ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಶಂಕರ ನಿಂಗನೂರ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಬಹಮನಿ ಸುಲ್ತಾನರ ವಾಸ್ತುಶಿಲ್ಪ

ಬಹಮನಿ ಸುಲ್ತಾನರ ಕಾಲದ ವಾಸ್ತುಶಿಲ್ಪ ಬೀದರ್ ಕೋಟೆ : ಇದು ಪಟ್ಟಣದ ಪೂರ್ವ ಭಾಗದಲ್ಲಿದೆ ಮತ್ತು ಅದರೊಳಗೆ ಅರಮನೆಗಳು, ಮಸೀದಿಗಳು ಮತ್ತು ಬಲೆ ಬಂಡೆಯಿಂದ ನಿರ್ಮಿಸಲಾದ ಇತರ ಕಟ್ಟಡಗಳ ಅವಶೇಷಗಳನ್ನು ಹೊಂದಿದೆ. ಕಲ್ಲು ಮತ್ತು ಗಾರೆ ಗಳನ್ನು ಉಪಯೋಗಿಸಿ ಇಲ್ಲಿನ ಕೋಟೆ ಯ ಗೋಡೆಗಳನ್ನು ಕಟ್ಟಲಾಗಿದೆ. ಈ ಕೋಟೆಯು ಆಗ್ನೇಯ ದಿಕ್ಕಿನಿಂದ ಮೂರು ಪ್ರವೇಶದ್ವಾರಗಳನ್ನು ಹೊಂದಿದೆ ಹಾಗೂ ಇದು ಅಂಕುಡೊಂಕಾದ ಮಾರ್ಗದಿಂದ ಕೂಡಿದೆ. ಪ್ರವೇಶ ದ್ವಾರವು ಎತ್ತರದ ಗುಮ್ಮಟವನ್ನು ಹೊಂದಿದೆ, ಅದರ ಒಳಭಾಗವನ್ನು ಗಾಢವಾದ ಬಣ್ಣಗಳಲ್ಲಿ ಚಿತ್ರಿಸಲಾಗಿದೆ.  ಸುಮಾರು 14 ನೇ ಶತಮಾನದಲ್ಲಿ ಬೀದರ್ ಕೋಟೆಯಲ್ಲಿ ಬೀದರ್ ಬಹಮನಿ ಸಾಮ್ರಾಜ್ಯದ ರಾಜಧಾನಿಯಾಗಿತ್ತು, ಇದನ್ನು ಅಹ್ಮದ್ ಷಾ ವಾಲಿ ಬಹ್ಮನ್ ನಿರ್ಮಿಸಿದ. ಬೀದರ್ ಕೋಟೆಯನ್ನು 15 ನೇ ಶತಮಾನದಲ್ಲಿ ಸುಲ್ತಾನ್ ಅಹ್ಮದ್ ಷಾ- I ನವೀಕರಿಸಿದನು ಏಕೆಂದರೆ ಅವನು ತನ್ನ ರಾಜಧಾನಿಯನ್ನು ಕಲಬುರಗಿ (ಗುಲ್ಬರ್ಗಾ) ದಿಂದ ಬೀದರಿಗೆ ಸ್ಥಳಾಂತರಿಸಿದನು. ಅಷ್ಟೂರು :  ಬಹಮನಿ ರಾಜರ ಮರಣಾನಂತರ ತಮ್ಮನ್ನು ತಾವೇ ಸ್ಮಾರಕಮಾಡಲು ಭವ್ಯವಾದ ಗೋರಿಗಳನ್ನು ಈಜಿಪ್ಟಿನ ಫೇರೋಗಳ ಹಾಗೆ  ನಿರ್ಮಿಸಿದರು. 12 ಭವ್ಯವಾದ ಸಮಾಧಿಗಳು ಬೀದರ್‌ನ ಪೂರ್ವದ ಅಷ್ಟೂರಿನಲ್ಲಿವೆ. ಈ ಪೈಕಿ ಅಹಮದ್ ಷಾ ಮತ್ತು ಅಲಾವುದ್ದೀನ್ ಷಾ II ರ ಸಮಾಧಿಗಳು ಭವ್ಯತೆಯ ಪತೀಕವಾಗಿವೆ. ಗಗನ್ ಮಹಲ್ :  ಬಹಮನಿ ರಾಜರು ಮತ್ತು ಬಾರಿದ್ ಶಾಹಿ ಅರಸರು ...