ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ
ಭೂಗೋಳವು ಇತಿಹಾಸದೊಡನೆ ನಿಕಟ ಸಂಬಂಧ ಹೊಂದಿದೆ. ಯಾವುದೇ ಪ್ರದೇಶದ ಮಾನವನ ಜೀವನಕ್ರಮ ಮತ್ತು ಇತಿಹಾಸ ಅಲ್ಲಿನ ಭೌಗೋಳಿಕ ಲಕ್ಷಣಗಳನ್ನು ಅವಲಂಬಿಸಿರುತ್ತದೆ. ಪ್ರಕೃತಿ ಲಕ್ಷಣಗಳಲ್ಲಿ ಬದಲಾವಣೆಯಾಗುತ್ತಲೇ ಇರುತ್ತದೆ. ಅದಕ್ಕೆ ತಕ್ಕಂತೆ ಮಾನವನ ಇತಿಹಾಸದ ಬೆಳವಣಿಗೆಯೂ ಮಾರ್ಪಡುತ್ತದೆ. ಏಕೆಂದರೆ ಪ್ರಕೃತಿಯ ಮೇಲ್ಬಾಗದ ಅವಯವಗಳಾದ ಗಾಳಿ, ನದಿ, ಪರ್ವತ, ಸಮುದ್ರ, ಭೂಗುಣ, ಖನಿಜ ಸಂಪತ್ತು ಇತ್ಯಾದಿಗಳ ಕೈವಾಡ ಆಯಾ ದೇಶದ ಇತಿಹಾಸವನ್ನು ನಿರ್ಧರಿಸುತ್ತದೆ. ಆದ್ದರಿಂದ ಒಂದು ದೇಶದ ಅಥವಾ ಜನಾಂಗದ ಇತಿಹಾಸ ಅರಿಯಲು ಭೂಗೋಳದ ತಿಳಿವಳಿಕೆ ಅತ್ಯವಶ್ಯ.
ಭೌಗೋಳಿಕ ಪರಿಜ್ಞಾನವಿಲ್ಲದ ಇತಿಹಾಸದ ಅಧ್ಯಯನ ಕೂಡ ವ್ಯರ್ಥ, ಉದಾಹರಣೆಗೆ ಅಶೋಕನ ಸಾಮ್ರಾಜ್ಯ ತುಂಬ ವಿಶಾಲವಾಗಿತ್ತು: ಅತಿ ದೊಡ್ಡದು ಎನ್ನುವಾಗ ಭೌಗೋಳಿಕ ಮೇರೆಗಳ ಚಿತ್ರ ಅತ್ಯವಶ್ಯ. ಅವನ ರಾಜ್ಯ ಪಶ್ಚಿಮದಲ್ಲಿ ಆಫ್ಘಾನಿಸ್ತಾನ, ಉತ್ತರದಲ್ಲಿ ನೇಪಾಳ, ಪೂರ್ವದಲ್ಲಿ ಕಾಮರೂಪ ಹಾಗೂ ದಕ್ಷಿಣದಲ್ಲಿ ನಲ್ಲೂರಿನವರೆಗೂ ವಿಸ್ತರಿಸಿದ್ದಿತು ಎಂದು ವಿವರಿಸಲು ಹಾಗೂ ಸುಲಭ ಗ್ರಹಿಕೆಗೂ ಭೌಗೋಳಿಕ ಅರಿವು ಅವಶ್ಯ.
ಹಾಗೆಯೇ ಕಾಲಗಣನೆ (Chronology) ಕೂಡ. ಅದು ಯಾವ ಕಾಲದಲ್ಲಿ ಈ ಘಟನ ಸಂಭವಿಸಿತು: ಅಶೋಕ ಅಥವಾ ಮಹಾತ್ಮಾ ಗಾಂಧಿ ಜೀವಿಸಿದ್ದರು ಎಂಬುದನ್ನು ತಿಳಿಸುತ್ತದೆ, ರಿಚರ್ಡ್ ಹಕ್ಕೂಯತ್ ಹೇಳುವಂತೆ: ಭೂಗೋಳ ಮತ್ತು ಕಾಲಗಣನೆ ಇತಿಹಾಸದ ಎರಡು ಕಣ್ಣುಗಳು ಅಥವಾ ಇತಿಹಾಸದ ಸೂರ್ಯ-ಚಂದ್ರ ಎಂಬುದಾಗಿ ಪರಿಗಣಿಸಬಹುದಾಗಿದೆ, ಮೇಲಾಗಿ ಇತಿಹಾಸ ವೆಂಬ ನಾಟಕ ಪ್ರದರ್ಶನಕ್ಕೆ ರಂಗಸಜ್ಜಿಕೆಯಂತಿರುವುದೇ ಭೂಗೋಳ, ಇದಿಲ್ಲದೆ ಇತಿಹಾಸದ ಮುನ್ನಡೆಯೇ ಇಲ್ಲ. ಇದರ ಪ್ರಭಾವ ಅತ್ಯಂತ ಹೆಚ್ಚಿನದು, ಇಷ್ಟೇ ಎಂದು ನಿರ್ಧರಿಸುವುದು ಕಷ್ಟ ಸಾಧ್ಯ.
ಭೌಗೋಳಿಕ ವಿಭಜನೆ :
ಸ್ಕೂಲವಾಗಿ ಭಾರತದ ಭೌಗೋಳಿಕ ಲಕ್ಷಣಗಳನ್ನು ಈ ರೀತಿ ವಿಭಜಿಸಬಹುದು.
I. ಹಿಮಾಲಯ ಪರ್ವತಶ್ರೇಣಿಗಳು:
2. ಸಿಂಧೂ-ಗಂಗಾ ನದಿ ಬಯಲು (ಉತ್ತರ ಭಾರತದ ವಿಶಾಲವಾದ ಮೈದಾನ)
3. ವಿಂಧ್ಯ ಪರ್ವತಗಳು
4. ದಖನ್ ಪ್ರಸ್ತಭೂಮಿ ಮತ್ತು ದಕ್ಷಿಣ ಭಾರತ
5. ಪೂರ್ವ ಮತ್ತು ಪಶ್ಚಿಮ ಘಟ್ಟಗಳು
6. ತೀರ ಪ್ರದೇಶ (ಪೂರ್ವ ಮತ್ತು ಪಶ್ಚಿಮ ಕರಾವಳಿ)
ಏಷ್ಯಾ ಖಂಡದ ಒಂದು ಪರ್ಯಾಯ ದ್ವೀಪದಂತಿರುವ ಭಾರತವನ್ನು ಒಂದು ಉಪಖಂಡ ಎಂದು ಪರಿಗಣಿಸಬಹುದು. ಉತ್ತರದ ಹಿಮಾಲಯ ಪರ್ವತಶ್ರೇಣಿಗಳು ಭಾರತವನ್ನು ಏಷ್ಯಾದ ಪ್ರತ್ಯೇಕಿಸಿವೆ. ಹೀಗಾಗಿ ಭಾರತಕ್ಕೆ ಒಂದು ಪ್ರಕೃತಿದತ್ತವಾದ ಏಕತೆ ರೂಪುಗೊಂಡಿತು. ಅದರ ಭೌಗೋಳಿಕ ಮೇಲ್ಮಗಳನ್ನು ಈ ರೀತಿ ಗುರುತಿಸಬಹುದು: ಉತ್ತರದಲ್ಲಿ ಹಿಮಾಲಯ ಪರ್ವ ಶ್ರೇಣಿ, ವಾಯವ್ಯದಲ್ಲಿ ಸುಲೆಮಾನ್, ಕಿರ್ತಾ, ಹಿಂದೂಕುಷ್ ಕಣಿವೆಗಳು, ಈಶಾನ್ಯದಲ್ಲಿ ಮಣಿಪುರ ಪ್ರಸ್ಥಭೂಮಿ, ಪೂರ್ವದಲ್ಲಿ ಬಂಗಾಳಕೊಲ್ಲಿ, ಪಶ್ಚಿಮದಲ್ಲಿ ಅರಬ್ಬಿಸಮುದ್ರ, ಅದಕ್ಕೆ ಎದುರಾಗಿ ನಿಂತಿರುವ ಪಶ್ಚಿಮ ಘಟ್ಟಗಳು, ಅರಾವಳಿ, ವಿಂಧ್ಯ ಮತ್ತು ಸಾತ್ಪುರ ಪರ್ವತಗಳು ದಖನ್ ಪ್ರಸ್ಥಭೂಮಿ, ಭಾರತದಾದ್ಯಂತ ಹರಡಿರುವ ಸಿಂಧೂ, ಗಂಗಾ, ಬ್ರಹ್ಮಪುತ್ರ, ನರ್ಮದಾ ತುಂಗಾ, ಕಾವೇರಿ, ಕೃಷ್ಣ, ಗೋದಾವರಿ ಮುಂತಾದ ನದಿಗಳು, ದಕ್ಷಿಣದಲ್ಲಿ ಹಿಂದೂಮಹಾಸಾಗರ, ಕೊಂಕಣ, ಮಲಬಾರ್ ತೀರ ಪ್ರದೇಶಗಳ ಸೃಷ್ಟಿ ಪ್ರಕೃತಿಯ ಚಮತ್ಕಾರವೆ. ಇವುಗಳನ್ನು ಅವಲಂಬಿಸಿ ಭಾರತದ ಇತಿಹಾಸ ರೂಪುಗೊಂಡಿದೆ.
