‘ಬಾರಾ ಕಮಾನ್’ ಬಿಜಾಪುರ ನಗರದ ಪ್ರಾಚೀನ ಮತ್ತು ಪ್ರಸಿದ್ಧ ಐತಿಹಾಸಿಕ ಸ್ಮಾರಕವಾಗಿದೆ. ಆದಿಲ್ ಶಾಹಿ ರಾಜವಂಶದ ಅಲಿ ಆದಿಲ್ ಷಾ ಅದ್ಭುತ ವಾಸ್ತುಶಿಲ್ಪವಿರುವ ಸಮಾಧಿಯನ್ನು ನಿರ್ಮಿಸಲು ಬಯಸಿದ್ದನು. ಅಲಿ ಆದಿಲ್ ಷಾ ಸಮಾಧಿಯ ಸುತ್ತಲೂ ಹನ್ನೆರಡು ಕಮಾನುಗಳನ್ನು ಲಂಬವಾಗಿ ಮತ್ತು ಅಡ್ಡಲಾಗಿ ಇಡಬೇಕೆಂದು ಯೋಜಿಸಲಾಗಿತ್ತು. ಆದರೂ, ಕೆಲವು ಕಾರಣಗಳಿಗಾಗಿ ಸಮಾಧಿಯ ಕೆಲಸವು ಅಪೂರ್ಣವಾಗಿ ಉಳಿದಿದೆ. ಕೇವಲ ಎರಡು ಕಮಾನುಗಳನ್ನು ಮಾತ್ರ ಲಂಬವಾಗಿ ಎತ್ತಲಾಯಿತು. ಇತ್ತೀಚಿನ ದಿನಗಳಲ್ಲಿ ಅಡ್ಡಲಾಗಿ ಇರಿಸಲಾಗಿರುವ ಹನ್ನೆರಡು ಕಮಾನುಗಳ ಅವಶೇಷಗಳನ್ನು ಇನ್ನೂ ಕಾಣಬಹುದು. ಈ ಸ್ಥಳವನ್ನು ಭಾರತೀಯ ಪುರಾತತ್ವ ಸಮೀಕ್ಷೆ ನಿರ್ವಹಿಸುತ್ತದೆ.
ಬಾರಾ ಕಮಾನ್ ಅತ್ಯಂತ ವಿಶಿಷ್ಟ ಲಕ್ಷಣವೆಂದರೆ ಅದರ ಕಮಾನುಗಳು. ಅದರ ಔಟ್‘ಲೈನ್ ಸಂಪೂರ್ಣವಾಗಿ ಗೋಥಿಕ್ ಸ್ಟೈಲ್ ನಲ್ಲಿರುವುದನ್ನು ಕಾಣಬಹುದು. ಒಳ ಆವರಣದಲ್ಲಿ ಅಲಿ ಆದಿಲ್ ಷಾ ಸಮಾಧಿ ಇದೆ. ಇಂದಿನ ಬಿಜಾಪುರ ಪಟ್ಟಣದಿಂದ ಒಂದು ಕಿ.ಮೀ. ದೂರದಲ್ಲಿ ತುದಿಯಲ್ಲಿ ನಿಂತಿರುವ ಮುಖ್ಯ ಮಾರುಕಟ್ಟೆಯ ಸಮೀಪದಲ್ಲಿರುವ ಬಾರಾ ಕಾಮನ್ ಅನ್ನು ಅಲಿ ರೋಜಾ ಎಂದೂ ಕರೆಯುತ್ತಾರೆ.
ಗೋಲ್ ಗುಂಬಜ್‌ಗೆ ಪ್ರತಿಸ್ಪರ್ಧಿ!
ವಾಸ್ತುಶಿಲ್ಪಿ ಮಲಿಕ್ ಸಂದಾಲ್ ಆರಂಭದಲ್ಲಿ ಘನ ಗೋಡೆಗಳನ್ನು ಏಕ ಕೇಂದ್ರದಲ್ಲಿ ಕಮಾನುಗಳ ರೂಪದಲ್ಲಿ ಕಟ್ಟಿಸಿದನು. ಒಮ್ಮೆ ಸಂಪೂರ್ಣ ಗೋಡೆ ನಿರ್ಮಾಣವಾದ ನಂತರ, ಒಳಗಿನ ಕಮಾನುಗಳನ್ನು ಕಟ್ಟಲಾಯಿತು. ಆದರೆ ಹೊರಗಿನ ಕಮಾನು ಮಾತ್ರ ಹಾಗೇ ಉಳಿದಿತ್ತು. ಕಲ್ಲುಗಳನ್ನು ಹಿಡಿದಿಡಲು ಕಬ್ಬಿಣದ ಉಂಗುರಗಳನ್ನು ಸಹ ಬಳಸಲಾಗುತ್ತಿತ್ತು. ಅವುಗಳನ್ನು ಒಟ್ಟಿಗೆ ಸಿಮೆಂಟ್ ಮಾಡಲಾಗಿಲ್ಲ. ಒಂದು ವೇಳೆ ಸಮಾಧಿ ಪೂರ್ಣಗೊಂಡಿದ್ದರೆ, ಅದು ಖಂಡಿತವಾಗಿಯೂ ಬಿಜಾಪುರದ ಗೋಲ್ ಗುಂಬಜ್‌ಗೆ ಪ್ರತಿಸ್ಪರ್ಧಿಯಾಗಿರುತ್ತಿತ್ತು.
ಸರಳವಾದ ಗೋರಿಗಳು
ಪ್ರವಾಸಿಗರು ಈ ಸ್ಥಳಕ್ಕೆ ಪ್ರವೇಶಿಸುತ್ತಿದ್ದಂತೆ, ಬೃಹತ್ ಕಮಾನುಗಳನ್ನು ನೋಡಿ ಪ್ರಭಾವಿತನಾದರೆ ಆಶ್ಚರ್ಯಪಡಬೇಕಿಲ್ಲ. ಕಂಬಗಳನ್ನು ಕಲ್ಲಿನಿಂದ ನಿರ್ಮಿಸಲಾಗಿದ್ದು, ಎತ್ತರವಾಗಿವೆ. ಈ ಸ್ಮಾರಕವನ್ನು ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಿದವರ ವಾಸ್ತುಶಿಲ್ಪ ಕೌಶಲ್ಯ ಗಮನಾರ್ಹವಾಗಿದೆ. ಇದು ಇಸ್ಲಾಮಿಕ್ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಯಾಗಿದ್ದು, ಅನುಗ್ರಹ, ಸೌಂದರ್ಯ ಮತ್ತು ಸಮೃದ್ಧಿಗೆ ಸಮಾನಾರ್ಥಕವಾಗಿದೆ. ಕಟ್ಟಡಕ್ಕೆ ಮೇಲ್ಛಾವಣಿಯಿಲ್ಲ, ಈ ಮೊದಲೇ ನಿಮಗೆ ಕಟ್ಟಡ ಯಾಕೆ ಅಪೂರ್ಣವಾಯಿತು ಎಂಬ ಬಗ್ಗೆ ತಿಳಿಸಲಾಗಿದೆ . ಕಮಾನುಗಳನ್ನು ಬೃಹತ್ ಕಂಬಗಳು, ದೊಡ್ಡ ಕಲ್ಲುಗಳು ಚೆನ್ನಾಗಿ ಹಿಡಿದಿಟ್ಟುಕೊಂಡು ಬೆಂಬಲಿಸುತ್ತವೆ. ಕಮಾನುಗಳು ಪರಸ್ಪರ ಸಂಪರ್ಕ ಹೊಂದಿದ್ದು, ಯಾವುದೇ ಅಲಂಕಾರ ಮತ್ತು ಮೇಲ್ಭಾಗವಿಲ್ಲದೆ ಗೋರಿಗಳು ಸರಳವಾಗಿವೆ. ಬಾರಾ ಕಮಾನ್ ಮುಂಭಾಗದ ಉದ್ಯಾನವನ್ನು ಉತ್ತಮವಾಗಿ ನಿರ್ವಹಿಸಲಾಗಿದೆ. ಇತಿಹಾಸವನ್ನು ಕೆದಕಿದಾಗ ತಂದೆ ಮತ್ತು ಮಗ ಸಮಾಧಿಗಳ ವಿಷಯದಲ್ಲಿ ಇಬ್ಬರೂ ಪರಸ್ಪರರನ್ನು ಮೀರಿಸಲು ಪ್ರಯತ್ನಿಸಿರುವುದು ಕಂಡುಬರುತ್ತದೆ. ಇತ್ತೀಚಿನ ದಿನಗಳಲ್ಲಿ ಬಾರಾ ಕಮಾನ್ ಉತ್ತಮ ಫೋಟೋ ಶೂಟ್ ತಾಣವಾಗಿಯೂ ಹೊರಹೊಮ್ಮುತ್ತಿರುವುದು ಸಂತೋಷದ ವಿಷಯ.ಪ್ರವಾಸಿಗರು ಈ ಸ್ಥಳಕ್ಕೆ ಪ್ರವೇಶಿಸುತ್ತಿದ್ದಂತೆ, ಬೃಹತ್ ಕಮಾನುಗಳನ್ನು ನೋಡಿ ಪ್ರಭಾವಿತನಾದರೆ ಆಶ್ಚರ್ಯಪಡಬೇಕಿಲ್ಲ. ಕಂಬಗಳನ್ನು ಕಲ್ಲಿನಿಂದ ನಿರ್ಮಿಸಲಾಗಿದ್ದು, ಎತ್ತರವಾಗಿವೆ. ಈ ಸ್ಮಾರಕವನ್ನು ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಿದವರ ವಾಸ್ತುಶಿಲ್ಪ ಕೌಶಲ್ಯ ಗಮನಾರ್ಹವಾಗಿದೆ. ಇದು ಇಸ್ಲಾಮಿಕ್ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಯಾಗಿದ್ದು, ಅನುಗ್ರಹ, ಸೌಂದರ್ಯ ಮತ್ತು ಸಮೃದ್ಧಿಗೆ ಸಮಾನಾರ್ಥಕವಾಗಿದೆ. ಕಟ್ಟಡಕ್ಕೆ ಮೇಲ್ಛಾವಣಿಯಿಲ್ಲ, ಈ ಮೊದಲೇ ನಿಮಗೆ ಕಟ್ಟಡ ಯಾಕೆ ಅಪೂರ್ಣವಾಯಿತು ಎಂಬ ಬಗ್ಗೆ ತಿಳಿಸಲಾಗಿದೆ . ಕಮಾನುಗಳನ್ನು ಬೃಹತ್ ಕಂಬಗಳು, ದೊಡ್ಡ ಕಲ್ಲುಗಳು ಚೆನ್ನಾಗಿ ಹಿಡಿದಿಟ್ಟುಕೊಂಡು ಬೆಂಬಲಿಸುತ್ತವೆ. ಕಮಾನುಗಳು ಪರಸ್ಪರ ಸಂಪರ್ಕ ಹೊಂದಿದ್ದು, ಯಾವುದೇ ಅಲಂಕಾರ ಮತ್ತು ಮೇಲ್ಭಾಗವಿಲ್ಲದೆ ಗೋರಿಗಳು ಸರಳವಾಗಿವೆ. ಬಾರಾ ಕಮಾನ್ ಮುಂಭಾಗದ ಉದ್ಯಾನವನ್ನು ಉತ್ತಮವಾಗಿ ನಿರ್ವಹಿಸಲಾಗಿದೆ. ಇತಿಹಾಸವನ್ನು ಕೆದಕಿದಾಗ ತಂದೆ ಮತ್ತು ಮಗ ಸಮಾಧಿಗಳ ವಿಷಯದಲ್ಲಿ ಇಬ್ಬರೂ ಪರಸ್ಪರರನ್ನು ಮೀರಿಸಲು ಪ್ರಯತ್ನಿಸಿರುವುದು ಕಂಡುಬರುತ್ತದೆ. ಇತ್ತೀಚಿನ ದಿನಗಳಲ್ಲಿ ಬಾರಾ ಕಮಾನ್ ಉತ್ತಮ ಫೋಟೋ ಶೂಟ್ ತಾಣವಾಗಿಯೂ ಹೊರಹೊಮ್ಮುತ್ತಿರುವುದು ಸಂತೋಷದ ವಿಷಯ.(ಕೃಪೆ: ವಿಜಯ ಕರ್ನಾಟಕ)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