ವಿಷಯಕ್ಕೆ ಹೋಗಿ

ಕನ್ನಡ ಸಂಸ್ಕೃತಿಯ ಹಿರಿಮೆ,ಗರಿಮೆ ಡಾ.ಎಂ.ಚಿದಾನಂದಮೂರ್ತಿ

ಕನ್ನಡ ಸಂಸ್ಕೃತಿಯ ಹಿರಿಮೆಗರಿಮೆ
ಡಾ.ಎಂ.ಚಿದಾನಂದಮೂರ್ತಿ

 ಭಾರತದ ಪ್ರಾಂತಗಳಲ್ಲಿ ಒಂದಾಗಿರುವಕರ್ನಾಟಕವು,ಒಂದು ಲಕ್ಷದತೊಂಬತ್ತೆರಡು ಸಾವಿರಚದರಕಿಲೋಮೀಟರ್ ವಿಸ್ತಿÃರ್ಣವನ್ನು ಹೊಂದಿದ್ದು,ಆರುಕೋಟಿಯ ಹತ್ತು ಲಕ್ಷಜನಸಂಖ್ಯೆಯನ್ನು ಪಡೆದಿದೆ. ಬೆಂಗಳೂರು ಗ್ರಾಮಾಂತರಜಿಲ್ಲೆ ಸೇರಿದಂತೆ ಮೂವತ್ತು ಜಿಲ್ಲೆಗಳ ಈ ರಾಜ್ಯವು ಸಮಕಾಲೀನದಲ್ಲಿ ಮತ್ತುಇತಿಹಾಸದಲ್ಲಿ ಭಾರತೀಯ ಸಂಸ್ಕೃತಿಗೆಕೊಟ್ಟಿರುವಕೊಡುಗೆ ಬಹು ದೊಡ್ಡದು. 

ಕರ್ನಾಟಕಕ್ಕೆತನ್ನದೇಆದಒಂದುಚರಿತ್ರೆಇದೆ, ಸಂಸ್ಕೃತಿಇದೆ.ವಾಸ್ತವವಾಗಿ ಇಂತಹ ಹಲವು ಪ್ರಾದೇಶಿಕ ಸಂಸ್ಕೃತಿಗಳ ಮೊತ್ತವೇ ಭಾರತೀಯ ಸಂಸ್ಕೃತಿ ಎನ್ನಿಸಿಕೊಳ್ಳುತ್ತದೆ.ಸಂಸ್ಕೃತಿಎನ್ನುವ ಪದಕ್ಕೆಉತ್ತಮ ನಡವಳಿಕೆ; ನುಡಿಯಲ್ಲಿ ಸೌಜನ್ಯ, ಸಭ್ಯತೆ-ಇವೇ ಮೊದಲಾದ ಅರ್ಥಗಳಿದ್ದರೂ,ಅದಕ್ಕೆಒಂದು ನಾಡಿನಜನತೆಯಒಟ್ಟಾರೆಯಾದಜೀವನ ವಿಧಾನ ಎಂಬ ಒಂದುಗಮನಾರ್ಹಅರ್ಥವೂಉಂಟು.ಈ ಎರಡೂ ಅರ್ಥಗಳಲ್ಲಿ ಕರ್ನಾಟಕವು ಸಂಸ್ಕೃತಿಯಕ್ಷೆÃತ್ರದಲ್ಲಿ ಪಡೆದಿರುವ ಸಿದ್ಧಿ ದೊಡ್ಡದು.

ಸಾಹಿತ್ಯ, ಶಿಲ್ಪ, ವಾಸ್ತುಶಿಲ್ಪ, ಚಿತ್ರಕಲೆ, ಸಂಗೀತ, ಆಡಳಿತ ಇವೇ ಮೊದಲಾದ ಕ್ಷೆÃತ್ರಗಳಲ್ಲಿ ಕರ್ನಾಟಕವುಅಪಾರವಾದ ಸಾಧನೆಯನ್ನು ಮಾಡಿದೆ.ಸತ್ಯ, ಔದರ‍್ಯ, ದೇಶಪ್ರೆÃಮ, ಶರ‍್ಯ, ಕರುಣೆ, ಧರ್ಮ ಸಹಿಷ್ಣುತೆ, ಅಹಿಂಸೆ ಇವೇ ಮೊದಲಾದ ಗುಣಗಳು ಅಥವಾ ‘ಮೌಲ್ಯ’ಗಳು ಕನ್ನಡಿಗರ ಬದುಕನ್ನುತಿದ್ದಿ ರೂಪಿಸಿವೆ. ಭಾರತದ ಸಂಸ್ಕೃತಿ ಸಂಪನ್ನ ಪ್ರಾಂತಗಳಲ್ಲಿ ಕರ್ನಾಟಕಕ್ಕೆಒಂದು ವಿಶಿಷ್ಟ ಸ್ಥಾನವಿದೆ.

