ಕರ್ನಾಟಕದ ಮಹಿಳೆಯರು ವೇದಗಳ ಕಾಲದಲ್ಲಿ ಲಿಂಗ ತಾರತಮ್ಯವು ಇರಲಿಲ್ಲವೆಂಬುದು ವಿಧಿತವಾದ ಸತ್ಯ. ಗುರುಕುಲ ಅಥವಾ ಆಶ್ರಮದಲ್ಲಿ ತಮ್ಮ ಅಧ್ಯಯನಗಳನ್ನು ಪ್ರಾರಂಭಿಸುವ ಮುನ್ನ, ಗಂಡು ಹಾಗೂ ಹೆಣ್ಣು ಮಕ್ಕಳಿಬ್ಬರಿಗೂ ಉಪನಯನ ಸಮಾರಂಭವನ್ನು ಆಚರಿಸಲಾಗುತ್ತಿತ್ತು. ಬಹುತೇಕ ಹುಡುಗಿಯರು
ಆರಾಮವಾದ ಕುಟುಂಬ ಜೀವನದತ್ತ ಒಲವು
ತೋರಿ ವಿವಿಧ ಕಲೆಗಳು ಹಾಗೂ ಕೌಶಲ್ಯಗಳನ್ನು
ಕಲಿತು, ಒಳ್ಳೆಯ ಗೃಹಿಣಿಯರಾಗುತ್ತಿದ್ದರು.
ಅವರನ್ನು ಸದ್ಯೋವಧುಗಳು ಎಂದು
ಕರೆಯಲಾಗುತ್ತಿತ್ತು.ಗುರುಕುಲದಲ್ಲಿ ದೈವ
ಸಾಕ್ಷಾತ್ಕಾರದ ಗಂಭೀರ ಅಧ್ಯಯನವನ್ನು
ಕೈಗೊಂಡ ಕೆಲವರು ಕಲಿಕೆಯ ಎಲ್ಲ ರೀತಿಗಳಲ್ಲೂ
ಉತ್ತಮವಾಗಿ ಹಾಗೂ ವಿಶೇಷವಾಗಿ ಬ್ರಹ್ಮನ್
ಸ್ವರೂಪ ಕುರಿತಾದ ವಾದಗಳಲ್ಲಿ ನಿಷ್ಣಾತರಾದರು.
ಅವರನ್ನು ಬ್ರಹ್ಮವಾದಿನಿ ಎಂದು ಕರೆಯುತ್ತಿದ್ದು
ಅವರನ್ನು ದರ‍್ಶನಿಕರು ಹಾಗೂ ಮಂತ್ರಗಳ
ರಚನಕಾರರೆಂದು ಸ್ಮರಿಸಲಾಗುತ್ತದೆ.
ಕಟ್ಟಡ ನರ‍್ಮಾಣ ಕಲೆ, ಸಾಹಿತ್ಯ ಕಲೆ ಹಾಗೂ
ಜ್ಞಾನದ ಪ್ರಚಾರದಲ್ಲಿ ಮಹಿಳೆಯರ ಪಾತ್ರವು
ರ‍್ನಾಟಕದಲ್ಲಿ ಪುರುಷರಷ್ಟೇ ಗಣನೀಯವೆಂದು
ತೋರುತ್ತದೆ. ಸಾಹಿತ್ಯಕ ಹಾಗೂ ಶಾಸನ
ಗಳಲ್ಲಿ ದೊರೆಯುವ ಹೇರಳ ಸಾಕ್ಷಿ ಇದಕ್ಕೆಆಧಾರವಾಗಿದೆ. ಕಾಳಿದಾಸ ಹಾಗೂ ಭಾರವಿಗೆ
ಹೋಲಿಕೆಯಲ್ಲಿ ಸಮನಾದ ರವಿಕರ‍್ತಿ ಎಂಬ
ಕವಿತಾ ಹಾಗೂ ಇತರ ಕವಿಗಳು; ವಿದ್ವತ್-
ಜನರು ಬಾದಾಮಿ ಚಾಲುಕ್ಯರ ಆಸ್ಥಾನವನ್ನು
ಅಲಂಕರಿಸಿದ್ದರು. ಅವರ ಪೈಕಿ, ಉನ್ನತ
