ಇದೊಂದು ಚಮತ್ಕಾರಯುತ ಕಲೆ. ಸುಮಾರು ೫-೬ ಅಡಿ ಉದ್ದದ ಒನಕೆಯ ಒಂದು ತುದಿಗೆ, ಸೈಕಲ್ಲು ಚಕ್ರವನ್ನು ಅಡ್ಡಲಾಗಿ ಕಟ್ಟಿ ಅದರ ಸುತ್ತ ಹೂವಿನ ಹಾರಗಳಿಂದ ಅಲಂಕಾರ ಮಾಡಿರುತ್ತಾರೆ. ಒನಕೆಯ ಮತ್ತೊಂದು ತುದಿಯನ್ನು ಶಿರದ ಮಧ್ಯದಲ್ಲಿ ನಿಲ್ಲಿಸಿಕೊಂಡು ವಾದ್ಯದ ಗತ್ತಿಗನುಗುಣವಾಗಿ ಗೆಜ್ಜೆಯ ಕಾಲಿನ ತಾಳದೊಂದಿಗೆ ಲಯಬದ್ಧವಾಗಿ ಕುಣಿಯುವ ಈ ಕಲೆಯಲ್ಲಿ ಬಹು ಮುಖ್ಯವಾದ ಅಂಶವೆಂದರೆ ಒನಕೆಯ ವಾಸರವನ್ನು ತಿದ್ದಿಕೊಳ್ಳುವುದು. ಕುಣಿಯುವ ವ್ಯಕ್ತಿ ಕೆಂಪುಬಟ್ಟೆಯ ವೀರಗಾಸೆ, ಸೊಂಟಕ್ಕೆ ನಡುಪಟ್ಟಿ, ಕೊರಳಿಗೆ ಹಾರ, ಹಣೆಗೆ ಗಂಧ, ಕುಂಕುಮ, ಕಾಲಿಗೆ ಗೆಜ್ಜೆ ಧರಿಸಿರುತ್ತಾನೆ. ಕುಣಿತ ಪರಾಕಾಷ್ಠೆಗೆ ಮುಟ್ಟಿದಾಗ ಎರಡೂ ಕೈಗಳನ್ನು ಬಿಟ್ಟು ಮೈ ಮರೆತವರಂತೆ ಕುಣಿಯುವಾಗಲೂ ಒನಕೆಯ ವಾಸರದ ಕಡೆ ಗಮನವಿಟ್ಟಿರುವ ಕಲಾವಿದನ ಚಮತ್ಕಾರವನ್ನು ಯಾರಾದರೂ ಮೆಚ್ಚಬೇಕು.
ಚೊಂಬಿನ ಕರಗ:
ಹೂವು, ಕುಂಕುಮಗಳಿಂದ ಸಂಪೂರ್ಣವಾಗಿ ಅಲಂಕೃತವಾದ ದುಂಡನೆಯ ಚೊಂಬನ್ನು ಸಿಂಬೆಯಿಲ್ಲದೆ ತಲೆಯ ಮೇಲಿಟ್ಟುಕೊಂಡು ವಿವಿಧ ಗತಿ-ಗತ್ತುಗಳಲ್ಲಿ ವಾದ್ಯದ ಲಯಕ್ಕೆ ತಕ್ಕಂತೆ ಬಾಗಿ-ತೂಗಿ, ಬಳುಕಿ ಮಂಡಿಯೂರಿ ಕುಣಿಯುವ ನೈಪುಣ್ಯ ನೋಡುವವರನ್ನು ಬೆರಗುಗೊಳಿಸದಿರದು. ಕುಣಿಯವವರು ಹಾಕುವ ಮುಖದ ಬ;ಣ್ಣ, ಬಣ್ಣ ಬಣ್ಣದ ಬಟ್ಟೆಯುಡಿಗೆ ಕುಣಿತಕ್ಕೆ ಮತ್ತಷ್ಟು ಆಕರ್ಷಣೆಯಾಗುತ್ತದೆ. ಚೊಂಬಿನ ಕರಗಕ್ಕೆ ಸಾಮಾನ್ಯವಾಗಿ ಸ್ತ್ರೀ ಕಲಾವಿದರೇ ಇರುತ್ತಾರೆ.
ಚಿತ್ತಗೋಪುರ ಕರಗ:
ಗೋಪುರಾಕಾರವಾಗಿ ಹೆಣೆದ ಬುಟ್ಟಿಗೆ ಹೂವಿನಿಂದ ಅಲಂಕಾರವನ್ನು ಮಾಡಿ ತಲೆಯ ಮೇಲಿಟ್ಟುಕೊಂಡು ವಿವಿಧ ಭಾವ-ಭಂಗಿಗಳಲ್ಲಿ ಕುಣಿಯುವುದು. ಕರಗದ ಯಾವುದೇ ಪ್ರಕಾರವಿರಲಿ ಅಲ್ಲಿ ಅಲಂಕಾರ ಮತ್ತು ಕುಣಿಯುವಾಗ ತೋರುವ ವೈವಿಧ್ಯಪೂರ್ಣ ಚಲನವಲನಗಳು ಕಲಾವಿದರ ನೈಪುಣ್ಯತೆಗೆ ನಿದರ್ಶನವಾಗಿರುತ್ತವೆ. ಕರ್ನಾಟಕದಲ್ಲಿ ಈ ಕಲೆ ಬೆಂಗಳೂರು, ಕೋಲಾರ ಮತ್ತು ತುಮಕೂರು ಜಿಲ್ಲೆಗಳ ಕೆಲವು ಕಡೆ ಪ್ರಚಲಿತವಿದೆ. ಆದರೆ ಮೂಲ ಸೊಗಸನ್ನು ಕಾಪಾಡಿಕೊಂಡು ಧಾರ್ಮಿಕ ಸಂಬಂಧವನ್ನುಳಿಸಿಕೊಂಡು ಬಂದಿರುವ ಕರಗವೆಂದರೆ ಬೆಂಗಳೂರು ಕರಗ.
ಪಟದ ಕುಣಿತ:
ವೈಷ್ಣವ ಸಂಪ್ರದಾಯದ ಕುಣಿತಗಳಲ್ಲಿ ಒಂದೆಂದು ಹೇಳಲಾಗುವ `ಪಟದ ಕುಣಿತ’ ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಕಂಡುಬರುತ್ತದೆ. ಕುಣಿತದ ರೀತಿ ಸುಗ್ಗಿಯ ಕುಣಿತದಂತಿದ್ದರೂ ಕಲಾವಿದರು ಕೈಯಲ್ಲಿ ಹಿಡಿಯುವ `ಪಟ’ಗಳಿಂದಾಗಿ ಈ ಕಲೆ ವಿಶಿಷ್ಟವೆನಿಸಿದೆ. ಸುಮಾರು ಹತ್ತು ಹದಿನೈದು ಅಡಿ ಉದ್ದದ ಬಿದಿರಿನ ಜವಳೆ (ಕೋಲು)ಗಳಿಗೆ ಬಣ್ಣ ಬಣ್ಣದ ರೇಷ್ಮೆ ಜಾಲರಿ ಬಟ್ಟೆಯ ಪಟ್ಟಿಗಳನ್ನು ಸುತ್ತಿ ಅಲಂಕಾರ ಮಾಡುವುದೇ `ಪಟ’. ಇದರ ತುದಿಯಲ್ಲಿ ಹಿತ್ತಾಳೆ ಅಥವಾ ಬೆಳ್ಳಿಯ ಛತ್ರಿ ಅಳವಡಿಸಿರುವುದು ಪಟಕ್ಕೆ ಒಂದು ಕಳೆ ಕೊಡುತ್ತದೆ. ಸಾಮಾನ್ಯವಾಗಿ ಒಕ್ಕಲಿಗರಲ್ಲಿ ಪ್ರಚಲಿತವಿರುವ ಪಟದ ಕುಣಿತ ನಡೆಯುವುದು ಹಬ್ಬ ಹರಿದಿನಗಳಲ್ಲಿ, ಜಾತ್ರೆ ಉತ್ಸವಗಳಲ್ಲಿ. ತಮಟೆ, ನಗಾರಿಗಳ ಬಡಿತ ಪಟದ ಕುಣಿತಕ್ಕೆ ಹಿನ್ನಲೆ ವಾದ್ಯ. ಬಿಳಿಯ ಕಾಸೆಪಂಚೆ, ಬಿಳಿಯ ನಿಲುವಂಗಿ, ಬಿಳಿಯ ರುಮಾಲು, ಸೊಂಟಕ್ಕೆ ಬಿಗಿದ ಬಣ್ಣದ ವಸ್ತ್ರ, ಕೊರಳಿಗೆ ಮಣಿಸರ, ಒಂದು ಕೈಯಲ್ಲಿ ಬಿಳಿಯ ಚೌಕ, ಕಾಲಿಗೆ ಗೆಜ್ಜೆ – ಇವು ಕಲಾವಿದರ ವೇಷಭೂಷಣ.