ಕರ್ನಾಟಕ : ಹೆಸರು ಮತ್ತು ಪ್ರಾಚೀನತೆ

‘ಕರ್ನಾಟಕ’ಎಂಬದು ಈ ನಾಡಿನ ಹೆಸರನ್ನೂ,ಅದರತದ್ಭವವಾದ ‘ಕನ್ನಡ’ಎಂಬುದು ಈ ನಾಡಿನಜನಆಡುವ ಭಾಷೆಯನ್ನೂ ಸೂಚಿಸುತ್ತದೆಎಂಬುದನ್ನು ಬಹು ಜನಒಪ್ಪಿಕೊಂಡಿದ್ದಾರೆ. ಕೆಲವೊಮ್ಮೆ ‘ಕರ್ನಾಟಕ ಭಾಷೆ’, ‘ಕನ್ನಡ ನಾಡು’ ಎಂದರೂತಪ್ಪಾಗುವುದಿಲ್ಲ. ‘ಕರ್ನಾಟಕ’ ಎಂದರೆ ‘ಎತ್ತರದ ನಾಡು’ ಎಂದು ಕೆಲವರು, ಇನ್ನು ಕೆಲವರು ‘ಕರಿಯ ನಾಡು’ (ಕಪ್ಪು ಮಣ್ಣಿನ ನಾಡು) ಎಂದುಅರ್ಥ ಹೇಳುತ್ತಾರೆ.ಈ ಎರಡನೆಯಅರ್ಥ ಬಹುಜನರಒಪ್ಪಿಗೆಯನ್ನು ಪಡೆದಿದೆ.ಈ ಎರಡನೆಯಅರ್ಥ ಬರಲುಉತ್ತರಮತ್ತು ಮಧ್ಯ ಕರ್ನಾಟಕಗಳಲ್ಲಿ 
ಕರಿಯಎರೆ ಮಣ್ಣಿನ ಫಲವತ್ತಾದ ಭೂಮಿಇರುವುದೇಕಾರಣ.ಒಮ್ಮೆ ನೀರನ್ನು ಹಾಕಿದರೆ ಬಹುಕಾಲ ಹಿಡಿದಿಟ್ಟುಕೊಳ್ಳುವ ಮಣ್ಣುಅದಾಗಿರುವುದರಿಂದಅಲ್ಲಿಯ ಬೆಳೆಗಳಲ್ಲಿ ವೈವಿಧ್ಯವೂಇದೆ.
ಈ ನಾಡಿನ ಹೆಸರುಕ್ರಿಸ್ತಪೂರ್ವದಷ್ಟು ಹಳೆಯದು.ವ್ಯಾಸರ ಸಂಸ್ಕೃತ ಮಹಾಭಾರತದಲ್ಲಿ ‘ಕರ್ಣಾಟಕ’ ಹೆಸರು ಬಂದಿದೆ.ಕ್ರಿಸ್ತಶಕಎರಡನೆಯ ಶತಮಾನದ ‘ಶಿಲಪ್ಪದಿಗಾರಮ್’ ಎಂಬ ತಮಿಳು ಕಾವ್ಯದಲ್ಲಿಕನ್ನಡಿಗರನ್ನು ‘ಕರುನಾಡರ್’ ಎಂದುಕರೆದಿದೆ.ಸಂಸ್ಕೃತ ಕಾವ್ಯಗಳಲ್ಲಿ ಕರ್ನಾಟಕವನ್ನುಒಮ್ಮೊಮ್ಮೆಕುಂತಲವೆಂದೂಕರೆದಿರುವುದುಂಟು.ಕರ್ನಾಟಕದದಕ್ಷಿಣದತುದಿಯನ್ನು ‘ಪುನ್ನಾಡು’, ‘ಮಹಿಷಮಂಡಲ’ (ಇದೇ ಈಗಿನ ಮೈಸೂರು) ಎಂದುಕರೆಯುತ್ತಿದ್ದರು.

ಇತಿಹಾಸಪೂರ್ವಯುಗ

ಕರ್ನಾಟಕದಲ್ಲಿ ಬಹು ಹಿಂದೆಯೇಜನವಸತಿಯುಇದ್ದಿತೆಂಬುದಕ್ಕೆಇಲ್ಲಿ ನಡೆದಿರುವ ಹಲವು ಭೂಶೋಧಗಳು ಸಾಕ್ಷಿ ನೀಡುತ್ತವೆ. ಹಲವು ಸಾವಿರ ವರ್ಷಗಳ ಹಿಂದೆ ಗುಹೆಗಳಲ್ಲಿ ವಾಸವಾಗಿದ್ದು, ಕಲ್ಲುಗಳನ್ನೆàಆಯುಧಗಳನ್ನಾಗಿ ಮಾಡಿಕೊಂಡು,ಬೇಟೆಯನ್ನೆàಮುಖ್ಯ ವೃತ್ತಿಯನ್ನಾಗಿಸಿಕೊಂಡಿದ್ದ ಆದಿಮಾನವರುತುಮಕೂರುಜಿಲ್ಲೆಯ ಕಿಬ್ಬನಹಳ್ಳಿ, ಚಿತ್ರದುರ್ಗಜಿಲ್ಲೆಯ ಬ್ರಹ್ಮಗಿರಿ, ಮೈಸೂರುಜಿಲ್ಲೆಯ ಹೆಮ್ಮಿಗೆ, ಬಳ್ಳಾರಿ ಜಿಲ್ಲೆಯತೆಕ್ಕಲಕೋಟೆ, ಬಿಜಾಪುರಜಿಲ್ಲೆಯಖ್ಯಾಡ,ಗುಲ್ಬರ್ಗಜಿಲ್ಲೆಯ ಹುಣಸಗಿ ಇವೇ ಮೊದಲಾದೆಡೆಗಳಲ್ಲಿ ವಾಸಿಸುತ್ತಿದ್ದರು. ಉತ್ತರಕರ್ನಾಟಕದ ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಮಧ್ಯಕರ್ನಾಟಕದತುಂಗಭದ್ರೆ, ದಕ್ಷಿಣಕರ್ನಾಟಕದಕಾವೇರಿ ಈ ನದಿಗಳ ದಂಡೆಗಳು ಪ್ರಾಚೀನ ಮಾನವನ ಸಂಸ್ಕೃತಿಯ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವನ್ನು ವಹಿಸಿದವು.