1. ಹಿಮಾಲಯ ಪರ್ವತಶ್ರೇಣಿಗಳು ಮತ್ತು ಅವುಗಳ ಪ್ರಭಾವ ಈ ಪರ್ವತಶ್ರೇಣಿ ಭಾರತದ ಉತ್ತರದಲ್ಲಿದ್ದು ಸಿಂದ್ ಪ್ರದೇಶದಿಂದ ಬ್ರಹ್ಮಪುತ್ರದವರೆಗೂ ಹಬ್ಬಿದೆ. ಇದರ ಉದ್ದ ಸು. 1500 ಮೈಲಿ (2400 ಕಿ.ಮೀ.) ಮತ್ತು ಅಗಲ ಸು. 150 ಮೈಲಿಭಾರತದ ಇತಿಹಾಸದಲ್ಲಿ ಇದರ ಪಾತ್ರ ಪ್ರಮುಖವಾಗಿದೆ. ಪ್ರಪಂಚದಲ್ಲೇ ಯಾವ ರಾಷ್ಟ್ರವೂ ಹೊಂದಿಲ್ಲದಂತಹ ಪರ್ವತಶ್ರೇಣಿ ಇದು. ಭಾರತೀಯರ ರಾಜಕೀಯ ಜೀವನದಲ್ಲಿ ಮಾತ್ರವಲ್ಲದ ಸಾಹಿತ್ಯ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲೂ ಅದು ತನ್ನ ಪ್ರಭಾವ ಬೀರಿದೆ, ಹಿಂದೂಗಳಿಗೆ ಇದು ಆತ್ಮಗೌರವದ ಸಂಕೇತವಾದಂತೆ ಸ್ಫೂರ್ತಿಯ ಚಿಲುಮೆಯೂ ಆಗಿದೆ. ಸಾವಿರದ ಐನೂರು ಮೈಲಿ ದೂರವಿರುವ ದಕ್ಷಿಣ ಭಾಗದ ಜನರೇ ಆಗಲಿ ಅಥವಾ ಸಮುದ್ರತೀರದ ನಿವಾಸಿಗಳೇ ಅಗಲಿ ಅಥವಾ ರಾಜಸ್ಥಾನದ ಮರುಭೂಮಿ ಜನರೇ ಅಗಲಿ ಅಥವಾ ಗಂಗಾನದಿ ಬಯಲಿನ ಜನರೇ ಆಗಲಿ, ಎಲ್ಲರಿಗೂ ಹಿಮಾಲಯವೆಂದರೆ ಭಾರತವೆಂದೇ ಗ್ರಹಿಕೆ,
* ಪ್ರತ್ಯೇಕ ಅಸ್ತಿತ್ವ : ಭೌಗೋಳಿಕವಾಗಿ ಹಿಮಾಲಯ ಪರ್ವತ ಶ್ರೇಣಿ ಇತರ ಪ್ರದೇಶಗಳಿಂದ ಬೇರ್ಪಡಿಸಿ ಪ್ರತ್ಯೇಕ ಅಸ್ತಿತ್ವ ನೀಡಿದೆ. ಇಲ್ಲಿಯವರೆಗಿನ ಸಮೀಕ್ಷೆಯ ಪ್ರಕಾರ ಈ ಹಿಮವತ್ಸರ್ವತ ದಲ್ಲಿ ಒಟ್ಟು 146 ಶಿಖರಗಳಿವೆ. ಅವುಗಳಲ್ಲಿ 40 ಸುಮಾರು 24,000 ಅಡಿಗಳಷ್ಟು ಎತ್ತರವುಳ್ಳ ವಾಗಿವೆ. ಪ್ರಮುಖವಾದವುಗಳು ಜಯಂತಿ, ಯಗ್ಯಾರ್, ನಾಗ, ಯಗಾರೂ, ಪಾಟ್ಕೊಯ್, ಗೌರಿಶುಕರ, ಮೌಂಟ್ ಎವರೆಸ್ಟ್ (29142 ಅಡಿ), ಹಿಂದೂಕುಷ್, ಕಿರ್ತಾಕಿ ಇತ್ಯಾದಿ. ಇವುಗಳಲ್ಲಿ ಬಹುತೇಕ ಶ್ರೇಘಗಳು ಶಿಖರಗಳು ಸು. 8000 ಅಡಿಗೂ ಮೇಲ್ಪಟ್ಟಿವೆ ಈ ಬಗೆಯ ನೈಸರ್ಗಿಕ ರಕ್ಷಣೆ ಬೇರಾವ ದೇಶವೂ ಹೊಂದಿಲ್ಲ ಹಾಗಾಗಿ ಭಾರತ ಇತಿಹಾಸ ಮತ್ತು ಸಾಂಸ್ಕೃತಿಕ ನಿರಂತರ ಪ್ರತ್ಯೇಕತೆಯನ್ನು ಮುಂದುವರಿಸಿಕೊಂಡು ಬರಲು ಸಾಧ್ಯವಾಯಿತು. ಈ ಹಿನ್ನೆಲೆಯಲ್ಲಿ ಇತಿಹಾಸಕಾರ ಕೆ.ಎಂ. ಫಣಿಕ್ಕರ್ "ಭಾರತೀಯರು ಐತಿಹಾಸಿಕ ನಿರಂತರತೆ ಹಿಮಾಲಯದ ಕೊಡುಗೆಗಳಲ್ಲಿ ಒಂದಾಗಿದೆ" ಎಂಬ ಉದ್ಗಾರ ಎತ್ತಿದುದು.
* ಧಾರ್ಮಿಕ ಆಧ್ಯಾತ್ಮಿಕ ನೆಮ್ಮದಿ : ಪವಿತ್ರ ಯಾತ್ರಾಸ್ಥಳಗಳಾದ ಅಮರನಾಥ, ಜ್ವಾಲಾಮುಖಿ, ಕೇದಾರನಾಥ, ಬದರಿನಾಥ, ಹೃಷಿಕೇಶ, ಹರಿದ್ವಾರಗಳಿರುವುದೇ ಹಿಮಾಲಯದ ತಪ್ಪಲಲ್ಲಿ. ಅಮೋಘವಾದ ಹಾಗೂ ಪರಮೇಶ್ವರನ ನಿವಾಸಸ್ಥಾನವೆಂದು ಪ್ರಚಲಿತವಿರುವ ಕೈಲಾಸ ಶಿಖರವಿರು ವುದು (ಮೌಂಟ್ ಎವರೆಸ್ಟ್) ಇವುಗಳ ಸಮೂಹದಲ್ಲಿಯೇ ಇವೆಲ್ಲವೂ ಭಾರತೀಯರ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಜೀವನದಲ್ಲಿ ಮಹತ್ತರ ಪಾತ್ರ ವಹಿಸಿವೆ.
* ತಡೆಗೋಡೆಯಾಗಿ ರಕ್ಷಣೆ : ಸೈಬೀರಿಯ ಹಾಗೂ ಟಿಬೆಟ್' ಕಡೆಯಿಂದ ಭಾರತದ ಕಡೆಗ ಬೀಸುವ ಶೀತಮಾರುತಗಳನ್ನು ಉತ್ತರದಲ್ಲಿ ಗೋಡೆಯಂತೆ ನಿಂತು ತಡೆದು ಭಾರತೀಯರಿಗೆ ರಕ್ಷಣೆ ನೀಡಿವೆ. ಇಲ್ಲದಿದ್ದ ಭಾರತ ಅನ್ಯರ ಇನ್ನೂ ಹೆಚ್ಚಿನ ಆಕ್ರಮಣಗಳನ್ನು ಎದುರಿಸಬೇಕಾಗಿದ್ದಿತು. ಬಹುಶಃ ತುಂಡರಿದು ಅನ್ಯರ ಅಸ್ತಿತ್ವಕ್ಕೆ ದಾರಿಯಾಗುತ್ತಿದ್ದಿತು. ಆದರೂ ಚೀನಿಯರು ಆಧುನಿಕ ಕಾಲದಲ್ಲಿ ಮುಂದುವರಿದ ತಾಂತ್ರಿಕ ಯುದ್ಧೋಪಕರಣಗಳ ನೆರವಿನಿಂದ ಸ್ವಲ್ಪ ಭಾಗ ಆಕ್ರಮಸಿಯೇ ಬಿಟ್ಟಿದ್ದಾರೆ.
