವಿದ್ದರೂ ಕಟ್ಟುವ ಕಾಯಕ ಮಾತ್ರ ಒಂದೆ ಗೂಡು ಕಟ್ಟುವ ಹಕ್ಕಿ ಬೇರೆ ಗೂಡನ್ನು ನೋಡುವುದೇ ಇಲ್ಲ ಅದರ ಚಿತ್ತವೆನಿದ್ದರೂ ತನ್ನ ಗೂಡಿನತ್ತ ಹಕ್ಕಿಯ ಹಾರಾಟ ಗಡಿಯಾರದ ಸಮಯ ಎಂದೂ ನಿಲ್ಲುವುದಿಲ್ಲ ಹಕ್ಕಿಯ ಹಾರಾಟದಲ್ಲೆ ಅದರ ಬದುಕಿದೆ ಗಡಿಯಾರದ ಸಮಯದಲ್ಲೇ ಜಗದ ಬದುಕಿದೆ ಜಗದ ಬದುಕಿನ ದಾರಿಯಲ್ಲಿ ತಿರುವುಗಳೆಷ್ಟೋ ಆ ತಿರುವುಗಳ ಹೋಯ್ದಾಟದಲ್ಲಿ ದಾಟಿ ಬಂದವರೆಷ್ಟೊ ಎಲ್ಲವೂ ಕಾಲನ ಕಟ್ಟಳೆಗಳೆ ಗಡಿಯಾರದ ಸಮಯದಂತೆ ಯುಗಯುಗಗಳನಾಳಿದ ಅರಸೊತ್ತಿಗೆ ಇಂದು ಇಲ್ಲ ಅದರ ಸಮಯ ಎಂದೋ ಮುಗಿದಿದೆ ಆದರೆ ಆ ಸಮಯವಿಂದು ಸ್ಮೃತಿ ಪಟಲದಲ್ಲಿ ಅಚ್ಚೊತ್ತಿ ನಿಂತಿದೆ ಆ,ಕಾಲ ಈ ಕಾಲ ಎಂದು ಗೊಣಗಾಡುವುದರಲ್ಲೆ ಕಾಲ ಹರಣವಾಗುತ್ತಿದೆ ಸಮಯ ಮಾತ್ರ ಚಲಿಸುತ್ತಿದೆ ನಿರಂತರ ಗಡಿಯಾರದಲ್ಲಿ ಜಗದ ಆಟ ಕಾಲನ ಕರೆಯಲ್ಲಿ   ರಚನೆ: ಸುರೇಶ ಮುದ್ದಾರ

ಅರಮನೆಯಿಂದ ಅರಿವಿನರಮನೆಗೆ...