ಮಟ್ಟದ ಕವಿ ಸಾರ‍್ಥ್ಯದಿಂದ ಕೂಡಿದಾಕೆ
ಎಂದು ರಾಜಶೇಖರನಿಂದ ಹಾಡಿಹೊಗಳಲ್ಪಟ್ಟ
ರಾಣಿ ವಿಜಯಾ ಇದ್ದಳು. ಜ್ಞಾನದ ಎಲ್ಲ
ಶಾಖೆಗಳನ್ನು ಕುರಿತಾದ ಪರಿಜ್ಞಾನ ಹಾಗೂ
ಅನೇಕ ಭಾಷೆಗಳ ವಿದ್ವತ್ ಹೊಂದಿದ್ದ ಆಕೆ,
ಹೊಗಳಿಕೆಗೆ ಯೋಗ್ಯವಾದ ರ‍್ಚಸ್ಸನ್ನು ಹೊಂದಿದ್ದಳು.ವಿಜಯಾಂಬಿಕ, ವಿದ್ಯಾ ಅಥವಾ ಬಿಜ್ಜಿಕ
ಎಂದು ಕರೆಯಲ್ಪಡುವ ವಿಜಯಾ, ಎರಡನೆಯ ಪುಲಕೇಶಿಯ ಮಗ ಚಂದ್ರಾದಿತ್ಯನ ಪತ್ನಿ
ಆಗಿದ್ದಿರಬಹುದು.
ಜೈನ ದೇವಾಲಯಗಳ ನರ‍್ಮಾಣ ಹಾಗೂ ವಿದ್ವಾಂಸರಿಗೆ ಪೆÇನ್ನನ ಶಾಂತಿಪುರಾಣದ ಸಾವಿರ
ಪ್ರತಿಗಳ ಹಂಚಿಕೆಯ ಮೂಲಕ ಜೈನ ಮತದ ಪ್ರಚಾರವನ್ನು ಕ್ರಿ.ಶ.೧೧ನೆಯ ಶತಮಾನದಲ್ಲಿದ್ದ
ರಾಣಿ ಅತ್ತಿಮಬ್ಬೆ ಮಾಡಿದ್ದು ಉಲ್ಲೇಖರ‍್ಹವಾಗಿದೆ. ಅತ್ತಿಮಬ್ಬೆಯನ್ನು ದಾನ-ಚಿಂತಾಮಣಿ
ಎಂದು ಕರೆಯಲಾಗುತ್ತಿತ್ತು (ಉಡುಗೊರೆಗಳನ್ನು ನೀಡುವ ದೈವಿಕ ಒಡವೆ). ಸಾಧುತ್ವ,
ಧರ‍್ಮಿಕ ಶ್ರದ್ಧೆ, ಉತ್ಸಾಹ ಹಾಗೂ ಸದಾಚಾರಕ್ಕಾಗಿ ಆಕೆಯು ಹೆಸರುವಾಸಿಯಾಗಿದ್ದಳು. ತನ್ನ
ವಿಕ್ರಮಾಂಕದೇವಚರಿತಂನಲ್ಲಿ ಆರನೆಯ ವಿಕ್ರಮಾದಿತ್ಯನೊಂದಿಗೆ ಕರಾಡ್‍ನ ಶಿಲಹಾರ ಮುಖ್ಯಸ್ಥನ
ಮಗಳಾದ ಚಂದ್ರಲೇಖಳ ಸ್ವಯಂವರವನ್ನು ಬಿಲ್ಹಣನು ಅವಿಸ್ಮರಣೀಯಗೊಳಿಸಿದ್ದಾನೆ, ಈ ಮಹಾನ್
ರಾಜಕುಮಾರಿಗೆ ಅಭಿನವ ಶಾರದೆ, ಸರಸ್ವತಿ, ಮುಂತಾದ ನೃತ್ಯ-ವಿದ್ಯಾಧರಿಗಳಿಂದ ಪ್ರಶಂಸೆಗಳು
ಸಂದವು. ಕಲಿಕೆಯ ವಿವಿಧ ಶಾಖೆ ಹಾಗೂ ಕುಶಲ ಕಲೆಗಳಲ್ಲಿ ಪರಿಣತಿಯನ್ನು ಹೊಂದಿದ್ದಳೆಂದು
