ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಸುರೇಶ ಮುದ್ದಾರರ ಕವಿತೆಗಳು ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಸಂಬಂಧಗಳೇ ಹಾಗೆ......! ಸುರೇಶ ಮುದ್ದಾರ

ಸಂಬಂಧಗಳೆ ಹಾಗೆ ಎಷ್ಟೋ ವರ್ಷ ಒಟ್ಟಿಗಿದ್ದ  ಗಟ್ಟಿ ಸಂಬಂಧಗಳು ಯಾವುದೋ ಬಿರುಗಾಳಿಗೆ ಸಿಕ್ಕು ನೆಲಕ್ಕುರುಳಿವೆ ಯಾವುದೋ ಗತಕಾಲದ ವೈಭವದ ಸಾಮ್ರಾಜ್ಯದಂತೆ ಎಂದೂ ಶಿಥಿಲಗೊಳ್ಳುವುದಿಲ್ಲವೆಂಬ ಸಂಬಂಧಗಳೂ ಸ್ವಾರ್ಥಕ್ಕೊ, ಸೆಳೆತಕ್ಕೊ, ಅನುಮಾನಕ್ಕೊ ಅವಮಾನಕ್ಕೊ ಸಿಲುಕಿ ನಲುಗಿ ಹೋಗಿವೆ ಚಾಡಿ ಮಾತಿಗೆ ಕಿವಿಗೊಟ್ಟ ಅರಮನೆಗಳಂತೆ ಅಂದು ಅರಮನೆಯ ಸಿಂಹಾಸನಕ್ಕೆ ಹೃದಯವಿದ್ದಿದ್ದರೆ ಕಿಟಕಿ, ಬಾಗಿಲುಗಳೆಲ್ಲ ತೆರೆದುಕೊಂಡಿದ್ದರೆ ಅರಮನೆಯಲ್ಲಿ  ಸ್ವಚ್ಛ ಗಾಳಿ ಶುಭ್ರ ಬೆಳಕು ತುಂಬಿಕೊಂಡಿರುತ್ತಿತ್ತು ಆದರೆ, ಅರಮನೆಯ ಸಿಂಹಾಸನಕ್ಕಂದು ತುಕ್ಕು ಹಿಡಿದೂ ಕಿಟಕಿ, ಬಾಗಿಲು, ಗೋಡೆಳೆಲ್ಲ ಬಿರುಕು ಬಿಟ್ಟವು ಅದಕ್ಕಾಗಿ ಅಲ್ಲವೆ ಅರಮನೆಗೊಂದು ಮಹಾಮನೆ ಹುಟ್ಟಿಕೊಂಡಿದ್ದು, ನೆತ್ತರ ಕೋಡಿ ಹರಿದ್ದದ್ದು, ಕಲ್ಯಾಣದ ತುಂಬೆಲ್ಲ ಬೆಳಕು ಚೆಲ್ಲಿದ್ದು  ವಜ್ರ ವೈಡೂರ್ಯಗಳಿಂದ ಮೆರೆದ ವೈಭವದ ಸಾಮ್ರಾಜ್ಯವಿಂದು ಪಾಳು ಬಿದ್ದ ಅರಮನೆಗಳನ್ನು ಕೋಟೆಗಳನ್ನು ಸುತ್ತುತ್ತ ಕರುಳು ಹಿಂಡಿದ ಒಂದೊಂದು ಕತೆ ಹೇಳುತ್ತ ವ್ಯಥೆ ಪಡುತ್ತಿದೆ  ನಮ್ಮವರೆ ನನಗೆ ಈ ಗತಿ ತಂದರಲ್ಲ ಎಂದು.  ಹೌದು ಈ ಸಂಬಂಧಗಳೆ ಹಾಗೆ..... ನಿನ್ನೆ ಇದ್ದದ್ದು ಇಂದು ಯಾರದೋ ಇಂದು ಇದ್ದದ್ದು ನಾಳೆ ಇನ್ನ್ಯಾರದೊ  ಕೋಟೆ ಕೊತ್ತಲು ಅರಮನೆಗಳ   ಸಂಬಂಧ ಶಿಥಿಲುಗೊಂಡಿದೆ  ಗೋಡೆಗಳ ಬಿರುಕಿನಿಂದ  ಹಕ್ಕಿಗಳು ಕಟ್ಟಿದ   ಗೂಡುಗಳಲ್ಲಿನ ಸಂಬಂಧ...

