ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಕವಿತೆ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಡಾ. ಮಹಾದೇವ ಪೋತರಾಜ್ ಅವರ "ನುಡಿನಮನ" ಕವಿತೆ

ನುಡಿನಮನ ಸೈದ್ದಾಂತಿಕ ನೆಲೆಯಲ್ಲೆ ಬದುಕಿ ವೈಚಾರಿಕ ಪ್ರಜ್ಞೆಯಿಂದ ಚಿಂತಿಸಿ ರೈತರ,ಕೂಲಿಕಾರರ,ಶೋಷಿತ ಜನಾಂಗದ ಬದುಕಿಗೆ ಬೆಳಕು ಚಲ್ಲುವ ಕಾವ್ಯ ನಿಗಿ ನಿಗಿ ಕೆಂಡವೇ ಹೊರತು ಭಂಡ ಭಾವನೆಯಲ್ಲ ಸುಟ್ಟುಕೊಂಡವನಿಗೆ ಚನ್ನಾಗಿ ಗೊತ್ತು ಬೆಂಕಿಯ ಬಿಸಿಯ ತಾಪ ಶೋಷನೆ,ಅವಮಾನ,ಅಸಮಾನತೆಯ ವಿರುದ್ಧ ಹೊರಾಡುವ ಒಂದೊಂದು  ನುಡಿಗಳು ಕಾವ್ಯದ ಧ್ವನಿಯಾಗಬಲ್ಲವಲ್ಲವೆ? ಕಾರ್ಮೋಡಗಳ ಕಗ್ಗತ್ತಲಲ್ಲಿ ಕಲ್ಲು,ಮುಳ್ಳು,ತಗ್ಗು-ದಿನ್ನೆ ಕಾಡು-ಮೇಡು, ಕಂದರ,ಕಂದಾಚಾರ ಕೊರಚಲುಗಳಲೆಲ್ಲ ಕಣ್ಣಿದ್ದು ಕುರಡಾಗಿ ಸುತ್ತಾಡಲಿಲ್ಲವೆ? ಶತಶತಮಾನದಿಂದ ನನ್ನವರು? ಸ್ವಾತಂತ್ರ್ಯ ದೇಶಕ್ಕೆ ಬಂತೆಹೊರತು ಶೋಷಿತವರ್ಗಕ್ಕೆ,ಬಡವರ ಮನೆಗೆ ಬರಲಿಲ್ಲ, ಬೆಳಕಿನ ಕಿರಣ ತರಲಿಲ್ಲ ಕವಿತೆ  ಎಷ್ಟು ಗಟ್ಟಿಧ್ವನಿಯ ಸತ್ಯ ನೋಡಿ ಸತ್ಯ ಕೆಲವರಿಗೆ ಚುಚ್ಚುತ್ತದೆ ಕೆಲವರಿಗೆ ತಟ್ಟುತ್ತದೆ ಇನ್ನು ಕೆಲವರಿಗೆ ಮುಟ್ಟುತ್ತದೆ ಇದೆ ಅಲ್ಲಿವೆ ನಿಜವಾದ ಕಾವ್ಯ? ಖಡ್ಗಕಿಂತ ಹರಿತವಾದ ಶಬ್ದಗಳ ಪ್ರಯೋಗ ಅದರ ಇರಿತ ಮುರಿತ ಹೋರಾಟ  ಕ್ರಾಂತಿಕಾರನ ಒಡಲಲ್ಲಡಗಿದ  ಕೆಂಡವೇ ಹೊರತು ಬೇರಲ್ಲ ತಿಳಿ ಹಾಸ್ಯದ ಮಾತು, ಮೃದುಮನದ ಪ್ರೇಮಕವಿ,ದಲಿತ-ಬಂಡಾಯದ ಬೇರುಖಾಂಡ ನುಡಿದರೆ ಹಾಸ್ಯ, ಬರೆದರೆ ಬೆಂಕಿ ಸಿದ್ದಲಿಂಗಯ್ಯರಿಗೆ ನನ್ನ ನುಡಿನಮನಗಳು ರಚನೆ: ಡಾ. ಮಹಾದೇವ ಪೋತರಾಜ್, ಖಾನಟ್ಟಿ ಓದಿ ವಿದ್ಯಾ ರೆಡ್ಡಿ ಅವರ ಕವಿತೆ

