ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನೊಳಂಬರ ಇತಿಹಾಸ

ನೊಳಂಬ ಕರ್ನಾಟಕದ ಈಗಿನ ಚಿತ್ರದುರ್ಗ ಜಿಲ್ಲೆ ಮತ್ತು ಅದರ ಸುತ್ತ ಮುತ್ತಣ ಪ್ರದೇಶವನ್ನೊಳಗೊಂಡಿದ್ದ ನೊಳಂಬಳಿಗೆ ಸಾಸಿರ ಎಂಬ ಪ್ರಾಂತ್ಯದ ಅಧಿಪತಿಗಳಾಗಿ 8ನೆಯ ಶತಮಾನದಲ್ಲಿ ಆಳ್ವಿಕೆಯನ್ನಾರಂಭಿಸಿ, ಮುಂದಿನ ಎರಡು ಶತಮಾನಗಳಲ್ಲಿ ಪ್ರಾಬಲ್ಯಗಳಿಸಿ, ಈಗಿನ ಚಿತ್ರದುರ್ಗ, ತುಮಕೂರು, ಕೋಲಾರ, ಬೆಂಗಳೂರು, ಜಿಲ್ಲೆಗಳನ್ನೂ ನೆರೆಯ ಅನಂತಪುರ, ಚಿತ್ತೂರು, ಧರ್ಮಪುರಿ ಜಿಲ್ಲೆಗಳನ್ನೂ ಒಳಗೊಂಡಿದ್ದ ನೊಳಂಬವಾಡಿ 32000 ಪ್ರಾಂತ್ಯದ ಪ್ರಭುಗಳಾಗಿ 11ನೆಯ ಶತಮಾನದ ಮಧ್ಯದವರೆಗೆ ಆಳ್ವಿಕೆ ನಡೆಸಿದ ಸಾಮಂತ ರಾಜರ ಮನೆತನ. ತಲಕಾಡಿನ ಗಂಗರೂ ರಾಷ್ಟ್ರಕೂಟರೂ ಕಲ್ಯಾಣ ಚಾಳುಕ್ಯರೂನೊಳಂಬರಿಗೆ ಸ್ವಲ್ಪಕಾಲ ಅಧೀನರಾಗಿದ್ದರು. ಕದಂಬ, ಗಂಗ ಮತ್ತು ಕಲ್ಯಾಣ ಚಾಳುಕ್ಯರೊಂದಿಗೆ ಇವರು ವಿವಾಹ ಸಂಬಂಧ ಬೆಳೆಸಿದ್ದರು. ಬಾಣರು, ವೈದುಂಬರು, ಚೋಳರು ಮುಂತಾದವರಿಗೂ ಇವರಿಗೂ ರಾಜಕೀಯ ಸಂಬಂಧವಿತ್ತು. ನದಿಯ ಲಾಂಛನ ಹೊಂದಿದ್ದ ಇವರ ರಾಜಧಾನಿ ಪೆಂಜೀರು ಅಥವಾ ಹೆಂಜೇರು. ಆಂಧ್ರ ಪದೇಶದ ಅನಂತಪುರ ಜಿಲ್ಲೆಯ ಹೇಮಾವತಿಯೇ ಇದೆಂದು ಗುರುತಿಸಲಾಗಿದೆ. ನೊಳಂಬ ಎಂಬ ಹೆಸರು ಹೇಗೆ ಬಂತೆಂಬುದು ಸ್ಪಷ್ಟವಾಗಿಲ್ಲ. ಈಶ್ವರ ವಂಶಜನಾದ ಕಂಚೀಪತಿ ಎಂದು ಶಾಸನವೊಂದರಲ್ಲಿ ವರ್ಣಿತನಾಗಿರುವ ತ್ರಿಣಯನ ಪಲ್ಲವ ಎಂಬುವನು ನೊಳಂಬರ ಮೂಲಪುರುಷ. ಇವನ ವಂಶದಲಿ ಹುಟ್ಟಿದವನು ಮಂಗಳ ನೊಳಂಬಾಧಿ ರಾಜ (ಸು. 730-ಸು. 775). ಹೇಮಾವತಿ ಶಾಸನದ ಪ್ರಕಾರ ಇವನು ಕಿರಾತ ನೃಪತಿಯನ್ನು ಜಯಿಸಿದ; ಕರ್ಣಾಟರಿಂ
ಇತ್ತೀಚಿನ ಪೋಸ್ಟ್‌ಗಳು