* ನದಿಗಳ ಮೂಲ ತಾಣ ಹಿಮಾಲಯ : ಈ ಹಿಮಾಲಯ ಪರ್ವತ ಈ ಶ್ರೇಣಿಗಳಲ್ಲಿ ಹುಟ್ಟಿದ ಗಂಗಾನದಿ ಸು.500 ಮೈಲಿ ವಿಸ್ತೀರ್ಣ ಸುತ್ತಾಡಿ ಆ ಭೂಭಾಗ ವನ್ನು ಉತ್ಕೃಷ್ಟವಷ್ಟೇ ಅಲ್ಲ, ಪವಿತ್ರ ನಾಡನ್ನಾಗಿಯೂ ಮಾಡಿದೆ. ಭಾರತದ ಜೀವನಾಡಿಗಳಂತೆ ಇರುವ ಯಮುನ, ಸರಸ್ವತಿ, ಬ್ರಹ್ಮಪುತ್ರ, ಸಿಂಧೂ ಮುಂತಾದ ನದಿಗಳಿಗೂ ಹಿಮಾಲಯ ಪರ್ವತವೇ ಜನ್ಮಸ್ಥಳ, ಮಾನವನ ನಿವಾಸಕ್ಕೆ ಅದು ಯೋಗ್ಯವಲ್ಲದಿದ್ದರೂ ಭಾರತೀಯರ ಏಳಿಗೆಯಲ್ಲಿ ಅಮೂಲ್ಯ ಪಾತ್ರ ವಹಿಸಿದೆ. ಬಹು ಹಿಂದಿನಿಂದಲೂ ಈ ಹಿಮಪರ್ವತಗಳು ಭಾರತದ ಮೇಲೆ ಆಕ್ರಮಣ ನಡೆಸಹೊರಟವರನ್ನು (ಇತ್ತೀಚಿನ ದಿವಸಗಳಲ್ಲಿ ಚೀನಿಯರನ್ನು ಬಿಟ್ಟರೆ) ತಡೆಗಟ್ಟಿವೆ. ಹಾಗೆಯೇ ಯಾವ ಭಾರತೀಯವಿಜಿಗೀಷುವು (ದಿಗ್ವಿಜಯಿ) ಭಾರತದ ಉತ್ತರದಿಂದಾಚೆಯ ಪ್ರದೇಶಗಳ ಆಕ್ರಮಣದ ಕಲ್ಪನೆ ಯನೂ ಮಾಡದಂತಿರಲು ಹಿಮಾಲಯವೇ ಕಾರಣ ಆಕಾಶದಲ್ಲಿ ಚಲಿಸುವ ಮೋಡಗಳನ್ನು ತಡೆದು ಹಿಂಗಾರ ಮುಂಗಾರು ಮಳೆ ಸುರಿಸಿ ವ್ಯವಸಾಯಕ್ಕೂ ಪೋಷಕವಾಗಿದೆ.
* ಅಪಾಯ ತಂದ ಖೈಬರ್, ಬೊಲಾನ್ ಮಾರ್ಗಗಳು : ಭಾರತದ ಇತಿಹಾಸದಲ್ಲಿ ವಾಯುವ್ಯದ ಖೈಬರ್ ಮತ್ತು ಬೊಲಾನ್ ಮಾರ್ಗಗಳು ಬಹುಮುಖ್ಯ ಪಾತ್ರವಹಿಸಿವೆ. ಭಾರತ ವಿದೇಶಗಳೊಡನೆ ವ್ಯಾಪಾರ ಮತ್ತು ಸಾಂಸ್ಕೃತಿಕ ಸಂಪರ್ಕ ಪಡೆದುದೂ ಈ ಮಾರ್ಗಗಳ ಮೂಲಕವ ಅಲೆಗ್ಯಾಂಡರ್ ನಿಂದ ಹಿಡಿದು ಅಹಮದ್ ಷಾ ಅಬ್ದಾಲಿಯವರೆವಿಗೂ (ಕೊನೆಯ ಆಕ್ರಮಣಕಾರ ಒಬ್ಬರಾದ ಮೇಲೆ ಮತ್ತೊಬ್ಬರಂತೆ ಭಾರತದ ಕೈಬರ್, ಬೋಲನ್ ಮುಂತಾದ ಕಣಿವಗಳ ಮೂಲ ಪ್ರವೇಶಿಸಿದರು. ಸಮುದ್ರ ಮಾರ್ಗದಿಂದ ಬಂದ ಯೂರೋಪಿಯನ್ನರನ್ನು ಬಿಟ್ಟರೆ ಆರ್ಯರು ಪರ್ಷಿಯನರು, ಗ್ರೀಕರು, ಸಿಥಿಯನರು, ಕುಶಾನರು, ಹೂಣರು, ಟರ್ಕರು, ಆಪ್ಪನರು, ಮೊಘಲರ ಭಾರತದ ಮೇಲೆ ಎರಗಿದುದು ಈ ಮಾರ್ಗಗಳಿಂದಲೇ, ಇಲ್ಲಿ ನೆಲೆಸಿದ ಅವರು ಭಾರತದ ಇತಿಹಾಸವನ್ನೇ ಬದಲಾಯಿಸಿದರು. ಪರೋಕ್ಷವಾಗಿ ವಿದೇಶ ಸಂಪರ್ಕ ಭಾರತಕ್ಕೆ ಸಾಧ್ಯವಾಯಿತು.
* ಪಾಠ ಕಲಿಯದ ಭಾರತೀಯರು : ಇಷ್ಟಾದರೂ ಭಾರತೀಯ ಯಾವ ಆಳರಸರೂ ಈ ಮೂಲೆಯಿಂದ ಸಂಭವಿಸತಕ್ಕ ಅಪಾಯಗಳನ್ನು ತಡೆಗಟ್ಟಲು ಮುನ್ನೆಚ್ಚರಿಕೆ ವಹಿಸಲೇ ಇಲ್ಲ. ತತ್ಪಲವಾಗಿ ಭಾರತೀಯರು ಅನುಭವಿಸಿದ ನಷ್ಟ ಅಪಾರವಾದುದು. ಆದರೆ ಈಶಾನ್ಯ ಭಾಗ ಇದಕ್ಕೆ ವಿರುದ್ಧವಾದುದು. ಅಧಿಕ ಹಿಮದಿಂದ ಕೂಡಿದ್ದು ಆ ಭಾಗದಲ್ಲಿ ಅನ್ಯರೊಡನೆ ಸಂಪರ್ಕವೇ ಅಸಾಧ್ಯ,
2. ಸಿಂಧೂ-ಗಂಗಾ ನದಿಗಳ ಬಯಲು ಪ್ರದೇಶ ಮತ್ತು ಅದರ ಪ್ರಭಾವ :
* ಚಕ್ರಾಧಿಪತ್ಯಗಳ ಹುಟ್ಟಿಗೆ ತಾಣ : ಭಾರತೀಯರ ಸಾಂಸ್ಕೃತಿಕ ಜೀವನದಲ್ಲಿ ಸಿಂಧೂ ಗಂಗಾನದಿ ಪ್ರದೇಶ ಬೀರುವನ್ನು ಪ್ರಭಾವ ಪ್ರಾಯಶಃ ಮತ್ತಾವ ಪ್ರದೇಶವೂ ಬೀರಿರಲಾರದು. ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲೂ ಇವುಗಳ ಪಾತ್ರ ಪ್ರಧಾನ. ಈ ನದಿಗಳಿಂದಾಗಿ ಆ ಪ್ರದೇಶ ಬಹು ಉತ್ಕೃಷ್ಟವಾಗಿದೆ. ಇಲ್ಲಿ ಅನೇಕ ಸಾಮ್ರಾಜ್ಯಗಳು ಏಳಿಗೆಗೆ ಬರಲು ಅದರ ಉತ್ಕೃಷ್ಟತೆಯೇ ಕಾರಣ, ಉದಾಹರಣೆಗೆ ಮೌರ್ಯರು, ಗುಪ್ತರು, ಹರ್ಷವರ್ಧನ, ದೆಹಲಿ ಸುಲ್ತಾನರು, ಮೊಘಲರು ಇವರೆಲ್ಲರೂ ಸಾಮ್ರಾಜ್ಯ ಕಟ್ಟಿ ಬೆಳೆಸಿದುದು ಇಲ್ಲಿಯೇ ಈ ಪ್ರದೇಶದಲ್ಲಿ ಹುಟ್ಟಿದ ಅವು ತರುವಾಯ ಉಳಿದ ಭಾಗಗಳಿಗೂ ವಿಸ್ತಾರಗೊಂಡವು. ಇಂದು ಕೂಡ ನಮ್ಮ ರಾಜಕೀಯ ಚಟುವಟಿಕೆಗಳ ಕೇಂದ್ರ ಇದಾಗಿದೆ.
