ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಕರ್ನಾಟಕದ ಸಾಂಸ್ಕೃತಿಕ ಇತಿಹಾಸ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕರ್ನಾಟಕ ಪದದ ವ್ಯುತ್ಪತ್ತಿ

ಕರ್ನಾಟಕ (ವ್ಯುತ್ಪತ್ತಿ):  ಕರ್ಣಾಟಕ, ಕರ್ಣಾಟ ಮತ್ತು ಕನ್ನಡ ಶಬ್ದಗಳು, ದೇಶ, ಭಾಷೆ, ಜನ ಮತ್ತು ಕುಲಗಳನ್ನು ನಿರ್ದೇಶಿಸುತ್ತವೆ. ಕವಿರಾಜಮಾರ್ಗದಲ್ಲಿಯೂ ಆಂಡಯ್ಯನ ಕಬ್ಬಿಗರ ಕಾವದಲ್ಲಿಯೂ ಕನ್ನಡ ದೇಶವಾಚಕವಾಗಿದೆ. ಚೆನ್ನಬಸವೇಶ್ವರ, ನಿಜಗುಣ ಶಿವಯೋಗಿಗಳ ಉಲ್ಲೇಖನಗಳಲ್ಲಿ ಅದು ಕುಲವಾಚಕವಾಗಿ ಬಂದಿರುವಂತೆ ತೋರುತ್ತದೆ. ಮುಖ್ಯವಾಗಿ ಆ ಶಬ್ದಗಳು ದೇಶ ಮತ್ತು ಭಾಷಾ ವಾಚಕಗಳಾಗಿಯೇ ಪ್ರಯೋಗವಾಗುತ್ತವೆ. ಈ ಲೇಖನದಲ್ಲಿ ಕರ್ಣಾಟಕ ಶಬ್ದದ ವ್ಯುತ್ಪತ್ತಿ ಮತ್ತು ಅರ್ಥವ್ಯಾಪ್ತಿಯನ್ನು ಕುರಿತು ವಿವೇಚಿಸಲಾಗಿದೆ. ಕರ್ಣಾಟ ಶಬ್ದದ ಪೂರ್ವಪ್ರಯೋಗಗಳು ಪ್ರಾಚೀನ ಸಂಸ್ಕೃತ ಸಾಹಿತ್ಯದಲ್ಲಿ ಅಲ್ಲಲ್ಲಿ ಕಂಡುಬರುತ್ತವೆ. ಸಂಸ್ಕೃತ ಮಹಾಭಾರತದಲ್ಲಿ (ಪ್ರ.ಶ. 320-200?) ಜನಪದಗಳನ್ನು ಕುರಿತು ಹೇಳುವಾಗ ಸಭಾಪರ್ವದಲ್ಲಿ ಕರ್ಣಾಟಾಃ ಎಂದೂ (78-98), ಭೀಷ್ಮಪರ್ವದಲ್ಲಿ ಕರ್ಣಾಟಿಕಾಃ ಎಂದೂ (9-59) ಎರಡು ಮಾತುಗಳು ಬಂದಿವೆ. ಶೂದ್ರಕ ಕವಿಯ (ಪ್ರ.ಶ.ಸು. 400) ಮೃಚ್ಛಕಟಿಕ ನಾಟಕದ ಒಂದು ಸಂವಾದದಲ್ಲಿ, ವರಾಹಮಿಹಿರನ (ಪ್ರ.ಶ.ಸು. 6ನೆಯ ಶತಮಾನದ ಆದಿಭಾಗ) ಬೃಹತ್ಸಂಹಿತೆಯಲ್ಲಿ, ಮಾರ್ಕಂಡೇಯ ಪುರಾಣ (ಪ್ರ.ಶ.ಸು 8ನೆಯ ಶ.?) ಮತ್ತು ಸೋಮದೇವನ ಕಥಾಸರಿತ್ಸಾಗರಗಳಲ್ಲಿ ಕರ್ಣಾಟ ಶಬ್ದವನ್ನು ಕಾಣಬಹುದೆಂದು ವಿದ್ವಾಂಸರು ತಿಳಿಸಿದ್ದಾರೆ. ಗುಣಾಢ್ಯನ ಬೃಹತ್ಕಥೆಯಿಂದ ಆ ಪದವನ್ನು ಸೋಮದೇವ ಎತ್ತಿಕೊಂಡಿದ್ದ ಪಕ್ಷಕ್ಕೆ ಆ ಶಬ್ದದ ಬಳಕೆ ಪ್ರ.ಶ. 1-2 ನೆಯ ಶತಮಾನದಷ್ಟು ಹಿಂದ...

