ತೆಕ್ಕಲಕೋಟೆ ಇತಿಹಾಸ
ತೆಕ್ಕಲಕೋಟೆ ಇದಕ್ಕೆ ಅನೇಕ ಶತಮಾನಗಳ ಇತಿಹಾಸವಿದೆ. 1963 - 64 ರಲ್ಲಿ ತೆಕ್ಕಲಕೋಟೆಯಲ್ಲಿ ನಡೆಸಿದ ಉತ್ಖನನದಿಂದ ಇಲ್ಲಿ ನೆಲೆಸಿದ್ದ ಶಿಲಾಯುಗದ ಜನರ ಜೀವನವನ್ನು ಕುರಿತ ವಿಪುಲವಾದ ಮತ್ತು ಉಪಯುಕ್ತವಾದ ಮಾಹಿತಿ ದೊರೆತಿದೆ. ಇಲ್ಲಿ ಶಿಲಾಯುಗ ಕಾಲದಲ್ಲಿದ್ದ ಜನರು ವ್ಯವಸ್ಥಿತ ಜೀವನ ನಡೆಸುತ್ತಿದ್ದರು. ಇವರು ಮೆಡಿಟರೇನಿಯನ್ ಮತ್ತು ಪ್ರೋಟೊ - ಆಸ್ಟ್ರಲಾಯಿಡ್ ಜನರೆಂದು ಹೇಳಲಾಗಿದೆ. ಇವರು ಒಕ್ಕಲುತನ, ಪ್ರಾಣಿ ಸಾಕುವುದು ಮುಂತಾದ ಚಟುವಟಿಕೆಗಳಲ್ಲಿ ತೊಡಗಿದ್ದರು. ಇವರು ಬಂಗಾರದ ಆಭರಣ, ಪಾತ್ರೆ ಮುಂತಾದವನ್ನು ಮಾಡುವುದರಲ್ಲಿ ವಿಶೇಷ ನೈಪುಣ್ಯ ಪಡೆದಿದ್ದರು. ತೆಕ್ಕಲಕೋಟೆಗೆ ಪಪೆಕಲ್ಲು ಎಂಬ ಹೆಸರಿತ್ತೆಂಬುದು 1021ರ ಒಂದು ಶಾಸನದಿಂದ ಗೊತ್ತಾಗುತ್ತದೆ. ಬ್ರಹಾಧಿರಾಜನೆಂಬ ಅಧಿಕಾರಿ ಇಲ್ಲಿ ಆಡಳಿತ ನಡೆಸುತ್ತಿದ್ದ. ವಿಜಯನಗರದ ಪತನದ ಅನಂತರ, 1565ರಲ್ಲಿ ತೆಕ್ಕಲಕೋಟೆಯನ್ನು ಬಾಳುದ ಹನುಮಪ್ಪನಿಗೆ ವಿಜಾಪುರದ ಸುಲ್ತಾನ ದಾನವಾಗಿ ನೀಡಿದ. ಈತ ಅಮರೇಶ್ವರ ದೇವಸ್ಥಾನಸ ಸುತ್ತಲೂ ಒಂದು ಕೋಟೆಯನ್ನು ಕಟ್ಟಿಸಿದ. ಇದು ದಕ್ಷಿಣದ ಕೋಟೆಯೆಂದು ಪ್ರಸಿದ್ಧಿಪಡೆದಿತ್ತು. ತೆಕ್ಕಲಕೋಟೆಯಲ್ಲಿ ದೊರೆತ ಕೈಬರಹದ ಪ್ರತಿಯ ಪ್ರಕಾರ 1725 ರಲ್ಲಿ ಬಾಳುದ ಹನುಮಪ್ಪನ ವಂಶಜರು ತೆಕ್ಕಲಕೋಟೆಯನ್ನು ಅದೋನಿಯ ಮುಸ್ಲಿಮ್ ಅಧಿಕಾರಿಗೆ ಬಿಟ್ಟುಕೊಟ್ಟರು. ಅಂದಿನಿಂದ ತೆಕ್ಕಲಕೋಟೆಯಲ್ಲಿ ಮುಸ್ಲಿಮ್ ಆಳ್ವಿಕೆ ಪ್ರಾರಂಭವಾಯಿತು. ಅದೋನಿಯ ನವಾಬತ್ ಅಲಿ ಇಲ್ಲಿಯ ಅಮಲದಾರನಾದ. 1759 ರಲ್ಲಿ ಅದೋನಿಯನ್ನು ಬಸಲತ್‍ಜಂಗ್ ಕೈವಶ ಮಾಡಿಕೊಂಡ. ಈತ ಹಸನುಲ್ಲಾಖಾನ್ ಎಂಬವನನ್ನು ತೆಕ್ಕಲಕೋಟೆಯ ಅಮಲದಾರನಾಗಿ ನಿಯಮಿಸಿದ. ಸ್ಥಳೀಯ ವೀರಭದ್ರ ದೇವರ ಗುಡಿಯ ಪಕ್ಕದಲ್ಲಿ ದೊರೆತ ಶಾಸನದಲ್ಲೂ ಇಂಥದೇ ವಿವರ ದೊರೆತಿದೆ. ಮುಂದೆ 10 ವರ್ಷಗಳ ಅನಂತರ, 1769 ರಲ್ಲಿ ಬಸಲತ್ ಜಂಗ್ ಇದನ್ನು ಪೀರ್ ಬಾಜಿ ಮೊಹಿದೀನ್ ಸಾಹೇಬನಿಗೆ ಜಹಗೀರಾಗಿ ಕೊಟ್ಟ. 1775 ರಲ್ಲಿ ಬಳ್ಳಾರಿ - ಕುರುಗೋಡು ಹೈದರ್ ಅಲಿಗೆ ವಶವಾದ ಅನಂತರ ಅವನು ತೆಕ್ಕಲಕೋಟೆಯನ್ನೂ ವಶಪಡಿಸಿಕೊಂಡ. ಈತನಿಂದ ಇಲ್ಲಿ ಕೋಟೆ ನಿರ್ಮಾಣವಾಯಿತು. ತೆಕ್ಕಲಕೋಟೆಯಲ್ಲಿ ಅನೇಕ ಪ್ರಸಿದ್ಧ ಮಂದಿರಗಳಿವೆ. ಅಮರೇಶ್ವರ ದೇವಸ್ಥಾನ ಇತಿಹಾಸ ಪ್ರಸಿದ್ಧವಾದ್ದು. 1511 ರಲ್ಲಿ ವಿಜಯನಗರದ ಶ್ರೀಕೃಷ್ಣದೇವರಾಯನ ಸ್ಮರಣಾರ್ಥವಾಗಿ ಹಾಗೂ ಶಿವನ ಭಕ್ತಿಯ ಸಂಕೇತವಾಗಿ ಇದನ್ನು ಜಕ್ಕರಾಯ ಕಟ್ಟಿಸಿದನೆಂಬುದು ಈ ದೇವಸ್ಥಾನದಲ್ಲಿರುವ ಒಂದು ಶಾಸನದಿಂದ ತಿಳಿಯುತ್ತದೆ. ಮಣ್ಣಿನಲ್ಲಿ ಹೂತುಹೋಗಿದ್ದ ಈ ದೇವಾಲಯವನ್ನು ಇತ್ತೀಚೆಗೆ ಅಗೆದು ತೆಗೆಯಲಾಗಿದೆ.