* ಸಾಹಿತ್ಯ ಬೆಳವಣಿಗೆಗೆ ಪ್ರೇರಣೆ : ಪವಿತ್ರ ಗ್ರಂಥಗಳಾದ ವೇದಗಳು, ಉಪನಿಷತ್ತುಗಳು, ಪುರಾಣಗಳು, ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ ರಚನೆಗೂ ಈ ಪ್ರದೇಶವ ಪ್ರೇರಕಶಕ್ತಿ, ಉನ್ನತ ವಿದ್ಯಾಕೇಂದ್ರಗಳಾದ ತಕ್ಷಶಿಲಾ, ನಲಂದ, ಉಚ್ಚವಿ, ಕಾಶಿ ಮುಂತಾದವು ಅಸ್ತಿತ್ವಕ್ಕೆ ಬರಲು ಈ ಪ್ರದೇಶದ ವೈಶಿಷ್ಟ್ಯವೇ ಪ್ರಮುಖ ಕಾರಣ. ವ್ಯಾಪಾರ ಸಂಪರ್ಕದಲ್ಲೂ ಈ ನದಿಗಳ ಪಾತ್ರ ಹೆಚ್ಚಿನದು, ಹೀಗಾಗಿ ಪಾಟಲಿಪುತ್ರ, ಬನಾರಸ್, ಪ್ರಯಾಗ, ಆಗ್ರಾ, ದೆಹಲಿ, ಮಧುರ, ಲಾಹೋ ಮುಂತಾದ ಪ್ರಮುಖ ನಗರಗಳು ಏಳಿಗೆಗೆ ಬಂದುವು.
* ವಂಚನೆ ಯುದ್ಧಗಳಿಗೆ ಸಾಕ್ಷಿ : ಭಾರತದ ಇತಿಹಾಸದ ದಿಕ್ಕನ್ನೇ ಬದಲಾಯಿಸಿದ ಮತ್ತು ವಂಚನೆಗೆ ಹೆಸರಾದ ತರೈನ್ (1192, ಮಹಮ್ಮದ್ ಘೋರಿಯಿಂದ ಪೃಥ್ವಿರಾಜನ ಸೋಲು) ಮತ್ತು ಮೂರನೇ ಪಾಣಿಪಟ್ (1761: ಅಹಮದ್-ಪಾಅಬ್ದಾಲಿಯಿಂದ ಮರಾಠರ ಪತನ)ಕದನಗಳನ್ನು ಕಂಡ ಪ್ರದೇಶವೂ ಇದೆ. ಹೆಸರಾಂತ ಮಹಾಭಾರತದ ಯುದ್ಧ ಸಂಭವಿಸಿದುದು ಇಲ್ಲಿನ ಕುರುಕ್ಷೇತ್ರ ಎಂಬಲ್ಲಿ, ಮಹಾಭಾರತ ಕಾಲದಿಂದ ಹಿಡಿದು 1761ರ ಪಾಣಿಪಟ್ ಕದನದ ಅವಧಿಯಲ್ಲುಂಟಾದ ಅನೇಕ ರಾಜಕೀಯ ಪ್ರಕೋಭೆಗಳ ಏರಿಳಿತವನ್ನು ಕಂಡ ನಾಡಿದು.
3. ವಿಂಧ್ಯ ಪರ್ವತಗಳು ಮತ್ತು ಅವುಗಳ ಪ್ರಭಾವ
ಗುಜರಾತಿನಿಂದ ಬಂಗಾಳದವರೆಗೆ ಹಬ್ಬಿರುವ ಇವು ಉತ್ತರ ಮತ್ತು ದಕ್ಷಿಣ ಭಾರತವನ್ನು ಬೇರ್ಪಡಿಸಿವೆ. ಸು. 10,000 ಅಡಿಗಳು ಎತ್ತರವಿದ್ದು ಉತ್ತರ ಭಾರತದಲ್ಲಿ ಸಂಭವಿಸಿದ ದಾಳಿಗಳು ದಕ್ಷಿಣಕ್ಕೆ ವ್ಯಾಪಿಸದಂತೆ ಬಹುಮಟ್ಟಿಗೆ ತಡೆಗಟ್ಟಿದ್ದುವು. ಹಾಗಾಗಿ ಉತ್ತರ ಭಾರತದಲ್ಲುಂಟಾದ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಶೋಭಗಳು ದಕ್ಷಿಣದಲ್ಲಿ ಅಷ್ಟಾಗಿ ಸಂಭವಿಸಲಿಲ್ಲ. ಆದರೂ ವಿಂಧ್ರದ ಪೂರ್ವ ಮತ್ತು ಪಶ್ಚಿಮ ಭಾಗದ ಗಡಿಗಳಲ್ಲಿ ಅಗಸ್ತ ಮಹರ್ಷಿ ಮತ್ತು ಆರಂಭಕಾಲದ ಕೆಲವು ಆರ್ಯತಂಡಗಳು ದಕ್ಷಿಣಕ್ಕೆ ಪ್ರವೇಶ ಮಾಡಿದರು. ಆದರೆ ಅವರ ಸಂಖ್ಯೆ ಅತ್ಯಲ್ಪದ್ದು, ಬಂಗಾಳದಿಂದ ಆಗಮಿಸಿದ ಗೌಡ ಸಾರಸ್ವತರು ಗೋವದ ಬಳಿ ನೆಲಸಿದರು. ಆರ್ಯನರ ಮತ್ತೊಂದು ಪಂಗಡ ನಂಬೂದ್ರಿಗಳು ಕೇರಳದಲ್ಲಿ ಉಳಿದರು. ಇದು ಅಲ್ಲಾವುದ್ದೀನ್ ಖಿಲ್ಲಿ ಕಾಲದಲ್ಲಿ ಮಾತ್ರ ಉತ್ತರದ ಪ್ರಭಾವಕ್ಕೊಳಗಾಗಬೇಕಾಯಿತು.
4. ದಟ್ಸನ್ ಪ್ರಸ್ಥಭೂಮಿ ಮತ್ತು ದಕ್ಷಿಣ ಭಾರತದ ಲಕ್ಷಣ ಹಾಗೂ ಪ್ರಭಾವ
* ಭಾರತದ ಇತಿಹಾಸದ ಮೂಲ ನೆಲೆ : ದಬ್ಬನ್ ಪ್ರಸ್ಥಭೂಮಿ (ಎತ್ತರದ) ಸ್ಕೂಲವಾಗಿ ನರ್ಮದಾ ನದಿಯಿಂದ ಗೋದಾವರಿ ನದಿಯವರೆಗೆ ವಿಸ್ತರಿಸಿದೆ. ಇಡೀ ಭಾರತದಲ್ಲಿ ಎತ್ತರದಲ್ಲಿದೆ. ದಕ್ಷಿಣ ಭಾರತವು (Far South) ಗೋದಾವರಿಯಿಂದ ಕನ್ಯಾಕುಮಾರಿಯವರೆಗೆ ವಿಸ್ತರಿಸಿದೆ. ಪ್ರಾಗತಿಹಾಸ ಕಾಲದಿಂದಲೂ (Pre-Historic) ಇಲ್ಲಿ ಮಾನವನ ನೆಲೆ ಇದ್ದುದಕ್ಕೆ ಆಧಾರಗಳು ದೂರಶಿವ, ಉತ್ತರದ ಆರ್ಯ ಸಂಸ್ಕೃತಿ ಅರಳುವ ಮುನ್ನವೇ ದಖನ್ ಮತ್ತು ದಕ್ಷಿಣದಲ್ಲಿ ಸಾಂಸ್ಕೃತಿಕ ನೆಲಗಟ್ಟು ರೂಪಿತಿವಾಗಿದ್ದಿತು (ದ್ರಾವಿಡ), ಈ ಹಿನ್ನೆಲೆಯಲ್ಲಿ ನೋಡಿದಾಗ ಭಾರತದ ಇತಿಹಾಸ ಈ ಭಾಗದಿಂದಲೇ ಆರಂಭವಾಗಬೇಕಿದೆ. ಇದನ್ನು ನಿರ್ಲಕ್ಷಿಸಿ ಉತ್ತರದಿಂದಲ್ಲೇ ಇತಿಹಾಸ ಆರಂಭಿಸ ಲಾಗಿದೆ. ಭಾರತದ ಸಾಂಸ್ಕೃತಿಕ ಇತಿಹಾಸದಲ್ಲಿ ಇದರ ಪಾತ್ರ ಮುಖ್ಯವಾದುದು. ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತ ಕಾಲದಿಂದಲೂ ಇದು ಪ್ರಸಿದ್ಧಿ ಪಡೆದಿದೆ. ಕಿಂಧಾ ನಗರವಿದ್ದ ಸ್ಥಳವೇ ಇಂದಿನ ಹಂಪೆ, ಅನೇಕ ಋಷಿಗಳು ಇಲ್ಲಿ ತಪಸ್ಸನ್ನಾಚರಿಸಿದ್ದಾರೆ. ಋಷ್ಯಶೃಂಗ, ಮಾರ್ಕಂಡೇಯ, ಕಣ್ಣ ಮುಂತಾದ ಋಷಿಗಳ ತಪಃಕೇಂದ್ರ ಇದಾಗಿತ್ತು. ಪಾಂಡವರು ಅಜ್ಞಾತವಾಸ ವನ್ನು ನಡೆಸಿದ ವಿರಾಟ ನಗರಿಯ ಈಗಿನ ಹಾನಗಲ್, ಈ ಪ್ರಸ್ತಭೂಮಿ ಪಶ್ಚಿಮಘಟ್ಟಗಳಿಂದ ಪೂರ್ವಘಟ್ಟಗಳ ಕಡೆಗೆ ಸ್ವಲ್ಪಸ್ವಲ್ಪವೆ ಇಳಿಜಾರಾಗಿದೆ. ಉತ್ತರ ಭಾಗವನ್ನು ಬಿಟ್ಟರ ಉಳಿದ ಮೂರು ಕಡ ಕಡಲು ಅವರಿಸಿದ.