ಹಸೀಕರಗ
ಚೈತ್ರ ಶುದ್ಧ ತ್ರಯೋದಶೀಯದ ದಿವಸ ಧರ್ಮರಾಯಸ್ವಾಮಿ ದೇವಾಲಯದ ಪೂರ್ವಕ್ಕೆ ಸ್ವಲ್ಪ ದೂರದಲ್ಲಿರುವ ಸಂಪಂಗಿ ಕೆರೆಯ ಅಂಗಳದಲ್ಲಿ ನಡುರಾತ್ರಿಯ ಹೊತ್ತಿಗೆ ಪೂಜಾರಿ, ಕುಲಪುರೋಹಿತರು, ವೀರಕುಮಾರರು ಮತ್ತು ಕುಲಸ್ಥರು ಸೇರುವರು. ಅಲ್ಲಿ ಒಂದೆಡೆ ಸ್ಥಳ ಶುದ್ಧಿಮಾಡಿ ಕೆಂಪು ಬಣ್ಣದ ಛತ್ರಿಯನ್ನು ನೆಡುವರು. ಹಿಂದಿನ ಏಳು ದಿನಗಳಿಂದ ವ್ರತ ನಿರತರಾಗಿದ್ದ ವೀರಕುಮಾರರು ಹೊಳೆಯುವ ಹರಿತವಾದ ಶಕ್ತಿಗಳನ್ನು ಅರ್ಧ ಚಂದ್ರಾಕಾರವಾಗಿ ಜೋಡಿಸುವರು. ಇವರು ಕರಗ ದೇವತೆಯ ಹೆಸರಿನಲ್ಲಿ ತಮ್ಮ ಕುಲ ಪುರೋಹಿತರು ಮತ್ತು ಹಿರಿಯರ ಸಮ್ಮುಖದಲ್ಲಿ ದೀಕ್ಷೆ ಕೈಗೊಂಡವರು, ದೇವಿಯ ಆರಾಧನೆಯಲ್ಲಿ ಅಚಲವಾದ ಶ್ರದ್ಧೆ ಭಕ್ತಿಯನ್ನು ಇಟ್ಟಿರುವ ಇವರು ಕರಗಕ್ಕೆ ಅಂಗ ರಕ್ಷಕರು. ಭಕ್ತಿ ದ್ಯೋತಕವಾಗಿ ಕೈಯಲ್ಲಿರುವ ಅಲರುಗಳಿಂದ ಎದೆಯ ಮೇಲೆ ಇವರು ಪ್ರಹಾರ ಮಾಡಿಕೊಳ್ಳುತ್ತಾರೆ. ಆಗ ರಕ್ತ ಬಂದರೆ ಔಷಧಿಯ ಬದಲಾಗಿ ದೇವಿಯ ಬಂಡಾರವನ್ನು ಗಾಯದ ಮೇಲೆ ಹಾಕಿಕೊಳ್ಳುತ್ತಾರೆ. ಆನಂತರ ಕುಲಪುರೋಹಿತರ ನಿರ್ದೇಶನ ಮತ್ತು ಕುಲವೃದ್ಧರ ನೇತೃತ್ವದಲ್ಲಿ ರಾತ್ರಿ ಸುಮಾರು ಮೂರುಗಂಟೆಯ ಹೊತ್ತಿಗೆ ಹಸೀಕರಗ ಸಿದ್ಧವಾಗಿರುತ್ತದೆ. ಕೆಂಪು ಛತ್ರಿಯ ಕೆಳಗೆ, ಅರ್ಧ ಚಂದ್ರಾಕಾರವಾಗಿ ಜೋಡಿಸಿದ ಕತ್ತಿಗಳ ಮಧ್ಯೆ ಜಲ ತುಂಬಿದ ಕರಗವನ್ನು ಕೆಂಪು ವಸ್ತ್ರ, ದುಂಡು ಮಲ್ಲಿಗೆಹಾರ, ಅರಿಶಿಣ-ಕುಂಕುಮ ಮುಂತಾದ ಮಂಗಳ ದ್ರವ್ಯಗಳಿಂದ ಅಲಂಕರಿಸಿ ಪೂಜೆಗೆ ಅಣಿ ಮಾಡಲಾಗುತ್ತದೆ. ಈ ವೇಳೆಗಾಗಲೇ ಕರಗದ ಪೂಜಾರಿಯನ್ನು ಮಲ್ಲಿಗೆ ಹೂವಿನಿಂದ ಸಿಂಗರಿಸಿರುತ್ತಾರೆ. ಪೂಜಾರಿ ಮಹಾ ಮಂಗಳಾರತಿ ಮಾಡುತ್ತಾನೆ. ದೇವಿಯ ಸೇವೆಗಾಗಿ ನಿಂತಿರುವ ವೀರಕುಮಾರರು ಗೋವಿಂದ ನಾಮ ಸ್ಮರಣೆ ಮಾಡುತ್ತಾ ಆವೇಶ ತುಂಬಿಕೊಂಡು ಎದೆಯ ಮೇಲೆ ಪ್ರಹಾರ ಮಾಡಿಕೊಳ್ಳುತ್ತಾರೆ.
ಸುತ್ತುವರೆದ ವೀರಕುಮಾರರ ನಡುವೆ ಪೂಜಾರಿ ಭಕ್ತಿಯಿಂದ ಕರಗವನ್ನು ಎತ್ತಿಕೊಂಡು, ತನ್ನ ಸೊಂಟದ ಎಡಭಾಗದಲ್ಲಿ ಗಡಿಗೆ ಇಟ್ಟುಕೊಳ್ಳುವಂತೆ ಇಟ್ಟುಕೊಳ್ಳುತ್ತಾನೆ. ಪೂಜಾರಿ ನರ್ತನ ಮಾಡುತ್ತಾ ಮುಂದುವರೆಯುತ್ತಾನೆ. ಘಂಟೆ ಪೂಜಾರಿ ಮಾರ್ಗದರ್ಶನ ಮಾಡುತ್ತಿರುತ್ತಾನೆ. ಈ ಮಹೋತ್ಸವದಲ್ಲಿ ಘಂಟೆ ಪೂಜಾರಿಯ ಪಾತ್ರ ಮುಖ್ಯವಾದದ್ದು. ಕರಗ ಹೊರಟಾಗ ಈತ ತಾಳಬದ್ಧವಾಗಿ ಘಂಟೆಯ ನಾದ ಮಾಡುತ್ತಾ, ದೇವಿಯ ಮಹಿಮೆಯನ್ನು ಹೊಗಳುತ್ತಾ ಕರಗಕ್ಕೆ ಮಾರ್ಗದರ್ಶನ ಮಾಡುತ್ತಾ ಮುಂದುವರೆಯುತ್ತಾನೆ. ಈ ಹಕ್ಕು ಪೂಜಾರಿಯ ಹಕ್ಕಿನಂತೆ ವಂಶಪಾರಂಪರ್ಯವಾಗಿ ಬಂದಿದೆ. ಮಧ್ಯೆ ಕೆಲವೆಡೆ ಪೂಜಾರಿ ಮಂಡಿಯೂರಿ ಕುಳಿತಾಗ ಅಲಗು ಸೇವೆ ನಡೆಯುತ್ತದೆ. ಹೀಗೆ ಮುಂದುವರೆದ ಹಸೀಕರಗ ನಗರಸಭೆ ಕಛೇರಿಯ ಉತ್ತರ ಭಾಗದಲ್ಲಿರುವ ಏಳು ಸುತ್ತಿನ ಕೋಟೆಯ ಸಂಕೇತದಲ್ಲಿರುವ ದೊಡ್ಡ ಹುತ್ತವನ್ನು ಏಳು ಅಥವಾ ಒಂಬತ್ತು ಸಲ ಪ್ರದಕ್ಷಿಣೆ ಮಾಡಿ ದೇವಾಲಯದ ಅಭಿಮುಖವಾಗಿ ಬಂದು ದೇವಾಸ್ಥಾನ ಮತ್ತು ಹೊರಾಂಗಣದಲ್ಲಿ ಸಿದ್ಧವಾಗಿರುವ ರಥವನ್ನು ಪ್ರದಕ್ಷಿಣೆ ಮಾಡಿ ನರ್ತನ ಮಾಡುತ್ತದೆ. ಮಾರನೆಯ ದಿನ ಚತುರ್ದಶಿ. ಅಂದು ರಾತ್ರಿ ದೇವಾಲಯದಲ್ಲಿ ಮಹಾಭಾರತ ಪ್ರವಚನ, ಸೂರ್ಯೋದಯದ ವೇಳೆಗೆ ಪೊಂಗಲು ಸೇವೆಯನ್ನೊಳಗೊಂಡು ಹಲವು ಕಾರ್ಯಗಳಿರುತ್ತವೆ.
ಹೆಗಲಿಗೆ ಅಡ್ಡಲಾಗಿ ಇಳಿಬಿಟ್ಟುಕೊಂಡ ಗಟ್ಟಿ ಬಟ್ಟೆಯ `ನವಾರ’ದಲ್ಲಿ ಸಿಕ್ಕಿಸಿದ ಪಟದ ಕೋಲನ್ನು ಬಲಗೈಯಲ್ಲಿ ಹಿಡಿದುಕೊಂಡ ಕಲಾವಿದರು ವಾದ್ಯದ ಗತ್ತಿಗೆ ಅನುಗುಣವಾಗಿ ವಿವಿಧ ಭಂಗಿಗಳಲ್ಲಿ ಕುಣಿಯುತ್ತಾರೆ. ಕುಣಿತಕ್ಕೆ ಇಷ್ಟೇ ಜನರಿರಬೇಕೆಂಬ ನಿಯಮವಿಲ್ಲದಿದ್ದರೂ ಹತ್ತು ಹನ್ನೆರಡಕ್ಕಿಂತ ಹೆಚ್ಚು ಜನರಿದ್ದರೇ ನೋಡಲು ಚೆಂದ. ಕುಣಿಯುವಾಗ ಪಟದ ಜವಳಿಗಳು ಅತ್ತಿತ್ತ ಬಾಗುವಾಗ ಅವಕ್ಕೆ ಸುತ್ತಿದ್ದ ಬಟ್ಟೆಯ ಜಾಲರಿಗಳ ಚಲ್ಲಾಟದ ದೃಶ್ಯ ಮನಮೋಹಕ. ಪಟದ ಸೊಬಗನ್ನು ಹೆಚ್ಚಿಸಲು ತುದಿಯಲ್ಲಿ ರೇಷ್ಮೆ ಗೊಂಡೇವುಗಳನ್ನು ಕಟ್ಟಿರುವುದುಂಟು.