ಅರಮನೆಯಿಂದ ಅರಿವಿನರಮನೆಗೆ... ನಡುರಾತ್ರಿ ಅರಮನೆಯಲ್ಲಿ ನೀರವ ಮೌನ ಝಗಝಗಿಸುವ ದೀಪದ ಬೆಳಕಿನಲ್ಲಿ ಹೃದಯ ತಲ್ಲಣ ಎದೆಯ ಕಣ್ಣು ಮುಚ್ಚಿದ ವಿಲಾಸ ಇಂದೇಕೆ ಹೀಗಾಗುತ್ತಿದೆ? ಅರಮನೆಯ ವಿಲಾಸ ಬದುಕೆ ಬೇಸರವೆನಿಸುತ್ತಿದೆ ನಿನ್ನೆಯ ಆ ಚಿತ್ರಗಳು ಕಣ್ಣ ಮುಂದೆ ಬಂದು ಕುಣಿಯುತ್ತಿವೆಯಲ್ಲ ಆ ವೃದ್ಧ, ಆ ರುಗ್ಣ, ಆ ಶವಯಾತ್ರೆ ನನ್ನನ್ನು ಆವರಿಸಿ ಕಾಡುತ್ತಿವೆ ಈ ಅರಮನೆ ವೃದ್ಧನನ್ನು ಮುಪ್ಪಿನಿಂದ ರುಗ್ಣನನ್ನು ರೋಗದಿಂದ ಸತ್ತವನನ್ನು ಸಾವಿನಿಂದ ಪಾರು ಮಾಡಲು ಸಾಧ್ಯವಿಲ್ಲವೆ? ಹಾಗಾದರೆ........ ಇದೆಂತಹ ಅರಮನೆ? ಅರಮನೆಗೊಬ್ಬ ರಾಜ ರಾಜನಿಗೋ ಹತ್ತು ನೂರು ಸಾವಿರ ಲಕ್ಷ ಸೇವಕರು ರಾಣಿಯರು ದಾಸಿಯರು ಕೋಟೆ ಕೊತ್ತಲಗಳು ಅಡಿಗಡಿಗೊಬ್ಬ ಕಾವಲುಗಾರ ಆದರೂ ಇದೇನಿದು? ನಿನ್ನೆಯವರು ಇಂದು ಇಂದಿನವರು ನಾಳೆ ಇರುತ್ತಿಲ್ಲವಲ್ಲ ಹಾಗಾದರೆ.......ಮುಂದೆ...... ಈ ಅರಮನೆಯೂ? ರಾಜನೂ? ಹಾಹಾಹಾ! ಮತ್ತೇ..... ಇವಳು? ಹಾಗೆ.......ಇವನು? ಜೊತೆಗೆ....ನಾನೂ? ಇದೇಕೆ ಹೀಗೆ? ಉತ್ತರವಿಲ್ಲವಿದಕೆ? ಅರೆರೆ ಯಾರೋ ಗವಾಕ್ಷಿಯಿಂದ ಕೂಗಿದಂತಾಯಿತಲ್ಲ, ಯಾರಿರಬಹುದು? ಓಹೋ!  ಮೂಡಣದ ತಾರೆ ನನ್ನತ್ತ ದಿಟ್ಟಿ ನೆಟ್ಟು  ಕೈಬೀಸಿ ಕರೆಯುತ್ತಿದೆ ಬಾ ಬಾ ನಿನಗೆ ಉತ್ತರಬೇಕಲ್ಲವೆ? ಬಾ ಬೇಗ ಬಾ ಈಗಲೇ ಬಾ ಅರಮನೆಯ ಹಂಗು ತೊರೆದು ನಸುನಗುತ ಬಾ ಅನಂತ ದಾರಿಯಲಿ ಆಹಾ! ಎಂಥ ಬೆಳದಿಂಗಳು ಪೂರ್ಣಚಂದ್ರ ಇಂದೇಕೆ ಅಷ್ಟು ಹೊಳೆಯುತ್ತಿದ್ದಾ...

