ಕರ್ನಾಟಕದ ಸಂಕ್ಷಿಪ್ತ ಇತಿಹಾಸ ಭೌಗೋಳಿಕವಾಗಿ ದಕ್ಷಿಣಭಾರತದ ನೈಋತ್ಯ ಭಾಗದಲ್ಲಿರುವ ಕರ್ನಾಟಕ ರಾಜ್ಯವು ಅಪಾರ ನೈಸರ್ಗಿಕ ಸಂಪತ್ತನ್ನು ಹೊಂದಿದೆ. ಈ ರಾಜ್ಯದ ಪಶ್ಚಿಮ ಘಟ್ಟಗಳಲ್ಲಿ ಶ್ರೀಮಂತವಾದ ಅರಣ್ಯ ಸಂಪತ್ತು ಹಾಗೂ ಸಮತಟ್ಟಾದ ಕಣಿವೆಗಳಿವೆ. ಜೊತೆಗೆ ಅದಕ್ಕೆ ಮುಕುಟಪ್ರಾಯವಾಗಿ ಹೆಚ್ಚು ಸಂಪದ್ಭರಿತ ಆದರೆ ಇಕ್ಕಟ್ಟಾದ ಕರಾವಳಿ ತೀರ ಪ್ರದೇಶವೂ ಇದೆ. ನವಮಂಗಳೂರು ಬಂದರಿನ ಮೂಲಕ ಅಂತಾರಾಷ್ಟ್ರೀಯ ವಾಣಿಜ್ಯ ಹಾಗೂ ಅಧಿಕ ವಿದೇಶಿ ವಿನಿಮಯ ಗಳಿಕೆಯಿಂದಾಗಿ ರಾಷ್ಟ್ರಮಟ್ಟದಲ್ಲಿ ತನ್ನ ಮೌಲ್ಯವನ್ನು ಕರ್ನಾಟಕವು ಹೆಚ್ಚಿಸಿಕೊಂಡಿದೆ. ಇವೆಲ್ಲದರ ಜೊತೆಗೆ, ಈ ರಾಜ್ಯಕ್ಕೆ ಐತಿಹಾಸಿಕ ಮಹತ್ವವುಳ್ಳ, ಶ್ರೀಮಂತ ಸಾಂಸ್ಕೃತಿಕ ಪರಂಪರೆ ಇದೆ. ಮಿಗಿಲಾಗಿ ಪೌರಾಣಿಕ ಕಥಾನಕಗಳ ಹಿನ್ನೆಲೆಯೂ ಇದೆ. ಇತಿಹಾಸ ಪೂರ್ವಕಾಲ ಕರ್ನಾಟಕಕ್ಕೆ ಭವ್ಯವಾದ ಪ್ರಾಚೀನತೆಯಿದೆ. ಅಸಂಖ್ಯಾತ ಶಾಸನ, ಸ್ಮಾರಕಶಿಲೆ [ವೀರಗಲ್ಲು, ಮಹಾಸತಿ(ಮಾಸ್ತಿ) ಕಲ್ಲು, ನಿಸಿಧಿ ಕಲ್ಲು ಮತ್ತು ಆತ್ಮಾಹುತಿ ಕಲ್ಲು], ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವದ ಸ್ಮಾರಕಗಳಿಂದ ಸಮೃದ್ಧವಾಗಿದೆ. ಇಲ್ಲಿನ ಕೃಷ್ಣಾ, ಭೀಮಾ, ಮಲಪ್ರಭಾ, ಘಟಪ್ರಭಾ, ಕಾವೇರಿ, ಶರಾವತಿ, ಹೇಮಾವತಿ, ಶಿಂಷಾ, ತುಂಗಭದ್ರಾ, ಮಂಜ್ರಾ, ಪೆನ್ನಾರ್, ನೇತ್ರಾವತಿ, ಅರ್ಕಾವತಿ ಮೊದಲಾದ ನದಿ-ಉಪನದಿಗಳ ಕಣಿವೆ ಪ್ರದೇಶಗಳಲ್ಲಿ ಇತಿಹಾಸ ಪೂರ್ವಕಾಲದ ವಿವಿಧ ಹಂತಗಳಿಗೆ ಸೇರಿದ ನಿವೇಶನಗಳು ಗಣನೀಯ ಸಂಖ್ಯೆಯಲ್ಲಿ ಪತ್ತೆಯಾ...
ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಸಂಶೋಧನಾ ವೇದಿಕೆ. ಶಂಕರ ನಿಂಗನೂರ