ಪರಿಸರ ಕಾವ್ಯ : ಹಸಿರೇ ಉಸಿರು
ಬನ್ನಿರಿ ಬನ್ನಿರಿ ಸಖಿಯರೆ ಬನ್ನಿರಿ
ಮರಗಳ ಕಡಿವುದ ನಿಲ್ಲ ಸೋಣ
ಹೊಸ ಮರಗಳನು ಬೆಳೆಸುತನಾವು
ಪರಿಸರವನ್ನು ಉಳಿಸೋಣ
ಪರಿಸರವನ್ನು ಬೆಳೆಸೋಣ
ಮನೆಗೊಂದು ಮರ ಊರಿಗೊಂದು ವನ ಘೋಷಣೆ ಸಾರುತ ನಡೆಯೋಣ
ಉತ್ತಮ ವಾಯು ಪಡೆಯುತ ಎಲ್ಲರೂ ಆರೋಗ್ಯ ವಂತರಾಗಿ ಬದುಕೋಣ
ಕಾಡು ಬೆಳೆದರೆ ನಾಡು ಉಳಿವುದು
ಎನ್ನುವ ಸತ್ಯವ ತಿಳಿಯೋಣ
ಪರಿಸರ ಪ್ರಜ್ಞೆಯ ಅರಿಯುತ ನಾವು
ಹಸಿರೇ ಉಸಿರೆಂದು ಸಾರೋಣ
ಬನ್ನಿರಿ ಬನ್ನಿರಿ ಸಖಿಯರೆ ಬನ್ನಿರಿ ಮರಗಳ ಕಡಿವುದ ನಿಲ್ಲ ಸೋಣ
ಕಾಡಿಲ್ಲದ ನಾಡು ಬರಗಾಲದ ಬೀಡು
ಎಂಬ ಗಾದೆಯನು ಸ್ಮರಿಸೋಣ
ಸಸ್ಯ ಸಂಪತ್ತನ್ನು ಸಮೃದ್ಧಗೊಳಿಸಿ
ದೇಶದ ಅಭಿವೃಧ್ಧಿಗೆ ಹೆಣಗೋಣ
ಬನ್ನಿರಿ ಬನ್ನಿರಿ ಸಖಿಯರೆ ಬನ್ನಿರಿ ಮರಗಳ ಕಡಿವುದ ನಿಲ್ಲ ಸೋಣ
ಹೊಸ ಮರಗಳನು ಬೆಳೆಸುತನಾವು ಪರಿಸರವನ್ನು ಉಳಿಸೋಣ
ಶಕುಂತಲಾ ಹಿರೇಮಠ, ಗೋಕಾಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