ಡಾ. ಮಹಾದೇವ ಪೋತರಾಜ್ ಅವರ "ನುಡಿನಮನ" ಕವಿತೆ

ನುಡಿನಮನ ಸೈದ್ದಾಂತಿಕ ನೆಲೆಯಲ್ಲೆ ಬದುಕಿ ವೈಚಾರಿಕ ಪ್ರಜ್ಞೆಯಿಂದ ಚಿಂತಿಸಿ ರೈತರ,ಕೂಲಿಕಾರರ,ಶೋಷಿತ ಜನಾಂಗದ ಬದುಕಿಗೆ ಬೆಳಕು ಚಲ್ಲುವ ಕಾವ್ಯ ನಿಗಿ ನಿಗಿ ಕೆಂಡವೇ ಹೊರತು ಭಂಡ ಭಾವನೆಯಲ್ಲ ಸುಟ್ಟುಕೊಂಡವನಿಗೆ ಚನ್ನಾಗಿ ಗೊತ್ತು ಬೆಂಕಿಯ ಬಿಸಿಯ ತಾಪ ಶೋಷನೆ,ಅವಮಾನ,ಅಸಮಾನತೆಯ ವಿರುದ್ಧ ಹೊರಾಡುವ ಒಂದೊಂದು  ನುಡಿಗಳು ಕಾವ್ಯದ ಧ್ವನಿಯಾಗಬಲ್ಲವಲ್ಲವೆ? ಕಾರ್ಮೋಡಗಳ ಕಗ್ಗತ್ತಲಲ್ಲಿ ಕಲ್ಲು,ಮುಳ್ಳು,ತಗ್ಗು-ದಿನ್ನೆ ಕಾಡು-ಮೇಡು, ಕಂದರ,ಕಂದಾಚಾರ ಕೊರಚಲುಗಳಲೆಲ್ಲ ಕಣ್ಣಿದ್ದು ಕುರಡಾಗಿ ಸುತ್ತಾಡಲಿಲ್ಲವೆ? ಶತಶತಮಾನದಿಂದ ನನ್ನವರು? ಸ್ವಾತಂತ್ರ್ಯ ದೇಶಕ್ಕೆ ಬಂತೆಹೊರತು ಶೋಷಿತವರ್ಗಕ್ಕೆ,ಬಡವರ ಮನೆಗೆ ಬರಲಿಲ್ಲ, ಬೆಳಕಿನ ಕಿರಣ ತರಲಿಲ್ಲ ಕವಿತೆ  ಎಷ್ಟು ಗಟ್ಟಿಧ್ವನಿಯ ಸತ್ಯ ನೋಡಿ ಸತ್ಯ ಕೆಲವರಿಗೆ ಚುಚ್ಚುತ್ತದೆ ಕೆಲವರಿಗೆ ತಟ್ಟುತ್ತದೆ ಇನ್ನು ಕೆಲವರಿಗೆ ಮುಟ್ಟುತ್ತದೆ ಇದೆ ಅಲ್ಲಿವೆ ನಿಜವಾದ ಕಾವ್ಯ? ಖಡ್ಗಕಿಂತ ಹರಿತವಾದ ಶಬ್ದಗಳ ಪ್ರಯೋಗ ಅದರ ಇರಿತ ಮುರಿತ ಹೋರಾಟ  ಕ್ರಾಂತಿಕಾರನ ಒಡಲಲ್ಲಡಗಿದ  ಕೆಂಡವೇ ಹೊರತು ಬೇರಲ್ಲ ತಿಳಿ ಹಾಸ್ಯದ ಮಾತು, ಮೃದುಮನದ ಪ್ರೇಮಕವಿ,ದಲಿತ-ಬಂಡಾಯದ ಬೇರುಖಾಂಡ ನುಡಿದರೆ ಹಾಸ್ಯ, ಬರೆದರೆ ಬೆಂಕಿ ಸಿದ್ದಲಿಂಗಯ್ಯರಿಗೆ ನನ್ನ ನುಡಿನಮನಗಳು ರಚನೆ: ಡಾ. ಮಹಾದೇವ ಪೋತರಾಜ್, ಖಾನಟ್ಟಿ ಓದಿ ವಿದ್ಯಾ ರೆಡ್ಡಿ ಅವರ ಕವಿತೆ

ಶ್ರೀ ಜಗಜ್ಯೋತಿ ಬಸವೇಶ್ವರರು

ಬಸವಣ್ಣ  (ಬಸವ,ಬಸವೇಶ್ವರ ) ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ , ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು. ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ತನ್ನ ಸಾಮ್ರಾಜ್ಯದ ಮುಖ್ಯಮಂತ್ರಿಯಾಗಿ, ಅವರು ಅನುಭವ ಮಂಟಪ (ಅಥವಾ, "ಆಧ್ಯಾತ್ಮಿಕ ಅನುಭವದ ಭವನ), ಇಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು.ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ. ಜಗದ್ಗುರು ಬಸವೇಶ್ವರ                               ಗುರು ಬಸವಣ್ಣ ಜನನ ಕ್ರಿ.ಶ. ೧೧೩೪ ಬಸವನ ಬಾಗೇವಾಡಿ   ವಿಜಯಪುರ ಜಿಲ್ಲೆ ,  ಕರ್ನಾಟಕ ,  ಭಾರತ ಮರಣ ಕ್ರಿ.ಶ. ೧೧೯೬ ಕೂಡಲಸಂಗಮ ,  ಕರ್ನಾಟಕ ,  ಭಾರತ ಗೌರವಗಳು ಜಗಜ್ಯೋತಿ ...