BA. 1 OEC ಕನ್ನಡ ಸಾಹಿತ್ಯದ ಬೆಳವಣಿಗೆ

ಕನ್ನಡ ಸಾಹಿತ್ಯ ಬೆಳವಣಿಗೆ  ಶ್ರೀಮಂತವೂ ವೈವಿಧ್ಯಪೂರ್ಣವೂ ಆದ ಕನ್ನಡ ಸಾಹಿತ್ಯಕ್ಕೆ ೨ ಸಾವಿರ ವರ್ಷಗಳಿಗೂ ಮೇಲ್ಪಟ್ಟ ಸುದೀರ್ಘ ಇತಿಹಾಸವಿದೆ. ಅಧ್ಯಯನದ ದೃಷ್ಟಿಯಿಂದ ಕನ್ನಡ ಸಾಹಿತ್ಯವನ್ನು ಮತ ಪ್ರಾಬಲ್ಯ, ಭಾಷೆಯ ಅವಸ್ಥೆಗಳು, ಪ್ರಮುಖ ಕವಿಗಳು, ಸಾಹಿತ್ಯ ರೂಪಗಳು, ಆಯಾ ಯುಗಮನೋಧರ್ಮ, ಶತಮಾನಾನುಪೂರ್ವಿ - ಈ ಮುಂತಾದ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಅನೇಕ ವಿಧದಲ್ಲಿ ವಿಭಾಗಿಸಿ ವಿಶ್ಲೇಷಿಸುವ ಕಾರ್ಯ ಇದುವರೆಗೆ ಸಾಕಷ್ಟು ನಡೆದಿದೆ. ಮತೀಯ ದೃಷ್ಟಿಯನ್ನನುಸರಿಸಿ ಜೈನಯುಗ, ವೀರಶೈವಯುಗ, ಬ್ರಾಹ್ಮಣಯುಗವೆಂದೂ ಪ್ರಮುಖ ಕವಿಗಳನ್ನಾಧರಿಸಿ ಪಂಪಯುಗ, ಬಸವಯುಗ, ಹರಿಹರಯುಗ, ಕುಮಾರವ್ಯಾಸಯುಗವೆಂದೂ ಸಾಹಿತ್ಯ ರೂಪಗಳನ್ನಾಧರಿಸಿ ಚಂಪೂ, ವಚನ, ರಗಳೆ, ತ್ರಿಪದಿ, ಸಾಂಗತ್ಯ ಯುಗಗಳೆಂದೂ ಭಾಷಾವಸ್ಥೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪೂರ್ವದ ಹಳಗನ್ನಡಕಾಲ, ಹಳಗನ್ನಡಕಾಲ, ನಡುಗನ್ನಡಕಾಲ, ಹೊಸಗನ್ನಡಕಾಲವೆಂದೂ ಆಯಾ ಯುಗಮನೋಧರ್ಮ ಮತ್ತು ಕವಿಕರ್ಮಕ್ಕೆ ಸಿಕ್ಕ ಮೂಲ ಪ್ರಚೋದನೆಯನ್ನು ಮುಖ್ಯವಾಗಿ ಆಧರಿಸಿ ಕ್ಷಾತ್ರ ಯುಗ, ಧರ್ಮಪ್ರಚಾರಯುಗ, ಸಾರ್ವಜನಿಕಯುಗ, ಆಧುನಿಕಯುಗವೆಂದೂ ಶತಮಾನಾನು ಪೂರ್ವಿಯನ್ನನುಸರಿಸಿ 10ನೆಯ ಶತಮಾನದ ಸಾಹಿತ್ಯ, 11ನೆಯ ಶತಮಾನದ ಸಾಹಿತ್ಯ - ಇತ್ಯಾದಿಯಾಗಿಯೂ -ಹೀಗೆ ಒಬ್ಬೊಬ್ಬ ವಿದ್ವಾಂಸರು ಒಂದೊಂದು ಕ್ರಮವನ್ನನುಸರಿಸಿದ್ದಾರೆ. ಪ್ರಸ್ತುತ ಲೇಖನದಲ್ಲಿ ಕನ್ನಡ ಸಾಹಿತ್ಯದ ಪ್ರಾಚೀನತೆ, ಪಂಪಯುಗ, ವಚನಯುಗ, ಹರಿಹರ...