ವಿದ್ಯಾ ರೆಡ್ಡಿ ಅವರ ಎರಡು ಕವನಗಳು

ಚಲಿಸುವ ಗಡಿಯಾರ ಬಿಸಿಲ್ಗುದುರೆಯಂತೆ ಮಿನುಗಿ ಹೋಗುವ  ಕಾಲದಂತೆ ಕರಗಿಹೋಗುವ  ನೆನಪೇ ಒಂದು ಚಲಿಸುವ ಗಡಿಯಾರ ಹಗಲಲಿ ಕನಸ ನಕ್ಷತ್ರಗಳು ಮರೆಯಾಗುವಂತೆ ಮಾಯವಾಗುವ  ನೆನಪೇ ಒಂದು ಚಲಿಸುವ ಗಡಿಯಾರ ಕತ್ತಲೆ ಬೆಳಕನಾವರಿಸುವಂತೆ  ಮನವನಾವರಿಸುವ ನೆನಪೇ ಒಂದು ಚಲಿಸುವ ಗಡಿಯಾರ.... ನವಿರಾದ ಸುಖಗಳ ನಡುವೆ  ಸಿಹಿಯಾದ ಅನುಭವ ಬೆರೆಸುವ ನೆನಪೇ ಒಂದು ಚಲಿಸುವ ಗಡಿಯಾರ ಭವಿಷ್ಯದ ಗರ್ಭದಲಿ ಗರಿಬಿಚ್ಚಿ ನಲಿವಂತೆ ಸಿಹಿನೆನಪಿನ ತರಂಗಗಳನ್ನು ಬಡಿದೆಬ್ಬಿಸುವ  ನೆನಪೇ ಒಂದು ಚಲಿಸುವ ಗಡಿಯಾರ ಹೃದಯದ ಭಾವನೆಗಳನ್ನು ಕೆಣಕುತಾ ಪ್ರೀತಿ ಬೀಜಬಿತ್ತಿ ಸಹಬಾಳ್ವೆ ಬಯಸುವ  ನೆನಪೇ ಒಂದು ಚಲಿಸುವ ಗಡಿಯಾರ ಪಯಣ ಆಗಸದಲ್ಲಿ ಬೆಳಕನು ಚೆಲ್ಲುವ  ಹೊಂಗನಸು ಹೊತ್ತು ಹೊಸ ಕನಸಿಗೆ ಬೆಲೆಕೊಟ್ಟು  ಹೊಸ ಹಾದಿಯಲ್ಲಿ ಪಯಣಕೆ ಹೊರಟೆ ಚಿಗುರಿದ ಹೊಸ ಹೊಸ  ಆಸೆಗಳನ್ನು ನನಸಾಗಿಸಿಕೊಳ್ಳಲು ಹೊಸದಾರಿ ಅರಸುತಾ ಹೊಸ ಹಾದಿಯ ಪಯಣಕೆ  ಹೊರಟೆ ಹೊಸ ಹೊಸ  ಬಯಕೆಗಳ ಹೊತ್ತು ಹೊಸ ಜಗವ ಕಟ್ಟುವ ಉತ್ಸಾಹದಲ್ಲಿ ಹೊಸ ದಾರಿಯ ತುಳಿಯುತಾ  ಹೊರಟೆ ಮನಸು ಮನಸುಗಳ ಚಿತ್ರ ಬಿಡಿಸುವ ಚಿತ್ರಕಾರನಂತೆ ಸುಂದರ ಚಿತ್ರ ಬಿಡಿಸಲು ಹೊಸ ಹಾದಿಯ ಅರಸುತಾ ಹೊರಟೆ... ಇಲ್ಲಿ ಕ್ಲಿಕ್ಕಿಸಿ ಕೇಳಿ ವಿದ್ಯಾ ರೆಡ್ಡಿ ಅವರ ಕವಿತೆ ಪ್ರೊ.  ವಿದ್ಯಾ ರೆಡ್ಡಿ  ಕನ್ನಡ ಪ್ರಾಧ್ಯಾಪಕರು ಗೋಕಾಕ.

ಭಾರತಿ ಮದಭಾವಿ ಅವರ ಕವಿತೆ "ಮಳೆ ಹನಿಗಳೊಂದಿಗೆ....."