ಶ್ರೀ ರಾಮಾನುಜಾಚಾರ್ಯರು

ಎಂಟನೇ ಶತಮಾನದ ಅಂತ್ಯ ಮತ್ತು ಒಂಬತ್ತನೇ ಶತಮಾನದಲ್ಲಿ ವಿವಿಧ ಧರ್ಮಗಳ ಸೆಳೆತಕ್ಕೆ ಸಿಕ್ಕಿ ಸನಾತನ ಧರ್ಮ ಆವಸಾನದ ಅಂಚಿನಲ್ಲಿದ್ದಾಗ ಹಿಂದೂ ಧರ್ಮದ ಪುನರುತ್ಥಾನದ ಆಶಾಕಿರಣವಾಗಿ  ಶ್ರೀ ಶಂಕರಾಚಾರ್ಯರ ಆಗಮನವಾಗಿ  ಅನ್ಯಧರ್ಮೀಯರನ್ನು ಸಮರ್ಥವಾಗಿ ವಾದದಲ್ಲಿ ಸೋಲಿಸಿ ತಮ್ಮ  ಅಹಂ ಬ್ರಹ್ಮಾಸ್ಮಿ ಎನ್ನುವ ಅದ್ವೈತ ತತ್ವದ ಮೂಲಕ ಸನಾತನ ಧರ್ಮವನ್ನು ಎತ್ತಿಹಿಡಿದ  ಪರಂಪರೆಯನ್ನು  10 ಮತ್ತು 11ನೇ ಶತಮಾನದಲ್ಲಿ ಮುಂದುವರಿಸಿದ ಕೀರ್ತಿ ಶ್ರೀ ರಾಮಾನುಜಾಚಾರ್ಯರಿಗೆ  ಸಲ್ಲುತ್ತದೆ. ಈ ಇಬ್ಬರು ಮಹಾನ್ ಆಚಾರ್ಯರ ನಡುವೆ ಹಲವಾರು ಸಾಮ್ಯಗಳಿದ್ದು ಮೊದಲನೆಯದಾಗಿ ಈ  ಇಬ್ಬರೂ ಮಹಾನುಭಾವರ ಜಯಂತಿಯು ಒಂದೇ ದಿನವಾಗಿದೆ.  ಕೇರಳದಲ್ಲಿ ಹುಟ್ಟಿದ ಶ್ರೀ ಶಂಕರರು ಮತ್ತು ತಮಿಳುನಾಡಿನ ಶ್ರೀ ರಾಮಾನುಜರು  ಇಬ್ಬರೂ ತಮ್ಮ ಪ್ರಾಭಲ್ಯವನ್ನು ಕರ್ನಾಟಕದ ಶೃಂಗೇರಿ ಮತ್ತು ಮೇಲುಕೋಟೆಯಲ್ಲಿ ಪಡೆದುಕೊಂಡಿರುವುದು ನಮ್ಮ ನಾಡಿನ ಸೌಭಾಗ್ಯವೇ ಸರಿ . ಶ್ರೀ ಶಂಕರಾಚಾರ್ಯರು ಜೀವಿತಾವಧಿ ಕೇವಲ 32 ವರ್ಷಗಳಾದರೆ, 120 ವರ್ಷಗಳ ಕಾಲವಿದ್ದ ಶ್ರೀ ರಾಮಾನುಜರು ತಮ್ಮ ಜೀವಿತಾವಧಿಯ 32ವರ್ಷಗಳಷ್ಟು ಕಾಲವನ್ನು ಕರ್ನಾಟಕದಲ್ಲಿಯೇ ಕಳೆದು ಈ ನಾಡಿನಾದ್ಯಂತ ಸಂಚರಿಸಿ ಭಕ್ತಿಯ ಸುಧೆಯನ್ನು ಎಲ್ಲರಿಗೂ ಪಸರಿಸಿದ್ದಲ್ಲದೇ ಅನೇಕ ದೇವಸ್ಥಾನಗಳನ್ನು ಕಟ್ಟಿಸಿದ ಕೀರ್ತಿಗೆ ಭಾಜನಾರಾಗಿದ್ದಾರೆ. ತಮಿಳುನಾಡಿನ ಕಂಚಿ ಪಟ್ಟಣದ ಹತ್...