ದಕ್ಷಿಣ ಭಾರತದ ನರ್ಮದಾ, ತಪತಿ, ಮಹಾನದಿ, ಗೋದಾವರಿ, ಕೃಷ್ಣ, ತುಂಗಭದ್ರಾ, ಕಾವೇರಿ ನದಿ ಬಯಲುಗಳು-ಶಾತವಾಹನ, ಗಂಗ, ಕದಂಬ, ಚಾಲುಕ್ಯ, ರಾಷ್ಟ್ರಕೂಟ, ಯಾದವ, ಹೊಯ್ಸಳ, ಕಾಕತೀಯ, ವಿಜಯನಗರ, ಬಹಮನಿ, ಬಿಜಾಪುರ, ಮೈಸೂರು ಅಲ್ಲದ ಚೇರ, ಚೋಳ, ಪಲ್ಲವ, ಪಾಂಡ್ಯ ಮುಂತಾದ ರಾಜ್ಯ ಮತ್ತು ಸಾಮ್ರಾಜ್ಯಗಳ ಏಳಿಗೆಗೆ ಕಾರಣವಾದುವು ಪ್ರಮುಖ ರಾಜಧಾನಿ ಗಳಾದ ಪ್ರತಿಷ್ಠಾನ-ಗೋದಾವರಿ ನದಿ ಬಳ್ಳಿ, ವಿಜಯನಗರ ತುಂಗಭದ್ರಾ ನದಿ ಬಳಿ, ಶ್ರೀರಂಗಪಟ್ಟಣಮತ್ತು ಮೈಸೂರು-ಕಾವೇರಿ ನದಿ ಬಳಿ, ಕಂಚಿ-ಪೆನ್ನಾರ್ ನದಿ ಬಳಿ, ತಂಜಾವೂರು-ಕಾವೇರಿ ಬ ಏಳಿಗೆಗೆ ಬಂದುದನ್ನು ಗಮನಿಸಬಹುದು. ಆದರೆ ಇವು ಬೇಸಿಗೆಯಲ್ಲಿ ಬತ್ತಿ ಹೋಗುವುದರಿಂದ ಜಲಸಾರಿಗೆ ಅಭಿವೃದ್ಧಿಗೊಳ್ಳಲಿಲ್ಲ.
* ದ್ರಾವಿಡ ಸಂಸ್ಕೃತಿಯ ನೆಲೆ : ಭಾರತೀಯ ಸಂಸ್ಕೃತಿ ಮೊತ್ತಮೊದಲು ರೂಪುಗೊಂಡುದು ದಬ್ಬಿನ್ ಪ್ರಸ್ಥಭೂಮಿಯಲ್ಲಿ, ಭಾರತದ ಮೂಲನಿವಾಸಿಗಳಾದ ದ್ರಾವಿಡರು ಇಲ್ಲಿ ತಮ್ಮದೇ ಆದ ಸಂಸ್ಕೃತಿಯನ್ನು ಊರ್ಜಿತಗೊಳಿಸಿದರು. ಆರ್ಯರು, ವಿಂಧ್ಯ ಪರ್ವತಗಳನ್ನು ದಾಟಿ ದಕ್ಷಿಣಕ್ಕೆ ಬಂದ ಮೇಲೆ ಆತ್ಮ-ದ್ರಾವಿಡ ಸಂಸ್ಕೃತಿಗಳು ಬೆರೆತು ಸಮಗ್ರ ಭಾರತೀಯ ಸಂಸ್ಕೃತಿಯು ರೂಪುಗೊಂಡಿತು. ಆರ್ಯರ ಜೀವನ, ಧರ್ಮ, ಧೈಯ-ಇವೆಲ್ಲ ವಿಕಾಸಹೊಂದಿದುದು ಪುರಾತನ ದ್ರಾವಿಡ ಸಂಸ್ಕೃತಿಯೊಡನೆ ಬೆರೆತ ಮೇಲೆಯೆ, ದನ್ ಪ್ರಸ್ಥಭೂಮಿ ಅತಿ ಪ್ರಾಚೀನ ಕಾಲದಿಂದಲೂ ಮಾನವನ ನಿವಾಸವಾಗಿದ್ದರೂ ಬಹುತೇಕವಾಗಿ ಭಾರತ ಇತಿಹಾಸದ ಆರಂಭ ಉತ್ತರ ಭಾರತದಿಂದಲೇ ಆಗಿದೆ. ಇತಿಹಾಸಜ್ಞರು ಇದನ್ನು ಮನಗಾಣಬೇಕು, “ಭಾರತದ ಇತಿಹಾಸ ದಕ್ಷಿಣದಿಂದ ಪ್ರಾರಂಭವಾಗಬೇಕೇ ಹೊರತು ಉತ್ತರದಿಂದಲ್ಲ” ಎಂಬ ಎನ್ಸೆಂಟ್ ಸ್ಮಿತ್ ಹೇಳಿಕೆಯಲ್ಲಿ ತಿರುಳಿಲ್ಲದಿಲ್ಲ. ಉತ್ತರ ಭಾರತದ ಅನೇಕ ರಾಜಕೀಯ ಪ್ರಕೋಭೆಗಳಿಂದ ಇದು ಯಾವಾಗಲೂ ಸುರಕ್ಷಿತವಾಗಿ ಉಳಿದು ದ್ರಾವಿಡ ಸಂಸ್ಕೃತಿಯ ಕೇಂದ್ರವಾಯಿತು.
ಆರ್ಯಸಂಸ್ಕೃತಿ ದಕ್ಷಿಣದಲ್ಲಿ ಹರಡಲು ಕಾರಣಪುರುಷ ಆಗ ಮಹರ್ಷಿ. ಉತ್ತರ ಭಾರತದಲ್ಲಿ ಆಳಿಕೆ ನಡೆಸಿದ ಮೌರ್ಯರಾಗಲಿ, ಗುಪ್ತರಾಗಲಿ, ದೆಹಲಿ ಸುಲ್ತಾನರಾಗಲಿ ಅಥವಾ ಮೊಘಲರಾಗಲಿ ದನ್ ಪ್ರದೇಶವನ್ನು ತಮ್ಮ ನೇರ ಆಳಿಕೆಗೆ ಒಳಪಡಿಸಿ ಕೊಳ್ಳಲಾಗಲೇ ಇಲ್ಲ, ಅದು ಪ್ರತ್ಯೇಕವಾಗಿ ಉಳಿದುಬಂದಿತು ಮತ್ತು ಉತ್ತರದಲ್ಲಿ ವಿದೇಶಿಯರ ಆಕ್ರಮಣದಲ್ಲಿ ಸಿಲುಕಿ ಪತನವಾಗಲಿದ್ದ ಭಾರತೀಯ ಸಂಸ್ಕೃತಿಯನ್ನು ದಕ್ಷಿಣದಲ್ಲಿ ಸಂರಕ್ಷಿಸಿದ ಕೀರ್ತಿ ದಬ್ಬಿನ್ ಪ್ರಸ್ಥಭೂಮಿಯದು,
* ಕಟ್ಟಕಡೆಯ ಹಿಂದೂ ಸಾಮ್ರಾಜ್ಯಕ್ಕೆ ನಲೆ : ದಬ್ಬಿನ್‌ನಲ್ಲಿ ಅಂತಹ ಗುರುತರವಾದ ಜವಾಬ್ದಾರಿಯನ್ನು ಹೊತ್ತು ನಿಂತುದು ವಿಜಯನಗರ ಸಾಮ್ರಾಜ್ಯ, ಉತ್ತರದಲ್ಲಿ ಬೌದ್ಧಧರ್ಮ ಉಚ್ಛಾಯಸ್ಥಿತಿಯಲ್ಲಿದ್ದಾಗ ದಕ್ಷಿಣದಲ್ಲಿ ಜೈನಧರ್ಮ ಅಭಿವೃದ್ಧಿಗೊಂಡಿದ್ದಿತು. ಪೂರ್ಣ ಭಾರತ ವನ್ನೇ ಪ್ರಸರಿಸಿದ ಭಕ್ತಿಪಂಥ ಚಳವಳಿ ಜನ್ಮ ತಾಳಿದುದು ದಬ್ಬಿನ್‌ನಲ್ಲಿ. * ಹೊಸ ಧಾರ್ಮಿಕ ಪಂಥ (ಸಿದ್ಧಾಂತ)ಗಳ ತೌರು : ಅದೃತ, ವಿಶಿಷ್ಟಾದ್ರತೆ, ರೈತ
ಸಿದ್ಧಾಂತ ಮತ್ತು ಶಕ್ತಿವಿಶಿಷ್ಟಾದ್ಯತ ಸಿದ್ಧಾಂತಗಳನ್ನು ಬೋಧಿಸಿದ ಶಂಕರ, ರಾಮಾನುಜಾಚಾರ್ಯ,
ಮಧ್ವಾಚಾರ್ಯ ಮತ್ತು ಬಸವೇಶ್ವರರುಗಳಿಗೆ ಜನ್ಮವಿತ್ತನಾಡಿದು. * ಭಕ್ತಿ ಮಾರ್ಗದ ಮೊಳಕೆ : ಭಕ್ತಿ ಮಾರ್ಗಪ್ರವರ್ತಕರಾದ 63 ಮಂದಿ ಶೈವ ನಾಯನಾರರು, 12 ಮಂದಿ ವೈಷ್ಣವ ಆಳ್ವಾರರು, ಕನಕದಾಸರು ಮತ್ತು ಪುರಂದರದಾಸರನ್ನು ಕಂಡ ನಾಡು ದಕ್ಷಿಣ ಭಾರತ.