ತಿಳಿದು ಬರುತ್ತದೆ. ಕಲ್ಯಾಣ ಚಾಳುಕ್ಯರ ಆಡಳಿತದಲ್ಲಿ, ಸಾಮ್ರಾಜ್ಯಶಾಹಿ ಕುಟುಂಬದ ಅನೇಕ
ರಾಜಮನೆತನ ಅಥವಾ ಸಾಮಂತ ರಾಜಮನೆತನದ ಮಹಿಳೆಯರಾದ ಅಕ್ಕಾದೇವಿ, ಜಯಸಿಂಹ
ಹಾಗೂ ಜಕ್ಕಲ ದೇವಿಯ ಸಹೋದರಿ, ನಾಲ್ಕನೆಯ ವಿಕ್ರಮಾದಿತ್ಯನ ರಾಣಿ, ಇವರೆಲ್ಲರೂ ಜ್ಞಾನ
ಹಾಗೂ ಆಡಳಿತ ಕ್ಷೇತ್ರದಲ್ಲಿ ಮಾತ್ರವಲ್ಲದೆ, ರಣರಂಗದಲ್ಲೂ ತಮ್ಮ ಸ್ಥಾನವನ್ನು ಸ್ಥಾಪಿಸಿಕೊಂಡರು.
ಪಂಪನು ಅಮರವಾಗಿಸಿದ ನೀಲಾಂಜನೆ ಹಾಗೂ ಹೊಯ್ಸಳ ರಾಣಿಯಾದ ಶಾಂತಲಾದೇವಿಯನ್ನು
ಕುರಿತಾಗಿ, ಕಲೆ, ಸಂಗೀತ ಹಾಗೂ ನೃತ್ಯಗಳ ಅತ್ಯಂತ ಮಹಾನ್ ಪ್ರತಿಪಾದಕರೆಂದು ಶಾಸನಗಳು
ಸಾರಿವೆ. ಹಲವಾರು ಗಂಗ ಹಾಗೂ ಹೊಯ್ಸಳ ರಾಜಕುಮಾರಿಯರು ತಮ್ಮ ಕುಶಲ ಕಲಾದಕ್ಷತೆಗೆ
ಹೆಸರುವಾಸಿಯಾಗಿದ್ದರು.
ಕ್ರಿ.ಶ.೧೦ನೆಯ ಶತಮಾನದಲ್ಲಿ ತನ್ನ ಪತಿಯ ಮರಣದ ನಂತರ, ನಾಡಗಾವುಂಡನ ಪದವಿಗೆ
ಪತ್ನಿಯು ಉತ್ತರಾಧಿಕಾರಿಯಾಗತ್ತಿದ್ದು, ಆಕೆಯ ಮರಣದ ನಂತರ, ಈ ಪದವಿಯು ಆಕೆಯ
ಮಗಳಿಗೆ ಸೇರುತ್ತಿತ್ತು. ಮಹಿಳೆಯರು ಆಡಳಿತಗಾರರಾಗಿ ನೇಮಕಗೊಳ್ಳುತ್ತಿದ್ದು ರಾಜಮನೆತನದ
ಅನೇಕ ಮಹಿಳೆಯರನ್ನು ರಾಜ್ಯಪಾಲರ ಹುದ್ದೆಗೆ ನೇಮಕ ಮಾಡಲಾಗುತ್ತಿತ್ತು. ತನ್ನ ಭಾವನಾದ
ಒಂದನೆಯ ಚಾಲುಕ್ಯ ವಿಕ್ರಮಾದಿತ್ಯನ ಅಡಿಯಲ್ಲಿ, ವಿಜಯಾಂಕ ಪ್ರಾಂತ್ಯವೊಂದರ ಆಡಳಿತವನ್ನು
ವಹಿಸಿಕೊಂಡಿದ್ದ ಅವಳು ರಣಭೈರವಿ ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತಿದ್ದಳು. ಹೊಯ್ಸಳ
ರಾಣಿಯಾದ ಉಮಾದೇವಿಯು ಸೈನ್ಯಗಳ ಮುಂದಾಳತ್ವವನ್ನು ವಹಿಸಿ, ಯುದ್ಧಗಳನ್ನು ಗೆದ್ದಳು.
