ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಕವಿತೆ ಮತ್ತು ವಿಮರ್ಶೆ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕವಿ ಶ್ರೀಧರ ಬನವಾಸಿ ಅವರ ಕವಿತೆ "ಅಶೋಕವನದ ಸೀತೆ": ಪ್ರೊ. ಸುರೇಶ ಮುದ್ದಾರ ಅವರ ವಿಮರ್ಶೆ

ಅಶೋಕವನದ ಸೀತೆ ಕಾನನದ ಝರಿಯೊಂದು ಸಂಗಾತಿಯ  ಅರಸುತ್ತಾ ಹೊರಟಿತ್ತು ಸುತ್ತಮುತ್ತಲಿನ ಕಾಡು ಬೆಟ್ಟಗಳ ಸಾಂಗತ್ಯವು ನಡುವೆ ಒಲವಿನ ಗೆಳತಿಯ ಅರಸುತ್ತಾ ಸಾಗುತಿಹಳು ಈ ಪುಣ್ಯಗಂಗೆಯು ತನುಮನದೊಂದಿಗೆ ಬೆರೆತು ಅಂತರಂಗವ ಬಯಸಿ ಸಖಿಯ ಹುಡುಕುವ ಮೋಹದ ಪರಿಯು ಮೌನ ಪಯಣದಲಿ ಪ್ರೀತಿ-ವಿರಹದ ನೋವಿರಲು ಗಂಗೆ ಪಾವನಳಾದರೂ ಅವಳ ಬಯಕೆಯ ಹುಡುಕಾಟ ಬೇರೆಯೇನೋ ಆಗಿರಲು... ಸುತ್ತ ಅಸುರ ಲೋಕದ ಸಂತಾನವು ಲಕ್ಷ ಕಣ್ಣುಗಳ ಕಣ್ಗಾವಲು ಸೀತೆಯ ಸುತ್ತುವರೆದಿರಲು ಬಣ್ಣನೆಗೆ ಸಿಗದ ಆಶೋಕವನವು ಸಾಕ್ಷಾತ್ ದೇವಲೋಕವು ರಾವಣನ ಸಾಮ್ರಾಜ್ಯದಲಿ ಈ ಸ್ವಪ್ನ ಸೌಂದರ್ಯವೇ  ಸಾಕ್ಷಿಯಾಗಿರಲು ಅಪಹರಿಸಿ ತಂದ ಜಗನ್ಮಾತೆಯು ಇಲ್ಲಿ ನೆಲೆಸಿರಲು ರಘುವರನಿಲ್ಲದ ಕ್ಷಣಗಳನು ಎದುರಿಸುತಿಹಳು ರಾಮನಾಮದಲಿ ಮುಳುಗುತ್ತಾ ಸುಡುವ ಏಕಾಂತದಲ್ಲಿ ತನ್ನವರಿಗಾಗಿ ಕಾಯುತ್ತಾ ಕಾನನದ ಝರಿಗೆ ನೋವಿಲ್ಲ; ನಲಿವಿಲ್ಲ ಸುರಿವ ಮಳೆಯ ಜಾಡು ಹರಿವ ಓಘಕ್ಕೆ ಸೇರುತ್ತಾ ದೂರದಲ್ಲಿರುವ ಅಶೋಕವನವು ಕಂಡ ಆಶಾಗೋಪುರದ ಸದಾಶೆಯು ಹರಿವ ಗಂಗೆಯ ನೋವಿಗೆ  ಕೊನೆಗೂ ಸಿಕ್ಕಳು ಸೀತೆ ಎಂಬ ಶರಧಿಯು ಅಶೋಕವನದ ಏಕಾಂತವು ರಾಮನಿಲ್ಲದ ಸ್ವರ್ಗವು ಬಂಧನದ ಸೀತೆಗೆ ಅವಳ ಪಾತಿವ್ರತ್ಯವೇ ಶ್ರೀರಕ್ಷೆಯು ಹನುಮನ ಕಾಣುವ ಸರಧಿ   ಅಸುರರ ಸಂಹಾರವಾಗುವ ಮುನ್ನ ಸೀತೆಯ ಸಾಂಗತ್ಯಕ್ಕೆ ಒಲಿದ ಭಾಗ್ಯವು ದೂರ ತೀರದಿಂದ ಅರಸಿ ಬಂದ ಝರಿಗೆ ಸಿಕ್ಕವಳು ಜಾನಕಿಯು ಗಂಗೆ ಹರಿದಳು ಅಶೋಕವನಕೆ ಸುರಿವ ಹಾಲಿ...