ವಿದೇಶ ಸಂಪರ್ಕ ಹಾಗೂ ವ್ಯಾಪಾರಕ್ಕೆ ಒತ್ತು : ಭಾರತದ ಆರ್ಥಿಕ ಪ್ರಗತಿಯಲ್ಲಿ ಈ ಪ್ರದೇಶಗಳ ಪಾತ್ರ ಶ್ಲಾಘನೀಯ. ವಿದೇಶಗಳೊಡನೆ ವ್ಯಾಪಾರ ಸಂಪರ್ಕ ಅಭಿವೃದ್ಧಿಗೊಳ್ಳಲು ಇಲ್ಲಿ ನ ರೇವುಪಟ್ಟಣಗಳು ಕಾರಣವಾದುವು. ಅಂತಹ ತೀರಪ್ರದೇಶ ಹಾಗೂ ರೇವುಗಳಿಲ್ಲದಿದ್ದಲ್ಲಿ ಭಾರತೀಯರು ವಿದೇಶಗಳ ಸಂಪರ್ಕ ಪಡೆಯುವುದೇ ಅಸಾಧ್ಯವಾಗುತ್ತಿತ್ತು. ಹೀಗಾಗಿ ಭಾರತೀಯರು ಆತ್ಮೀಯ ಏಷ್ಯಾ, ಬರ್ಮಾ, ಕೊರಿಯ, ಶ್ರೀಲಂಕಾ ಮುಂತಾದೆಡೆಗಳಲ್ಲಿ ಭಾರತೀಯ ಸಂಸ್ಕೃತಿ ಹರಡುವಂತಾಯಿತು. ವ್ಯಾಪಾರ ಬೆಳೆದಂತೆ ಆರ್ಥಿಕವಾಗಿ ರಾಜ್ಯಗಳು ಸುಭದ್ರವಾಗಿದ್ದು ಅಭಿವೃದ್ಧಿಗೆ11 * ನೌಕಾ ಬಲ ನಿರ್ಮಾಣ : ಈ ಪ್ರದೇಶ ಮೂರು ಕಡೆಯಿಂದಲೂ ಸಮುದ್ರದಿಂದ ಸುತ್ತುವರಿದಿದೆ. ಉತ್ತರದಲ್ಲಿರುವ ವಿಂಧ್ಯ ಪರ್ವತ ಶ್ರೇಣಿ ಉತ್ತರ ಭಾರತದಿಂದ ಈ ಭಾಗವನ್ನು ಏ ಪ್ರತ್ಯೇಕಿಸಿದೆ. ಉತ್ತರ ಭಾರತದ ಮೇಲೆ ಸಂಭವಿಸಿದ ವಿದೇಶೀಯ ದಾಳಿಗಳು ಈ ಭೌಗೋಳಿಕ ಅಡತಡೆಗಳಿಂದಾಗಿ ಇಲ್ಲಿ ಸುಲಭವಾಗಿ ಪ್ರವೇಶಿಸಲಾಗಲಿಲ್ಲ. ದನಿಗೆ ಅದೊಂದು ಪ್ರಕೃತಿ ದತ್ತವಾಗಿ ಒದಗಿದ ವರದಾನವೇ ಆಗಿದೆ.
ಉತ್ತರ ಭಾರತವನ್ನುಳಿದ ಯಾವ ಚಕ್ರವರ್ತಿಗಳು ನೌಕಾಬಲ ನಿರ್ಮಾಣದಲ್ಲಿ ಕೈ ಹಾಕಲು ಮುಂದಾಗಲೇ ಇಲ್ಲ. ಅದು ದಕ್ಷಿಣದ ರಾಜರುಗಳಾದ ಚೋಳರು, ಪೂರ್ವ ಕರಾವಳಿಯಲ್ಲಿ ಸಣ್ಣದೊಂದು ನೌಕಾ ಬಲವನ್ನು ಹೊಂದಲು ಸಾಧ್ಯವಾಯಿತು. ಅದರ ನೆರವಿನಿಂದ ಚೋಳರು ಆತ್ಮೀಯ ಏಷ್ಯಾ, ಸಿಲೋನ್ ಮೊದಲಾದ ದ್ವೀಪ ರಾಷ್ಟ್ರಗಳಲ್ಲಿ ದಿಗ್ವಿಜಯ ಸಾಧಿಸಿದ್ದರು. ಪಶ್ಚಿಮ ಕರಾವಳಿಯಲ್ಲಿ ಸ್ವತಂತ್ರಾನಂತರ ಭಾರತ ಸರಕಾರ ಪಶ್ಚಿಮ ಕರಾವಳಿಯ ಕಾರವಾರ ಬಳಿ ಸೀಬರ್ಡ್ ನೌಕಾನೆಲೆ ಸ್ಥಾಪಿಸಿದೆ. ಆ ಸ್ಥಳ ಆಯಾಕಟ್ಟಿನ ಜಾಗವಾಗಿರುವುದೇ ಅದಕ್ಕೆ ಕಾರಣವಾಗಿದೆ.
5. ಪೂರ್ವ ಮತ್ತು ಪಶ್ಚಿಮ ಘಟ್ಟಗಳು ಮತ್ತು ಪ್ರಭಾವ
ದಕ್ಷಿಣ ಭಾರತದ ಪಶ್ಚಿಮ ಕರಾವಳಿಯ ಅಂಚಿನಲ್ಲಿ ಪಶ್ಚಿಮ ಘಟ್ಟಗಳು ದಕ್ಷಿಣೋತ್ತರವಾಗಿ ಹರಡಿವೆ. ಇವು ಸಮುದ್ರ ಮಟ್ಟದಿಂದ ಸು. 3000 ಅಡಿ ಎತ್ತರದಲ್ಲಿ ವ. ಈ ಭಾಗದಲ್ಲಿ ಹೆಚ್ಚಾಗಿ ಮುಂಗಾರು ಮಳೆ ಬೀಳುವುದರಿಂದ ಅಧಿಕ ಬೆಳೆ ಬೆಳೆಯಬಹುದು. ಅರಣ್ಯ ಸಂಪತ್ತು ಹೇರಳವಾಗಿದೆ. ಪಶ್ಚಿಮ ಘಟ್ಟಗಳಿಂದ ಪೂರ್ವ ಘಟ್ಟಗಳ ಕಡೆಗೆ ಭೂಮಿ ಸ್ವಲ್ಪ ಮಟ್ಟಿಗೆ ಇಳಿಜಾರಾಗಿದೆ. ಇಲ್ಲಿನ ಉತ್ತಮ ಹವಾಗುಣ ಹಾಗೂ ಮಳೆ ನೈಸರ್ಗಿಕ ಸಂಪತ್ತನ್ನು ಹೆಚ್ಚಿಸಿದೆ. ಹೊನ್ನೆ, ತೇಗ, ಗಂಧದ ಮರಗಳು ಹೇರಳವಾಗಿ ಬೆಳೆಯುತ್ತವೆ. ಪರ್ವತಪಂಕ್ತಿಗಳು ಮತ್ತು ನದೀ ಬಯಲು ನೈಸರ್ಗಿಕ ಸಂಪತ್ತು ಈ ಭೂಭಾಗವನ್ನು ಶ್ರೀಮಂತಗೊಳಿಸಿದೆ. ಹತ್ತಿ, ಕಬ್ಬು, ಎಣ್ಣೆ ಕಾಳು ಮೊದಲಾದ ಬೆಳೆಗಳಿಗೆ ಇಲ್ಲಿನ ಉತ್ಕೃಷ್ಟವಾದ ಕಪ್ಪು ಭೂಮಿ ಅನುಕೂಲಕರವಾಗಿದೆ. ಖನಿಜಸಂಪತ್ತು ಹೇರಳವಾಗಿರುವುದರಿಂದ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಗಳು ಜನ್ಮ ತಾಳುವಂತಾಯಿತು. ಬಂದರುಗಳು ವ್ಯಾಪಾರ ಅಭಿವೃದ್ಧಿಗೆ ಪೂರಕವಾಗಿವೆ. ಅರಣ್ಯಗಳು ಭಾರತದ ಸಾಂಸ್ಕೃತಿಕ ಇತಿಹಾಸದಲ್ಲಿ ಪ್ರಮುಖ ಪಾತ್ರವಹಿಸಿವೆ. ಉದಾ: ಅರಣ್ಯಕಗಳೆಂದು (Forest Texts) ಕರೆಯಲಾಗಿರುವ ಆಧ್ಯಾತ್ಮಿಕ ಕೃತಿಗಳು ರಚಿತವಾದುದೇ ಅರಣ್ಯಗಳಲ್ಲಿ ನೆಲಸಿದ್ದ ಋಷಿವರ್ಯರಿಂದ. ಮೇಲಾಗಿ ಅವು ವಿದ್ಯಾರ್ಜನೆಯ ಕೇಂದ್ರಗಳೂ ಆಗಿದ್ದುವು. ಪ್ರಾಚೀನ ಗುರುಕುಲ, ಋಷಿರುವಹ ಇದ್ದುದೇ ಅರಣ್ಯಗಳ ಪ್ರಶಾಂತ ತಾಣಗಳಲ್ಲಿ.