ಕ್ರಿ.ಶ.೧೩ನೆಯ ಶತಮಾನದಲ್ಲಿ, ಅಳುಪ ರಾಜ್ಯವನ್ನು ಬಲ್ಲಮಹಾದೇವಿಯು ಸ್ವತಂತ್ರವಾಗಿ
ಆಳಿದಳು. ನಂತರ, ಪಶ್ಚಿಮ ಕರಾವಳಿಯಲ್ಲಿ ಮಹಿಳಾ ಸಂತತಿಯ ಮೂಲಕ ಉತ್ತರಾಧಿಕಾರತ್ವ
ಅಥವಾ ಅಳಿಯ-ಸಂತಾನವು ಜನಪ್ರಿಯವಾದಾಗ, ವೀರೋಚಿತ ರಾಣಿಯರಾದ ಉಲ್ಲಾಳದ
ಅಬ್ಬಕ್ಕ, (ಪೆÇರ‍್ಚುಗೀಸ್‍ರ ವಿರುದ್ಧ ಹೋರಾಡಿದವಳು) ಹಾಗೂ ಗೇರುಸೊಪ್ಪೆಯ ಚೆನ್ನಾದೇವಿಚೆನ್ನಭೈರಾದೇವಿಯರು ಆಳಿದರು.ಪೋರ್ಚುಗೀಸರು ಚೆನ್ನಭೈರಾದೇವಿಯನ್ನು ‘ಮೆಣಸಿನ ರಾಣಿ’
ಎಂದೇ ಕರೆಯುತ್ತಿದ್ದರು.
ದೇಶದ ಇತರೆಡೆಗಳಿಗಿಂತ, ಕರ್ನಾಟಕದ ಮಹಿಳೆಯರು ಹೆಚ್ಚಿನ ಸ್ವಾತಂತ್ರವನ್ನು ಅನುಭವಿಸಿದರು.
ಹಾಸನ ಜಿಲ್ಲೆಯಲ್ಲಿ ದೊರೆತ ಕ್ರಿ.ಶ.೧೧೫೬ರ ದಾಖಲೆಯೊಂದರ ಪ್ರಕಾರ ಮಹಿಳೆಯರಿಗೆ ಆಸ್ತಿಯ
ಉತ್ತರಾಧಿಕಾರತ್ವ, ಅದನ್ನು ಉಯಿಲು ಬರೆ ಯುವುದು ಹಾಗೂ ಸಾಕ್ಷಿಗಳಾಗಿ ನಿಲ್ಲುವುದನ್ನು
ಮಾಡಬಹುದಾಗಿತ್ತು. ವಿಜಯನಗರದ ಕಾಲದಲ್ಲಿ, ಅರಮನೆಯಲ್ಲಿ
ಕಾವಲುಗಾರರು ಹಾಗೂ ಪಲ್ಲಕ್ಕಿ ಹೊರುವವರಾಗಿಯೂ ಕೆಲಸ
ಮಾಡುತ್ತಿದ್ದರು. ಮಹಿಳಾ ಕುಸ್ತಿಪಟುಗಳು ಇದ್ದರೆಂಬ ಸಾಕ್ಷಿಯೂ ಇದೆ.
ರಾಜಧಾನಿಯಲ್ಲಿ ಹಲವಾರು ಮಹಿಳೆಯರು ವ್ಯಾಪಾರದಲ್ಲಿ ತೊಡಗಿದ್ದರು.