ಅಷ್ಟೆàಅಲ್ಲ, ಮುಂದೆಯೂಇತಿಹಾಸಕಾಲದಲ್ಲಿ, ನದಿಯ ದಂಡೆಗಳಲ್ಲಿ ಹಲವಾರು ಸಾಂಸ್ಕೃತಿಕ ಕೇಂದ್ರಗಳು ವರ್ಧಿಸಿದುವು. ಬಾದಾಮಿ, ಐಹೊಳೆ, ಪಟ್ಟದಕಲ್ಲು, ಸನ್ನತಿ, ಬನವಾಸಿ, ಶ್ರಿÃರಂಗಪಟ್ಟಣ, ಹಂಪಿ, ಬೇಲೂರು, ತಲಕಾಡುಇವೆಲ್ಲ ನದೀತೀರದಅಥವಾ ನದಿಗೆ ಬಹು ಸಮೀಪದ ಪಟ್ಟಣಗಳಾಗಿವೆ. (ನದಿಗಳು ಎಲ್ಲ ಸಂಸ್ಕೃತಿಗಳ ಬೆಳವಣಿಗೆಯಲ್ಲೂ ಮಹತ್ತರ ಪಾತ್ರವನ್ನು ವಹಿಸಿವೆ)ಕ್ರಿಸ್ತಪೂರ್ವ ೨೫೦೦ರಲ್ಲಿ ಪ್ರವರ್ಧಮಾನವಾಗಿ ಅಂದಿನ ವಿಶ್ವದಗಮನಾರ್ಹ ಸಂಸ್ಕೃತಿಗಳ ಸಾಲಲ್ಲಿ ಒಂದಾಗಿರುವ ಮೊಹೆಂಜೊದಾರೋದ (ಇದು ಈಗಿನ ಪಾಕಿಸ್ತಾನದಲ್ಲಿದೆ) ಸಿಂಧೂ ಕಣಿವೆಯ ಸಂಸ್ಕೃತಿಯಜೊತೆಕರ್ನಾಟಕವು ವ್ಯಾಪಾರ ಸಂಪರ್ಕವನ್ನು ಪಡೆದಿತ್ತು. ಅಲ್ಲಿದೊರಕಿರುವಚಿನ್ನದ ಒಡವೆಗಳ ಲೋಹವು ಕರ್ನಾಟಕದಕೋಲಾರಚಿನ್ನದಗಣಿ ಪ್ರದೇಶದ್ದು.

ಧಾರವಾಡಜಿಲ್ಲೆಯ ಹಳ್ಳೂರಿನಲ್ಲಿ ಕ್ರಿಸ್ತಪೂರ್ವಒಂಬತ್ತನೆಯ ಶತಮಾನದಕಬ್ಬಿಣವುದೊರಕಿದೆ.ಭಾರತದಲ್ಲಿಕಬ್ಬಿಣದ ಬಳಕೆ ಆರಂಭವಾದುದು ಮೊದಲುಕರ್ನಾಟಕದಲ್ಲಿ.ತಂತ್ರಜ್ಞಾನದ ಬೆಳವಣಿಗೆಯಲ್ಲಿ ಚಿನ್ನಕ್ಕಿಂತಕಬ್ಬಿಣದ ಶೋಧವು ಬಹು ಮುಖ್ಯವಾದುದೆಂಬುದನ್ನು ನೆನಪಿಡಬೇಕು. ಚಿತ್ರದುರ್ಗ, ಹಂಪಿ ಇವೇಮೊದಲಾದ ಜಾಗಗಳಲ್ಲಿ ಆದಿಮಾನವರು ಬರೆದಅತ್ಯಂತ ಸುಂದರವಾದ ಗುಹಾ ಚಿತ್ರಗಳು ಮತ್ತು ಬಂಡೆ ಚಿತ್ರಗಳು ದೊರಕಿವೆ. ರಾಮಾಯಣಕತೆಯಲ್ಲಿ ಬರುವ ವಾಲಿ, ಸುಗ್ರಿÃವ, ಹನುಮಂತರಿದ್ದಕಿಷ್ಕಿಂಧೆಯು ಈಗಿನ ಹಂಪಿಯೇ ಎಂಬ ಐತಿಹ್ಯವಿದೆ.