ಪಶ್ಚಿಮದಲ್ಲಿದ್ದಂತೆ ಪೂರ್ವ ಭಾಗದಲ್ಲೂ ಕರಾವಳಿ ಗಂಗಾನದಿ ತೀರದಿಂದ ದಕ್ಷಿಣದ ಕೋರಮಂಡಲ ತೀರದವರೆವಿಗೂ ಹಬ್ಬಿದೆ. ಪಶ್ಚಿಮ ಘಟ್ಟಗಳಂತಲ್ಲದೆ ಇದು ವಿಶಾಲವಾಗಿದೆ. ಗುಡ್ಡಗಳೂ ವಿರಳವಾಗಿವೆ. ಕೃಷ್ಣ, ಗೋದಾವರಿ, ಮಹಾನದಿ, ಕಾವೇರಿ ನದಿಗಳು ಇಲ್ಲಿ ಹುಟ್ಟಿ ಈ ಪ್ರದೇಶಗಳ ಮೂಲಕ ಹರಿದು ಈ ಭಾಗವನ್ನು ಶ್ರೀಮಂತಗೊಳಿಸಿವೆ. ಪಶ್ಚಿಮ ಮತ್ತು ಪೂರ್ವ ಕರಾವಳಿಗಳು ದಕ್ಷಿಣಾಭಿಮುಖವಾಗಿ ಜಾರಾಗಿದ್ದು ದಕ್ಷಿಣ ಭಾರತದ ತುತ್ತ ತುದಿ ಕನ್ಯಾಕುಮಾರಿ ಯಲ್ಲಿ ಸೇರುತ್ತವೆ. ಇಲ್ಲಿನ ಮನ್ನಾರ್‌ಲ್ಲಿ ಶ್ರೀಲಂಕಾವನ್ನು ಭಾರತದಿಂದ ಪ್ರತ್ಯೇಕಿಸಿದ. ಈ ಕರಾವಳಿ ತೀರ ಪ್ರದೇಶಗಳಿಂದ ಉತ್ತೇಜಿತರಾದ ಶಾತವಾಹನರು, ಚೋಳರು, ಮರಾರರು ನೌಕಾದಳ ನಿರ್ಮಿಸಿಕೊಳ್ಳಲು ಸಾಧ್ಯವಾಯಿತು. ಒಂದನೇ ರಾಜೇಂದ್ರ ಚೋಳ ಅಂತಹ ನೌಕಾ ಪಡೆಯ ನೆರವಿನಿಂದಪೆಗು, ನಿಕೋಬರ್, ಅಂಡಮಾನ್‌ಗಳಲ್ಲಿ ತನ್ನ ಅಧಿಕಾರ ಸ್ಥಾಪಿಸಲು ಸಾಧ್ಯವಾಯಿತು. ಸು. 4000 ದಮ್ಮ, ಸೈನಿಕ ಬಲವುಳ್ಳ ನೌಕಾಪಡೆ ಶಿವಾಜಿ ಕಾಲದಲ್ಲಿದ್ದಿತು. ನಂತರದ ಭಾರತದ ದೊರೆಗಳು ನೌಕಾಬಲವನ್ನು ನಿರ್ಲಕ್ಷಿಸಿದರು. ಪರಿಣಾಮವಾಗಿ ನೌಕಾಬಲವುಳ್ಳ ಬ್ರಿಟಿಷರಿಗೆ ಸೋತು ಅಧೀನರಾಗ ಬೇಕಾಯಿತು. ಈ ಘಟ್ಟಗಳಿಂದಾಗಿ ಕರಾವಳಿಯಲ್ಲಿ ಪ್ರವೇಶಿಸಿದ ಪೋರ್ಚುಗೀಸರು, ಡಚ್ಚರು, ಇಂಗ್ಲಿಷರು ಈ ಘಟ್ಟಗಳಲ್ಲಿರುವ ಒಳನಾಡಿಗೆ ಬರುವುದು ಕಷ್ಟಸಾಧ್ಯವಾಗಿತ್ತು. ಆದ್ದರಿಂದ ಒಳನಾಡಿನಲ್ಲಿ ಇವರ ಪ್ರಭಾವ ಅಷ್ಟಾಗಿ ಆಗಲಿಲ್ಲ. ಪೂರ್ವದ ಘಟ್ಟಗಳು ವಿರಳವಾಗಿದ್ದುದರಿಂದ ಫ್ರೆಂಚರು ಮತ್ತು ಬ್ರಿಟಿಷರ ಪ್ರಭಾವ ಆರ್ಕಾಟ್, ಹೈದರಾಬಾದ್‌ಗಳಲ್ಲಿ ಸಾಕಷ್ಟು ವಿಸ್ತರಿಸಿತು.
6. ತೀರಪ್ರದೇಶ (ಪೂರ್ವ ಮತ್ತು ಪಶ್ಚಿಮ ಕರಾವಳಿ) ಮತ್ತು ಪ್ರಭಾವ
ಭಾರತ ಸು. 5700 ಕಿ.ಮೀ. ನಷ್ಟು ಸಮುದ್ರತೀರ ಹೊಂದಿದೆ. ಇದು ಪಶ್ಚಿಮ ಭಾಗದಲ್ಲಿ ಕ್ಯಾಂಬೆ (Cambay) ಕೊಲ್ಲಿಯಿಂದ ಹಿಡಿದು ಪೋಷಾಕು ರೀತಿಯಲ್ಲಿ (Strip) ಪೂರ್ಣ ತೀರಪ್ರದೇಶದಲ್ಲಿ ಬಹು ಸಂಕುಚಿತವಾಗಿ ಹರಡಿದೆ. ಇದರ ಉತ್ತರ ಭಾಗವೇ ಇಂದಿನ ಕೊಂಕಣ ಮತ್ತು ದಕ್ಷಿಣ ಭಾಗ ಮಲಬಾರ್, ಮಾನ್ ಸೂನ್ ಮಾರುತ ಪಶ್ಚಿಮ ಘಟ್ಟಗಳಿಗೆ ಬಿರುಸಿನಿಂದ ಅಪ್ಪಳಿಸುವುದರಿಂದ ಈ ಭಾಗದಲ್ಲಿ ಮಳೆಯ ಪ್ರಮಾಣ ಹೇರಳ, ಪ್ರತಿ ವರ್ಷ ಆಗುಂಬೆಯಲ್ಲಿ 100 ಅಂಗುಲ ಮಳೆಯಾಗುತ್ತದೆ, ಆದರೂ ದೊಡ್ಡ ನದಿಗಳು ರೂಪುಗೊಂಡಿಲ್ಲ. ಇರುವ ಕೆಲವ ಸಣ್ಣ ಪುಟ್ಟ ಹೊಳೆಗಳು ಸಾರಿಗೆ ಸಂಪರ್ಕಕ್ಕೆ ಅನುಕೂಲವಾಗಿವೆ. ಪರಿಣಾಮವಾಗಿ, ಮಲಬಾರ್ ಮತ್ತು ಕೊಂಕಣಗಳು ಪ್ರಮುಖ ರೇವು ಕೇಂದ್ರಗಳಾದುವು. ಯೂರೋಪಿಯನ್ನರ ಸಂಪರ್ಕ ಸಾಧ್ಯವಾಯಿತು : ಈ ಕರಾವಳಿಯಲ್ಲಿ 15ನೇ ಶತಮಾನ ದಿಂದೀಚೆಗೆ ಯೂರೋಪಿನ ಪೋರ್ಚುಗೀಸ್, ಡಚ್ ಮತ್ತು ಇಂಗ್ಲಿಷರ ಪ್ರಭಾವ ಉಂಟಾಯಿತು. ಹಾಗಾಗಿ ಪಶ್ಚಿಮ ಕರಾವಳಿ ಪ್ರದೇಶದಲ್ಲಿ ಕಲ್ಲಿ ಕೋಟೆಯಿಂದ ಬೊಂಬಾಯಿಯವರೆಗೆ ಕ್ರೈಸ್ತಧರ್ಮ ವ್ಯಾಪಿಸಿತು. ಮುಂದೆ ಭಾರತ ಏಕೀಕೃತಗೊಂಡಿತಲ್ಲದೆ ಶಿಕ್ಷಣ, ವೈಜ್ಞಾನಿಕ ಬೆಳವಣಿಗೆ ಸಾರಿಗೆ ಸಂಪರ್ಕಗಳಲ್ಲಿ ಅಭಿವೃದ್ಧಿಯನ್ನು ಕಂಡು ಆಧುನಿಕ ಪ್ರಪಂಚದಲ್ಲಿ ಗುರುತಿಸಿಕೊಳ್ಳುವ ಮಟ್ಟಕ್ಕೇರಲು ಸಾಧ್ಯವಾಯಿತು.