ಕುಣಿತದಲ್ಲಿ ಗೆಜ್ಜೆ ಕುಣಿತ, ಎರಡ್ಹೆಜ್ಜೆ, ಮೂರು ಹೆಜ್ಜೆ ಮೊದಲಾದ ವಿಧಗಳಿವೆ. ಸಾಮಾನ್ಯವಾಗಿ ಒಂಟಿ ಸಾಲಿನಲ್ಲಿ ಕುಣಿತ ನಡೆಯುತ್ತದೆ. ಒಮ್ಮೊಮ್ಮೆ ಕಲಾವಿದರು ಎರಡು ಸಾಲಾಗಿ ಪರಸ್ಪರ ಎದುರು ನಿಂತು, ಒಮ್ಮೊಮ್ಮೆ ವೃತ್ತಾಕಾರದಲ್ಲಿ ಚಲಿಸುತ್ತಾ ಪಟದ ಜವಳಿಗಳನ್ನು ಹಿಂದಕ್ಕೆ ಮುಂದಕ್ಕೆ ಬಾಗಿಸಿ ಕುಣಿಯುವ ವಿಧಾನವಂತೂ ಕಣ್ಣಿಗೆ ಹಬ್ಬ. ಕುಣಿತದ ಗತ್ತು, ವಿನ್ಯಾಸಗಳನ್ನು ನೋಡಿದರೆ ವಿಜಯದ ಸಂಭ್ರಮ ಸಡಗರಗಳ ಸಂಕೇತವೆಂಬುದು ಸ್ಪಷ್ಟವಾಗುತ್ತದೆ, ಕೆಲವು ಕಡೆ ಭಾಗವಂತಿಕೆಯ ಜೊತೆಯಲ್ಲಿ ಪಟದ ಕುಣಿತ ನಡೆಯುವುದುಂಟ. ಮಂಡ್ಯ ಜಿಲ್ಲೆಯ ಕೆಲವು ಕಡೆ ದೀವಳಿಗೆ ತಿಂಗಳಲ್ಲಿ ಮಾತ್ರ ಪಟ ಮುಟ್ಟುವ ಸಂಪ್ರದಾಯವಿದೆ ಎಂದು ಹೇಳುತ್ತಾರೆ.
ದಸರಾ
ಸ್ವಚ್ಛ ಊರು, ಹೂವಿನಿಂದ ಅಲಂಕೃತಗೊಂಡ ಬೀದಿಗಳು, ತುಂಬಿ ತುಳುಕುವ ರಸ್ತೆಗಳು, ದೇವಸ್ಥಾನಗಳು, ವಸ್ತು ಪ್ರದರ್ಶನ, ಯುವ ಸಂಭ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು, ಚಲನಚಿತ್ರೋತ್ಸವ, ಕ್ರೀಡಾ, ಕುಸ್ತಿ ಪಂದ್ಯಾವಳಿಗಳು, ಯೋಗ ಕಾರ್ಯಕ್ರಮಗಳು, ಲಲಿತಕಲೆ, ಕರಕುಶಲ ಕಲಾ, ಪುಸ್ತಕ ಮೇಳ, ಕವಿಗೋಷ್ಟಿಯಂತಹ ಸಾಹಿತ್ಯಿಕ ಕಾರ್ಯಕ್ರಮಗಳು ಕಡೆಗೆ ಬೃಹತ್ ಮೆರವಣಿಗೆ, ಅಂತ್ಯದಲ್ಲಿ ಪಂಜಿನ ಕವಾಯತು! ವೈಭವೋಪೇತವಾಗಿ ಜರಗುವ ಇವೆಲ್ಲವನ್ನು ಕಂಡು ಕಣ್ಮನ ತುಂಬಿಸಿಕೊಳ್ಳಬೇಕಿದ್ದರೆ, ನೀವು ಒಮ್ಮೆಯಾದರೂ ಮೈಸೂರಿನಲ್ಲಿ ನಡೆವ ದಸರೆಯನ್ನು ನೋಡಲೇಬೇಕು.
ಒಂಭತ್ತು ದಿನಗಳ ವ್ರತಾಚರಣೆಯ ನಂತರ ಹತ್ತನೇ ದಿವಸದ ವಿಜಯದಶಮಿಯಂದು ನಡೆಯುವ ಜಂಬೂ ಸವಾರಿಯನ್ನು 1610ನೇ ಇಸವಿಯಲ್ಲಿ ಮೈಸೂರಿನ ಯದುವಂಶದ 9ನೇ ಒಡೆಯರಾದ ರಾಜಾ ಒಡೆಯರ್ ಮೊದಲ ಬಾರಿಗೆ ಆರಂಭಿಸಿದರು. ಮೈಸೂರನ್ನು ಮಹಿಷಾಸುರನೆಂಬ ಅಸುರನಿಂದ ಮುಕ್ತಗೊಳಿಸಿ ಜನರನ್ನು ರಕ್ಷಿಸಿದ ತಾಯಿ ಚಾಮುಂಡಿ ಮೈಸೂರು ಮಹಾರಾಜರ ಕುಲದೈವವಾಗಿ ದಶಮಿಯ ದಿನದಂದು ಆನೆಯ ಮೇಲೆ 750 ಕೆಜಿ ತೂಕದ ಸ್ವರ್ಣಖಚಿತ ಅಂಬಾರಿಯಲ್ಲಿ ಕುಳಿತು ಅರಮನೆಯಿಂದ ಬನ್ನಿ ಮಂಟಪದವರೆಗೆ ರಾಜ ಬೀದಿಯಲ್ಲಿ ಮೆರವಣಿಗೆ ಹೋಗುತ್ತಾಳೆ.
ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ವಿಜಯದಶಮಿ
ಅತ್ಯಂತ ಬೃಹತ್ ಸಾಮ್ರಾಜ್ಯವೆಂದು, ಬಹುಕಾಲ ಆಳ್ವಿಕೆ ನಡೆಸಿದ ಸಾಮ್ರಾಜ್ಯವೆಂದೂ ಹೆಸರಾಗಿರುವ, ಕರ್ನಾಟಕದ ಇತಿಹಾಸದಲ್ಲೇ ಸುವರ್ಣಯುಗವನ್ನು ಸೃಷ್ಟಿಸಿ, ಸಾಂಸ್ಕೃತಿಕ ಹಿರಿಮೆಯನ್ನು ಹೆಚ್ಚಿಸಿದ ಕರ್ನಾಟಕ ಸಾಮ್ರಾಜ್ಯ ಅರ್ಥಾತ್ ವಿಜಯನಗರ ಸಾಮ್ರಾಜ್ಯದ ಅರಸರು ಆರಂಭಿಸಿದ್ದ ನವರಾತ್ರಿ ಹಬ್ಬ ಹಾಗೂ ವಿಜದಶಮಿ ಆಚರಣೆಗೆ ವರ್ಣಮಯ ಕಳೆ ಬಂದದ್ದು ಪ್ರಖ್ಯಾತ ಅರಸ ಶ್ರೀ ಕೃಷ್ಣದೇವರಾಯನ ಕಾಲದಲ್ಲಿ. ಈ ಮಹೋತ್ಸವದ ಕೇಂದ್ರಗಳಾಗಿ ನಿರ್ಮಾಣವಾದದ್ದೇ ಮಹಾನವಮಿ ದಿಬ್ಬ. ತಮ್ಮ ಶೌರ್ಯ-ಪರಾಕ್ರಮಗಳನ್ನು, ವೀರತ್ವ, ಧೀರತ್ವವನ್ನು, ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಸಂಸ್ಕೃತಿ. ಹೀಗೆ ಸರ್ವ ವಿಧಗಳಲ್ಲೂ ತಾವು ಶಕ್ತರು, ಪ್ರತಿಭಾವಂತರೆಂದು ತಮ್ಮ ಹಿರಿಮೆಯನ್ನು ತೋರ್ಪಡಿಸಿಕೊಳ್ಳಲು ಈ ಮಹಾನವಮಿ ದಿಬ್ಬದಲ್ಲಿ ಸತತ ಹತ್ತೂ ದಿನಗಳ ಕಾಲ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿತ್ತು.