ಮಳೆ ಹನಿಗಳೊಂದಿಗೆ....  ಹಚ್ಚ ಹಸಿರಿನೆಲೆಗಳ ಮೇಲೆ  ಮಳೆ ನೀರ ಹನಿಗಳು  ಮುತ್ತಾಗಿ ಮನ ಸೂರೆಗೊಂಡಿರೆ  ಮನದಲ್ಲೇನೋ ಪುಳಕ...  ಧರೆಯ ಮೇಲೆ ಸುರಿವ ಮಳೆಯ  ಸೃಷ್ಟಿ ಸೊಬಗಿನೈಸಿರಿ ಕಾಣಲು  ಅದ್ಬುತ ಲೋಕದಾ ಹೊನಲು  ಬೆಳಕಿನಾಟಕೆ ಮನದಲ್ಲೇನೋ ಪುಳಕ...  ಹರ್ಷ ಪಡುವ ಮನದಲ್ಲೇ  ಆತಂಕದ ಛಾಯೆ ಮೂಡಿ  ಅಪಸ್ವರವು ಕಾಣಲು  ಒಳಒಳಗೆ ಮುದುರಿ ಮತ್ತೆ  ಹೊಸ ಬಗೆಯ ಆಸೆಮೂಟೆಗಳ  ಬಿಚ್ಚಿ ಮನ ಹಗುರಾಗಲು  ಮನದಲ್ಲೇನೋ ಸಂತಸದ ಪುಳಕ.....  ಹೊಸ ಬಗೆಯ ಸಿಂಚನದ ಜೊತೆಗೆ  ಬೆರೆತು ಹನಿ ಸದ್ದಿನೊಂದಿಗೆ  ಹೊಸ ರಾಗ ನುಡಿಯುತಿದೆ ಎದೆಯಬಡಿತ. - ಭಾರತಿ ಮದಭಾವಿ

ಕವಯತ್ರಿ ಶಕುಂತಲಾ ಹಿರೇಮಠ ಅವರ ಪ್ರಕೃತಿ ಕಾವ್ಯ: ಹಸಿರೇ ಉಸಿರು

ಪರಿಸರ ಕಾವ್ಯ : ಹಸಿರೇ ಉಸಿರು  ಬನ್ನಿರಿ ಬನ್ನಿರಿ ಸಖಿಯರೆ ಬನ್ನಿರಿ  ಮರಗಳ ಕಡಿವುದ ನಿಲ್ಲ ಸೋಣ  ಹೊಸ ಮರಗಳನು ಬೆಳೆಸುತನಾವು  ಪರಿಸರವನ್ನು ಉಳಿಸೋಣ  ಪರಿಸರವನ್ನು ಬೆಳೆಸೋಣ  ಮನೆಗೊಂದು ಮರ ಊರಿಗೊಂದು ವನ ಘೋಷಣೆ ಸಾರುತ ನಡೆಯೋಣ  ಉತ್ತಮ ವಾಯು ಪಡೆಯುತ ಎಲ್ಲರೂ ಆರೋಗ್ಯ ವಂತರಾಗಿ ಬದುಕೋಣ  ಕಾಡು ಬೆಳೆದರೆ ನಾಡು ಉಳಿವುದು  ಎನ್ನುವ ಸತ್ಯವ ತಿಳಿಯೋಣ  ಪರಿಸರ ಪ್ರಜ್ಞೆಯ ಅರಿಯುತ ನಾವು  ಹಸಿರೇ ಉಸಿರೆಂದು ಸಾರೋಣ  ಬನ್ನಿರಿ ಬನ್ನಿರಿ ಸಖಿಯರೆ ಬನ್ನಿರಿ ಮರಗಳ ಕಡಿವುದ ನಿಲ್ಲ ಸೋಣ  ಕಾಡಿಲ್ಲದ ನಾಡು ಬರಗಾಲದ ಬೀಡು  ಎಂಬ ಗಾದೆಯನು ಸ್ಮರಿಸೋಣ  ಸಸ್ಯ ಸಂಪತ್ತನ್ನು ಸಮೃದ್ಧಗೊಳಿಸಿ  ದೇಶದ ಅಭಿವೃಧ್ಧಿಗೆ ಹೆಣಗೋಣ  ಬನ್ನಿರಿ ಬನ್ನಿರಿ ಸಖಿಯರೆ ಬನ್ನಿರಿ ಮರಗಳ ಕಡಿವುದ ನಿಲ್ಲ ಸೋಣ  ಹೊಸ ಮರಗಳನು ಬೆಳೆಸುತನಾವು ಪರಿಸರವನ್ನು ಉಳಿಸೋಣ  ಶಕುಂತಲಾ ಹಿರೇಮಠ, ಗೋಕಾಕ

ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಅವರ ಕವಿತೆ "ಅಲ್ಲಮನಾಗುವುದಾದರೆ..." ಮತ್ತು ವಿಮರ್ಶೆ ಸುರೇಶ ಮುದ್ದಾರ

ಕವಿತೆ "ಅಲ್ಲಮನಾಗುವುದಾದರೆ..." ಅಂತರಂಗದ ಕತ್ತಲೆಗೆ ಬೆಳಕ ಶಬ್ದ ಬಿತ್ತುವ ದೇವಗುರು. ಘನ ಪ್ರೇಮದ ಮಾಯೆಗೆ ಮರಿಚಿಕೆ ನಿತ್ಯ ಪ್ರೀತಿ. ಮಧುರ ಪ್ರೇಮದ ಗರ್ಭದಲ್ಲಿ ಕಟು ವಿರಹದ ತಾಪ. ಪ್ರಕಾಶದ ಮಹಾ ಶರೀರ ಕಣ್ಣ ಬೆಳಕಿನ ಜ್ಯೋತಿರ್ಲಿಂಗ . ಅನಂತದಲ್ಲಿನ ಆತ್ಮ, ಬಯಲ ಬೆಸುಗೆಗೆ ಜೋಗುಳ ಲಾಲಿ. ನಕ್ಷತ್ರ ಮಿಂಚು ತಂಗಾಳಿಗಳ ಹಸುಗು ಸಂತೆ. ಚಂದ್ರಮುಖಿಯ ರೋಧನ, ಬೆಳದಿಂಗಳ ಕಳೆಗುಂದಿದ ಕಾಂತಿ. ಕರಗುವ ಹಿಮ, ದರ್ಶನದ ಮೇರು, ಮದ್ದಳೆಯ ನಾದವೇ ಗಟ್ಟಿಮೇಳ... ತುಟಿಯ ಮೌನಕ್ಕೆ ಬಾಗಿದ ತಲೆ, ನನ್ನ ಹೃದಯಕ್ಕಿಗ ಸಾವಿರದ ಮಾತು. ಕಣ್ಣ ಕಾಡಿಗೆಯ ಕಾರ್ಮೋಡ, ಸಿವುಡುಗಟ್ಟಿದ ಸಿಟ್ಟು .ಕಪ್ಪು ಕಳೆದುಕೊಂಡ ಮುಗಿಲು, ತಪಗುಟ್ಟಿ ಜಿನುಗುವ ಕಣ್ಣಾಲಿ. ಮಾಯೆಯ ವಿರಹಕ್ಕೀಗ ಮತ್ತೆ ಮರೆಯದ ಹರೆಯ.. ಬೆನ್ನಟ್ಟಿದ ಅದೇ ಕಂಗಳು, ತುಟಿಯಂಚಿನ ಕೋಲ್ಮಿಂಚು.ಮುಂಗುರುಳ ದುಂಬಿ' ಮಾದಕ ನಗೆ' ನೀ ಅರಸಿಬಂದ ಅನುರಾಗ.ಮಾತುಮೌನ ನಿಟ್ಟುಸಿರ ಕಥೆಯಾಗಿಸುವುದಾದರೆ, ಭೋರ್ಗರೆದು ಸುರಿದು ಬಿಡುವೆ ಯಾವ ಒಡಂಬಡಿಕೆಗಳಿಲ್ಲ... ಸ್ವರ ಲಾವಣಿ ನೂರು ಪದ ಸರಣಿ, ಪೊಣಿಸಿದ ಮುತ್ತುಗಳೆಲ್ಲಾ ಎದೆಯ ಬಾರಕ್ಕೆ ಕಳೆಗುಂದದಿರಲಿ..ಒಲವ ಸರಕು ಬಿಕರಿಯಾಗಲು ಬದುಕು ವ್ಯಾಪಾರವಲ್ಲ.ನಿನ್ನ ಜಂಗಮನಾದಕ್ಕೆ  ತಾಳ ತಪ್ಪಿದ ಕಾಲ್ಗೆಜ್ಜೆ ,ಮದ್ದಲೆಯ ಸುನಾದಕ್ಕೆ ಮಾತ್ರ ಸಾವಿಲ್ಲ... ಕೈ ಬೆರಳುಗಳ ಬೆರಗು, ಮೋಹನ ಮುರಳಿ ಎದೆಯ ಮೀಟಿದ ತಂತಿ.ಭಾವ ಬಸಿರು ಬಗೆದು ಬಂದ ಒ...