ಕ್ರಿಸ್ತಪೂರ್ವದಲ್ಲಿಯೇಕರ್ನಾಟಕವುತನ್ನ ಸಂಸ್ಕೃತಿಯಿಂದಾಗಿಖ್ಯಾತಿಯನ್ನು ಪಡೆದಿದ್ದಿತು, ಕ್ರಿಸ್ತಶಕಎರಡನೆಯ ಶತಮಾನದಟಾಲೆಮಿ ಎಂಬ ಗ್ರಿÃಕ್ ಭೂಗೋಳಜ್ಞನು ‘ಬದಿಯಮೈ’ (ಬಾದಾಮಿ), ‘ಮದೌಗೌಲ’ (ಮುದುಗಲ್), ‘ಬನವೊಸೆಯ್’(ಬನವಾಸಿ), ‘ಹಿಪ್ಪೊಕೂರ’(ಹೂವಿನ ಹಿಪ್ಪರಗಿ) ಈ ಜಾಗಗಳನ್ನು ಹೆಸರಿಸಿದ್ದಾನೆ. ಅಲ್ಲದೆಅದೇಟಾಲೆಮಿಯು ‘ಪುನ್ನಾಟ’ದ (ದಕ್ಷಿಣಕರ್ನಾಟಕದತುತ್ತತುದಿ) ಮತ್ತು ‘ಮಲಿಪ್ಪಲ’ದ (ಮಲ್ಪೆ) ವೈಢೂರ್ಯಗಳನ್ನು ಕೊಂಡಾಡಿದ್ದಾನೆ.

ಕನ್ನಡ ಭಾಷೆ, ಸಾಹಿತ್ಯಗಳ ಪ್ರಾಚೀನತೆ

ಕನ್ನಡವು ಭಾರತದ ಪ್ರಾಚೀನ ಭಾಷೆಗಳಲ್ಲಿ ಒಂದು.ಅದರಇತಿಹಾಸವುಕ್ರಿಸ್ತಪೂರ್ವಐದುಆರನೆಯ ಶತಮಾನದಷ್ಟು ಹಿಂದಕ್ಕೆ ಹೋಗುತ್ತದೆ. ಛಾಂದೋಗ್ಯ ಉಪನಿಷತ್ತಿನಲ್ಲಿ ಬರುವ ‘ಮಟಚಿ’ ಪದವು (ಮಿಡತೆ) ಕನ್ನಡ ಪದವೆಂದು ಹೇಳಲು ಸಾಧ್ಯವಿದೆ. ಚಿತ್ರದುರ್ಗ ಜಿಲ್ಲೆಯ ಕ್ರಿಸ್ತ ಪೂರ್ವ ಮೂರನೆಯ ಶತಮಾನದ ಅಶೋಕನ ಬ್ರಹ್ಮಗಿರಿ ಶಾಸದಲ್ಲಿ ‘ಇಸಿಲ’ ಎಂಬ ಅಚ್ಚಗನ್ನಡ ಪದವಿದೆ. ಈಜಿಪ್ಟಿನ ಆಕ್ಸಿರಿಂಖಸ್ ಎಂಬಲ್ಲಿ ದೊರೆತ ಪೆಪೈರಿ ಸುರುಳಿಗಳಲ್ಲಿ ಕ್ರಿಸ್ತಶಕಎರಡನೆಯ ಶತಮಾನದ ಕೆಲವು ಗ್ರಿಕ್ ಪ್ರಹಸನಗಳು ದೊರೆತಿವೆ. ಆ ಪ್ರಹಸನಗಳಲ್ಲಿ ಕೆಲವು ಪಾತ್ರಗಳು ಆಡುವ ಭಾಷೆಕನ್ನಡವೆಂದು ಕೆಲವರು ಹೇಳುತ್ತಾರೆ (ಅದು ತುಳು ಎಂದು ಹೇಳುವವರರೂ ಇದ್ದಾರೆ).

