ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಸುರೇಶ ಮುದ್ದಾರ ಕಾಲಂ: ಕಥಾ ವಿಮರ್ಶೆ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕಥಾ ವಿಮರ್ಶೆ: ಮಗ್ದತೆಯ ಸಾವು ಮೌನದ ಪ್ರತಿಭಟನೆ : ಸುರೇಶ ಮುದ್ದಾರ

ಕಥಾ ವಿಮರ್ಶೆ: ಮಗ್ದತೆಯ ಸಾವು ಮೌನದ   ಪ್ರತಿಭಟನೆ      ಎಲ್ಲ ಸಮಾಜಗಳಲ್ಲಿ ಮೊದಲಿನಿಂದಲೂ ಬಡವರ, ಕೂಲಿಕಾರರ, ಜೀತದಾಳುಗಳ ಬಗ್ಗೆ ತಾರತಮ್ಯ ಧೋರಣೆ, ಅಸಡ್ಡೆ ಮತ್ತು ಅಪನಂಬಿಕೆ ಎದ್ದು ಕಾಣುತ್ತ ಬಂದಿದೆ. ಶ್ರೀಮಂತರಾದವರು ದುರ್ಬಲರ ಶ್ರಮವನ್ನಾಗಲಿ, ಅವರ ಪ್ರಾಮಾಣಿಕತೆಯನ್ನಾಗಲಿ ಮತ್ತು ಅವರ ಭಾವನೆಗಳನ್ನಾಗಲಿ ಗೌರವಿಸದೆ, ಅವರ ಪರಿಶ್ರಮದಲ್ಲೆ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಾರೆ.           ಪ್ರಸ್ತುತ ಕೇಶವ ಮಳಗಿ ಗುರುಗಳು ಅನುವಾದಿಸಿದ ರಶ್ಯನ್ ಭಾಷೆಯಲ್ಲಿ ಬರೆದಿರುವ ಲಿಯೋ ಟಾಲಸ್ಟಾಯ ಅವರ  ' ಅಲ್ಯೋಶ ದಿ ಪಾಟ್' ಎಂಬ ಕತೆಯನ್ನು 'ಕುಡಿಕೆ ಅಲ್ಯೋಶ' ಎಂಬ ಶೀರ್ಷಿಕೆ ಅಡಿಯಲ್ಲಿ ಕನ್ನಡಕ್ಕೆ ಅನುವಾದಿಸಿರುವರಾದರೂ ಅದನ್ನು ಓದುತ್ತಾ ಓದುತ್ತ ಅದು ಅನುವಾದಿತ ಕತೆ ಎಂದು ಅನ್ನಿಸುವುದೆ ಇಲ್ಲ.        ಬಹುಶಃ ಟಾಲಸ್ಟಾಯ ಅವರ ಈ  ಕತೆಯನ್ನು ಓದದವರ ಕೈಯಲ್ಲಿ  ಕೊಟ್ಟರೆ ಕೇಶವ ಮಳಗಿ ಗುರುಗಳ ಈ ಕತೆ ಅನುವಾದಿತ ಕತೆ ಎಂದು ಹೇಳಲು ಸಾಧ್ಯವಿಲ್ಲ.  ಅಷ್ಟು ಸಹಜವಾಗಿ ಕತೆಯನ್ನು ಅನುವಾದಿಸಿರುವುದು ಮಳಗಿ ಗುರುಗಳ ಸೃಜನಶೀಲತೆಗೆ ಹಿಡಿದ ಕೈಗನ್ನಡಿಯಾಗಿದೆ.            ಕತೆಯ ನಾಯಕ ಅಲ್ಯೋಶ ಒರ್ವ ಅತ್ಯಂತ ಮುಗ್ಧ ಮತ್ತು ಪ್ರಾಮಾಣಿಕ ಹುಡುಗ. ಚಿಕ್ಕ ವಯಸ್ಸಿನಲ್ಲಿಯ...