ವಿದ್ಯಾ ರೆಡ್ಡಿ ಅವರ ಎರಡು ಕವನಗಳು

ಚಲಿಸುವ ಗಡಿಯಾರ ಬಿಸಿಲ್ಗುದುರೆಯಂತೆ ಮಿನುಗಿ ಹೋಗುವ  ಕಾಲದಂತೆ ಕರಗಿಹೋಗುವ  ನೆನಪೇ ಒಂದು ಚಲಿಸುವ ಗಡಿಯಾರ ಹಗಲಲಿ ಕನಸ ನಕ್ಷತ್ರಗಳು ಮರೆಯಾಗುವಂತೆ ಮಾಯವಾಗುವ  ನೆನಪೇ ಒಂದು ಚಲಿಸುವ ಗಡಿಯಾರ ಕತ್ತಲೆ ಬೆಳಕನಾವರಿಸುವಂತೆ  ಮನವನಾವರಿಸುವ ನೆನಪೇ ಒಂದು ಚಲಿಸುವ ಗಡಿಯಾರ.... ನವಿರಾದ ಸುಖಗಳ ನಡುವೆ  ಸಿಹಿಯಾದ ಅನುಭವ ಬೆರೆಸುವ ನೆನಪೇ ಒಂದು ಚಲಿಸುವ ಗಡಿಯಾರ ಭವಿಷ್ಯದ ಗರ್ಭದಲಿ ಗರಿಬಿಚ್ಚಿ ನಲಿವಂತೆ ಸಿಹಿನೆನಪಿನ ತರಂಗಗಳನ್ನು ಬಡಿದೆಬ್ಬಿಸುವ  ನೆನಪೇ ಒಂದು ಚಲಿಸುವ ಗಡಿಯಾರ ಹೃದಯದ ಭಾವನೆಗಳನ್ನು ಕೆಣಕುತಾ ಪ್ರೀತಿ ಬೀಜಬಿತ್ತಿ ಸಹಬಾಳ್ವೆ ಬಯಸುವ  ನೆನಪೇ ಒಂದು ಚಲಿಸುವ ಗಡಿಯಾರ ಪಯಣ ಆಗಸದಲ್ಲಿ ಬೆಳಕನು ಚೆಲ್ಲುವ  ಹೊಂಗನಸು ಹೊತ್ತು ಹೊಸ ಕನಸಿಗೆ ಬೆಲೆಕೊಟ್ಟು  ಹೊಸ ಹಾದಿಯಲ್ಲಿ ಪಯಣಕೆ ಹೊರಟೆ ಚಿಗುರಿದ ಹೊಸ ಹೊಸ  ಆಸೆಗಳನ್ನು ನನಸಾಗಿಸಿಕೊಳ್ಳಲು ಹೊಸದಾರಿ ಅರಸುತಾ ಹೊಸ ಹಾದಿಯ ಪಯಣಕೆ  ಹೊರಟೆ ಹೊಸ ಹೊಸ  ಬಯಕೆಗಳ ಹೊತ್ತು ಹೊಸ ಜಗವ ಕಟ್ಟುವ ಉತ್ಸಾಹದಲ್ಲಿ ಹೊಸ ದಾರಿಯ ತುಳಿಯುತಾ  ಹೊರಟೆ ಮನಸು ಮನಸುಗಳ ಚಿತ್ರ ಬಿಡಿಸುವ ಚಿತ್ರಕಾರನಂತೆ ಸುಂದರ ಚಿತ್ರ ಬಿಡಿಸಲು ಹೊಸ ಹಾದಿಯ ಅರಸುತಾ ಹೊರಟೆ... ಇಲ್ಲಿ ಕ್ಲಿಕ್ಕಿಸಿ ಕೇಳಿ ವಿದ್ಯಾ ರೆಡ್ಡಿ ಅವರ ಕವಿತೆ ಪ್ರೊ.  ವಿದ್ಯಾ ರೆಡ್ಡಿ  ಕನ್ನಡ ಪ್ರಾಧ್ಯಾಪಕರು ಗೋಕಾಕ.

ಭಾರತಿ ಮದಭಾವಿ ಅವರ ಕವಿತೆ "ಮಳೆ ಹನಿಗಳೊಂದಿಗೆ....."

ಮಳೆ ಹನಿಗಳೊಂದಿಗೆ....  ಹಚ್ಚ ಹಸಿರಿನೆಲೆಗಳ ಮೇಲೆ  ಮಳೆ ನೀರ ಹನಿಗಳು  ಮುತ್ತಾಗಿ ಮನ ಸೂರೆಗೊಂಡಿರೆ  ಮನದಲ್ಲೇನೋ ಪುಳಕ...  ಧರೆಯ ಮೇಲೆ ಸುರಿವ ಮಳೆಯ  ಸೃಷ್ಟಿ ಸೊಬಗಿನೈಸಿರಿ ಕಾಣಲು  ಅದ್ಬುತ ಲೋಕದಾ ಹೊನಲು  ಬೆಳಕಿನಾಟಕೆ ಮನದಲ್ಲೇನೋ ಪುಳಕ...  ಹರ್ಷ ಪಡುವ ಮನದಲ್ಲೇ  ಆತಂಕದ ಛಾಯೆ ಮೂಡಿ  ಅಪಸ್ವರವು ಕಾಣಲು  ಒಳಒಳಗೆ ಮುದುರಿ ಮತ್ತೆ  ಹೊಸ ಬಗೆಯ ಆಸೆಮೂಟೆಗಳ  ಬಿಚ್ಚಿ ಮನ ಹಗುರಾಗಲು  ಮನದಲ್ಲೇನೋ ಸಂತಸದ ಪುಳಕ.....  ಹೊಸ ಬಗೆಯ ಸಿಂಚನದ ಜೊತೆಗೆ  ಬೆರೆತು ಹನಿ ಸದ್ದಿನೊಂದಿಗೆ  ಹೊಸ ರಾಗ ನುಡಿಯುತಿದೆ ಎದೆಯಬಡಿತ. - ಭಾರತಿ ಮದಭಾವಿ