ವಿಜಯನಗರದ ಆಳ್ವಿಕೆಗೆ ಒಳಪಟ್ಟ ಸಾಮಂತ ರಾಜರನ್ನೂ, ಮಾಂಡಲಿಕರನ್ನು ಹಾಗೂ ತಮ್ಮ ಸೇನಾ ಬಲಕ್ಕೆ ಶಕ್ತಿ ತುಂಬುತ್ತ ಹಾಗೂ ಸಾಮ್ರಾಜ್ಯಕ್ಕೆ ಆರ್ಥಿಕವಾಗಿ ಸಹಾಯ ಮಾಡುವವರನ್ನೆಲ್ಲಾ ಒಂದೆಡೆ ಸೇರಿಸಿ ಕಪ್ಪ ಸಂಗ್ರಹಣೆ ಮಾಡಲಿಕ್ಕೆಂದೇ ನಿಗದಿತ ಕಾಲವೊಂದನ್ನು ಗೊತ್ತು ಮಾಡಲಾಗಿತ್ತು. ಆ ಕಾಲವೆ ಅಶ್ವಯುಜ ಮಾಸದ ಪಾಡ್ಯಮಿಯಿಂದ ನವಮಿಯವರೆಗಿನ ಒಂಭತ್ತು ದಿನಗಳು. ಕಡೆಯ ದಿನ ಅಂದರೆ ದಶಮಿಯ ದಿನ ಅರಸನು, ಮಹಾನವಮಿ ದಿಬ್ಬದ ಮೇಲೆ ಕುಳಿತು ಸಂದಾಯವಾಗುತ್ತಿದ್ದ ಕಾಣಿಕೆಗಳನ್ನು ಸ್ವೀಕರಿಸುತ್ತ, ಜರುಗುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದ.

ವಿಜಯನಗರದ ಅರಸರು ಈ ಅಶ್ವಯುಜ ಮಾಸದ ನವಮಿಯ ನಂತರೆ ದಿಗ್ವಿಜಯಕ್ಕೆ ಹೊರಡುತ್ತಿದ್ದರು. ಅಶ್ವಯುಜ ಮಾಸದ ಹೊತ್ತಿಗೆ ಮಳೆಯ ರಭಸ ಕಡಿಮೆಯಾಗಿ ಶತ್ರುಗಳ ಮೇಲೆ ದಾಳಿ ಮಾಡಲು ಅನುಕೂಲವೆಂಬ ಕಾರಣವಿದ್ದೀತು. ಇದರಿಂದಾಗಿ ಮಹಾನವಮಿಯು ಯುದ್ಧ ಸಂಬಂಧಿಯಾದ ಪ್ರಮುಖ ಆಚರಣೆಯಾಗಿತ್ತು ಎಂಬುದು ತಿಳಿಯುತ್ತದೆ.
ವಿಜಯನಗರ ಮತ್ತು ಮಹಾನವಮಿ ಕುರಿತು ವಿವಿಧ ದೇಶಗಳ ಪ್ರವಾಸಿಗರು ತಮ್ಮ ಕೃತಿಗಳಲ್ಲಿ ಉಲ್ಲೇಖಿಸಿದ್ದಾರೆ. ವಿದೇಶಿ ಪ್ರವಾಸಿಗರಲ್ಲಿ ಮಧ್ಯಪ್ರಾಚ್ಯದ ʼಇಬನ್ ಬಟೂಟʼ, ಇಟಲಿಯ ʼನಿಕೊಲೊ-ಡಿ-ಕೊಂಟೆʼ, ರಷ್ಯಾದ ʼನಿಕಿಟಿನ್ʼ, ಲಿಸ್ಬನ್ನ ʼದು ಆರ್ತೆ ಬಾರ್ಬೊಸʼ, ಪೋರ್ಚುಗೀಸ್ ದೇಶದ ʼಡೊಮಿಂಗೊ ಪಯಸ್ʼ, ʼನ್ಯೂನಿಜ್ʼ ತಮ್ಮ ಅನುಭವಗಳನ್ನು ಲಿಖಿತ ರೂಪದಲ್ಲಿ ನೀಡಿದ್ದಾರೆ.
ನಿಕೊಲೊ-ಡಿ-ಕೊಂಟೆ ವಿಜಯನಗರವನ್ನು ಬಿಜನೆಗಾಲಿಯಾ ಎಂದು ಉಚ್ಛರಿಸಿದ್ದಾನೆ (ಇಟಲಿಯವನಾದ ನಿಕೊಲೊ-ಡಿ-ಕೊಂಟೆ ಬಾಯಲ್ಲಿ ವಿಜಯನಗರ ಬಿಜಗನೆಲಿಯಾ ಆಗಿದೆ), ಅದರ ರಾಜ ಪರಿವಾರದ ಬಗ್ಗೆ ಸಾಕಷ್ಟು ಮಾಹಿತಿ ನೀಡುತ್ತಾನೆ. ನವರಾತ್ರಿಯ ಬಗ್ಗೆ ಬರೆಯುತ್ತ "..ಇದೊಂದು ಒಂಬತ್ತು ದಿನಗಳ ಹಬ್ಬ. ಆಗ (ನವರಾತ್ರಿಯಲ್ಲಿ) ದೊಡ್ಡ ಬೀದಿಗಳಲ್ಲಿ ಹಡಗಿನ ಪಠಸ್ತಂಭದಂತಹ ಸ್ತಂಭಗಳನ್ನು ನೆಟ್ಟು ಬಹುಸುಂದರವಾದ ಜರತಾರಿ ಬಟ್ಟೆಯ ಚೂರುಗಳನ್ನು ಮೇಲುಗಡೆ ಸಿಕ್ಕಿಸುತ್ತಾರೆ. ಆ ಸ್ತಂಭದ ತುದಿಯಲ್ಲಿ ದಿನವೂ ದೇವರಲ್ಲಿ ಅಪಾರ ಭಕ್ತಿಯುಳ್ಳ ಮತ್ತು ಎಂತಹ ಕಷ್ಟವನ್ನಾದರೂ ಸ್ಥಿರ ಮನಸ್ಸಿನಿಂದ ಸಹಿಸಬಲ್ಲ ಒಬ್ಬನನ್ನು ಕುಳ್ಳಿರಿಸುತ್ತಾರೆ. ಇವನ ಕಡೆಗೆ ಕಿತ್ತಳೆ, ನಿಂಬೆ ಮುಂತಾದ ಹಣ್ಣುಗಳನ್ನು ಎಸೆಯುತ್ತಾರೆ." ನಿಕೊಲೊವಿನ ಈ ಮಾತುಗಳು ಅಂದಿನ ನವರಾತ್ರಿ ಆಚರಣೆಯ ಒಂದು ನೋಟವನ್ನು ನೀಡುತ್ತದೆ. (‘ನಾಡಹಬ್ಬ ದಸರಾ’ ಎಂಬ ಕೃತಿಯಿಂದ ಉದ್ಧೃತ, ಪುಟ 89).
1520-22ರಲ್ಲಿ ಬಂದಿದ್ದ ಡೊಮಿಂಗೊ ಪಯಸ್ ಎಂಬ ಪ್ರವಾಸಿ ವಿಜಯನಗರವನ್ನು ಬಿಸಂಗದ ಎಂದು ಕರೆಯುತ್ತಾ ನವರಾತ್ರಿ ಹಬ್ಬದ ಆಚರಣೆ ಬಗ್ಗೆ ವಿವರ ನೀಡುತ್ತಾನೆ. ಹಬ್ಬದ ದಿನಗಳಲ್ಲಿ ಕುಸ್ತಿ ಪುಟುಗಳಿಂದ ಕುಸ್ತಿ, ಬಾಣಬಿರುಸುಗಳ ಆರ್ಭಟ, ಅಲಂಕೃತಗೊಂಡ ರಾಣಿ ವಾಸದವರ ಹಾವಭಾವ ಪ್ರದರ್ಶನವಾಗುತ್ತಿದ್ದಂತೆ ದೊರೆಯು ದೇವಿ ಆರಾಧನೆಗೆ ಹೋಗುತ್ತಾನೆ ‘ಅಲ್ಲಿಗೆ ಬಲಿಗಾಗಿ ಅನೇಕ ಎಮ್ಮೆ, ಕೋಣಗಳನ್ನೂ ಕುರಿಗಳನ್ನೂ ತರುತ್ತಾರೆ. ಅವುಗಳನ್ನು ಕೊಲ್ಲುತ್ತಾರೆ. ಬಳಿಕ ವೃತ್ತಿನಿರತ ನೃತ್ಯಗಾರ್ತಿಯರು (ಬಹುಶಃ ದೇವದಾಸಿಯರು) ಬಂದು ನೃತ್ಯ ಮುಂದುವರಿಸುತ್ತಾರೆ. ಆ ನಂತರ ದೊರೆ ರಾತ್ರಿಯ ಊಟಕ್ಕೆ ತೆರಳುತ್ತಾನೆ. ಇದು ಎಲ್ಲ ಒಂಬತ್ತು ದಿನಗಳಲ್ಲೂ ನಡೆಯುತ್ತದೆ...’ ಎಂಬುದಾಗಿ ಪಯಸ್ ತಾನು ಗ್ರಹಿಸಿದ್ದನ್ನು ಉಲ್ಲೇಖಿಸಿದ್ದಾನೆ.

ಮೈಸೂರು ಸಂಸ್ಥಾನದಲ್ಲಿ ದಸರಾ ಆಚರಣೆ
ವಿಜಯನಗರದ ಅರಸರ ಸಾಂಪ್ರದಾಯಿಕ ಆಚರಣೆಗಳನ್ನೇ ಮೊದಲಿಗೆ ಯಥಾವತ್ತಾಗಿ ಆಚರಿಸಿಕೊಂಡು ಬಂದ ಮೈಸೂರ ಒಡೆಯರು ಕಾಲಾಂತರದಲ್ಲಿ ಪರಿಸ್ಥಿತಿಗೆ ತಕ್ಕನಾಗಿ ಕೆಲವು ಮಾರ್ಪಾಡುಗಳನ್ನೂ ಮಾಡಿಕೊಂಡಿದ್ದಾರೆ.
