ನಾಡೋಜ ಸಿದ್ಧಲಿಂಗಯ್ಯ ಅವರು ಒಬ್ಬ ಸಾಮಾಜಿಕ ಕವಿ, ಹೋರಾಟಗಾರ: ಡಾ. ಸುರೇಶ ಹನಗಂಡಿ ಅಭಿಮತ. ಕನ್ನಡ ನಾಡಿನ ಖ್ಯಾತ ಸಾಹಿತಿ, ಚಿಂತಕ ಮತ್ತು ಹೋರಾಟಗಾರರಾಗಿದ್ದ ಡಾ ಸಿದ್ಧಲಿಂಗಯ್ಯ ರವರು ನಮ್ಮನ್ನೆಲ್ಲಾ ಬಿಟ್ಟು ಕಾಣದ ಲೋಕಕ್ಕೆ ಹೊರಟುಹೋದರು. ಕವಿ ಸಿದ್ಧಲಿಂಗಯ್ಯ ನಮ್ಮಿಂದ ಮರೆಯಾಗಿದ್ದಾರೆ ನಿಜ ಆದರೆ ಅವರ ಕಾವ್ಯ ನಮ್ಮ ಜೊತೆಗಿದೆ. ದಲಿತರ ಧ್ವನಿಯಾಗಿ ಸಾಮಾಜಿಕ ಸಮಾನತೆಯಗೋಸ್ಕರವಾಗಿ ಹೋರಾಡಿದವರು. ಅವರ ಸಾಹಿತ್ಯದ ಮೂಲ ಉದ್ದೇಶ ತುಳಿತಕ್ಕೆ ಒಳಗಾದ ಜನರನ್ನು ರಕ್ಷಿಸುವುದಾಗಿದೆ. ಪ್ರಖರ ಚಿಂತನೆ ವಿಡಂಬನಾ ಪ್ರಜ್ಞೆ ಅವರಲ್ಲಿತ್ತು ಎಂದು ಸಂಶೋಧಕ, ಕನ್ನಡ ಅಧ್ಯಾಪಕ ಡಾ. ಸುರೇಶ ಹನಗಂಡಿ ನುಡಿನಮನ ಸಲ್ಲಿಸಿದರು. ಅವರು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ತಾಲೂಕು ಘಟಕ ಮೂಡಲಗಿ ಗೂಗಲ್ ಮೀಟ್ ವೇದಿಕೆ ಮೂಲಕ ಹಮ್ಮಿಕೊಂಡಿದ್ದ "ದಲಿತ ಕವಿ ನಾಡೋಜ ಸಿದ್ಧಲಿಂಗಯ್ಯ ಅವರಿಗೆ ನುಡಿ ನಮನ" ಕಾರ್ಯಕ್ರಮದಲ್ಲಿ ಮಾತನಾಡಿ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ ಅವರು ಮರೆಯಲಾಗದ ಮಾಣಿಕ್ಯ ಎಂದರು. ಚಿಕ್ಕೋಡಿ ಜಿಲ್ಲೆಯ ಅಭಾಸಾಪ ಅಧ್ಯಕ್ಷರಾದ ಶ್ರೀ ಶಂಕರ ಕ್ಯಾಸ್ತಿ ಮಾತನಾಡಿ, ಇಕ್ಕುರ್ಲಾ... ಒದಿರ್ಲಾ... ಯಾರಿಗೆ ಬಂತು.. ಎಲ್ಲಿಗೆ ಬಂತು... ನಲವತ್ತೇಳರ ಸ್ವಾತಂತ್ರ್ಯ... ನಾಡ ನಡುವಿನಿಂದ ಸಿಡಿದ ನೋವಿನ ಕೂಗೆ.… ಇತ್ಯಾದಿ ಇತ್ಯಾದಿ ಹೋರಾಟದ ಹಾಡುಗಳಿಂದ ಹಿಡಿದು ಆ ಬೆಟ್ಟದಲ...
ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಸಂಶೋಧನಾ ವೇದಿಕೆ. ಶಂಕರ ನಿಂಗನೂರ