ಸುರೇಶ ಮುದ್ದಾರರ ಕವಿತೆ: ವರಗುರು, ಶ್ರೀದತ್ತನಿಗೆ

ವರಗುರು, ಶ್ರೀದತ್ತನಿಗೆ             ಅನುದಿನವು ಮೂಡನದಿ ಉದಯಿಸುವ ರವಿಯಂತೆ ಚಣಚಣವು ನೀ ಬರುವೆ ಮಿಂಚಿನಂತೆ ಬಂದು ಮೂಡಲ ಮನೆಯ ಮುತ್ತುಗಳ ರಾಶಿಯಲಿ ನಿನ್ನ ಹಾಡಿನು ಉಲಿದು ಕಿರಣದಂತೆ  ಆಗಸದ ಕಡಲಾಚೆ  ನಿನ್ನಿರವು ನಿಂತಿಹುದು ಆಳದಲಿ ಬಹು ಆಳ ನಿನ್ನಾತ್ಮವು ಬದುಕಿನಾ ಬಂಡಿಯಲಿ ಬೆಂದು ಬಂದರು ನೀನು ಮುಕುಟರತ್ನವು ನಿನ್ನ ಬದುಕಿನಿರವು ಸಾಧನೆಯ ಕೇರಿಯಲಿ ನಿಂದು ನೀ ಕೈಮಾಡಿ ಕರೆದು ತೋರಿಸಿದೆ ಗುರು ದರುಶನ ತಾಂಬುಲದ ತುಟಿಯಂತೆ ಮುಡಿಯಲ್ಲಿ ಮಲ್ಲಿಗೆಯು  ಸಂಜೆ ಹೊನ್ನಿನ ನೀರ ಕಡಲಾಚೆಯು ಗರಿ ಬಿಚ್ಚಿ ನೀ ಹಾಡೆ ಅರಳು ಮರಳಿನ ಮೇಲೆ ಬೆಳಗು ಮೂಡಲು ಅಲ್ಲಿ ಉಯ್ಯಾಲೆಯು ನಾದಲೀಲೆಗೆ ನಮನ ಗಂಗಾವತರಣದಲಿ ಶ್ರಾವಣದಿ ಸಖೀಗೀತ ನಭೋವಾಣಿಯು ಹೃದಯ ಸಮುದ್ರದಿ ಮಿಂದು ಸೂರ್ಯಪಾನವ ಮಾಡಿ ಬಾಲಬೋಧೆಗೆ ನಿಂತ ಶ್ರೀಮಾತೆಗೆ ಉತ್ತರಾಯಣ ಕಾಲ ಯಕ್ಷ ಯಕ್ಷಿಗೆ ನಮನ ಕಾವ್ಯವೈಖರಿಯಿಂದ ವಿನಯ ಸಂಚಯವು ಮುಕ್ತಕಂಠದಿ ಹಾಡಿ ನಾಕುತಂತಿಯ ಮೀಟಿ ಜೀವಲಹರಿಯೆ ನಮ್ಮ ಒಲವೇ ಬದುಕು ಚೈತನ್ಯಪೂಜೆಗದು ಮತ್ತೆ ಶ್ರಾವಣ ಬಂತು ಸಾಹಿತ್ಯ ಮೇರುವಿನ ವಿರಾಟ್ ಸ್ವರೂಪವು ಕನ್ನಡದ ವರಕವಿಯೆ ಭೂತಾಯಿ ವರಸುತನೆ ಚತುರೋಕ್ತಿ ನುಡಿಗಳ ಶಬ್ಧಗಾರುಡಿಗ ಅರವಿಂದರನುಯಾಯಿ ಭಗವತಿಯ ವೇದದನಿ ಧಾರಾನಗರದಿ ನಿಂದ ದತ್ತಾತ್ರೇಯ ಯುಗಯುಗದ ವಾತ್ಸಲ್ಯ ರಸದ ಹೊನಲನು ಹರಿಸಿ ಒಲವ ಬಳ್ಳಿಯನೆಲ್ಲ ಹಬ್ಬಿತಬ್ಬಿ ನನ್ನಾತ್ಮ ನೀ ಗುರುವೆ ಸ್ವಚ್ಛಂದದಾಯಕನೆ ನೆಲೆಸೆನ್ನ ಹೃದಯದೊಳು ಅಂಬಿಕಾತನ