ನಮಗೆ ದೊರಕುವ ಮೊದಲ ಕನ್ನಡದದೊಡ್ಡ ಬರಹವೆಂದರೆ ಸುಮಾರುಕ್ರಿ.ಶ. ೪೫೦ರ ಬೇಲೂರುತಾಲ್ಲೂಕಿನ ಹಲ್ಮಿಡಿ ಶಿಲಾಶಾಸನ. ಇದುಕನ್ನಡಿಗರ ಶರ‍್ಯ, ಸಾಹಸಗಳನ್ನೂ,ದಾನಗುಣವನ್ನೂಚಿತ್ರಿಸುತ್ತದೆ.ಕನ್ನಡ ದೊರೆಗಳಾದ ಕದಂಬರಿಗೂ,ಅವರ ಸ್ಪರ್ಧಿಗಳಾಗಿದ್ದ ಕಂಚಿಯ ಪಲ್ಲವರಿಗೂಯುದ್ಧ ನಡೆದಾಗ,ಕದಂಬರ ಪರವಾಗಿ ವಿಜಅರಸ ಎಂಬ ಶೂರನು ಹೋರಾಡಿಜಯವನ್ನು ಗಳಿಸಿಕೊಡುತ್ತಾನೆ. ಆಗ ಅವನ ಖಡ್ಗವನ್ನುಎಲ್ಲರಎದುರಿಗೆ ತೊಳೆದು, ಸನ್ಮಾನಿಸಿ, ಅವನಿಗೆ ಹಲ್ಮಿಡಿಗ್ರಾಮವನ್ನು ಉಂಬಳಿಯಾಗಿ ಬಿಟ್ಟುಕೊಡುತ್ತಾರೆ (ಇಂತಹ ದಾನಗಳನ್ನು ‘ಬಾಳ್ಗಳ್ಚು’ ಎಂದುಕರೆಯುತ್ತಿದ್ದರು. ಬಾಳ್-ಕತ್ತಿ, ಕಳ್ಚು-ತೊಳೆ).

ಅವನು ತನಗೆ ಉಂಬಳಿಯಾಗಿ ಬಂದ ಹಲ್ಮಿಡಿಗ್ರಾಮದ ಕೆಲವು ಗದ್ದೆಗಳನ್ನು ವಿದ್ವಾಂಸರಾದ ಬ್ರಾಹ್ಮಣರಿಗೆ ಬಿಟ್ಟುಕೊಡುತ್ತಾನೆ. ಸತ್ತ÷್ವಶಾಲಿಯಾದಗದ್ಯದಲ್ಲಿ ಈ ಶಾಸನ ಅಂದಿನ ಸಂಸ್ಕೃತಿಯಒಂದು ಭಾಗವನ್ನುಚಿತ್ರಿಸುತ್ತದೆ, ಈ ಶಾಸನದ ಭಾಷೆಯನ್ನು ಪೂರ್ವದ ಹಳೆÀಗನ್ನಡವೆನ್ನುತ್ತಾರೆ.ಅದೇಮುಂದೆ ಬೆಳೆದು ಎಂಟುಒಂಬತ್ತನೆಯ ಶತಮಾನದಲ್ಲಿ  ಹಳೆÀಗನ್ನಡವೆನ್ನಿಸಿಕೊಂಡಿತು, ಹಳೆಗನ್ನಡವು ಹನ್ನೊಂದನೆಯ ಶತಮಾನದಲ್ಲಿ ನಡುಗನ್ನಡವಾಯಿತು, ನಡುಗನ್ನಡವೇ ಮುಂದೆಆಧುನಿಕಕಾಲದಲ್ಲಿ ಹೊಸಗನ್ನಡಅಥವಾ ಈಗಿನ ಕನ್ನಡವಾಯಿತು. ಕನ್ನಡವು ಭಾರತದಅತ್ಯಂತ ಮಧುರವೂ, ಸಮರ್ಥವೂಆದ ಭಾಷೆಗಳಲ್ಲೊಂದು.

ಕನ್ನಡದಲ್ಲಿಕ್ರಿಸ್ತಪೂರ್ವದಿಂದಲೂ ಬಹು ಸುಂದರವಾದಜಾನಪದ ಸಾಹಿತ್ಯವಿದ್ದಿತು.ಕುಟ್ಟುವಾಗ, ಬೀಸುವಾಗ, ಕಳೆ ಕೀಳುವಾಗ, ತೊಟ್ಟಿಲುತೂಗುವಾಗ, ಕೋಲು ಹಿಡಿದುಕುಣಿಯುವಾಗ, ಹಬ್ಬಗಳಲ್ಲಿ ಕನ್ನಡಿಗರು ಹಾಡುಗಳನ್ನು ಹೇಳಿಕೊಂಡು ಸುಖಿಸುತ್ತಿದ್ದರು.ಮನಸ್ಸನ್ನುತುಂಬಿ, ದುಃಖವನ್ನು ಮರೆಸುತ್ತ, ಉನ್ನತ ಆದರ್ಶಗಳನ್ನುಅರಿವಿಗೆತಂದುಕೊಡುತ್ತಿದ್ದ ಆ ಕಾಲದ ಹಳ್ಳಿಯ ಹಾಡುಗಳು ಜನತೆಯ ನಾಲಗೆಯ ಮೇಲೆ ನಲಿದವು.ಅವನ್ನುಯಾರೂ ಬರೆದಿಡಲಿಲ್ಲವಾದ್ದರಿಂದ ಅವು ನಮಗೆ ಇಂದುದೊರಕುತ್ತಿಲ್ಲ. ಆದರೆತ್ರಿಪದಿಯ ಛಂದಸ್ಸಿನಲ್ಲಿ ರಚಿತವಾದಜಾನಪದ ಹಾಡುಗಳ ಏಳನೆಯ ಶತಮಾನಕ್ಕೆ ಸೇರಿದಒಂದು ಶಾಸನವು ಬಾದಾಮಿ ಪಕ್ಕದತಟ್ಟುಕೋಟೆ ಎಂಬ ಗ್ರಾಮದಲ್ಲಿದೊರಕಿದೆ.ಕಪ್ಪೆಅರಭಟ್ಟ ಎಂಬ ಒಬ್ಬವೀರನ ವರ್ಣನೆಅದು:

ಸಾಧುಗೆ ಸಾಧುಗೆ ಮಾಧರ‍್ಯಂಗೆ ಮಾಧರ‍್ಯನ್
ಬಾಧಿಪ್ಪ ಕಲಿಗೆ ಕಲಿಯುಗವಿಪರೀತನ್
ಮಾಧವನೀತನ್ ಪೆರನಲ್ಲ ||
ಒಳ್ಳಿತ್ತ ಕೆಯ್ವೊರಾರ್ ಪೊಲ್ಲದುಮದರಂತೆ
ಬಲ್ಲಿತ್ತು ಕಲಿಗೆ ವಿಪರೀತಾ ಪುರಾಕೃತ-
ಮಿಲ್ಲಿ ಸಂಧಿಕ್ಕುಮದು ಬಂದು ||
ಕಟ್ಟಿದ ಸಿಂಘಮನ್ ಕೆಟ್ಟೊÃದೇನೆಮಗೆಂದು
ಬಿಟ್ಟವೋಲ್ ಕಲಿಗೆ ವಿಪರೀತಂಗಹಿತರ್ಕ್ಕಳ್
ಕೆಟ್ಟರ್ ಮೇಣ್ ಸತ್ತರವಿಚಾರಂ ||

ಆ ವೀರ ಒಳ್ಳೆಯವರಿಗೆ ಒಳ್ಳೆಯವನು; ಕೆಟ್ಟವರಿಗೆತೀರಾಕೆಟ್ಟವನು. ಅವನನ್ನುಕೆಣಕುವುದೂಒಂದೇ, ಕಟ್ಟಿದ ಸಿಂಹವನ್ನು ಬಿಚ್ಚಿಎದುರಿಸುವುದೂಒಂದೇ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ

ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ ಭೂಗೋಳವು ಇತಿಹಾಸದೊಡನೆ ನಿಕಟ ಸಂಬಂಧ ಹೊಂದಿದೆ. ಯಾವುದೇ ಪ್ರದೇಶದ ಮಾನವನ ಜೀವನಕ್ರಮ ಮತ್ತು ಇತಿಹಾಸ ಅಲ್ಲಿನ ಭೌಗೋಳಿಕ ಲಕ್ಷಣಗಳನ್ನು ಅವಲಂಬಿಸಿರುತ್ತದೆ. ಪ್ರಕೃತಿ ಲಕ್ಷಣಗಳಲ್ಲಿ ಬದಲಾವಣೆಯಾಗುತ್ತಲೇ ಇರುತ್ತದೆ. ಅದಕ್ಕೆ ತಕ್ಕಂತೆ ಮಾನವನ ಇತಿಹಾಸದ ಬೆಳವಣಿಗೆಯೂ ಮಾರ್ಪಡುತ್ತದೆ. ಏಕೆಂದರೆ ಪ್ರಕೃತಿಯ ಮೇಲ್ಬಾಗದ ಅವಯವಗಳಾದ ಗಾಳಿ, ನದಿ, ಪರ್ವತ, ಸಮುದ್ರ, ಭೂಗುಣ, ಖನಿಜ ಸಂಪತ್ತು ಇತ್ಯಾದಿಗಳ ಕೈವಾಡ ಆಯಾ ದೇಶದ ಇತಿಹಾಸವನ್ನು ನಿರ್ಧರಿಸುತ್ತದೆ. ಆದ್ದರಿಂದ ಒಂದು ದೇಶದ ಅಥವಾ ಜನಾಂಗದ ಇತಿಹಾಸ ಅರಿಯಲು ಭೂಗೋಳದ ತಿಳಿವಳಿಕೆ ಅತ್ಯವಶ್ಯ. ವಿದೇಶಿ ಪ್ರವಾಸಿಗರ ವರದಿಗಳು ಭೌಗೋಳಿಕ ಪರಿಜ್ಞಾನವಿಲ್ಲದ ಇತಿಹಾಸದ ಅಧ್ಯಯನ ಕೂಡ ವ್ಯರ್ಥ, ಉದಾಹರಣೆಗೆ ಅಶೋಕನ ಸಾಮ್ರಾಜ್ಯ ತುಂಬ ವಿಶಾಲವಾಗಿತ್ತು: ಅತಿ ದೊಡ್ಡದು ಎನ್ನುವಾಗ ಭೌಗೋಳಿಕ ಮೇರೆಗಳ ಚಿತ್ರ ಅತ್ಯವಶ್ಯ. ಅವನ ರಾಜ್ಯ ಪಶ್ಚಿಮದಲ್ಲಿ ಆಫ್ಘಾನಿಸ್ತಾನ, ಉತ್ತರದಲ್ಲಿ ನೇಪಾಳ, ಪೂರ್ವದಲ್ಲಿ ಕಾಮರೂಪ ಹಾಗೂ ದಕ್ಷಿಣದಲ್ಲಿ ನಲ್ಲೂರಿನವರೆಗೂ ವಿಸ್ತರಿಸಿದ್ದಿತು ಎಂದು ವಿವರಿಸಲು ಹಾಗೂ ಸುಲಭ ಗ್ರಹಿಕೆಗೂ ಭೌಗೋಳಿಕ ಅರಿವು ಅವಶ್ಯ. ಹಾಗೆಯೇ ಕಾಲಗಣನೆ (Chronology) ಕೂಡ. ಅದು ಯಾವ ಕಾಲದಲ್ಲಿ ಈ ಘಟನ ಸಂಭವಿಸಿತು: ಅಶೋಕ ಅಥವಾ ಮಹಾತ್ಮಾ ಗಾಂಧಿ ಜೀವಿಸಿದ್ದರು ಎಂಬುದನ್ನು ತಿಳಿಸುತ್ತದೆ, ರಿಚರ್ಡ್ ಹಕ್ಕೂಯತ್ ಹೇಳುವಂತೆ: ಭೂಗೋಳ...

ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture)

1.1 ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture) ಭಾರತದ ಸಾಂಸ್ಕೃತಿಕ ಪರಂಪರೆಯು ವಿಶಾಲವಾದ ವ್ಯಾಪ್ತಿಯನ್ನು ಹೊಂದಿದೆ. ಮಾನವನ ಉಗಮದೊಂದಿಗೆ ಉಗಮವಾಗಿ ಬೆಳೆದು ಸಾಗಿ ಬಂದ ಪರಂಪರೆಯು ಅವನ ಜೀವನ ಮೌಲ್ಯಗಳು, ವಸತಿ ರಕ್ಷಣೆ, ಆಹಾರ, ವಿಹಾರ, ಉಡುಗೆ-ತೊಡುಗೆ, ಮನರಂಜನೆ, ವ್ಯಾಪಾರ, ವಾಣಿಜ್ಯ, ಸಂಗೀತ, ಕಲೆ, ವಾಸ್ತುಶಿಲ್ಪ, ಚಿತ್ರಕಲೆ, ಶಿಕ್ಷಣ, ಧರ್ಮಗಳು, ರೂಢಿ-ಸಂಪ್ರದಾಯಗಳು, ಭಾಷೆ, ನಟನೆ, ನಂಬಿಕೆ, ನೃತ್ಯ, ಆಚರಣೆ, ಹವ್ಯಾಸ, ಸಾಹಿತ್ಯ, ವಿಧಿ-ವಿಧಾನಗಳನ್ನು ಒಳಗೊಂಡಿದೆ. ಈ ಅಂಶಗಳಲ್ಲಿ ಕೆಲವು ಕಾಲಕ್ಕೆ ತಕ್ಕಂತೆ ಮತ್ತು ಪ್ರಾದೇಶಿಕವಾಗಿ ಭಿನ್ನತೆ ಹಾಗೂ ಬದಲಾವಣೆಗೊಂಡಿದ್ದರೂ ನಿರಂತರವಾಗಿ ಸಾಗಿ ಬಂದಿವೆ. ಅವುಗಳ ಗುಣ ಲಕ್ಷಣಗಳು ಈ ಕೆಳಗಿನಂತಿವೆ: 1. ಸಾಂಪ್ರದಾಯಕ ಜೀವನ ವಿಧಾನ: ಭಾರತೀಯರ ಜೀವನ ವಿಧಾನ ಪಾರಂಪರಗತವಾಗಿ ಪೂರ್ವಜರಿಂದ ಸಾಗಿ ಬಂದಿದೆ. ಪಾರಂಪರಗತವಾಗಿ ಭಾರತೀಯರದು ಕೃಷಿ ಪ್ರಧಾನವಾದ ಜೀವನ ವಿಧಾನವಾಗಿದ್ದು, ಭೂಮಿಯನ್ನು 'ಭೂದೇವಿ' ಎಂದು ಆರಾಧಿಸುತ್ತಾರೆ. ಭೂಮಿಯನ್ನು ಹಸನಗೊಳಿಸಿ, ಹದ ಮಾಡಿ, ಉತ್ತಿ-ಬಿತ್ತುವ ಪೂರ್ವದಲ್ಲಿ ಭೂದೇವಿಗೆ ಪೂಜೆ ಸಲ್ಲಿಸುವ ಮೂಲಕ ಕೃಷಿ ಕಾಯಕವನ್ನು ಪ್ರಾರಂಭಿಸುತ್ತಾರೆ. ಕಾಲಕಾಲಕ್ಕೆ ಮಳೆಯಾಗಿ, ಸಮೃದ್ಧವಾದ ಬೆಳೆಯನ್ನು ಕೊಡುವ ಮೂಲಕ ನಿನ್ನ ಮಕ್ಕಳನ್ನು ಸಲಹು ತಾಯಿ ಎಂದು ಬೇಡಿಕೊಳ್ಳುತ್ತಾರೆ. ಕೃಷಿ ಸಲಕರಣಗಳಲ್ಲಿ, ಬಿತ್ತುವ ಬೀಜಗಳಲ್...