ಕನ್ನಡ ಲಿಪಿ ಬೆಳವಣಿಗೆ

ಕನ್ನಡ ಲಿಪಿ ಬೆಳವಣಿಗೆ ಪ್ರಾಚೀನ ಇತಿಹಾಸ ಮತ್ತು ಸಂಸ್ಕೃತಿ ರಚನೆಗೆ ಮಹತ್ವದ ಆಕರ ಸಾಮಗ್ರಿಯೆನಿಸಿದ ಶಾಸನಗಳನ್ನು ಹೊರಗಡೆ ತರುವ ಪ್ರಯತ್ನ ಒಂದು ಶತಮಾನದಿಂದಲೂ ನಡೆಯುತ್ತಿದೆ.  ಒಂದು ಘಟ್ಟದ ಇತಿಹಾಸ ಮತ್ತು ಸಂಸ್ಕೃತಿಯ ವಿಷಯ ತಿಳಿಯಲು ಬಹುಮುಖ್ಯ ಆಕರ ಗಳೆಂದರೆ ಶಾಸನಗಳು. ಲಿಪಶಾಸ್ತ್ರದ ಜ್ಞಾನ ಇಲ್ಲದೇ ಇದ್ದಲ್ಲಿ ಅಪ್ರಕಟಿತ ಶಾಸನಗಳ ಓದುವಿಕೆ ಅಸಾಧ್ಯ. ಶಾಸನಗಳ ಲಿಪಿಗಳನ್ನು ಅಧ್ಯಯನ ಮಾಡಿ ಅವುಗಳ ಬೆಳವಣಿಗೆಯ ವಿವಿಧ ಹಂತ ಮತ್ತು ಲಕ್ಷಣಗಳನ್ನು ತಿಳಿಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಶಾಸನಗಳನ್ನು ಕ್ಷೇತ್ರಕಾರ್ಯದಿಂದ ಹುಡುಕುವುದು, ಪ್ರತಿ ಮಾಡುವುದು, ಓದುವುದು, ಅಧ್ಯಯನ ಮಾಡಿ ಲೇಖನ ಇಲ್ಲವೆ ಹೊತ್ತಿಗೆಗಳ ಮೂಲಕ ಪ್ರಕಟಿಸುವ ಕಾರ್ಯಕ್ಕೆ ಅನೇಕ ವಿದ್ವಾಂಸರು ಮಹತ್ವದ ಸೇವೆಯನ್ನು ಸಲ್ಲಿಸಿದ್ದಾರೆ. ೧. ಉಗಮ ಮತ್ತು ವಿಕಾಸ ಭಾರತೀಯ ಲಿಪಿಗಳ ಅಧ್ಯಯನದ ಬಗ್ಗೆ ಕೆಲವು ಕೃತಿಗಳು ಸುಮಾರು ಒಂದು ಕಾಲು ಶತಮಾನದಿಂದ ಹೊರಬಂದಿವೆ. ಬರ‍್ನೆಲ್ ಅವರ Elements of South Indian Palaeography, ಡೇವಿಡ್ ಡಿರಿಂಜರ್ ಅವರ The Alphabet, ಸಿ. ಶಿವರಾಮಮೂರ್ತಿ ಅವರ Indian Epigraphy and South Indian Scripts, ಟಿ.ವಿ. ಮಹಾಲಿಂಗಂ ಅವರ Early South Indian Palaeography ಕೃತಿಗಳು ಮುಖ್ಯವಾಗಿವೆ. ಕನ್ನಡ ಲಿಪಿಗಳಿಗೆ ನೀಡುವ ಒತ್ತಕ್ಷರ, ಸಂಯುಕ್ತಾಕ್ಷರದ ಚಿತ್ರಗಳನ್ನೊಳಗೊಂಡ ವಿವರಗಳನ್ನು ಮೂಲ ಅಕ್ಷರಗಳ ಬೆ...

