ರಾಜಹಂಸಗಡ ಕೋಟೆ ಬೆಳಗಾವಿ ಭಾಗ ಕೋಟೆ–ಕೊತ್ತಲಗಳಿಗೆ ಹೆಸರುವಾಸಿ. ಇವುಗಳ ಪೈಕಿ ಬೆಳಗಾವಿ ನಗರದಿಂದ 15 ಕಿ.ಮೀ. ದೂರದಲ್ಲಿರುವ ರಾಜಹಂಸಗಡ ಕೋಟೆ ಗಮನಸೆಳೆಯುತ್ತದೆ. ಎತ್ತರದ ಗುಡ್ಡದಂತಹ ಪ್ರದೇಶದಲ್ಲಿರುವುದು ಇದರ ವಿಶೇಷ. 1674ರಲ್ಲಿ ಮರಾಠರಿಂದ ನಿರ್ಮಾಣವಾದ ಕೋಟೆ ಇದು. ಅಲ್ಲಿರುವ ಬಾವಿಯಲ್ಲಿ ವರ್ಷವಿಡೀ ನೀರು ತುಂಬಿರುತ್ತದೆ. ಇದೊಂದು ವಿಶೇಷ. ವೀಕ್ಷಣಾ ಗೋಪುರ. ಗಟ್ಟಿಮುಟ್ಟಾದ ಗೋಡೆಗಳಿದ್ದು, ಹಿಂದಿನ ಕಾಲದ ವಿಶೇಷ ನಿರ್ಮಾಣ ಕೌಶಲಕ್ಕೆ ಕನ್ನಡಿ ಹಿಡಿದಿದೆ. ‘ಬೆಳಗಾವಿ ನಗರದಲ್ಲಿರುವ ಕೋಟೆ ರಕ್ಷಣೆಗಾಗಿ ಈ ಕೋಟೆಯನ್ನು ನಿರ್ಮಿಸಲಾಗಿತ್ತು. ಶತ್ರುಗಳ ಚಲನ–ವಲನದ ಮೇಲೆ ಇಲ್ಲಿಂದ ನಿಗಾ ಇಡಲಾಗುತ್ತಿತ್ತು’ ಎನ್ನುತ್ತದೆ ಇತಿಹಾಸ. ಬೆಟ್ಟದ ತುದಿಯಲ್ಲಿರುವ ಈ ಕೋಟೆಯನ್ನು ವಿಶೇಷ ವಿನ್ಯಾಸದಲ್ಲಿ ಕಟ್ಟಲಾಗಿದೆ. ಬೇರೆ ಕೋಟೆಗಳಿಗಿಂತ ಭಿನ್ನ. ಕೋಟೆಯ ಆಕಾರ ಗೋವಿನ ಮುಖದಂತಿದೆ. ಮುಖ್ಯದ್ವಾರ ಎರಡು ಗುಮ್ಮಟಗಳ ನಡುವಿದೆ. ಇದು ಹೊರಗೆ ಕಾಣುವುದಿಲ್ಲ. ಶತ್ರುಗಳಿಗೆ ತಕ್ಷಣ ಕೋಟೆ ಕಾಣಬಾರದೆಂದೇ ಈ ರೀತಿ ನಿರ್ಮಿಸಲಾಗಿತ್ತು ಎನ್ನಲಾಗುತ್ತದೆ. ಅಲ್ಲದೆ, ಆನೆಗಳ ಸಹಾಯದಿಂದ ದ್ವಾರದ ಬಾಗಿಲನ್ನು ತೆಗೆಸುವುದಕ್ಕೆ ಆಗುವುದಿಲ್ಲ. ಕಾರಣ, ಪ್ರವೇಶದ್ವಾರದಲ್ಲಿ ಗುಮ್ಮಟಗಳ ಮಧ್ಯೆ ಆನೆ ನಿಲ್ಲುವಷ್ಟು ಸ್ಥಳಾವಕಾಶ ಇಲ್ಲ. ‘ಛತ್ರಪತಿ ಶಿವಾಜಿ ಮಹಾರಾಜರು ನಿರ್ಮಿಸಿದ ಪ್ರತಿ ಕೋಟೆಗಳಿಗೆ ಮುಖ್ಯದ್ವಾರ ಮಾತ್ರವಲ್ಲದೇ, 1ರಿಂದ 3 ರಹಸ್ಯ ಮಾರ್ಗಗಳಿರುತ್ತವೆ. ಇವು ...
ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಸಂಶೋಧನಾ ವೇದಿಕೆ. ಶಂಕರ ನಿಂಗನೂರ