ಸುಮಾರು 1399-1423ರ ಹೊತ್ತಿಗೆ ಆಗಲೇ ದ್ವಾರಕೆಯಿಂದ ಇತ್ತ ಬಂದಿದ್ದ ಯುದುವಂಶದ ರಾಜರು ಮೈಸೂರಿನ ಆಗ್ನೇಯ ದಿಕ್ಕಿನಲ್ಲಿರುವ ಹದಿನಾಡು(ನಂಜನಗೂಡಿನ ಹದಿನಾರು) ಮತ್ತು ಕಾರುಗಹಳ್ಳಿಗಳ ಪಾಳೆಪಟ್ಟಿನ ಅಧಿಪತ್ಯ ಸಾಧಿಸಿಕೊಂಡಿರಬಹುದಾದ ಸಾಧ್ಯತೆಗಳಿವೆ. ಮೈಸೂರಿನ ಎಲ್ಲಾ ಅರಸರ ಹೆಸರಿನ ಮುಂದೆ ಒಡೆಯರ್ ಎಂದು ಕುಲನಾಮ ಬಳಸಿರುವುದಕ್ಕೆ “ಸಂಸ್ಥಾನ ಸ್ಥಾಪನೆ”ಯ ಸಮಯದಲ್ಲಿ ಜಂಗಮನೊಬ್ಬ ಸಹಕರಿಸಿದನೆಂದೂ ಅವನ ಮೇಲಿನ ಗೌರವದಿಂದಾಗಿ ಅರಸರು ಈ ಕ್ರಮವನ್ನು ಬೆಳೆಸಿದರೆಂದು ಪ್ರತೀತಿ ಇದೆ.
ಸು. 1553-72 ರಲ್ಲಿ ಎರಡನೆ ತಿಮ್ಮರಾಜ ಪಾಳೆಯಗಾರನನ್ನು ಗೆದ್ದು ʼಬಿರುದೆಂತೆಂಬರಗಂಡʼ ಎಂಬ ಬಿರುದನ್ನು ಪಡೆದುಕೊಂಡ, ನಂತರದಲ್ಲಿ ಆತನ ತಮ್ಮ ಬೋಳಚಾಮರಾಜನೆಂಬಾತ ಪಟ್ಟಕ್ಕೆ ಬಂದು ವೆಂಕಟಾದ್ರಿ ನಾಯಕನನ್ನು ಸೋಲಿಸಿ ಅವನು ಬಳಸುತ್ತಿದ್ದ ʼಸುಗುಣ ಗಂಭೀರʼ ಎಂಬ ಬಿರುದನ್ನು ತಾನೆ ಧರಿಸಿದನಂತೆ.
1578ರ ಹೊತ್ತಿಗೆ ಕೇವಲ 33 ಹಳ್ಳಿಗಳನ್ನು ಮೈಸೂರು ಪಾಳೆಯಪಟ್ಟನ್ನು ದೊಡ್ಡ ರಾಜ್ಯವನ್ನಾಗಿಸಲು ಪ್ರಯತ್ನಿಸಿ ಜಯಿಸಿದವರು ರಾಜಾಒಡೆಯರ್. ಒಡೆಯರ ವಂಶದ ಸ್ಪಷ್ಟ ಚಿತ್ರಣ ಸಿಗುವುದು ಇಲ್ಲಿನಿಂದ. ಶ್ರೀರಂಗಪಟ್ಟಣವನ್ನು ಆಳುತ್ತಿದ್ದ ವಿಜಯನಗರದ ಅಧಿಕೃತ ಪ್ರತಿನಿಧಿಯಾಗಿದ್ದ ತಿರುಮಲರಾಯನಿಗೂ ವಿಜಯನಗರದ ಅಂದಿನ ಅರಸ ವೆಂಕಟನಿಗೂ ವೈಮನಸ್ಸಿದ್ದ ಕಾರಣ ರಾಜಾಒಡೆಯರ್ ತಿರುಮಲನನ್ನು ಅಲಕ್ಷಿಸಿ ಮೈಸೂರಿನ ಸುತ್ತ ಕೋಟೆ ನಿರ್ಮಿಸಿ ಸುತ್ತಲ್ಲಿನ ಪ್ರದೇಶಗಳನ್ನು ಗೆದ್ದುಕೊಂಡ. ನಂತರದಲ್ಲಿ ತಿರುಮಲನ ಮೇಲೆ ದಾಳಿ ಮಾಡಿ, ಶ್ರೀರಂಗಪಟ್ಟಣವನ್ನೂ ವಶಪಡಿಸಿಕೊಂಡು, ಅರಸು ವೆಂಕಟನ ಒಪ್ಪಿಗೆ ಪಡೆದುಕೊಂಡು ಆ ಭಾಗದ ವಿಜಯನಗರ ಸಾಮ್ರಾಜ್ಯದ ಪ್ರತಿನಿಧಿಯಾದ.
ಆ ಸಮಯದಲ್ಲೇ ಶ್ರೀರಂಗಪಟ್ಟಣದಲ್ಲಿ ದೊರೆ ರಾಜಾ ಒಡೆಯರ್ ಮಹಾನವಮಿ ಆಚರಣೆಯನ್ನು ಮತ್ತೆ ಮುನ್ನೆಲೆಗೆ ತಂದರು. 1610ರಲ್ಲಿ ವಿಜಯದಶಮಿಯ ಮೆರವಣಿಗೆಯನ್ನು ಪುನಾರಂಭಿಸಿದರು. ಅಂದಿನಿಂದ (1610) ಒಂಭತ್ತನೇ ಅರಸನಾದ ಚಾಮರಾಜ ಒಡೆಯರ್‌ವರೆಗೂ ಥೇಟ್ ವಿಜಯನಗರದ ಶೈಲಿಯನ್ನೇ ಅನುಕರಿಸಿದ್ದ ಅರಸು, ಮಧ್ಯೆ ಕೆಲ ವರ್ಷಗಳ ಕಾಲ ಮುಸಲ್ಮಾನ ರಾಜ ಟಿಪ್ಪೂ ಸುಲ್ತಾನನ ಆಳ್ವಿಕೆಗೆ ಒಳಪಟ್ಟಿದ್ದ ಶ್ರೀ ರಂಗ ಪಟ್ಟಣದಲ್ಲಿ ವಿಜಯದಶಮಿಯ ಆಚರಣೆ ಸಾರ್ವಜನಿಕವಾಗಿ ನಡೆಯದೇ ನಿಂತುಹೋಗಿತ್ತು. ನಂತರದಲ್ಲಿ ಬ್ರಿಟೀಷರ ಅಧೀನಕ್ಕೆ ಒಳಪಟ್ಟ ಸಂಸ್ಥಾನವು, ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಅಂದರೆ 1799ರಲ್ಲಿ ತನ್ನ ಕೇಂದ್ರ ಸ್ಥಾನವನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ವರ್ಗಾಯಿಸಿಕೊಂಡಿತು. ನಂತರದ ದಸರಾ ಆಚರಣೆಗಳನ್ನು ದಿಗ್ವಿಜಯಾರ್ಥವಾಗಿ ನಡೆಸುವ ಬದಲು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜಾರಿಗೆ ತಂದು ಆಚರಿಸಿದ್ದು ಗಮನಾರ್ಹ ಅಂಶವಾಗಿದೆ.
ನಂತರದ ದಿನಗಳಲ್ಲಿ ಪ್ರತಿ ವರ್ಷವೂ ಅರಸರಿಂದಲೇ ನಡೆದು ಬಂದ ದಸರೆಯು ರಾಜಾಶ್ರಯದಲ್ಲಿ ಮೈಸೂರು ಸಂಸ್ಥಾನದ ಕೊನೆಯ ರಾಜರಾದ ಜಯಚಾಮರಾಜ ಒಡೆಯರ್(1941-47) ಕ್ಕೆ ಕೊನೆಗೊಂಡಿತು. ಭಾರತ ದೇಶ ಸ್ವಾತಂತ್ರ್ಯಗೊಂಡು, ಭಾಷಾವಾರು ಪ್ರಾಂತ ವಿಂಗಡಣೆಯಾಗಿ, ಮೈಸೂರು ರಾಜ್ಯ ನಿರ್ಮಾಣವಾಗಿ ರಾಜ್ಯದ ಆಡಳಿತವನ್ನುಸರಕಾರದ ಮುಖ್ಯಮಂತ್ರಿಗಳಾದ ಚೆಂಗಲರಾಯರೆಡ್ಡಿಯವರಿಗೆ ಒಡೆಯರ್ ಅಧಿಕಾರವನ್ನು ಹಸ್ತಾಂತರಿಸಿ ತಾವು ಭಾರತ ಸರಕಾರದ ಪ್ರತಿನಿಧಿಯಾಗಿ ರಾಜ್ಯಪಾಲರಾಗಿ, ಪ್ರಮುಖರಾಗಿ ನಾನ ಹುದ್ದೆಗಳನ್ನು ಅಲಂಕರಿಸಿದ್ದು ಇತಿಹಾಸ. ಅಂದಿನಿಂದ ಶುರುವಾದ ಖಾಸಗಿ ದರ್ಬಾರ್ ಇಂದಿನವರೆಗೂ ನಡೆದುಕೊಂಡು ಬಂದಿದೆ.