BA 1 OEC-ಕರ್ನಾಟಕದ ಸಾಂಸ್ಕೃತಿಕ ಇತಿಹಾಸ: ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳು

ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳು ಕರ್ನಾಟಕ ರಾಜ್ಯದಲ್ಲಿ ವೈವಿಧ್ಯಮಯವಾದ ಪ್ರಾಕೃತಿಕ ಸೌಂದರ್ಯ ಹಾಗೂ ಮಾನವನಿರ್ಮಿತ ಗುಡಿ ಗೋಪುರಗಳು, ಅರಮನೆಗಳು ಹಾಗೂ ಕರಾವಳಿ ಪ್ರದೇಶದ ಸಮುದ್ರತೀರದ ಸೊಬಗು, ಪಶ್ಚಿಮ ಘಟ್ಟಗಳ ಅವರ್ಣನೀಯ ಸೌಂದರ್ಯ, ಬಯಲುಸೀಮೆಯ ಆಧುನಿಕ ವೀಕ್ಷಣೀಯ ಸ್ಥಳಗಳು… ಒಂದೇ ಎರಡೇ ? ಉತ್ತರ ಕರ್ನಾಟಕದಿಂದ ಹಿಡಿದು, ದಕ್ಷಿಣ ಕರ್ನಾಟಕದ ತುದಿಯವರೆಗೂ ಪ್ರತಿಯೊಂದು ಜಿಲ್ಲೆ ಐತಿಹಾಸಿಕ ಅಥವಾ ಪೌರಾಣಿಕ ಹಿನ್ನಲೆಯನ್ನು ಹೊಂದಿ ತನ್ನದೇ ಆದ ಆಕರ್ಷಣೆಯನ್ನು ಪ್ರವಾಸಿಗರಿಗೆ ತೋರುತ್ತದೆ. ಗುಲ್ಬರ್ಗ, ಬೆಳಗಾವಿ, ಬಾಗಲಕೋಟ, ವಿಜಯಪುರ, ಬಾದಾಮಿ, ಪಟ್ಟದಕಲ್ಲು, ಐಹೊಳೆ, ಬೇಲೂರು, ಹಳೇಬೀಡು, ಮಂಗಳೂರು, ಮೈಸೂರು, ಬೆಂಗಳೂರು, ಶ್ರೀರಂಗಪಟ್ಟಣ, ಶಿವಮೊಗ್ಗ, ಚಿಕ್ಕಮಗಳೂರು, ಮಡಿಕೇರಿ, ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಹೊರನಾಡು, ಶೃಂಗೇರಿ, ಮುರುಡೇಶ್ವರ, ಹೊನ್ನಾವರ, ಉಡುಪಿ, ಕುದುರೆಮುಖ, ಇತ್ಯಾದಿ. ಈ ಎಲ್ಲಾ ಸ್ಥಳಗಳಲ್ಲೂ ಐತಿಹಾಸಿಕ ಅಥವಾ ಧಾರ್ಮಿಕ ಹಿನ್ನೆಲೆಯ ಪ್ರತಿಬಿಂಬವಾಗಿ ದೇವಸ್ಥಾನಗಳು ಇವೆ. ಹಾಗೂ ಇವು ಪ್ರಾಕೃತಿಕ ಸೌಂದರ್ಯವನ್ನು ಸವಿಯಲು ಅತ್ಯುತ್ತಮ ತಾಣಗಳಾಗಿವೆ. ಕೂಡಲ ಸಂಗಮ ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮ ಪವಿತ್ರ ಪುಣ್ಯಸ್ಥಳ. ಅಂತಾರಾಷ್ಟ್ರೀಯ ಖ್ಯಾತಿಯ ಪ್ರವಾಸಿ ತಾಣ.  ಕೃಷ್ಣಾ ಹಾಗೂ ಮಲಪ್ರಭಾ ನದಿಗಳು ಕೂಡುವ  ಸಂಗಮ ಸ್ಥಳ. ಹೀಗಾಗಿ ಇದು ಕೂಡಲ ಸಂಗಮವೆಂದೇ ಖ್ಯಾತವಾಗಿದೆ. 12ನೆಯ ಶತಮಾನದಲ್ಲ...