ತೆಕ್ಕಲಕೋಟೆಯಲ್ಲಿ ಪಾಳೇಗಾರರ ಆಳ್ವಿಕೆಯಲ್ಲಿ ನಿರ್ಮಿಸಲಾದ ಕೋಟೆ ಸುಮಾರು 2.5 ಎಕರೆ ಪ್ರದೇಶದಲ್ಲಿದ್ದು ಚೌಕಾಕಾರವಾಗಿದೆ, ಕೋಟೆಯ ಸುತ್ತ ಆಳವಾದ ಕಂದಕಗಳು ಸುಮಾರು ನೂರು ಮೀಟರ್ ಉದ್ದ ನೂರು ಮೀಟರ್ ಅಗಲವಿದೆ ನಾಲ್ಕು ಮೂಲೆಗೂ ವೃತ್ತಾಕಾರದ ಕೊತ್ತಲಗಳಿವೆ ಅವು ಕೋಟೆ ಗೋಡೆಗಿಂತ ಎತ್ತರವಾಗಿದ್ದು ಪ್ರತಿ ಕೋತ್ತಲಕ್ಕೂ ಸುಮಾರು ನೂರು ಮೀಟರ್ ಅಂತರವಿದೆ.
#ತೆಕ್ಕಲಕೋಟೆಯ_ಕೋಟೆ
ತೆಕ್ಕಲಕೋಟೆಯಲ್ಲಿ ಪಾಳೇಗಾರರ ಆಳ್ವಿಕೆಯಲ್ಲಿ ನಿರ್ಮಿಸಲಾದ ಕೋಟೆ ಸುಮಾರು 2.5 ಎಕರೆ ಪ್ರದೇಶದಲ್ಲಿದ್ದು ಚೌಕಾಕಾರವಾಗಿದೆ, ಕೋಟೆಯ ಸುತ್ತ ಆಳವಾದ ಕಂದಕಗಳು ಸುಮಾರು ನೂರು ಮೀಟರ್ ಉದ್ದ ನೂರು ಮೀಟರ್ ಅಗಲವಿದೆ ನಾಲ್ಕು ಮೂಲೆಗೂ ವೃತ್ತಾಕಾರದ ಕೊತ್ತಲಗಳಿವೆ ಅವು ಕೋಟೆ ಗೋಡೆಗಿಂತ ಎತ್ತರವಾಗಿದ್ದು ಪ್ರತಿ ಕೋತ್ತಲಕ್ಕೂ ಸುಮಾರು ನೂರು ಮೀಟರ್ ಅಂತರವಿದೆ.
ಕೋಟೆಯ ಗೋಡೆ ಸುತ್ತಲು ಮತ್ತೊಂದು ಗೋಡೆ ಸುಸ್ತಿಯಲ್ಲಿದೆ ಅದರ ಮಧ್ಯದಲ್ಲಿ ಮುಖ್ಯ ಬಾಗಿಲನ್ನು ನಿರ್ಮಿಸಲಾಗಿದೆ. ಬಾಗಿಲು 20ಅಡಿ ಎತ್ತರವಿದೆ 6ಅಡಿ ಅಗಳವಿದೆ. ಈ ಮುಖ್ಯ ಬಾಗಿಲು ಒಳಗಡೆ ನಾಲ್ಕು ಕಂಬಗಳಿವೆ ಈ ಕಂಬಗಳ ಮೇಲೆ ಹುಕ್ಕ ಸೇದುವ ಹಾಗೂ ನೃತ್ಯ ಮಾಡುವ ಸ್ತ್ರೀ ಶಿಲ್ಪಗಳನ್ನು ಕೆತ್ತಲಾಗಿದೆ. ಮೇಲ್ಭಾಗದಲ್ಲಿ ಕಮಾನು ಇದ್ದು ಬಲಭಾಗಕ್ಕೆ ಉಪ ಬಾಗಿಲನ್ನು ಜೋಡಿಸಲಾಗಿದೆ. ಕೋಟೆ ಸುಮಾರು 5 ಅಡಿ ದಪ್ಪವಿದ್ದು ಗಾರೆ ಮಣ್ಣಿನ ಕೊಂಬೆಯ ಅವಶೇಷಗಳನ್ನು ಇಂದಿಗೂ ಇಲ್ಲಿ ಕಾಣಬಹುದು.