ಸ್ವಚ್ಛ ಊರು, ಹೂವಿನಿಂದ ಅಲಂಕೃತಗೊಂಡ ಬೀದಿಗಳು, ತುಂಬಿ ತುಳುಕುವ ರಸ್ತೆಗಳು, ದೇವಸ್ಥಾನಗಳು, ವಸ್ತು ಪ್ರದರ್ಶನ, ಯುವ ಸಂಭ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು, ಚಲನಚಿತ್ರೋತ್ಸವ, ಕ್ರೀಡಾ, ಕುಸ್ತಿ ಪಂದ್ಯಾವಳಿಗಳು, ಯೋಗ ಕಾರ್ಯಕ್ರಮಗಳು, ಲಲಿತಕಲೆ, ಕರಕುಶಲ ಕಲಾ, ಪುಸ್ತಕ ಮೇಳ, ಕವಿಗೋಷ್ಟಿಯಂತಹ ಸಾಹಿತ್ಯಿಕ ಕಾರ್ಯಕ್ರಮಗಳು ಕಡೆಗೆ ಬೃಹತ್ ಮೆರವಣಿಗೆ, ಅಂತ್ಯದಲ್ಲಿ ಪಂಜಿನ ಕವಾಯತು! ವೈಭವೋಪೇತವಾಗಿ ಜರಗುವ ಇವೆಲ್ಲವನ್ನು ಕಂಡು ಕಣ್ಮನ ತುಂಬಿಸಿಕೊಳ್ಳಬೇಕಿದ್ದರೆ, ನೀವು ಒಮ್ಮೆಯಾದರೂ ಮೈಸೂರಿನಲ್ಲಿ ನಡೆವ ದಸರೆಯನ್ನು ನೋಡಲೇಬೇಕು.
ಒಂಭತ್ತು ದಿನಗಳ ವ್ರತಾಚರಣೆಯ ನಂತರ ಹತ್ತನೇ ದಿವಸದ ವಿಜಯದಶಮಿಯಂದು ನಡೆಯುವ ಜಂಬೂ ಸವಾರಿಯನ್ನು 1610ನೇ ಇಸವಿಯಲ್ಲಿ ಮೈಸೂರಿನ ಯದುವಂಶದ 9ನೇ ಒಡೆಯರಾದ ರಾಜಾ ಒಡೆಯರ್ ಮೊದಲ ಬಾರಿಗೆ ಆರಂಭಿಸಿದರು. ಮೈಸೂರನ್ನು ಮಹಿಷಾಸುರನೆಂಬ ಅಸುರನಿಂದ ಮುಕ್ತಗೊಳಿಸಿ ಜನರನ್ನು ರಕ್ಷಿಸಿದ ತಾಯಿ ಚಾಮುಂಡಿ ಮೈಸೂರು ಮಹಾರಾಜರ ಕುಲದೈವವಾಗಿ ದಶಮಿಯ ದಿನದಂದು ಆನೆಯ ಮೇಲೆ 750 ಕೆಜಿ ತೂಕದ ಸ್ವರ್ಣಖಚಿತ ಅಂಬಾರಿಯಲ್ಲಿ ಕುಳಿತು ಅರಮನೆಯಿಂದ ಬನ್ನಿ ಮಂಟಪದವರೆಗೆ ರಾಜ ಬೀದಿಯಲ್ಲಿ ಮೆರವಣಿಗೆ ಹೋಗುತ್ತಾಳೆ.
ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ವಿಜಯದಶಮಿ
ಅತ್ಯಂತ ಬೃಹತ್ ಸಾಮ್ರಾಜ್ಯವೆಂದು, ಬಹುಕಾಲ ಆಳ್ವಿಕೆ ನಡೆಸಿದ ಸಾಮ್ರಾಜ್ಯವೆಂದೂ ಹೆಸರಾಗಿರುವ, ಕರ್ನಾಟಕದ ಇತಿಹಾಸದಲ್ಲೇ ಸುವರ್ಣಯುಗವನ್ನು ಸೃಷ್ಟಿಸಿ, ಸಾಂಸ್ಕೃತಿಕ ಹಿರಿಮೆಯನ್ನು ಹೆಚ್ಚಿಸಿದ ಕರ್ನಾಟಕ ಸಾಮ್ರಾಜ್ಯ ಅರ್ಥಾತ್ ವಿಜಯನಗರ ಸಾಮ್ರಾಜ್ಯದ ಅರಸರು ಆರಂಭಿಸಿದ್ದ ನವರಾತ್ರಿ ಹಬ್ಬ ಹಾಗೂ ವಿಜದಶಮಿ ಆಚರಣೆಗೆ ವರ್ಣಮಯ ಕಳೆ ಬಂದದ್ದು ಪ್ರಖ್ಯಾತ ಅರಸ ಶ್ರೀ ಕೃಷ್ಣದೇವರಾಯನ ಕಾಲದಲ್ಲಿ. ಈ ಮಹೋತ್ಸವದ ಕೇಂದ್ರಗಳಾಗಿ ನಿರ್ಮಾಣವಾದದ್ದೇ ಮಹಾನವಮಿ ದಿಬ್ಬ. ತಮ್ಮ ಶೌರ್ಯ-ಪರಾಕ್ರಮಗಳನ್ನು, ವೀರತ್ವ, ಧೀರತ್ವವನ್ನು, ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಸಂಸ್ಕೃತಿ. ಹೀಗೆ ಸರ್ವ ವಿಧಗಳಲ್ಲೂ ತಾವು ಶಕ್ತರು, ಪ್ರತಿಭಾವಂತರೆಂದು ತಮ್ಮ ಹಿರಿಮೆಯನ್ನು ತೋರ್ಪಡಿಸಿಕೊಳ್ಳಲು ಈ ಮಹಾನವಮಿ ದಿಬ್ಬದಲ್ಲಿ ಸತತ ಹತ್ತೂ ದಿನಗಳ ಕಾಲ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿತ್ತು.

ಹಂಪೆಯ ಮಹಾನವಮಿ ದಿಬ್ಬ (ಚಿತ್ರಕೃಪೆ: ನ್ಯೂಸ್ 18 ಕನ್ನಡ)
ವಿಜಯನಗರದ ಆಳ್ವಿಕೆಗೆ ಒಳಪಟ್ಟ ಸಾಮಂತ ರಾಜರನ್ನೂ, ಮಾಂಡಲಿಕರನ್ನು ಹಾಗೂ ತಮ್ಮ ಸೇನಾ ಬಲಕ್ಕೆ ಶಕ್ತಿ ತುಂಬುತ್ತ ಹಾಗೂ ಸಾಮ್ರಾಜ್ಯಕ್ಕೆ ಆರ್ಥಿಕವಾಗಿ ಸಹಾಯ ಮಾಡುವವರನ್ನೆಲ್ಲಾ ಒಂದೆಡೆ ಸೇರಿಸಿ ಕಪ್ಪ ಸಂಗ್ರಹಣೆ ಮಾಡಲಿಕ್ಕೆಂದೇ ನಿಗದಿತ ಕಾಲವೊಂದನ್ನು ಗೊತ್ತು ಮಾಡಲಾಗಿತ್ತು. ಆ ಕಾಲವೆ ಅಶ್ವಯುಜ ಮಾಸದ ಪಾಡ್ಯಮಿಯಿಂದ ನವಮಿಯವರೆಗಿನ ಒಂಭತ್ತು ದಿನಗಳು. ಕಡೆಯ ದಿನ ಅಂದರೆ ದಶಮಿಯ ದಿನ ಅರಸನು, ಮಹಾನವಮಿ ದಿಬ್ಬದ ಮೇಲೆ ಕುಳಿತು ಸಂದಾಯವಾಗುತ್ತಿದ್ದ ಕಾಣಿಕೆಗಳನ್ನು ಸ್ವೀಕರಿಸುತ್ತ, ಜರುಗುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದ.

ದಸರಾ ಹಬ್ಬದ ಸಮಯದಲ್ಲಿ ಮೈಸೂರು ಅರಮನೆ
ವಿಜಯನಗರದ ಅರಸರು ಈ ಅಶ್ವಯುಜ ಮಾಸದ ನವಮಿಯ ನಂತರೆ ದಿಗ್ವಿಜಯಕ್ಕೆ ಹೊರಡುತ್ತಿದ್ದರು. ಅಶ್ವಯುಜ ಮಾಸದ ಹೊತ್ತಿಗೆ ಮಳೆಯ ರಭಸ ಕಡಿಮೆಯಾಗಿ ಶತ್ರುಗಳ ಮೇಲೆ ದಾಳಿ ಮಾಡಲು ಅನುಕೂಲವೆಂಬ ಕಾರಣವಿದ್ದೀತು. ಇದರಿಂದಾಗಿ ಮಹಾನವಮಿಯು ಯುದ್ಧ ಸಂಬಂಧಿಯಾದ ಪ್ರಮುಖ ಆಚರಣೆಯಾಗಿತ್ತು ಎಂಬುದು ತಿಳಿಯುತ್ತದೆ.