BA 1 OEC-ಕರ್ನಾಟಕದ ಸಾಂಸ್ಕೃತಿಕ ಇತಿಹಾಸ: ಕರ್ನಾಟಕದ ಶಾಸನಗಳು

ಕರ್ನಾಟಕದ ಸಾಂಸ್ಕೃತಿಕ ಇತಿಹಾಸ:  ಕರ್ನಾಟಕದ ಶಾಸನಗಳು ಪೀಠಿಕೆ: ಬಹುಶಃ ತಮಿಳುನಾಡನ್ನು ಬಿಟ್ಟರೆ ಕರ್ನಾಟಕದಲ್ಲಿ ದೊರೆಯುವಷ್ಟು ಶಾಸನಗಳು  ಭಾರತ ದ ಯಾವ ಪ್ರಾಂತದಲ್ಲಿಯೂ ಇಲ್ಲ. ಸು. ೨೦,೦೦೦ಕ್ಕೂ ಹೆಚ್ಚು ಶಾಸನಗಳು ಕರ್ನಾಟಕದಲ್ಲಿ ಈವರೆಗೆ ದೊರಕಿವೆ. ಅವುಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಶಾಸನಗಳು ಅಚ್ಚಾಗಿವೆ. ಪ್ರಾಕೃತ, ಸಂಸ್ಕೃತ, ಕನ್ನಡ, ತಮಿಳು ಮೊದಲಾದ ಭಾಷೆಗಳಲ್ಲಿ ಬರೆಯಲ್ಪಟ್ಟಿವೆ. ಶಾಸನದ ಅರ್ಥ ಶಾಸನಗಳು ಎಂದರೆ ಬಹುಕಾಲ ಉಳಿಯುವಂತಹ ಶಿಲೆ,  ಲೋಹ  ಮೊದಲಾದುವುಗಳ ಮೇಲಿನ ಬರಹ. ಶಾಸನ ಎಂಬ  ಸಂಸ್ಕೃತ  ಪದಕ್ಕೆ ಆಜ್ಞೆ (ರಾಜಾಜ್ಞೆ) ಎಂಬ ಮೂಲಾರ್ಥ. ಶಾಸ್ ಧಾತುವಿನಿಂದ ಬಂದದ್ದು ಶಾಸನ. ಶಾಸ್ ಎಂದರೆ- ಆಜ್ಞಾಪಿಸು, ಶಿಕ್ಷಿಸು, ನಿಯಂತ್ರಿಸು ಎಂಬ ಅರ್ಥಗಳಿವೆ. ಮೂಲತಃ ಶಾಸನ ಎಂಬುದು ದಾನ ಸಂಬಂಧವಾದ ರಾಜಾಜ್ಞೆ. ಒಟ್ಟಿನಲ್ಲಿ ಶಾಸನವೆಂದರೆ ಗಟ್ಟಿಯಾದ ಅಥವಾ ಶಾಶ್ವತವಾದ ಯಾವುದೇ ಬಗೆಯ ದಾಖಲೆಗಳು. ಶಾಸನಗಳೇ ಕರ್ನಾಟಕದ ಐತಿಹಾಸಿಕ ಪರಂಪರೆಯ ರಚನೆಗೆ ಒದಗಿಸುವ ಮುಖ್ಯ ಮಾಹಿತಿ ಕೋಶ. ಶಾಸನಗಳು ವಾಸ್ತವ ವಿಷಯಗಳ ದಾಖಲೆಗಳಾದ್ದರಿಂದ ಅವುಗಳಲ್ಲಿ ದೊರಕುವ ವಿಷಯ ಸಂಪತ್ತು ಅಗಾಧವಾದುದು. Inscription ಎಂಬ ಪದ ಲ್ಯಾಟಿನ್ ನ inscribere ದಿಂದ ಇಂಗ್ಲಿಷ್ Inscribe ಎಂಬ ಪದದಿಂದ ಬಂದಿದೆ. Inscribe ಎಂದರೆ ತುಂಡರಿಸು, ಕತ್ತರಿಸು ಎಂದರ್ಥ. ಗಟ್ಟಿಯಾದ ವಸ್ತುವಿನ (ಶಿಲೆ,ತಾಮ್ರ ಪಟ) ಕೆತ್ತಿ...