ಕರ್ನಾಟಕದ ಪ್ರದರ್ಶನ ಕಲೆಗಳು OEC HISTORY

ಕರ್ನಾಟಕದ ಜಾನಪದ ಕಲೆಗಳು ಗ್ರಾಮೀಣ ಬದುಕಿನ ಅನಕ್ಷರಸ್ಥರಲ್ಲಿನ ಜಾನಪದ ಕಲೆಗಳು, ಹಾಡು, ಗಾದೆ ನಗರ ಬದುಕಿನ ಜನಕ್ಕೆ ವಿಶಿಷ್ಟ ಸಂವೇದನೆಯನ್ನುಂಟು ಮಾಡಿವೆ. ಗ್ರಾಮಗಳ ದೈನಿಕ ಬದುಕು ಆರಂಭವಾಗುವುದೇ ಇಂಥ ಜನಪದ ಹಾಡು-ಹಬ್ಬ ಆಚರಣೆಗಳಿಂದ. ಇವೊತ್ತಿನ ವಿಜ್ಞಾನಯುಗ ಪರಂಪರಾಗತ ಕಲೆಗಳನ್ನು ಮರೆಸುವಂತೆ ನಾಗಾಲೋಟಕ್ಕೆ ಓಡುತ್ತಿದೆ. ಹೀಗಿದ್ದೂ ನಗರ ಬದುಕಿನ ಈ ಜನಕ್ಕೆ `ಜನಪದ' ಮನರಂಜನೆಯನ್ನೀಯುವ ಮಟ್ಟಕ್ಕೆ ಸೀಮಿತವಾಗಿದೆಯೇನೋ ಅನ್ನುವ ಸಂಶಯ ಮೂಡಿದೆ. ಇದು ವಾಸ್ತವವೂ ಕೂಡ. ಈ ಜಾನಪದ ಪ್ರಕಾರವನ್ನು ಸಂಸ್ಕೃತಿಯ ಒಂದು ಭಾಗವೆಂದು ಭಾವಿಸಬೇಕಾಗಿರುವುದರಿಂದ ಇದರ ಉಳಿವು ನಮ್ಮ ಕೈಲಿದೆ. ಕಲಾವಿದರಿಗೆ ಪ್ರಶಸ್ತಿ, ಪುರಸ್ಕಾರ ನೀಡಿ ಗ್ರಾಮೀಣ ಪ್ರತಿಭೆಗಳನ್ನು ಹುಡುಕಿ ಈ ಪ್ರಕಾರದ ಜೀವಂತಿಕೆಗೆ ಶ್ರಮಿಸಬೇಕಾದ ಅಗತ್ಯವಿದೆ. ಅನೇಕ ಗ್ರಾಮೀಣ ಕಲೆ ಮತ್ತು ಆಚರಣೆಗಳು ಸಮಾಜದ ಮುಖ್ಯವಾಹಿನಿಗೆ ಬಾರದೆ ಎಲೆಮರೆಯ ಕಾಯಾಗಿ ಮರೆಯಲ್ಲಿಯೇ ಅಳಿದು ಹೋಗುತ್ತಿವೆ. ಅದರ ಸೊಗಡನ್ನು ಉಳಿಸುವ ಮತ್ತು ಮುಂದಿನ ತಲೆಮಾರಿಗೆ ಇದರ ಸವಿಯನ್ನು ಉಳಿಸಿ ಉಣಬಡಿಸುವ ಗುರುತರವಾದ ಜವಾಬ್ದಾರಿಯು ಪ್ರಜ್ಞಾವಂತ ನಾಗರಿಕರ ಜವಾಬ್ದಾರಿಯಾಗಿದೆ. ವೀರಗಾಸೆ ವೀರಗಾಸೆಯು ಸಾಮೂಹಿಕ ನೃತ್ಯವನ್ನೊಳಗೊಂಡ ಕರ್ನಾಟಕದ ಒಂದು ಜನಪದ ಕಲೆ. ಶೈವ ಸಂಪ್ರದಾಯದ ಧಾರ್ಮಿಕ ವೀರನೃತ್ಯ. ನೃತ್ಯದ ನಡುವೆ ಕನಿಷ್ಠ ಎರಡು ಜನ ಕಲಾವಿದರುಗಳು ಸೇರಿ ಒಡಪು ಹೇಳುವ ಕಾರ್ಯಕ್ರಮ ನಡೆಸಿಕೊಟ್ಟರೆ, ಗರಿಷ್ಠ ಮೂವತ್