ವಿಜಯನಗರ ಮತ್ತು ಮಹಾನವಮಿ ಕುರಿತು ವಿವಿಧ ದೇಶಗಳ ಪ್ರವಾಸಿಗರು ತಮ್ಮ ಕೃತಿಗಳಲ್ಲಿ ಉಲ್ಲೇಖಿಸಿದ್ದಾರೆ. ವಿದೇಶಿ ಪ್ರವಾಸಿಗರಲ್ಲಿ ಮಧ್ಯಪ್ರಾಚ್ಯದ ʼಇಬನ್ ಬಟೂಟʼ, ಇಟಲಿಯ ʼನಿಕೊಲೊ-ಡಿ-ಕೊಂಟೆʼ, ರಷ್ಯಾದ ʼನಿಕಿಟಿನ್ʼ, ಲಿಸ್ಬನ್ನ ʼದು ಆರ್ತೆ ಬಾರ್ಬೊಸʼ, ಪೋರ್ಚುಗೀಸ್ ದೇಶದ ʼಡೊಮಿಂಗೊ ಪಯಸ್ʼ, ʼನ್ಯೂನಿಜ್ʼ ತಮ್ಮ ಅನುಭವಗಳನ್ನು ಲಿಖಿತ ರೂಪದಲ್ಲಿ ನೀಡಿದ್ದಾರೆ.
ನಿಕೊಲೊ-ಡಿ-ಕೊಂಟೆ ವಿಜಯನಗರವನ್ನು ಬಿಜನೆಗಾಲಿಯಾ ಎಂದು ಉಚ್ಛರಿಸಿದ್ದಾನೆ (ಇಟಲಿಯವನಾದ ನಿಕೊಲೊ-ಡಿ-ಕೊಂಟೆ ಬಾಯಲ್ಲಿ ವಿಜಯನಗರ ಬಿಜಗನೆಲಿಯಾ ಆಗಿದೆ), ಅದರ ರಾಜ ಪರಿವಾರದ ಬಗ್ಗೆ ಸಾಕಷ್ಟು ಮಾಹಿತಿ ನೀಡುತ್ತಾನೆ. ನವರಾತ್ರಿಯ ಬಗ್ಗೆ ಬರೆಯುತ್ತ "..ಇದೊಂದು ಒಂಬತ್ತು ದಿನಗಳ ಹಬ್ಬ. ಆಗ (ನವರಾತ್ರಿಯಲ್ಲಿ) ದೊಡ್ಡ ಬೀದಿಗಳಲ್ಲಿ ಹಡಗಿನ ಪಠಸ್ತಂಭದಂತಹ ಸ್ತಂಭಗಳನ್ನು ನೆಟ್ಟು ಬಹುಸುಂದರವಾದ ಜರತಾರಿ ಬಟ್ಟೆಯ ಚೂರುಗಳನ್ನು ಮೇಲುಗಡೆ ಸಿಕ್ಕಿಸುತ್ತಾರೆ. ಆ ಸ್ತಂಭದ ತುದಿಯಲ್ಲಿ ದಿನವೂ ದೇವರಲ್ಲಿ ಅಪಾರ ಭಕ್ತಿಯುಳ್ಳ ಮತ್ತು ಎಂತಹ ಕಷ್ಟವನ್ನಾದರೂ ಸ್ಥಿರ ಮನಸ್ಸಿನಿಂದ ಸಹಿಸಬಲ್ಲ ಒಬ್ಬನನ್ನು ಕುಳ್ಳಿರಿಸುತ್ತಾರೆ. ಇವನ ಕಡೆಗೆ ಕಿತ್ತಳೆ, ನಿಂಬೆ ಮುಂತಾದ ಹಣ್ಣುಗಳನ್ನು ಎಸೆಯುತ್ತಾರೆ." ನಿಕೊಲೊವಿನ ಈ ಮಾತುಗಳು ಅಂದಿನ ನವರಾತ್ರಿ ಆಚರಣೆಯ ಒಂದು ನೋಟವನ್ನು ನೀಡುತ್ತದೆ. (‘ನಾಡಹಬ್ಬ ದಸರಾ’ ಎಂಬ ಕೃತಿಯಿಂದ ಉದ್ಧೃತ, ಪುಟ 89).
1520-22ರಲ್ಲಿ ಬಂದಿದ್ದ ಡೊಮಿಂಗೊ ಪಯಸ್ ಎಂಬ ಪ್ರವಾಸಿ ವಿಜಯನಗರವನ್ನು ಬಿಸಂಗದ ಎಂದು ಕರೆಯುತ್ತಾ ನವರಾತ್ರಿ ಹಬ್ಬದ ಆಚರಣೆ ಬಗ್ಗೆ ವಿವರ ನೀಡುತ್ತಾನೆ. ಹಬ್ಬದ ದಿನಗಳಲ್ಲಿ ಕುಸ್ತಿ ಪುಟುಗಳಿಂದ ಕುಸ್ತಿ, ಬಾಣಬಿರುಸುಗಳ ಆರ್ಭಟ, ಅಲಂಕೃತಗೊಂಡ ರಾಣಿ ವಾಸದವರ ಹಾವಭಾವ ಪ್ರದರ್ಶನವಾಗುತ್ತಿದ್ದಂತೆ ದೊರೆಯು ದೇವಿ ಆರಾಧನೆಗೆ ಹೋಗುತ್ತಾನೆ ‘ಅಲ್ಲಿಗೆ ಬಲಿಗಾಗಿ ಅನೇಕ ಎಮ್ಮೆ, ಕೋಣಗಳನ್ನೂ ಕುರಿಗಳನ್ನೂ ತರುತ್ತಾರೆ. ಅವುಗಳನ್ನು ಕೊಲ್ಲುತ್ತಾರೆ. ಬಳಿಕ ವೃತ್ತಿನಿರತ ನೃತ್ಯಗಾರ್ತಿಯರು (ಬಹುಶಃ ದೇವದಾಸಿಯರು) ಬಂದು ನೃತ್ಯ ಮುಂದುವರಿಸುತ್ತಾರೆ. ಆ ನಂತರ ದೊರೆ ರಾತ್ರಿಯ ಊಟಕ್ಕೆ ತೆರಳುತ್ತಾನೆ. ಇದು ಎಲ್ಲ ಒಂಬತ್ತು ದಿನಗಳಲ್ಲೂ ನಡೆಯುತ್ತದೆ...’ ಎಂಬುದಾಗಿ ಪಯಸ್ ತಾನು ಗ್ರಹಿಸಿದ್ದನ್ನು ಉಲ್ಲೇಖಿಸಿದ್ದಾನೆ.
ಸು. 1553-72 ರಲ್ಲಿ ಎರಡನೆ ತಿಮ್ಮರಾಜ ಪಾಳೆಯಗಾರನನ್ನು ಗೆದ್ದು ʼಬಿರುದೆಂತೆಂಬರಗಂಡʼ ಎಂಬ ಬಿರುದನ್ನು ಪಡೆದುಕೊಂಡ, ನಂತರದಲ್ಲಿ ಆತನ ತಮ್ಮ ಬೋಳಚಾಮರಾಜನೆಂಬಾತ ಪಟ್ಟಕ್ಕೆ ಬಂದು ವೆಂಕಟಾದ್ರಿ ನಾಯಕನನ್ನು ಸೋಲಿಸಿ ಅವನು ಬಳಸುತ್ತಿದ್ದ ʼಸುಗುಣ ಗಂಭೀರʼ ಎಂಬ ಬಿರುದನ್ನು ತಾನೆ ಧರಿಸಿದನಂತೆ.
1578ರ ಹೊತ್ತಿಗೆ ಕೇವಲ 33 ಹಳ್ಳಿಗಳನ್ನು ಮೈಸೂರು ಪಾಳೆಯಪಟ್ಟನ್ನು ದೊಡ್ಡ ರಾಜ್ಯವನ್ನಾಗಿಸಲು ಪ್ರಯತ್ನಿಸಿ ಜಯಿಸಿದವರು ರಾಜಾಒಡೆಯರ್. ಒಡೆಯರ ವಂಶದ ಸ್ಪಷ್ಟ ಚಿತ್ರಣ ಸಿಗುವುದು ಇಲ್ಲಿನಿಂದ. ಶ್ರೀರಂಗಪಟ್ಟಣವನ್ನು ಆಳುತ್ತಿದ್ದ ವಿಜಯನಗರದ ಅಧಿಕೃತ ಪ್ರತಿನಿಧಿಯಾಗಿದ್ದ ತಿರುಮಲರಾಯನಿಗೂ ವಿಜಯನಗರದ ಅಂದಿನ ಅರಸ ವೆಂಕಟನಿಗೂ ವೈಮನಸ್ಸಿದ್ದ ಕಾರಣ ರಾಜಾಒಡೆಯರ್ ತಿರುಮಲನನ್ನು ಅಲಕ್ಷಿಸಿ ಮೈಸೂರಿನ ಸುತ್ತ ಕೋಟೆ ನಿರ್ಮಿಸಿ ಸುತ್ತಲ್ಲಿನ ಪ್ರದೇಶಗಳನ್ನು ಗೆದ್ದುಕೊಂಡ. ನಂತರದಲ್ಲಿ ತಿರುಮಲನ ಮೇಲೆ ದಾಳಿ ಮಾಡಿ, ಶ್ರೀರಂಗಪಟ್ಟಣವನ್ನೂ ವಶಪಡಿಸಿಕೊಂಡು, ಅರಸು ವೆಂಕಟನ ಒಪ್ಪಿಗೆ ಪಡೆದುಕೊಂಡು ಆ ಭಾಗದ ವಿಜಯನಗರ ಸಾಮ್ರಾಜ್ಯದ ಪ್ರತಿನಿಧಿಯಾದ.