DSC-2 ಭಾರತದ ಸಾಂಸ್ಕೃತಿಕ ಪರಂಪರೆ::ಪೌರಾಣಿಕ ಐತಿಹ್ಯಗಳು: ಮಹಾಭಾರತ ಮತ್ತು ರಾಮಾಯಣ, ಪಂಚತಂತ್ರ

ಐತಿಹ್ಯ ಗಳು: ಇಂಗ್ಲೀಷಿನ Legend ಎಂಬ ಪದಕ್ಕೆ ಸಮನಾಗಿ ಇಂದು ನಾವು ‘ಐತಿಹ್ಯ’ ಎಂಬುದನ್ನು ಪ್ರಯೋಗಿಸುತ್ತಿದ್ದೇವೆ. ಜಾನಪದ ಶಾಸ್ತ್ರವಾಗಿ ಬೆಳೆಯುವುದಕ್ಕಿಂತ ಹಿಂದಿನಿಂದಲೇ ‘ಐತಿಹ್ಯ’ ಎಂಬ ಶಬ್ದಪ್ರಯೋಗ ನಮ್ಮಲ್ಲಿ ತಕ್ಕಷ್ಟು ರೂಢವಾಗಿದೆ. ಸಾಮಾನ್ಯರು ಇತಿಹಾಸವೆಂದು ನಂಬಿಕೊಂಡು ಬಂದ ಘಟನೆ ಅಥವಾ ಕಥನವೆಂಬ ಅರ್ಥದಲ್ಲಿ ಅದು ಪ್ರಯೋಗಗೊಳ್ಳುತ್ತಿದ್ದುದನ್ನು ನಾವು ಆಗೀಗ ಕಾಣುತ್ತೇವೆ. ಜಾನಪದ ಶಾಸ್ತ್ರವಾಗಿ ಬೆಳೆಯುತ್ತ ಬಂದದ್ದರಿಂದ ಅದೊಂದು ನಿಶ್ಚಿತ ಪರಿಕಲ್ಪನೆಯಾಯಿತೆಂದು ಹೇಳಬೇಕಾಗುತ್ತದೆ. ಐತಿಹ್ಯದ ಮೂಲವಾದ `Legend’ ಎಂಬ ಪದ ಮಧ್ಯಕಾಲೀನ ಲ್ಯಾಟಿನ್ನಿನ ಲೆಜಂಡಾ (Legenda) ಎಂಬ ರೂಪದಿಂದ ನಿಷ್ಪನ್ನವಾದುದು. ಇದರರ್ಥ ಪಠಿಸಬಹುದಾದದ್ದು, ಎಂದು”.ಇದಕ್ಕೆ ಯುರೋಪಿನಲ್ಲಿ ಸಾಧುಸಂತರ ಕಥೆಗಳು ಎಂಬಂಥ ಅರ್ಥಗಳು ಮೊದಲಲ್ಲಿ ಪ್ರಚಲಿತವಿದ್ದುದಾಗಿ ತಿಳಿದು ಬರುತ್ತದೆ.“ಲೆಜೆಂಡಾ” ಅಥವಾ “ಐತಿಹ್ಯ” ವೆಂಬುದು ಈ ಅರ್ಥಗಳಿಂದ ಸಾಕಷ್ಟು ದೂರ ಸರಿದಿದೆಯೆಂದು ಬೇರೆ ಹೇಳಬೇಕಾಗಿಲ್ಲ. ಐತಿಹ್ಯವೆಂದರೆ ಈಗ ವ್ಯಕ್ತಿ, ಸ್ಥಳ ಅಥವಾ ಘಟನೆಯೊಂದರ ಸುತ್ತ ಸಾಂಪ್ರದಾಯಿಕವಾಗಿ ಮತ್ತು ಯಾವುಯಾವುವೋ ಮೂಲ ಸಂಗತಿಗಳ ಮೇಲೆ ಆಧರಿತವಾಗಿ ಬಂದ ಕಥನ ಎಂದು ಸಾಮಾನ್ಯವಾದ ಅರ್ಥ ಪಡೆದುಕೊಂಡಿದೆ. “ಐತಿಹ್ಯ” ಕೆಲವು ವೇಳೆ ಸತ್ಯ ಘಟನೆಯೊಂದರಿಂದಲೇ ಹುಟ್ಟಿಕೊಂಡಿರಬಹುದು; ಎಂದರೆ, ಅದು ನಿಜವಾದ ಚರಿತ್ರೆಯನ್ನೊಳಗೊಂಡಿರಬಹುದು. ಆದರೆ ಯಾವತ್ತೂ ಅದರಲ್ಲಿ ಚರಿತ್ರೆಯೇ ಇರುತ...