ಧೋಂಡಿಯಾ ವಾಘ್: ಸಶಸ್ತ್ರ ಬಂಡಾಯ

ಧೊಂಡಿಯ ವಾಘ್ ೧೮ನೆಯ ಶತಮಾನದ ಅಂತ್ಯದ ವೇಳೆ ಆಗಿನ ಮೈಸೂರು ಪ್ರಾಂತ್ಯ ಮತ್ತು ಸುತ್ತಮುತ್ತ ಒಬ್ಬ ಸೈನಿಕನಾಗಿ, ಅಶ್ವದಳದ ನಾಯಕನಾಗಿ, ಕೆಲವು ಪ್ರದೇಶಗಳ ಒಡೆಯನಾಗಿ, ಬ್ರಿಟೀಶರ ವಿರುದ್ಧ ಮೈಸೂರು ಪ್ರಾಂತ್ಯದಲ್ಲಿ ಹೋರಾಟ ಮಾಡಿದ ಒಬ್ಬ ಸಾಹಸಿ ಧೊಂಡಿಯ ವಾಘ್. ಕೆಳದಿಯ ಸಂಸ್ಥಾನದಲ್ಲಿ ಕರಣಿಕರಿಗೆ ಸಹಾಯಕನಾಗಿ ವೃತ್ತಿ ಆರಂಭಿಸಿದ. ನಂತರ ಮೈಸೂರಿನ ಹೈದರಾಲಿ ಸೈನ್ಯದಲ್ಲಿ ಸೈನಿಕನಾಗಿ ಸೇರಿದ. ಮೂರನೇ ಮೈಸೂರು ಯುದ್ಧದ ನಂತರ ಈ ಸೈನ್ಯವನ್ನು ತೊರೆದು ಸ್ವತಂತ್ರವಾಗಿ ಸೈನ್ಯ ಕಟ್ಟಿ ಹರಿಹರ (ಊರು), ಸವಣೂರು ಮುಂತಾದ ಊರುಗಳನ್ನು ಗೆದ್ದು ತನ್ನ ಪ್ರಭಾವವನ್ನು ವಿಸ್ತರಿಸಲು ಪ್ರಯತ್ನಿಸಿದ. ಮರಾಠಾರೊಂದಿಗೆ ಸೋತ ಕಾರಣ ಮತ್ತೆ ಟಿಪ್ಪುವನ್ನು ಆಶ್ರಯಿಸಲು ನಿಶ್ಚಯಿಸಿದ. ಮತಾಂತರ ಹೊಂದಲು ಹೇಳಿ ಮಲಿಕ ಜಹಾನ್ ಖಾನ ಎಂದು ಹೆಸರಿಸಿದರು. ಆದರೆ ಮತಾಂತರ ಹೊಂದದ ಕಾರಣದಿಂದ ಟಿಪ್ಪು ಈತನನ್ನು ೫ ವರ್ಷಗಳ ಕಾಲ ಬಂಧನದಲ್ಲಿ ಇರಿಸಿದ. ನಾಲ್ಕನೆಯ ಮೈಸೂರು ಯುದ್ಧದಲ್ಲಿ ಟಿಪ್ಪು ಸೋತ ನಂತರ ಧೊಂಡಿಯ ಶ್ರೀರಂಗಪಟ್ಟಣದಿಂದ ತಪ್ಪಿಸಿಕೊಂಡು ಮತ್ತೆ ತನ್ನ ಪ್ರಭುತ್ವವನ್ನು ಸ್ಥಾಪಿಸಲು ಪ್ರಯತ್ನಿಸಿ ಉಭಯಲೋಕಾಧೀಶ್ವರ ಎನ್ನಿಸಿಕೊಂಡ. ಕಡೆಯಲ್ಲಿ ಬ್ರಿಟೀಷರೊಡನೆ ಹೋರಾಡುತ್ತಾ ೧೮೦೦ರಲ್ಲಿ ಮರಣ ಹೊಂದಿದ.     ಧೊಂಡಿಯ ಚೆನ್ನಗಿರಿಯಲ್ಲಿ ೧೮ನೇ ಶತಮಾನದ ಉತ್ತರ ಭಾಗದಲ್ಲಿ ಹುಟ್ಟಿದ. ಮರಾಠಿ ಪವಾರ್ ಪಂಗಡದ ಒಂದು ಸಾಮಾನ್ಯ ಪರಿವಾರದಲ್ಲಿ ಇವರ ಜನನ. ಆ ಕಾಲಖಂಡದಲ್

ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture)

1.1 ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture) ಭಾರತದ ಸಾಂಸ್ಕೃತಿಕ ಪರಂಪರೆಯು ವಿಶಾಲವಾದ ವ್ಯಾಪ್ತಿಯನ್ನು ಹೊಂದಿದೆ. ಮಾನವನ ಉಗಮದೊಂದಿಗೆ ಉಗಮವಾಗಿ ಬೆಳೆದು ಸಾಗಿ ಬಂದ ಪರಂಪರೆಯು ಅವನ ಜೀವನ ಮೌಲ್ಯಗಳು, ವಸತಿ ರಕ್ಷಣೆ, ಆಹಾರ, ವಿಹಾರ, ಉಡುಗೆ-ತೊಡುಗೆ, ಮನರಂಜನೆ, ವ್ಯಾಪಾರ, ವಾಣಿಜ್ಯ, ಸಂಗೀತ, ಕಲೆ, ವಾಸ್ತುಶಿಲ್ಪ, ಚಿತ್ರಕಲೆ, ಶಿಕ್ಷಣ, ಧರ್ಮಗಳು, ರೂಢಿ-ಸಂಪ್ರದಾಯಗಳು, ಭಾಷೆ, ನಟನೆ, ನಂಬಿಕೆ, ನೃತ್ಯ, ಆಚರಣೆ, ಹವ್ಯಾಸ, ಸಾಹಿತ್ಯ, ವಿಧಿ-ವಿಧಾನಗಳನ್ನು ಒಳಗೊಂಡಿದೆ. ಈ ಅಂಶಗಳಲ್ಲಿ ಕೆಲವು ಕಾಲಕ್ಕೆ ತಕ್ಕಂತೆ ಮತ್ತು ಪ್ರಾದೇಶಿಕವಾಗಿ ಭಿನ್ನತೆ ಹಾಗೂ ಬದಲಾವಣೆಗೊಂಡಿದ್ದರೂ ನಿರಂತರವಾಗಿ ಸಾಗಿ ಬಂದಿವೆ. ಅವುಗಳ ಗುಣ ಲಕ್ಷಣಗಳು ಈ ಕೆಳಗಿನಂತಿವೆ: 1. ಸಾಂಪ್ರದಾಯಕ ಜೀವನ ವಿಧಾನ: ಭಾರತೀಯರ ಜೀವನ ವಿಧಾನ ಪಾರಂಪರಗತವಾಗಿ ಪೂರ್ವಜರಿಂದ ಸಾಗಿ ಬಂದಿದೆ. ಪಾರಂಪರಗತವಾಗಿ ಭಾರತೀಯರದು ಕೃಷಿ ಪ್ರಧಾನವಾದ ಜೀವನ ವಿಧಾನವಾಗಿದ್ದು, ಭೂಮಿಯನ್ನು 'ಭೂದೇವಿ' ಎಂದು ಆರಾಧಿಸುತ್ತಾರೆ. ಭೂಮಿಯನ್ನು ಹಸನಗೊಳಿಸಿ, ಹದ ಮಾಡಿ, ಉತ್ತಿ-ಬಿತ್ತುವ ಪೂರ್ವದಲ್ಲಿ ಭೂದೇವಿಗೆ ಪೂಜೆ ಸಲ್ಲಿಸುವ ಮೂಲಕ ಕೃಷಿ ಕಾಯಕವನ್ನು ಪ್ರಾರಂಭಿಸುತ್ತಾರೆ. ಕಾಲಕಾಲಕ್ಕೆ ಮಳೆಯಾಗಿ, ಸಮೃದ್ಧವಾದ ಬೆಳೆಯನ್ನು ಕೊಡುವ ಮೂಲಕ ನಿನ್ನ ಮಕ್ಕಳನ್ನು ಸಲಹು ತಾಯಿ ಎಂದು ಬೇಡಿಕೊಳ್ಳುತ್ತಾರೆ. ಕೃಷಿ ಸಲಕರಣಗಳಲ್ಲಿ, ಬಿತ್ತುವ ಬೀಜಗಳಲ್

ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ

ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ ಭೂಗೋಳವು ಇತಿಹಾಸದೊಡನೆ ನಿಕಟ ಸಂಬಂಧ ಹೊಂದಿದೆ. ಯಾವುದೇ ಪ್ರದೇಶದ ಮಾನವನ ಜೀವನಕ್ರಮ ಮತ್ತು ಇತಿಹಾಸ ಅಲ್ಲಿನ ಭೌಗೋಳಿಕ ಲಕ್ಷಣಗಳನ್ನು ಅವಲಂಬಿಸಿರುತ್ತದೆ. ಪ್ರಕೃತಿ ಲಕ್ಷಣಗಳಲ್ಲಿ ಬದಲಾವಣೆಯಾಗುತ್ತಲೇ ಇರುತ್ತದೆ. ಅದಕ್ಕೆ ತಕ್ಕಂತೆ ಮಾನವನ ಇತಿಹಾಸದ ಬೆಳವಣಿಗೆಯೂ ಮಾರ್ಪಡುತ್ತದೆ. ಏಕೆಂದರೆ ಪ್ರಕೃತಿಯ ಮೇಲ್ಬಾಗದ ಅವಯವಗಳಾದ ಗಾಳಿ, ನದಿ, ಪರ್ವತ, ಸಮುದ್ರ, ಭೂಗುಣ, ಖನಿಜ ಸಂಪತ್ತು ಇತ್ಯಾದಿಗಳ ಕೈವಾಡ ಆಯಾ ದೇಶದ ಇತಿಹಾಸವನ್ನು ನಿರ್ಧರಿಸುತ್ತದೆ. ಆದ್ದರಿಂದ ಒಂದು ದೇಶದ ಅಥವಾ ಜನಾಂಗದ ಇತಿಹಾಸ ಅರಿಯಲು ಭೂಗೋಳದ ತಿಳಿವಳಿಕೆ ಅತ್ಯವಶ್ಯ. ವಿದೇಶಿ ಪ್ರವಾಸಿಗರ ವರದಿಗಳು ಭೌಗೋಳಿಕ ಪರಿಜ್ಞಾನವಿಲ್ಲದ ಇತಿಹಾಸದ ಅಧ್ಯಯನ ಕೂಡ ವ್ಯರ್ಥ, ಉದಾಹರಣೆಗೆ ಅಶೋಕನ ಸಾಮ್ರಾಜ್ಯ ತುಂಬ ವಿಶಾಲವಾಗಿತ್ತು: ಅತಿ ದೊಡ್ಡದು ಎನ್ನುವಾಗ ಭೌಗೋಳಿಕ ಮೇರೆಗಳ ಚಿತ್ರ ಅತ್ಯವಶ್ಯ. ಅವನ ರಾಜ್ಯ ಪಶ್ಚಿಮದಲ್ಲಿ ಆಫ್ಘಾನಿಸ್ತಾನ, ಉತ್ತರದಲ್ಲಿ ನೇಪಾಳ, ಪೂರ್ವದಲ್ಲಿ ಕಾಮರೂಪ ಹಾಗೂ ದಕ್ಷಿಣದಲ್ಲಿ ನಲ್ಲೂರಿನವರೆಗೂ ವಿಸ್ತರಿಸಿದ್ದಿತು ಎಂದು ವಿವರಿಸಲು ಹಾಗೂ ಸುಲಭ ಗ್ರಹಿಕೆಗೂ ಭೌಗೋಳಿಕ ಅರಿವು ಅವಶ್ಯ. ಹಾಗೆಯೇ ಕಾಲಗಣನೆ (Chronology) ಕೂಡ. ಅದು ಯಾವ ಕಾಲದಲ್ಲಿ ಈ ಘಟನ ಸಂಭವಿಸಿತು: ಅಶೋಕ ಅಥವಾ ಮಹಾತ್ಮಾ ಗಾಂಧಿ ಜೀವಿಸಿದ್ದರು ಎಂಬುದನ್ನು ತಿಳಿಸುತ್ತದೆ, ರಿಚರ್ಡ್ ಹಕ್ಕೂಯತ್ ಹೇಳುವಂತೆ: ಭೂಗೋಳ