ತೆಕ್ಕಲಕೋಟೆಯಲ್ಲಿ ಪಾಳೇಗಾರರ ಆಳ್ವಿಕೆಯ ಕಾಲದ ಊರ ಮಧ್ಯದಲ್ಲಿ ಕೋಟೆ ನಿರ್ಮಾಣವಾಗಿದೆ ಇದನ್ನು ವಿಜಯನಗರ ಸಾಮ್ರಾಜ್ಯದ ಪತನದ ನಂತರ ಕ್ರಿ.ಶ 1565 ರಲ್ಲಿ ಬಾಲ ಹನುಮಂತಪ್ಪ ನಾಯಕ ಎಂಬುವವರ ವಶವಾಯಿತು.
#ವರವಿನ_ಮಲ್ಲೇಶ್ವರ_ದೇವಾಲಯ
ಈ ದೇವಾಲಯವು ತೆಕ್ಕಲಕೋಟೆಯಿಂದ ಪೂರ್ವಕ್ಕೆ ಸುಮಾರು 3 ಕಿ.ಮೀ ದೂರ ಮಲ್ಲಯ್ಯನ ಗುಡ್ಡದಲ್ಲಿದ್ದು ಸಿರುಗುಪ್ಪ ತಾಲೂಕಿನ ಪ್ರಮುಖ ದೇವಾಲಯವಾಗಿದೆ ಈ ದೇವಾಲಯವು ಅನೇಕ ಅರಸರಿಂದ ನಿರ್ಮಿಸಲ್ಪಟ್ಟಿದ್ದು ಅನೇಕ ಕಲಾ ಶೈಲಿಗಳನ್ನು ಒಳಗೊಂಡಿದೆ ಕಲ್ಯಾಣಿ ಚಾಲುಕ್ಯರ ಶೈಲಿಯಲ್ಲಿ ನಿರ್ಮಿಸಲಾಗಿದೆ ದೇವಾಲಯವು ಪಶ್ಚಿಮಾಭಿಮುಖವಾಗಿದ್ದು ಪೂರ್ವ ಮತ್ತು ದಕ್ಷಿಣ ಭಾಗದಲ್ಲಿ ದ್ವಾರಬಾಗಿಲುಗಳಿದ್ದು ವಿಶಾಲವಾದ ಪ್ರಾಂಗಣ ಹೊಂದಿದೆ.
ಗರ್ಭಗೃಹ 8ಅಡಿ ಉದ್ದ 8ಅಡಿ ಅಗಲವಿದ್ದು ಗರ್ಭಗೃಹದಲ್ಲಿರುವ ಮಲ್ಲಯ್ಯನ ಶಿಲ್ಪವು ಮೂರುವರೆ ಅಡಿ ಎತ್ತರವಿದ್ದು ನಾಲ್ಕು ಕೈಗಳು ದ್ದು ತ್ರಿಶೂಲ ಡಮರು ಬಾಕು ಮತ್ತು ಭಿಕ್ಷಾ ಪಾತ್ರೆಗಳಿವೆ ಕಲ್ಲಿನಲ್ಲಿರುವ ವಿಗ್ರಹಗಳನ್ನು ಕಾಣಬಹುದು ಕೆಳಗಡೆ ಎಡಬಲದಲ್ಲಿ ಶಿಲ್ಪವಿದೆ ಗರ್ಭಗೃಹದ ಮುಂಭಾಗದ ಎರಡು ಬದಿಯಲ್ಲಿ ಮತ್ತೆರಡು ಗರ್ಭಗೃಹಗಳಿವೆ ಎಡಬದಿಯಲ್ಲಿ ಗಂಗಮಾಳಮ್ಮ ಬಲಬದಿಯಲ್ಲಿ ಲಕ್ಷ್ಮಿ ವಿಗ್ರಹಗಳಿವೆ, ಮೂಲ ಗರ್ಭಗೃಹದ ಸುತ್ತಲೂ ಪ್ರದಕ್ಷಿಣಾ ಪಥವಿದೆ ತೆರೆದ ಸುಖನಾಸಿ ಇದ್ದು ಮುಂಭಾಗದಲ್ಲಿ 2 ಕಂಬಗಳಿವೆ ಇದರ ಮುಂದೆ 16 