ಭಾರುಕಚ್ಚ (ಬ್ರೂಚ್), ಸೂರತ್, ಸೊಪಾರ ಮೊದಲಾದ ರೇವುಪಟ್ಟಣಗಳು ಪ್ರಾಚೀನಕಾಲ ದಿಂದಲೂ ಕಾರ್ಯಾಚರಣೆಯಲ್ಲಿದ್ದು ಪರ್ಶಿಯವರು, ಗ್ರೀಕರು, ರೋಮನರು, ಈಜಿಪ್ಪಿಯನರು, ಅರಬ್ಬರು ಭಾರತದೊಡನೆ ವ್ಯಾಪಾರ ಸಂಪರ್ಕ ಗಳಿಸಿಕೊಳ್ಳುವಂತಾಯಿತು.
ಪೂರ್ವ ಕರಾವಳಿಯ ಕಾವೇರಿಪಟ್ಟಣಂ, ನಾಗಪಟ್ಟಣಂ, ರಾಮೇಶ್ವರ ಮೊದಲಾದ ಸ್ಥಳಗಳಿಂದ ಸಿಂಹಳ, ಜಾವ, ಸುಮಾತ್ರ, ಮಲಯ, ಕಾಂಬೋಡಿಯ ಮೊದಲಾದ ಇತರ ಆಕ್ಷೇಯ ದೇಶಗಳಿಗೆ ಭಾರತೀಯ ಸಂಸ್ಕೃತಿ ಪ್ರಸಾರಗೊಂಡಿತು. ಈ ಕರಾವಳಿಯ ಮದ್ರಾಸು (ಚೆನ್ನೈ), ಪಾಂಡಿಚೇರಿ, ಮಚಲಿ ಪಟ್ಟಣ, ವಿಶಾಖಪಟ್ಟಣ, ಹೂಗ್ಲಿ, ಕಲ್ಕತ್ತಗಳಲ್ಲಿ ಇಂಗ್ಲಿಷರು ಮತ್ತು ಫ್ರೆಂಚರ ಪ್ರಭಾವ ಹೆಚ್ಚಾಯಿತು. ಪಶ್ಚಿಮ ತೀರದಂತೆಯೇ ಪೂರ್ವದಲ್ಲಿ ತೀರಪ್ರದೇಶ ಗಂಗಾನದಿಯ ಮುಖಜಭೂಮಿಯಿಂದ ಹಿಡಿದು ದಕ್ಷಿಣದ ಕೋರಮಂಡಲದವರೆಗೂ ಹಬ್ಬಿದ. ಆದರೆ ಇದು ಪಶ್ಚಿಮ ತೀರದಂತ ಸಂಕುಚಿತವಾಗಿರದೆ ವಿಶಾಲವಾಗಿದ್ದು, ಕೃಷ್ಣ, ಗೋದಾವರಿ, ಮಹಾನದಿ, ಕಾವೇರಿ ಮುಂತಾದ ದೊಡ್ಡ ನದಿಗಳನ್ನೊಳಗೊಂಡಿದೆ. ಈ ಪ್ರದೇಶದ ಉತ್ತಮ ಆರ್ಥಿಕ ಪರಿಸ್ಥಿತಿಗೆ ಈ ನದಿಗಳು ಕಾರಣವಾಗಿವೆ. ಇವೆರಡು ಪೂರ್ವ ಮತ್ತು ಪಶ್ಚಿಮ ತೀರಗಳು ಸಾವಿರಾರು ಮೈಲಿ ದಕ್ಷಿಣಾಭಿಮುಖವಾಗಿ ಮುಂದುವರಿದು ತ್ರಿಕೋನಾ ಕೃತಿಯಂತಿರುವ ದಕ್ಷಿಣದ ತುದಿ ಕೇಪ್ ಕಾಮೋರಿನ್‌ನಲ್ಲಿ (ಕನ್ಯಾಕುಮಾರಿ) ಸೇರುತ್ತವೆ, ಕನ್ಯಾಕುಮಾರಿಗೆ ಆನ್ನೇಯದಲ್ಲಿ ಸಿಂಹಳ ದ್ವೀಪವಿದೆ. ಮನ್ನಾಕೊಲ್ಲಿ ಇದನ್ನು ಭಾರತದಿಂದ ಪ್ರತ್ಯೇಕಿಸಿದ. ಈ ತೀರಪ್ರದೇಶಗಳಿಂದ ಪ್ರೇರಿತರಾದ ಶಾತವಾಹನರು, ಚೋಳರು ಮತ್ತು ಮರಾಠರು ನೌಕಾಪಡೆಯನ್ನು ನಿರ್ಮಿಸಿದರು. ಚೋಳ ಅರಸ ಒಂದನೇ ರಾಜೇಂದ್ರ (1012-35) ಪಿಗು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ವಶಪಡಿಸಿಕೊಂಡನು. ಛತ್ರಪತಿ ಶಿವಾಜಿ ಸು. 4000 ನೌಕಾದಳವನ್ನು ಹೊಂದಿದ್ದನು. ಆದರೆ ತರುವಾಯ ಬಂದ ಅನೇಕ ಅರಸರು ನೌಕಾದಳವನ್ನು ನಿರ್ಲಕ್ಷಿಸಿದರು. ತತ್ಪರಿಣಾಮವಾಗಿ ಭಾರತ ಸುಭದ್ರ ನೌಕಾಬಲವುಳ್ಳ ಇಂಗ್ಲಿಷರ ಅಧೀನವಾಗ ಬೇಕಾಯಿತು.
ಒಟ್ಟಿನಲ್ಲಿ ಯಾವುದೇ ದೇಶವಾಗಲಿ ಬಹುತೇಕವಾಗಿ ಅದರ ಇತಿಹಾಸ ಅಲ್ಲಿನ ಭೌಗೋಳಿಕ ಅಂಶಗಳಿಂದ ನಿರ್ಧರಿಸಲ್ಪಡುವಂತಹುದಾಗಿದೆ. ಭೌಗೋಳಿಕ ಲಕ್ಷಣಗಳು ಪ್ರಕೃತಿದತ್ತವಾದುವು. ಅವುಗಳಲ್ಲಿ ನದಿ, ಪರ್ವತ, ಉತ್ಕೃಷ್ಟ ಭೂಮಿ, ಅರಣ್ಯ, ವಾಯುಗುಣ ಮುಖ್ಯವಾದುವು. ಇವು ಪ್ರತಿಕೂಲವಾಗಿದ್ದಲ್ಲಿ ಮಾನವನ ಪ್ರಗತಿ ಆಸಾಧ್ಯ. ಭಾರತದಲ್ಲಿ ಈ ಎಲ್ಲ ಅಂಶಗಳೂ ಸಾಕಷ್ಟು ಮೊತ್ರದಲ್ಲಿ ಅನುಕೂಲಕರವಾಗಿದ್ದು ಅದರ ಸರ್ವತೋಮುಖ ಅಭಿವೃದ್ಧಿಗೆ ಕಾರಣೀಭೂತವಾಗಿವೆ.
ಕೃಪೆ: ಪ್ರಾಚೀನ ಭಾರತದ ಇತಿಹಾಸ: ಫಾಲಾಕ್ಷ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