ನಾಡೋಜ ಸಿದ್ಧಲಿಂಗಯ್ಯ ಅವರು ಒಬ್ಬ ಸಾಮಾಜಿಕ ಕವಿ, ಹೋರಾಟಗಾರ: ಡಾ. ಸುರೇಶ ಹನಗಂಡಿ.

ನಾಡೋಜ ಸಿದ್ಧಲಿಂಗಯ್ಯ ಅವರು ಒಬ್ಬ ಸಾಮಾಜಿಕ ಕವಿ, ಹೋರಾಟಗಾರ: ಡಾ. ಸುರೇಶ ಹನಗಂಡಿ ಅಭಿಮತ. ಕನ್ನಡ ನಾಡಿನ ಖ್ಯಾತ ಸಾಹಿತಿ, ಚಿಂತಕ ಮತ್ತು ಹೋರಾಟಗಾರರಾಗಿದ್ದ ಡಾ ಸಿದ್ಧಲಿಂಗಯ್ಯ ರವರು ನಮ್ಮನ್ನೆಲ್ಲಾ ಬಿಟ್ಟು ಕಾಣದ ಲೋಕಕ್ಕೆ ಹೊರಟುಹೋದರು. ಕವಿ ಸಿದ್ಧಲಿಂಗಯ್ಯ ನಮ್ಮಿಂದ ಮರೆಯಾಗಿದ್ದಾರೆ ನಿಜ ಆದರೆ ಅವರ ಕಾವ್ಯ ನಮ್ಮ ಜೊತೆಗಿದೆ. ದಲಿತರ ಧ್ವನಿಯಾಗಿ ಸಾಮಾಜಿಕ ಸಮಾನತೆಯಗೋಸ್ಕರವಾಗಿ ಹೋರಾಡಿದವರು. ಅವರ ಸಾಹಿತ್ಯದ ಮೂಲ ಉದ್ದೇಶ ತುಳಿತಕ್ಕೆ ಒಳಗಾದ ಜನರನ್ನು ರಕ್ಷಿಸುವುದಾಗಿದೆ. ಪ್ರಖರ ಚಿಂತನೆ ವಿಡಂಬನಾ ಪ್ರಜ್ಞೆ ಅವರಲ್ಲಿತ್ತು ಎಂದು ಸಂಶೋಧಕ, ಕನ್ನಡ ಅಧ್ಯಾಪಕ ಡಾ. ಸುರೇಶ ಹನಗಂಡಿ ನುಡಿನಮನ ಸಲ್ಲಿಸಿದರು. ಅವರು  ಅಖಿಲ ಭಾರತೀಯ ಸಾಹಿತ್ಯ ಪರಿಷದ್ ತಾಲೂಕು ಘಟಕ ಮೂಡಲಗಿ ಗೂಗಲ್ ಮೀಟ್ ವೇದಿಕೆ ಮೂಲಕ ಹಮ್ಮಿಕೊಂಡಿದ್ದ "ದಲಿತ ಕವಿ ನಾಡೋಜ ಸಿದ್ಧಲಿಂಗಯ್ಯ ಅವರಿಗೆ ನುಡಿ ನಮನ" ಕಾರ್ಯಕ್ರಮದಲ್ಲಿ ಮಾತನಾಡಿ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ ಅವರು ಮರೆಯಲಾಗದ ಮಾಣಿಕ್ಯ ಎಂದರು. ಚಿಕ್ಕೋಡಿ ಜಿಲ್ಲೆಯ ಅಭಾಸಾಪ ಅಧ್ಯಕ್ಷರಾದ ಶ್ರೀ ಶಂಕರ ಕ್ಯಾಸ್ತಿ ಮಾತನಾಡಿ,  ಇಕ್ಕುರ್ಲಾ..‌. ಒದಿರ್ಲಾ..‌‌. ಯಾರಿಗೆ ಬಂತು..‌‌ ಎಲ್ಲಿಗೆ ಬಂತು..‌‌. ನಲವತ್ತೇಳರ ಸ್ವಾತಂತ್ರ್ಯ..‌. ನಾಡ ನಡುವಿನಿಂದ ಸಿಡಿದ ನೋವಿನ ಕೂಗೆ.‌‌‌‌‌‌‌‌… ಇತ್ಯಾದಿ ಇತ್ಯಾದಿ ಹೋರಾಟದ ಹಾಡುಗಳಿಂದ ಹಿಡಿದು ಆ ಬೆಟ್ಟದಲ...