BA1 OEC- ಕರ್ನಾಟಕದ ಸಾಂಸ್ಕೃತಿಕ ಇತಿಹಾಸ: ಕರ್ನಾಟಕದ ವಾಸ್ತುಶಿಲ್ಪ

ಕರ್ನಾಟಕದ ವಾಸ್ತುಶಿಲ್ಪ :  ಕರ್ನಾಟಕ ದ ವಾಸ್ತು ಶಿಲ್ಪ ಚಾರಿತ್ರಿಕಯುಗದ ಆರಂಭಕಾಲದಿಂದಲೂ ಪ್ರಾಮುಖ್ಯತೆ ಗಳಿಸಿಕೊಂಡಿದೆ. ಇಲ್ಲಿಯ ನಾನಾ ಅರಸುತನಗಳೂ ಶ್ರೀಮಂತ ವಂಶಗಳೂ ಇದಕ್ಕೆ ಯಾವಾಗಲೂ ಪ್ರೋತ್ಸಾಹ ನೀಡುತ್ತಾ ಬಂದಿವೆ. ಅಲ್ಲದೆ ಈ ನಾಡು ತನ್ನ ವಿಶಿಷ್ಪ ಭೌಗೋಳಿಕ ಸನ್ನಿವೇಶದ ಕಾರಣದಿಂದಾಗಿ ಅನೇಕ ವಾಸ್ತುಶೈಲಿಗಳ ಸಂಗಮ ಸ್ಥಾನವಾಗಿದೆ. ಆದ್ದರಿಂದ ಕರ್ನಾಟಕದ ವಾಸ್ತುಶಿಲ್ಪಸಂಪತ್ತು ಗಮನಾರ್ಹವೂ ವೈವಿಧ್ಯಪೂರ್ಣವೂ ಆದದ್ದು. ವಿವಿಧ ರಾಜವಂಶಗಳ ಕಾಲದಲ್ಲಿ ಕರ್ನಾಟಕದ ಈ ಕಲೆ ಬೆಳೆದು ಬಂದ ಬಗೆಯನ್ನು ಈ ಲೇಖನದಲ್ಲಿ ಪರಿಶೀಲಿಸಲಾಗಿದೆ. ಮೌರ್ಯರ ಮತ್ತು ಸಾತವಾಹನರ ಕಾಲ:  ಕರ್ನಾಟಕದಲ್ಲಿ ವಾಸ್ತುಶಿಲ್ಪ ಅತ್ಯಂತ ಪುರಾತನವಾದದ್ದಾದರೂ ಯಾವಾಗ ಪ್ರಾರಂಭವಾಯಿತೆಂದು ಹೇಳಲು ಖಚಿತ ಆಧಾರಗಳಿಲ್ಲ. ಅಶೋಕನ ಕಾಲದ ಕಟ್ಟಡಗಳು ಕರ್ನಾಟಕದಲ್ಲಿ ಇದ್ದಿರಬಹುದಾದರೂ ಅವು ನಾಶವಾಗಿರಬಹುದು. ಅಶೋಕನ ಪ್ರಾಂತೀಯ ಸರ್ಕಾರವಿದ್ದ ಮಾಸ್ಕಿಯಂಥಹ ಪಟ್ಟಣದಲ್ಲಿಯೂ ಯಾವ ಕಟ್ಟಡಗಳೂ ಉಳಿದುಬಂದಿಲ್ಲ.  ಇಸಿಲ ದಲ್ಲಿ (ಬ್ರಹ್ಮಗಿರಿ-ಚಿತ್ರದುರ್ಗ ಜಿಲ್ಲೆ)ಯಲ್ಲಿ ವೀಲರ್ ನಡೆಸಿದ ಭೂಶೋಧನೆಯಲ್ಲಿ ತುಂಬ ಶಿಥಿಲವಾದ, ಇಟ್ಟಿಗೆಯ, ಬೌದ್ಧ ಕಟ್ಟಡವೊಂದು ಮಾತ್ರ ಸಿಕ್ಕಿತು. ಸಾತವಾಹನರ ಕಟ್ಟಡಗಳೂ ಅಪೂರ್ವವೇ. ಚಂದ್ರವಳ್ಳಿ (ಚಿತ್ರದುರ್ಗ ಜಿಲ್ಲೆ) ಭೂಶೋಧನೆಯಲ್ಲಿ ಕಟ್ಟಡಗಳು ಸಿಕ್ಕದಿದ್ದರೂ ಸಾತವಾಹನ ಕಾಲದ ದೊಡ್ಡಗಾತ್ರದ (೧೬" x ೧೦" x ೧೩") ಇಟ್ಟಿಗೆಗಳು ಸಿಕ್ಕಿದ...