ಸುರೇಶ ಮುದ್ದಾರರ "ಗಡಿಯಾರ ಮತ್ತು ಕಾಲನ ಕರೆ" ಕವಿತೆ

ಗಡಿಯಾರ ಮತ್ತು ಕಾಲನ ಕರೆ ಗಡಿಯಾರದಂಗಡಿಯಲ್ಲಿ  ಭಿನ್ನ ಭಿನ್ನ ಗಡಿಯಾರಗಳು ಸಮಯವೂ ಭಿನ್ನ ವಿಭಿನ್ನ ಭಿನ್ನತೆಯಿಲ್ಲದಿರುವುದು ಕಾಯಕದಲ್ಲಿ ಗಡಿಯಾರದಿಂದ ಗಡಿಯಾರಕ್ಕೆ ಸಮಯದಲ್ಲಿ ವ್ಯತ್ಯಾಸವಿದ್ದರೂ ಸಮಯ ಮಾತ್ತ ಚಲಿಸುತ್ತಿದೆ ನಿರಂತರವಾಗಿ  ಕಾಲನ ಸರದಿಯ ಕರೆಗಾಗಿ ಗೂಡು ಕಟ್ಟುತ್ತಿವೆ ಹಕ್ಕಿಗಳು ಮರದಲ್ಲಿ ಗೂಡಿನಿಂದ ಗೂಡಿಗೆ ವ್ಯತ್ಯಾಸವಿದ್ದರೂ ಕಟ್ಟುವ ಕಾಯಕ ಮಾತ್ರ ಒಂದೆ ಗೂಡು ಕಟ್ಟುವ ಹಕ್ಕಿ ಬೇರೆ ಗೂಡನ್ನು ನೋಡುವುದೇ ಇಲ್ಲ ಅದರ ಚಿತ್ತವೆನಿದ್ದರೂ ತನ್ನ ಗೂಡಿನತ್ತ ಹಕ್ಕಿಯ ಹಾರಾಟ ಗಡಿಯಾರದ ಸಮಯ ಎಂದೂ ನಿಲ್ಲುವುದಿಲ್ಲ ಹಕ್ಕಿಯ ಹಾರಾಟದಲ್ಲೆ ಅದರ ಬದುಕಿದೆ ಗಡಿಯಾರದ ಸಮಯದಲ್ಲೇ ಜಗದ ಬದುಕಿದೆ ಜಗದ ಬದುಕಿನ ದಾರಿಯಲ್ಲಿ ತಿರುವುಗಳೆಷ್ಟೋ ಆ ತಿರುವುಗಳ ಹೋಯ್ದಾಟದಲ್ಲಿ ದಾಟಿ ಬಂದವರೆಷ್ಟೊ ಎಲ್ಲವೂ ಕಾಲನ ಕಟ್ಟಳೆಗಳೆ ಗಡಿಯಾರದ ಸಮಯದಂತೆ ಯುಗಯುಗಗಳನಾಳಿದ ಅರಸೊತ್ತಿಗೆ ಇಂದು ಇಲ್ಲ ಅದರ ಸಮಯ ಎಂದೋ ಮುಗಿದಿದೆ ಆದರೆ ಆ ಸಮಯವಿಂದು ಸ್ಮೃತಿ ಪಟಲದಲ್ಲಿ ಅಚ್ಚೊತ್ತಿ ನಿಂತಿದೆ ಆ,ಕಾಲ ಈ ಕಾಲ ಎಂದು ಗೊಣಗಾಡುವುದರಲ್ಲೆ ಕಾಲ ಹರಣವಾಗುತ್ತಿದೆ ಸಮಯ ಮಾತ್ರ ಚಲಿಸುತ್ತಿದೆ ನಿರಂತರ ಗಡಿಯಾರದಲ್ಲಿ ಜಗದ ಆಟ ಕಾಲನ ಕರೆಯಲ್ಲಿ   ರಚನೆ: ಸುರೇಶ ಮುದ್ದಾರ

ಅರಮನೆಯಿಂದ ಅರಿವಿನರಮನೆಗೆ...