ಶ್ರೀ ಮಧ್ವಾಚಾರ್ಯರು

ಮಧ್ವಾಚಾರ್ಯ ಹುಟ್ಟಿದ ದಿನಾಂಕ : ೧೨೩೮ - ೧೩೧೭ ಹುಟ್ಟಿದೂರು : ಪಾಜಕ ,  ಉಡುಪಿ ತಂದೆ: ಮಧ್ಯಗೇಹ ಭಟ್ಟ ತಾಯಿ: ವೇದವತಿ ಗುರು: ಅಚ್ಯತ ಪ್ರೇಕ್ಷ  (ಅಚ್ಯುತಪ್ರಜ್ಞ) ಹೆಸರುಗಳು: (೧)  ವಾಸುದೇವ , ತಂದೆ ತಾಯಿ ಇಟ್ಟ ಹೆಸರು (೨)  ಶ್ರೀ ಮಧ್ವಾಚಾರ್ಯರು , ಸನ್ಯಾಸ ಪಡೆದನಂತರದ ಹೆಸರು (೩)  ಪೂರ್ಣಪ್ರಜ್ಞ , ಪರಿಪೂರ್ಣನಾದ ಬ್ರಹ್ಮನನ್ನು ತಿಳಿದವನು (ಅಚ್ಯುತಪ್ರಜ್ಞರು ಸನ್ಯಾಸ ದೀಕ್ಷೆ ಕೊಟ್ಟ ನಂತರ ಇಟ್ಟ ಹೆಸರು) (೪)  ಆನಂದತೀರ್ಥ , ಆನಂದವುಂಟಮಾಡುವ ಉಪದೇಶಗಳನ್ನು ಮಾಡುವವರು (ಅಚ್ಯುತಪ್ರಜ್ಞರು ಪಟ್ಟಾಭಿಷೇಕದ ನಂತರ ಇಟ್ಟ ಹೆಸರು) ಹಿಂದಿನ ಅವತಾರಗಳು (ನಂಬಿಕೆಯಂತೆ): (೧)  ಹನುಮ (೨)  ಭೀಮ ಶ್ರೀ ಮಧ್ವಾಚಾರ್ಯರು ( ೧೨೩೮ - ೧೩೧೭ )  ದ್ವೈತಮತದ  ಸ್ಥಾಪಕರು ಮತ್ತು ತತ್ವಜ್ಙಾನಿಗಳು. ಬಾಲ್ಯ ಶ್ರೀಮಧ್ವಾಚಾರ್ಯರು  ಉಡುಪಿಯ  ಹತ್ತಿರದಲ್ಲಿರುವ  ಪಾಜಕ  ಗ್ರಾಮದಲ್ಲಿ ತಂದೆ  ಮಧ್ಯಗೇಹ ಭಟ್ಟ  ಮತ್ತು ತಾಯಿ ವೇದವತಿಗೆ ಜನಿಸಿದರು. ತಂದೆ ತಾಯಿ ವಾಸುದೇವನೆಂದು ಹೆಸರಿಟ್ಟಿದ್ದರು. ಬಾಲ್ಯದಲ್ಲೆ ಅಸಾಧಾರಣ ಪ್ರತಿಭೆ ತೋರಿದ ವಾಸುದೇವ, ತನ್ನ ಹನ್ನೆರಡೆನೆಯ ವಯಸ್ಸಿನಲ್ಲಿ ವಿಧ್ಯಾಭ್ಯಾಸ ಮತ್ತು ವೇದಾಭ್ಯಾಸಗಳೆರಡನ್ನು ಮುಗಿಸಿ ಗುರು  ಅಚ್ಯುತ ಪ್ರಜ್ಞ  ಸನ್ಯಾಸವನ್ನು ಪಡೆದು ಪೂರ್ಣಪ್ರಜ್ಞರೆಂಬ ಹೆಸರು ಪಡೆದರು. ಅವರ ಅನುಯ...