BA 1 OEC-ಕರ್ನಾಟಕದ ಸಾಂಸ್ಕೃತಿಕ ಇತಿಹಾಸ: ಕರ್ನಾಟಕದಲ್ಲಿ ಬೌದ್ಧ ಧರ್ಮ

ಡಂಬಳ:  ಮೌರ್ಯರು  ಮತ್ತು  ಶಾತವಾಹನರ  ಆಳ್ವಿಕೆಯಲ್ಲಿ ಬುದ್ಧನ ಬೋಧನೆಗಳು  ಕರ್ನಾಟಕದಲ್ಲಿ  ಪ್ರವರ್ಧಮಾನಕ್ಕೆ ಬಂದವು . ಪಟ್ಟಣದ ಸುತ್ತಲೂ ಅಲ್ಲಲ್ಲಿ ಬೌದ್ಧ ಅವಶೇಷಗಳು ಕಂಡುಬರುತ್ತವೆ.  ದಂಬಲ್‌ನಲ್ಲಿರುವ ಬೌದ್ಧ ದೇವತೆ  ತಾರಾ  ದೇವಾಲಯದಲ್ಲಿ, ಕ್ರಿ.ಶ. 1095 ರ ಶಾಸನವಿದೆ, ತಾರಾ ದೇವತೆಗಾಗಿ 16 ವ್ಯಾಪಾರಿಗಳು ನಿರ್ಮಿಸಿದ ದೇವಾಲಯ ಮತ್ತು ಬೌದ್ಧ ಸನ್ಯಾಸಿಗಳಿಗೆ ವಿಹಾರವಿದೆ.  ಹಿಂದೂ ಧರ್ಮದ  ಬೆಳೆಯುತ್ತಿರುವ ಜನಪ್ರಿಯತೆಯಿಂದ ಬೌದ್ಧಧರ್ಮವು ಸಮೀಕರಿಸಲ್ಪಟ್ಟಿದ್ದರೂ , 12 ನೇ ಶತಮಾನದ ಅಂತ್ಯದ ವೇಳೆಗೆ ದಂಬಲ್‌ನಲ್ಲಿ ಬೌದ್ಧ ಕೇಂದ್ರವಿತ್ತು.  ಐಹೊಳೆ:  ಮೇಗುಟಿ ಬೆಟ್ಟದ ಮೇಲೆ ಒಂದು ಬೌದ್ಧ ಸ್ಮಾರಕವಿದೆ. ಇದು ಭಾಗಶಃ ಕಲ್ಲಿನಿಂದ ಕತ್ತರಿಸಿದ ಎರಡು ಅಂತಸ್ತಿನ ದೇವಾಲಯವಾಗಿದ್ದು, ಬೆಟ್ಟದ ತುದಿಯಿಂದ ಕೆಲವು ಮೆಟ್ಟಿಲುಗಳ ಕೆಳಗೆ ಮತ್ತು ಜೈನ ಮೇಗುಟಿ ಬೆಟ್ಟದ ದೇವಾಲಯವಾಗಿದೆ. ದೇವಾಲಯದ ಮುಂಭಾಗದಲ್ಲಿ ಹಾನಿಗೊಳಗಾದ ಬುದ್ಧನ ಪ್ರತಿಮೆಯಿದೆ, ತಲೆಯಿಲ್ಲದ, ಬಹುಶಃ ದೇವಾಲಯದ ಒಳಗಿನಿಂದ ಹೊರತೆಗೆಯಲಾಗಿದೆ.  ದೇವಾಲಯದ ಎರಡು ಹಂತಗಳು ತೆರೆದಿವೆ ಮತ್ತು ನಾಲ್ಕು ಪೂರ್ಣ ಕೆತ್ತಿದ ಚದರ ಕಂಬಗಳು ಮತ್ತು ಎರಡು ಬದಿಯ ಗೋಡೆಗಳ ಮೇಲೆ ಎರಡು ಭಾಗಶಃ ಕಂಬಗಳನ್ನು ಒಳಗೊಂಡಿದೆ. ಪ್ರತಿಯೊಂದು ಜೋಡಿ ಕಂಬಗ...

BA 1 OEC-ಕರ್ನಾಟಕದ ಸಾಂಸ್ಕೃತಿಕ ಇತಿಹಾಸ: ಕರ್ನಾಟಕದಲ್ಲಿ ಶಿಕ್ಷಣ ಮತ್ತು ಅಗ್ರಹಾರ

ಪ್ರಾಚೀನ ಕರ್ನಾಟಕದಲ್ಲಿ ಶಿಕ್ಷಣ :  ಕರ್ನಾಟಕದ ಶಿಕ್ಷಣವನ್ನು ಪ್ರಾಚೀನಕಾಲ, ಮಧ್ಯಯುಗ ಹಾಗೂ ಆಧುನಿಕ ಯುಗಗಳ ಶಿಕ್ಷಣವೆಂದು ವಿಂಗಡಿಸಬಹುದು. ಪ್ರಾಚೀನಕಾಲ ಕರ್ನಾಟಕದ ರಾಜಕೀಯ ಇತಿಹಾಸ ಶಾತವಾಹನ ಅರಸರ ಕಾಲದಿಂದ ಆರಂಭವಾಗಿದ್ದರೂ ಅದಕ್ಕಿಂತ ಮೊದಲೇ ಶಿಕ್ಷಣ ಪದ್ದತಿಯಿತ್ತೆಂದು ಭಾವಿಸಲಾಗಿದೆ. ಚಂದ್ರಗುಪ್ತ ಮೌರ್ಯ ತನ್ನ ಗುರು ಭದ್ರ ಬಾಹುವಿನೊಂದಿಗೆ ಕ್ರಿ.ಪೂ. 4ನೇ ಶತಮಾನದಲ್ಲಿ ಕರ್ನಾಟಕಕ್ಕೆ ಆಗಮಿಸಿದನೆಂದು, ಅವರೊಂದಿಗೆ ಜೈನ ಸಂಪ್ರದಾಯವೂ ಆಗಮಿಸಿತು. ಆ ಜೈನ ಧರ್ಮದ ಪ್ರಸಾರಕ್ಕಾಗಿ ಜೈನಬಸದಿಗಳು ಅಸ್ತಿತ್ವಕ್ಕೆ ಬಂದವು. ಶಿಕ್ಷಣಕ್ಕೆ ನಾಂದಿ ಹಾಡಿದವು. ಹಿಂದೂ ಧರ್ಮದಲ್ಲಿರುವ ಭಕ್ತಿ, ನಂಬಿಕೆ, ಆರಾಧನೆಗಳ ಜೊತೆಗೆ ಸುಜ್ಞಾನದ ಅವಶ್ಯಕತೆಯಿದೆಯೆಂದು ಎತ್ತಿ ಹಿಡಿದವು. ಕೆಲವು ಕಂದಾಚಾರ, ಮೂಢನಂಬಿಕೆಗಳನ್ನು ತೊಡೆದು ಹಾಕಿ ಸಂಸ್ಕಾರವಂತರಾಗಲು ಸಹಾಯವಾದವು. ಇವುಗಳೆಲ್ಲ ಉದ್ದೇಶವು ಜೈನ ಧರ್ಮವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯು ವುದಾಗಿತ್ತು. ನಂತರದಲ್ಲಿ ಚಂದ್ರಗುಪ್ತ ಮೌರ್ಯ ಮೊಮ್ಮಗನಾದ ಅಶೋಕನು ಬೌದ್ಧ ಧರ್ಮವನ್ನು ಅವಲಂಬಿಸಿ ಕರ್ನಾಟಕದಲ್ಲಿ ಶಾಸನಗಳಿಂದ ಪ್ರಚಾರ ಮಾಡಿದನು. ಬ್ರಾಹ್ಮೀ ಲಿಪಿಯಲ್ಲಿ ಬರೆದ ಪ್ರಾಕೃತ ಭಾಷೆಯ ಈ ಶಾಸನಗಳು ರಾಯಚೂರು ಜಿಲ್ಲೆಯ ಕೊಪ್ಪಳ, ಮಸ್ಕಿ, ಬ್ರಹ್ಮಗಿರಿ, ಸಿದ್ದಾಪೂರ ಮುಂತಾದೆಡೆ ದೊರಕಿವೆ. ಇವೆಲ್ಲವುಗಳು ದೇಶೀಯ ಭಾಷೆಯ ಪ್ರಚಾರಕ್ಕೆ ನಾಂದಿಯಾದವು. ಈ ಶಾಸನಗಳನ್ನು ಅರಿಯಲು ಶಿಕ್ಷಣದ ಅವಶ್ಯಕತೆಯೆನಿ...