ನಂತರದ ದಿನಗಳಲ್ಲಿ ಪ್ರತಿ ವರ್ಷವೂ ಅರಸರಿಂದಲೇ ನಡೆದು ಬಂದ ದಸರೆಯು ರಾಜಾಶ್ರಯದಲ್ಲಿ ಮೈಸೂರು ಸಂಸ್ಥಾನದ ಕೊನೆಯ ರಾಜರಾದ ಜಯಚಾಮರಾಜ ಒಡೆಯರ್(1941-47) ಕ್ಕೆ ಕೊನೆಗೊಂಡಿತು. ಭಾರತ ದೇಶ ಸ್ವಾತಂತ್ರ್ಯಗೊಂಡು, ಭಾಷಾವಾರು ಪ್ರಾಂತ ವಿಂಗಡಣೆಯಾಗಿ, ಮೈಸೂರು ರಾಜ್ಯ ನಿರ್ಮಾಣವಾಗಿ ರಾಜ್ಯದ ಆಡಳಿತವನ್ನುಸರಕಾರದ ಮುಖ್ಯಮಂತ್ರಿಗಳಾದ ಚೆಂಗಲರಾಯರೆಡ್ಡಿಯವರಿಗೆ ಒಡೆಯರ್ ಅಧಿಕಾರವನ್ನು ಹಸ್ತಾಂತರಿಸಿ ತಾವು ಭಾರತ ಸರಕಾರದ ಪ್ರತಿನಿಧಿಯಾಗಿ ರಾಜ್ಯಪಾಲರಾಗಿ, ಪ್ರಮುಖರಾಗಿ ನಾನ ಹುದ್ದೆಗಳನ್ನು ಅಲಂಕರಿಸಿದ್ದು ಇತಿಹಾಸ. ಅಂದಿನಿಂದ ಶುರುವಾದ ಖಾಸಗಿ ದರ್ಬಾರ್ ಇಂದಿನವರೆಗೂ ನಡೆದುಕೊಂಡು ಬಂದಿದೆ.
ಚಾಮುಂಡಿದೇವಿ ಕೂರುವ ಅಂಬಾರಿಯ ಇತಿಹಾಸ
ಸು.15ನೇ ಶತಮಾನದಲ್ಲಿ ವಿಜಯದಶಮಿಯನ್ನು ಆರಂಭಿಸಿದ್ದ ವಿಜಯನಗರ ಅರಸರು ತಮ್ಮ ರಾಜಧಾನಿ ಹಂಪೆಯಲ್ಲಿ ಮೆರವಣಿಗೆ ನಡೆಸುತ್ತಿದ್ದರು. ಈಗ ನಾವು ಕಾಣುವ ಅಂಬಾರಿ ಆಗಲೂ ಇದ್ದಿದ್ದು. ಈ ಅಂಬಾರಿಯ ಮೂಲ ಮಹಾರಾಷ್ಟ್ರದ ದೇವಗಿರಿ ಎನ್ನಲಾಗುತ್ತದೆ. ಶತ್ರುಗಳ ದಾಳಿಗೆ ನಲುಗಿದ್ದ ದೇವಗಿರಿ ನಾಶವಾಗುತ್ತದೆ. ಆಗ ಮುಮ್ಮಡಿ ಸಿಂಗನಾಯಕನೆಂಬ ದೊರೆಯು ಅದನ್ನು ಹೊತ್ತೊಯ್ದು ಬಳ್ಳಾರಿಯ ರಾಮದುರ್ಗ ಕೋಟೆಯಲ್ಲಿ ಅಡಗಿಸಿಡುತ್ತಾನೆ. ಬಳಿಕ ಈತನ ಮಗನಾದ ಕಂಪಿಲರಾಯನು ಒಂದು ಶಕ್ತಿಯುತ ಸಾಮ್ರಾಜ್ಯವನ್ನು ನಿರ್ಮಿಸಿದ ನಂತರ ಅಂಬಾರಿಯನ್ನು ಹೊರ ತಂದು ಅದರಲ್ಲಿ ದುರ್ಗಾದೇವಿಯ ಮೂರ್ತಿಯನ್ನಿಟ್ಟು ಪೂಜಿಸಲು ಆರಂಭಿಸಿದ.
ಕಂಪಿಲರಾಯನ ಮಗನಾದ ಗಂಡುಗಲಿ ಕುಮಾರರಾಮನ ಕಾಲದಲ್ಲಿ ತನ್ನ ರಾಜ್ಯ ಕಂಪ್ಲಿಯನ್ನು ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ದಿದ್ದ. ಸುಮಾರು 1327ರ ಹೊತ್ತಿಗೆ ದೆಹಲಿ ಸುಲ್ತಾನರ ದಾಳಿಯಿಂದಾಗಿ ಮರಣಹೊಂದಿದ ಕುಮಾರರಾಮನು ಕಂಪಿಲಿ ರಾಜ್ಯದ ಕೊನೆಯ ರಾಜನಾಗಿದ್ದಾನೆ.
ಆ ಸಮಯಕ್ಕಾಗಲೆ ವಿದ್ಯಾರಣ್ಯರ ಮಾರ್ಗದರ್ಶನದಲ್ಲಿ ವಿಜಯನಗರ ಸಾಮ್ರಾಜ್ಯ ನಿರ್ಮಾಣಕ್ಕೆ ತೊಡಗಿದ್ದ ಹಕ್ಕ-ಬುಕ್ಕರು ಈ ಅಂಬಾರಿಯನ್ನು ಸಂರಕ್ಷಿಸುತ್ತಾರೆ. ನಂತರದಲ್ಲಿ ಹಂಪಿಯನ್ನು ರಾಜಧಾನಿಯನ್ನಾಗಿಸಿದಾಗ ಅಲ್ಲಿಗೆ ಬುಕ್ಕ ಅರಸನು ಅಂಬಾರಿಯನ್ನು ತಂದು ಮಹಾನವಮಿಯಂದು ಮೆರವಣಿಗೆ ಆರಂಭಿಸಿದನು.
ಸುವರ್ಣಯುಗದ, ಎರಡನೇ ದೇವರಾಯನ ಕಾಲದಲ್ಲಿ ಬರ್ಮಾವನ್ನೂ ವಶಪಡಿಸಿಕೊಂಡು ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡ, ಶ್ರೀಕೃಷ್ಣದೇವರಾಯನಂತ ಶ್ರೇಷ್ಟ ಅರಸನಿದ್ದ ವಿಜಯನಗರ ಸಾಮ್ರಾಜ್ಯವು ಪತನಗೊಂಡ ಸಮಯಕ್ಕೆ ಅತ್ತ ಮೈಸೂರು ಸಂಸ್ಥಾನ ಶ್ರೀರಂಗಪಟ್ಟಣವನ್ನು ರಾಜಧಾನಿಯಾಗಿಸಿಕೊಂಡು ತಲೆಯೆತ್ತುತಲಿತ್ತು. ಆಗ ಅಂಬಾರಿಯನ್ನು ಕಾಪಾಡಲು ಮೊದಲು ಪೆನುಕೊಂಡಕ್ಕೆ ಸಾಗಿಸಲಾಯಿತು. ಬಳಿಕ ಅಂಬಾರಿಯನ್ನು ಕಾಪಾಡುವ ಹೊಣೆ ಶ್ರೀರಂಗಪಟ್ಟಣದ ಒಡೆಯರ ಹೆಗಲಿಗೆ ಬಂದಿತು. ಸುಮಾರು 800 ವರ್ಷಗಳ ಇತಿಹಾಸವುಳ್ಳ ಅಂಬಾರಿಯು ಕಳೆದ 409 ವರ್ಷಗಳಿಂದ ಮೈಸೂರು ಅರಸರ ಸುಪರ್ದಿಯಲ್ಲಿದ್ದು, ಈಗ ಕರ್ನಾಟಕ ಸರಕಾರದ ರಕ್ಷಣೆಯಲ್ಲಿದ್ದು ನಾಡ ಹಬ್ಬ ದಸರೆಯ ದಿವಸ ರಾಜಬೀದಿಯಲ್ಲಿ ಠೀವಿಯಿಂದ ಮೆರವಣಿಗೆಯಲ್ಲಿ ಸಾಗುತ್ತ ಭಕ್ತಾದಿಗಳ ಮನಸೋರೆಗೊಳಿಸುತ್ತ, ಭಕ್ತಿಭಾವದಿಂದ ತುಂಬಿಕೊಂಡಿದೆ.
ದಸರಾ ಹಬ್ಬದ ಕಡೆಯ ದಿವಸವಾದ ವಿಜಯದಶಮಿಯಂದು ಹೊರಡುವ ಜಂಬೂ ಸವಾರಿಯು ಅರಮನೆಯಲ್ಲಿ ಸಾಂಪ್ರದಾಯಿಕ ವಿಧಿವಿದಾನಗಳನ್ನು ಪೂರ್ಣಗೊಳಿಸಿ ಅರಮನೆಯ ಆವರಣದಲ್ಲಿ ಮೊದಲ್ಗೊಳ್ಳುತ್ತದೆ. ಲಕ್ಷಾಂತರ ಭಕ್ತ ಸಮೂಹದ ಮಧ್ಯೆ ಸಾಗುವ ಅಂಬಾರಿಯ ಮೆರವಣಿಗೆ ಬನ್ನಿ ಮಂಟಪವನ್ನು ತಲುಪುವವರೆಗೂ ನೋಡುಗರನ್ನು ರೋಮಾಂಚನಗೊಳಿಸುತ್ತದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