ಕಂಬಗಳ ಮಹಾಮಂಟಪವಿದೆ. ಕಂಬಗಳ ಮೇಲೆ ಸುಂದರವಾದ ಕಾಳಿಂಗಮರ್ಧನ, ಉಗ್ರರಸಿಂಹ, ಬೆಣ್ಣೆ ಕೇಳುವ ಕೃಷ್ಣ, ಭಕ್ತ ಮಾರ್ಕಂಡೇಯ, ಶಿವಲಿಂಗ, ನವಿಲು ಹಾವನ್ನು ಹಿಡಿದಿರುಯುವುದು, ಶಿವ ತಾಂಡವ, ಗಣೇಶ ಹಾಗೂ ನರ್ತನ ಸ್ತ್ರೀಯರ ಉಬ್ಬುಶಿಲ್ಪದ ಕೆತ್ತನೆಗಳಿವೆ. ಈ ಮಹಾಮಂಟಪದ ಭುವನೇಶ್ವರಿಯು 5 ಪಟ್ಟಿಕೆಗಳನ್ನು ಹೊಂದಿದೆ. ಮೊದಲ ಪಟ್ಟಿಕೆಯಲ್ಲಿ ನರ್ತನ ಸ್ತ್ರೀಯರು, ಎರಡನೆಯ ಪಟ್ಟಿಕೆಯಲ್ಲಿ ಹಂಸಗಳ ಸಾಲು, 3ನೇ, 4ನೆ, 5ನೇ ಪಟ್ಟಿಕೆಯಲ್ಲಿ ಹೂಗಳ ಕೆತ್ತನೆಗಳಿವೆ. ಮಹಾಮಂಟದ ಮುಂಭಾಗದಲ್ಲಿ ಕಲ್ಲಿನಿಂದ ನಿರ್ಮಿಸಲಾದ ಸಿಬಾರ(ಕಲ್ಲಿನ ತುಲಾಭಾರ ಮಂಟಪ) ಹಾಗೂ ದೀಪಸ್ತಂಭವನ್ನು ನಿರ್ಮಿಸಲಾಗಿದೆ ಮಂಟಪದಲ್ಲಿ 12 ಅಡಿ ಉದ್ದ 6 ಅಡಿ ಎತ್ತರ ಹಾಗೂ 4 ಅಡಿ ಅಗಲದ ಬೃಹತ್ ನಂದಿವಿಗ್ರಹವಿದೆ.
ದೇವಾಲಯದ ಪೂರ್ವದ ದ್ವಾರ ಬಾಗಿಲಿಗೆ ಬಂದಾಗ ಎಡಬದಿಯಲ್ಲಿ ಒಂದು ಶಿವಲಿಂಗ ದೇವಾಲಯವಿದೆ. ಅದನ್ನು ನಂದಿ, ಹಾದಿಲಿಂಗ ಎಂತಲೂ ಕರೆಯುತ್ತಾರೆ. ಇದು ದ್ರಾವಿಡ ನಾಗರಶೈಲಿಯಲ್ಲಿದ್ದು ಶಿಥಿಲಾವಸ್ಥೆಯಲ್ಲಿದೆ ವರವಿನ ಮಲ್ಲೇಶ್ವರ ದೇವಾಲಯದ ಪೂರ್ವದ ದ್ವಾರದ ಗೋಪುರ ವಿಜಯನಗರ ಕಾಲದಲ್ಲಿ ನಿರ್ಮಿಸಲಾಗಿದೆ. ಇದು ವಿಜಯನಗರದ ಸಾಮ್ರಾಜ್ಯದ ರಾಯಗೋಪುರದ ಶೈಲಿಯಲ್ಲಿದೆ. ದ್ವಾರಪಾಲಕ ವಿಗ್ರಹ, ಎರಡು ಆನೆಗಳು ಒಂದನ್ನೊಂದು ಮುಖಮಾಡಿರುವ ಶಿಲ್ಪ,ಸಿಂಹಗಳು, ಹಂಸಗಳು ಮುಂತಾದ ಉಬ್ಬು ಶಿಲ್ಪಗಳನ್ನು ತಳಪಾಯದಲ್ಲಿ ರಚಿಸಲಾಗಿದೆ. ಈ ಗೋಪುರವು 6 ಅಂತಸ್ತುಗಳಿದ್ದು ಇದನ್ನು ಸುಟ್ಟ ಇಟ್ಟಿಗೆ ಗಾರೆ ಬಳಸಿ ನಿರ್ಮಿಸಲಾಗಿದೆ. ಈ ಗೋಪುರದ ಮೇಲೆ ಅನೇಕ ಸುಂದರವಾದ ಸೂಕ್ಷ್ಮ ಶಿಲ್ಪಗಳು ರಚಿಸಲಾಗಿದೆ, ದೇವಾಲಯದ ಸುತ್ತಲೂ ಎತ್ತರವಾದ ಅಲಂಕಾರಯುತ ಆವರಣವಿದೆ ದಕ್ಷಿಣ ಭಾಗದಲ್ಲಿ ಅನೇಕ ಮಂಟಪಗಳು ವೀರಗಲ್ಲು, ಶಿವಲಿಂಗ ನಂದಿ ಮತ್ತಿತರ ಶಿಲ್ಪಗಳಿವೆ.ಶಾಸನ ಮತ್ತು ಉಲ್ಲೇಖ ಮಲ್ಲಯ್ಯನ ದೇವಾಲಯವು ಕಲ್ಯಾಣ ಚಾಲುಕ್ಯರ ಅರಸರಿಂದ ನಿರ್ಮಿಸಲ್ಪಟ್ಟಿದ್ದು ವಿಜಯನಗರ ಮತ್ತು ಪಾಳೇಗಾರ ಕಾಲದಲ್ಲಿ ವಿಸ್ತಾರ ಗೊಂಡಿರುವುದು ಕಂಡುಬರುತ್ತದೆ
ಮಲ್ಲಯ್ಯನ ಗುಡ್ಡದ ಕ್ರಿ.ಶ 1539ರ ವಿಜಯನಗರದ ಅಚ್ಯುತರಾಯನ ಅಧಿಕಾರಿಯಾದ ಪಾಯಜರೈಯನು ಹೊರಡಿಸಿದ ಶಾಸನವಿದೆ, ಈ ಶಾಸನವು ಅಚ್ಯುತರಾಯನಿಗೆ ಪುಣ್ಯವಾಗಬೇಕೆಂದು ಆಗಬೇಕೆಂದು ಪಾಯಜರೈಯರನ್ನು ತೆಕ್ಕಲಕೋಟೆಯಲ್ಲಿನ ಹರವಿನ ದೇವರ ನೈವೇದಕ್ಕೆ ಹಿಂದಿನ ದಾನವನ್ನು ಪುನರ್ದತ್ತಿಯಾಗಿ ನೀಡುತ್ತಾನೆ ಮಲ್ಲಯ್ಯನ ಗುಡ್ಡದ ಕ್ರಿ.ಶ. 1701ರಂದು ಮಹಾರಾಜ ಭೀಮಸಿಂಗಹಂಡೆ ಹೊರಡಿಸಿದ ಶಾಸನವಿದೆ ಶಾಸನವು ಭೀಮಸಿಂಗಹಂಡೆ ತೆಕ್ಕಲಕೋಟೆ ಹರಿವಿನ ನಿಂಗಪ್ಪನಿಗೆ ಕಲ್ಲದ್ವಾರವಟ್ಟವನ್ನು ನಿರ್ಮಿಸಿದ ಉಲ್ಲೇಖವಿದೆ ಇಲ್ಲಿ ಸ್ವಯಂ ತಮ್ಮ ಶಿರಚ್ಛೇದನ ಮಾಡಿಕೊಳ್ಳುವ ವಿಗ್ರಹವಿದೆ.
ಲೇಖನ ಕೃಪೆ: ರವಿ ನವಲಹಳ್ಳಿ ಅವರ ಪೇಸಬುಕ್ ಪುಟದಿಂದ ಪಡೆಯಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