ಕವಯತ್ರಿ ಭಾರತಿ ಮಧಬಾವಿಯವರ ಕವಿತೆ 'ಸರಳ ರೇಖೆ' ಮತ್ತು ಸುರೇಶ ಮುದ್ದಾರ ಅವರ ವಿಮರ್ಶೆ

ಕವಿತೆ: ಸರಳ ರೇಖೆ ನೀನು ಗಣಿತದ ಸರಳರೇಖೆ ನಾನೇನು ಸುಲಭವೇ? ನಿನ್ನ ಹಾಗೆ ನಾನೂ ಸರಳರೇಖೆ ಅತ್ತಿತ್ತ ನೋಡದೇ ಭಾವನೆಗಳಿಗೆ ಬೆಲೆ ಕೊಡದೇ ನೇರ ನಿನ್ನ ಪಯಣ ಅಡ್ಡಿಯಾಗಿಲ್ಲ ಎಡರು ತೊಡರುಗಳು ನಿನ್ನ ಪಥಕೆ ನನಗೆ ಹಾಗಲ್ಲಾ ಬಿದ್ದಿವೆ ಬೆಟ್ಟದಷ್ಟು ಅಡ್ಡಿಗಳು ಅಡ್ಡಡ್ಡ ಬಂದರೂ ಸಾಗುವೆ ನೇರ ನಿನ್ನಂತೆ ನೀ ನನಗೆ ಮಾದರಿ ಹೇಳೆನು ನಾ ಬೀಗದೇ ಸಾಗು ಮುಂದೆಲ್ಲ ನಿನ್ನದೇ ದಾರಿ ಜೊತೆಯಲ್ಲಿ ಸಾಗುವೆ ಕಿಂಚಿತ್ತೂ ನಿನ್ನನ್ನು ನೋಡದೇ ನಿನಗಿಂತ ವೇಗವಾಗಿ ಮನಸುಗಳನ್ನು ಸಾಯಿಸಿ ದಾರಿ ಸವೆಸಿದರೇನು ಬಂತು? ಬೀಗಿದರೇನು ಬಂತು ಪ್ರತಿಷ್ಠೆಯ ಜೀವನ ಯಾರಿಗೆ ಬೇಕು ಭಾವಗಳ ಜೊತೆ ಏಳುತ್ತ ಬೀಳುತ್ತ ನಲಿಯುತ್ತ ಕಮರುತ್ತ ಕಡಿದಷ್ಟು ಚಿಗುರುವ ಮರದ ಹಾಗೆ ಚಿಗಿಯುವ ಬದುಕು ನನಗೆ ಬೇಕು ತೊಡರುಗಾಲು ಹಾಕಿ ಬೀಳಿಸುವವರಿಗೆ ಬೀಳದೇ ಕಣ್ಣ ಮುಂದಿರುವ ಬಿಂದುವಿನತ್ತ ಸಾಗುವೆ ನಿನ್ನ ಹಾಗೆ ನೀನು ಸರಳ ರೇಖೆ ನಾನೂ ಸರಳ ರೇಖೆ ಅಳೆಯಲಾರದ ಹಾದಿ ಸವೆಸಿದರೇನು ಎಂದಿಗೂ ಎದುರಾಗೆವು ನಾವು  ಭಾರತಿ ಮದಭಾವಿ, ಗೋಕಾಕ ******************************************** ಕವಿತೆಯ ವಿಮರ್ಶೆ: ಪ್ರೊ. ಸುರೇಶ ಮುದ್ದಾರ             ಗಣಿತದ ಸರಳರೇಖೆಯನ್ನು ಸಾಂಕೇತಿಕವಾಗಿ ಪುರುಷತ್ವಕ್ಕೆ ಹೋಲಿಸಿ ಜೀವನದ  ಸ್ವಾರಸ್ಯವಿರುವುದು ಕೇವಲ ಪುರುಷ ಪ್ರಾಧಾನ್ಯತೆಯ ಜೀವನಕ್ಕಲ್ಲ, ಜೀವನ ಪರಿಪೂರ್ಣವೆನಿಸಿಕೊಳ್ಳಬೇಕೆಂದರೆ,ಸ್ತ್ರೀ...