ಬ್ರಾಹ್ಮೀಲಿಪಿ ಮತ್ತು ಖರೋಷ್ಠಿ ಲಿಪಿ

ಬ್ರಾಹ್ಮೀ ಲಿಪಿ  ಭಾರತೀಯ ಭಾಷೆಗಳಿಗೆ ಮೂಲವಾದ ಲಿಪಿಗಳ ಪೈಕಿ ಒಂದು ಇದರ ಉಗಮದ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಇದನ್ನು ಮುಖ್ಯವಾಗಿ ಎರಡು ಭಾಗಗಳಲ್ಲಿ ವಿಂಗಡಿಸಬಹುದು:  1. ಬ್ರಾಹ್ಮೀಲಿಪಿಯ ಉಗಮಕ್ಕೆ ಪರದೇಶ ಲಿಪಿಗಳೇ ಆಧಾರ, 2. ಬ್ರಾಹ್ಮೀಲಿಪಿ ಭಾರತದ ಸ್ವತಂತ್ರಲಿಪಿ. 1. ಈ ಲಿಪಿ ಬೇರೆ ದೇಶದಲ್ಲಿ ಉಗಮ ಹೊಂದಿ, ಭಾರತಕ್ಕೆ ವಲಸೆಗಾರರ ಮೂಲಕ ಬಂದು, ಅನಂತರ ಇಲ್ಲಿ ತನ್ನ ಬೆಳೆವಣಿಗೆ ಕಂಡುಕೊಂಡಿತು ಎಂದು ಅಭಿಪ್ರಾಯ ಪಟ್ಟಿರುವ ಅನೇಕ ವಿದ್ವಾಂಸರುಂಟು. ಅವರಲ್ಲಿ ಜೇಮ್ಸ್ ಪ್ರಿನ್ಸೆಪ್ ಎಂಬಾತ ಬ್ರಾಹ್ಮೀ ಲಿಪಿಯ ಬಗ್ಗೆ 19ನೆಯ ಶತಮಾನದ ಆದಿ ಭಾಗದಲ್ಲಿಯೇ ಅಧ್ಯಯನ ನಡೆಸಿ, ಇದು ಗ್ರೀಕ್ ಲಿಪಿಯಿಂದ ಬೆಳೆದದ್ದು ಎಂಬ ತೀರ್ಮಾನಕ್ಕೆ ಬಂದ. ಹೆಲೆವಿ ಎಂಬಾತ ಇದು ಖರೋಷ್ಠಿ ಅರಮೇಯಿಕ್ ಮತ್ತು ಗ್ರೀಕ್ ಲಿಪಿಗಳ ಮಿಶ್ರಣವೆಂದೂ ಇದರ ಉಗಮ ಕ್ರಿ. ಪೂ. ನಾಲ್ಕನೆಯ ಶತಮಾನದಲ್ಲಿ ಆಯಿತು ಎಂದೂ ಹೇಳಿದ್ದಾನೆ. ಟೆರೆನ್ ಡೆ ಲಾ ಕೊಪಿರೆ ಎಂಬಾತ ಇದು ಚೀನಾದ ಚಿತ್ರಲಿಪಿಯಿಂದ (ಪಿಕ್ಟೋಗ್ರಾಫ್) ಬೆಳೆದದ್ದು ಎಂದು ವಾದಿಸುತ್ತಾನೆ. ಬ್ರಾಹ್ಮೀಲಿಪಿ ದಕ್ಷಿಣ ಸಿಮಿಟಕ್ ಲಿಪಿಯಿಂದ ಬಂದುದು ಎಂದು ನಿರ್ಣಯಿಸಿರುವ ವಿದ್ವಾಂಸರಲ್ಲಿ ಡೀಕೆ ಮತ್ತು ಕ್ಯಾನನ್ ಐಸಾಕ್ ಟೈಲರ್ ಎಂಬುವರು ಮುಖ್ಯರು. ಬ್ಯೂಲರ್, ವೆಬರ್, ಬೆನ್ಛೇ, ಜೆನ್ಸನ್ ಮುಂತಾದವರು ಬ್ರಾಹ್ಮೀಲಿಪಿಗೂ ಫಿನೀಷಿಯನ್ ಲಿಪಿಗೂ ಬಲುಮಟ್ಟಿಗೆ ಹೋಲಿಕೆ ಇರುವುದರಿಂದ ಫಿನೀಷಿಯನ್ ಲಿಪಿಯೇ ಇದರ ಉಗಮಕ್ಕ