ಆದಿಗುರು ಶಂಕರಾಚಾರ್ಯರು

  ಆದಿ ಗುರು‌ ಶ್ರೀ ಶಂಕರಾಚಾರ್ಯರು  ಲೇಖನ:  ಶ್ರೀಕಂಠ ಬಾಳಗಂಚಿ ಅದು ಕ್ರಿ.ಶ, ಏಳನೇ ಶತಮಾನ. ಭಾರತದ ಸನಾತನ ಧರ್ಮಕ್ಕೆ ಅತ್ಯಂತ ಕ್ಲಿಷ್ಟಕರವಾದ ಸಂದಿಗ್ಧ ಪರಿಸ್ಥಿತಿಯಿದ್ದ ಕಾಲವದು. ಒಂದು ಕಡೆ  ಅಹಿಂಸಾ ಪರಮೋಧರ್ಮಃ  ಎಂದು ಹೇಳುತ್ತಲೇ  ಬೌದ್ಧ ಧರ್ಮ ಭಾರತದಲ್ಲೆಲ್ಲಾ ಅತ್ಯಂತ ವೇಗವಾಗಿ ಹರಡಿದ್ದಲ್ಲದೇ ವಿದೇಶಗಳಿಗೂ ತನ್ನ ಅನುಯಾಯಿಗಳನ್ನು ಕಳುಹಿಸಿಯಾಗಿತ್ತು . ಸನಾತನ ಧರ್ಮದ ಕಟ್ಟುಪಾಡು ಮತ್ತು ಅತೀಯಾದ ಆಚಾರ ಮಡಿ ಹುಡಿಗಳಿಂದ ಬೇಸತ್ತವರು  ಬೌದ್ಧ ದರ್ಮದ ಕಡೆ ಆಕರ್ಷಿತರಾತೊಡಗಿದ್ದರೆ  ಮತ್ತೊಂದೆಡೆ,  ದೇವರು ಎಂಬುವುದೇ ಇಲ್ಲ ಅದೆಲ್ಲಾ ಕಟ್ಟು ಕಥೆ ಎನ್ನುವಂತಹ ಚಾರ್ವಾಕರ ಹಾವಳಿ . ನಮ್ಮ ಸನಾತನ ಧರ್ಮಕ್ಕೆ ವೇದವೇ ಆಧಾರ.ಅದರಲ್ಲಿ ಹೇಳಿದ್ದೆಲ್ಲವೂ ಸರಿ ಎಂದರೆ  ಅವರುಗಳು ವೇದ ಎಂಬುದೇ ಅಸತ್ಯ. ಸ್ವಾರ್ಥ ಎಂದು ವಾದಿಸುತ್ತಿದ್ದರು . ಬದುಕಿರುವಾಗ ದಾನ ಧರ್ಮ ಮತ್ತು ಪುಣ್ಯ ಕಾರ್ಯಗಳನ್ನು ಮಾಡಿ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದರೆ ಅವರು ಸ್ವರ್ಗ ನರಕ ಎನ್ನುವುದು ಇಲ್ಲವೇ ಇಲ್ಲ. ಆಳುವ ರಾಜನೇ ಪ್ರತ್ಯಕ್ಷ ದೇವರು ಅವನೇ ಪರಮೇಶ್ವರ. ಹಾಗಾಗಿ ಇದ್ದಾಗಲೇ ಸರಿಯಾಗಿ ನೋಡಿಕೊಳ್ಳದೇ ಸತ್ತ ಮೇಲೆ ಮಾಡುವ ಅಪರ ಕ್ರಿಯೆಗಳು, ಯಜ್ಞ-ಯಾಗಾದಿಗಳು ಪುರೋಹಿತರ ಹೊಟ್ಟೆ ಪಾಡಿಗೆ ಮಾಡಿಕೊಂಡ ಢಂಬಾಚಾರಗಳು ಎಂದೇ ವಾದಿಸುತ್ತಿದ್ದರು ಯಜ್ಞದಲ್ಲಿ ಬಲಿ ಕೊಡಲಾಗುವ ಪಶು ಸ್ವರ್ಗಕ್ಕ...