ಅರಮನೆಯಿಂದ ಅರಿವಿನರಮನೆಗೆ... ನಡುರಾತ್ರಿ ಅರಮನೆಯಲ್ಲಿ ನೀರವ ಮೌನ ಝಗಝಗಿಸುವ ದೀಪದ ಬೆಳಕಿನಲ್ಲಿ ಹೃದಯ ತಲ್ಲಣ ಎದೆಯ ಕಣ್ಣು ಮುಚ್ಚಿದ ವಿಲಾಸ ಇಂದೇಕೆ ಹೀಗಾಗುತ್ತಿದೆ? ಅರಮನೆಯ ವಿಲಾಸ ಬದುಕೆ ಬೇಸರವೆನಿಸುತ್ತಿದೆ ನಿನ್ನೆಯ ಆ ಚಿತ್ರಗಳು ಕಣ್ಣ ಮುಂದೆ ಬಂದು ಕುಣಿಯುತ್ತಿವೆಯಲ್ಲ ಆ ವೃದ್ಧ, ಆ ರುಗ್ಣ, ಆ ಶವಯಾತ್ರೆ ನನ್ನನ್ನು ಆವರಿಸಿ ಕಾಡುತ್ತಿವೆ ಈ ಅರಮನೆ ವೃದ್ಧನನ್ನು ಮುಪ್ಪಿನಿಂದ ರುಗ್ಣನನ್ನು ರೋಗದಿಂದ ಸತ್ತವನನ್ನು ಸಾವಿನಿಂದ ಪಾರು ಮಾಡಲು ಸಾಧ್ಯವಿಲ್ಲವೆ? ಹಾಗಾದರೆ........ ಇದೆಂತಹ ಅರಮನೆ? ಅರಮನೆಗೊಬ್ಬ ರಾಜ ರಾಜನಿಗೋ ಹತ್ತು ನೂರು ಸಾವಿರ ಲಕ್ಷ ಸೇವಕರು ರಾಣಿಯರು ದಾಸಿಯರು ಕೋಟೆ ಕೊತ್ತಲಗಳು ಅಡಿಗಡಿಗೊಬ್ಬ ಕಾವಲುಗಾರ ಆದರೂ ಇದೇನಿದು? ನಿನ್ನೆಯವರು ಇಂದು ಇಂದಿನವರು ನಾಳೆ ಇರುತ್ತಿಲ್ಲವಲ್ಲ ಹಾಗಾದರೆ.......ಮುಂದೆ...... ಈ ಅರಮನೆಯೂ? ರಾಜನೂ? ಹಾಹಾಹಾ! ಮತ್ತೇ..... ಇವಳು? ಹಾಗೆ.......ಇವನು? ಜೊತೆಗೆ....ನಾನೂ? ಇದೇಕೆ ಹೀಗೆ? ಉತ್ತರವಿಲ್ಲವಿದಕೆ? ಅರೆರೆ ಯಾರೋ ಗವಾಕ್ಷಿಯಿಂದ ಕೂಗಿದಂತಾಯಿತಲ್ಲ, ಯಾರಿರಬಹುದು? ಓಹೋ!  ಮೂಡಣದ ತಾರೆ ನನ್ನತ್ತ ದಿಟ್ಟಿ ನೆಟ್ಟು  ಕೈಬೀಸಿ ಕರೆಯುತ್ತಿದೆ ಬಾ ಬಾ ನಿನಗೆ ಉತ್ತರಬೇಕಲ್ಲವೆ? ಬಾ ಬೇಗ ಬಾ ಈಗಲೇ ಬಾ ಅರಮನೆಯ ಹಂಗು ತೊರೆದು ನಸುನಗುತ ಬಾ ಅನಂತ ದಾರಿಯಲಿ ಆಹಾ! ಎಂಥ ಬೆಳದಿಂಗಳು ಪೂರ್ಣಚಂದ್ರ ಇಂದೇಕೆ ಅಷ್ಟು ಹೊಳೆಯುತ್ತಿದ್ದಾ...