ಸ್ವಾತಂತ್ರ್ಯ ಚಳವಳಿ ಮತ್ತು ಕನ್ನಡದ ಪತ್ರಿಕೆಗಳು

ಸ್ವಾತಂತ್ರ್ಯ ಚಳವಳಿ ಮತ್ತು ಕನ್ನಡದ ಪತ್ರಿಕೆಗಳು ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಹೋರಾಟಗಾರರ ಬಗ್ಗೆ ಮಾತನಾಡುವಾಗಲೆಲ್ಲ ನಮ್ಮ ಗಮನಕ್ಕೆ ಬರುವ ಮುಖ್ಯವಾದ ವಿಷಯವೆಂದರೆ, ನಮ್ಮ ಚಳವಳಿಗಾರರ ಪೈಕಿ ಎಷ್ಟೋ ಮಂದಿ ಪತ್ರಕರ್ತರಿದ್ದರೆನ್ನುವುದು. ಸ್ವಾತಂತ್ರ್ಯವೀರರು ಪತ್ರಿಕೆಗಳನ್ನು ತಮ್ಮ ಹೋರಾಟದ ಒಂದು ಪ್ರಮುಖ ಅಸ್ತ್ರವನ್ನಾಗಿಸಿಕೊಂಡಿದ್ದರು ಎಂದರೂ ಸಲ್ಲುತ್ತದೆ. ಹೀಗೆ ಪತ್ರಿಕಾವೃತ್ತಿ ನಮ್ಮ ರಾಷ್ಟ್ರೀಯ ಚಳವಳಿಯ ಒಂದು ಅವಿಭಾಜ್ಯ ಅಂಗವಾಗಿತ್ತು. ರಾಷ್ಟ್ರೀಯ ಪ್ರಜ್ಞೆ ಹಾಗೂ ಸ್ವದೇಶಾಭಿಮಾನವನ್ನು ಮೂಡಿಸುವ ಮತ್ತು ಚಾಲನೆಯಲ್ಲಿಡುವ ಕೆಲಸವನ್ನು ಪತ್ರಿಕೆಗಳು ನಿರಂತರವಾಗಿ ಮಾಡಿದವು. ಭಾರತೀಯ ಮನಸ್ಸುಗಳ ಸ್ವರಾಜ್ಯದ ಕಲ್ಪನೆ ಒಂದು ಬೃಹತ್ ರಾಷ್ಟ್ರೀಯ ಆಂದೋಲನವಾಗಿ ಬೆಳೆಯುವುದರ ಹಿಂದೆ ಪತ್ರಿಕೆಗಳ ಪಾತ್ರ ತುಂಬ ದೊಡ್ಡದು. ಸಂಸ್ಥಾನಗಳಾಗಿ ಹರಿದುಹಂಚಿಹೋಗಿದ್ದ ಭಾರತ ಒಂದು ರಾಷ್ಟçವಾಗಿ ಒಗ್ಗೂಡಿ, ಸ್ವಾತಂತ್ರ್ಯವೆಂಬ ಕನಸು ಅರಳಿಕೊಳ್ಳುವ ಪ್ರಕ್ರಿಯೆಯಲ್ಲಿ ಪತ್ರಿಕಾಮಾಧ್ಯಮ ನೀಡಿದ ಕೊಡುಗೆ ಅಸದೃಶ. ನಮ್ಮ ನೆಲದಲ್ಲಿ ನಾವೇ ಪರಕೀಯರಾಗಿದ್ದೇವೆ, ಈ ಬಂಧನದಿಂದ ಹೇಗಾದರೂ ಹೊರಬರಬೇಕು, ಅದಕ್ಕಾಗಿ ಸಂಘಟಿತಹೋರಾಟ ಅನಿವಾರ್ಯ ಎಂಬ ಪ್ರಜ್ಞೆ ಪ್ರತಿಯೊಬ್ಬ ಭಾರತೀಯನಲ್ಲೂ ಮೂಡಿದ್ದರ ಹಿಂದೆ ಪತ್ರಿಕೆಗಳು ಬೀರಿದ ಪ್ರಭಾವ ಕಲ್ಪನೆಗೂ ಮೀರಿದ್ದು. ಇಂತಹದೊಂದು ಪ್ರಜ್ಞಾಪ್ರವಾಹದ ಓಟದಲ್ಲಿ ಕನ್ನಡನಾಡು ಮತ್ತು ಅಲ್ಲಿನ ಪತ್ರಿಕೆಗಳು ಒಂದಾಗಿ ಸಾಗಿದ್ದ