ಭಾರತದ ಪ್ರತಿಷ್ಠಿತ ಚರಿತ್ರಕಾರರಾದ ಡಾ.ಬಿ.ಎ.ಸಾಲೆತೋರ್‌ರವರ
ಪ್ರಕಾರ, “ದಕ್ಷಿಣ ಭಾರತದ ಮಹಿಳೆಯರು, ಗೃಹ ಜೀವನಕ್ಕೆ ಪೂರಕವಾದ ಚಟುವಟಿಕೆಗಳಿಗೆ ಸಂಬಂಧಿಸಿದಂತೆ, ಕಾನೂನು ರೂಪಿಸುವವರು ವಿಧಿಸಿದ ಎಲ್ಲೆಗಳನ್ನು ಬಹುಪಾಲು ಮೀರಿ ಬೆಳೆದಿದ್ದರು,” ಎಂದಿದ್ದಾರೆ.ಕರ್ನಾಟಕದ
ಮಹಿಳೆಯರ ಪಾಲಿಗೂ ಇದು ಸತ್ಯ. ಕೆಳ ಜಾತಿಗಳಲ್ಲಿ ವಿಧವಾ ವಿವಾಹವು ಸಾಮಾನ್ಯವಾಗಿತ್ತು.ಬಹುಪತ್ನಿತ್ವವು
ಇದ್ದರೂ, ಬಹುತೇಕಅದು ರಾಜರು ಹಾಗೂ ಸ್ಥಿತಿವಂತರಲ್ಲಿ
ಪ್ರಚಲಿತವಿತ್ತು.ಆಭರಣಗಳನ್ನು ಧರಿಸಿದ ಮಗಳ ಮದುವೆ ಮಾಡುವುದು ಅಥವಾ ಸಾಲಂಕೃತ-ಕನ್ಯಾದಾನವು ಸಾಮಾನ್ಯ ವಾಡಿಕೆಯಾಗಿದ್ದು ನಂತರ ಇದು ವರದಕ್ಷಿಣೆಯಾಗಿ ಮಾರ್ಪಾಡು ಹೊಂದಿತು.ಮದುಮಗಳ
ದರವನ್ನು ನೀಡುವ ದುಷ್ಟ ವಾಡಿಕೆಯೂ ಇದ್ದು ವಿಜಯನಗರ ಕಾಲದ ದಾಖಲೆಯೊಂದು, ಈ ಆಚರಣೆಯ ವಿರುದ್ಧ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಹಲವಾರು ಬ್ರಾಹ್ಮಣರ ಸಮಾಲೋಚನೆಯು ನಡೆಯಿತೆಂದು ಹೇಳುತ್ತದೆ. ಸಾಹಿತ್ಯಕ ಮೂಲಗಳ ಪ್ರಕಾರ, ವೇಶ್ಯೆಯರು ಎಲ್ಲ ಪಟ್ಟಣ ಹಾಗೂ ನಗರಗಳಲ್ಲೂ ಇದ್ದರು. ರಾಜರು ತಮ್ಮನ್ನು ಹೆಮ್ಮೆಯಿಂದ ವೇಶ್ಯಾಭುಜಂಗ ಹಾಗೂ ವೀತಚಕ್ರವರ್ತಿ ಎಂದು ಕರೆದುಕೊಳ್ಳುವ ಮೂಲಕ,
ಈ ವೃತ್ತಿಯು ರಾಜಾಶ್ರಯವನ್ನು ಪಡೆದಿತ್ತೆಂದು ಸೂಚಿಸುತ್ತದೆ.ದೇವಾಲಯಗಳಿಗೆ ನರ್ತನ ಮಾಡುವ ಕನ್ಯೆಯರನ್ನು ಹಾಗೂ ಚೌರಿ ಹೊರುವವರಂತಹ ಇತರ ಸ್ತ್ರೀ ಪರಿಚಾರಕರನ್ನು ಒದಗಿಸಲಾಗಿತ್ತು. ನರ್ತನ ಮಾಡುವವರನ್ನು ಕುಣಿಯುವ ಸೂಳೆ ಎಂದು ಕರೆದರೆ, ಚೌರಿ ಹೊರುವ ಮಹಿಳೆಯರನ್ನು ಚಾಮರದ ಸೂಳೆ ಎಂದು ಕರೆಯುತ್ತಿದ್ದರು.ಮಧ್ಯಕಾಲೀನ ಕರ್ನಾಟಕದ ಮಹಿಳೆಯರು ಧಾರ್ಮಿಕ, ರಾಜಕೀಯ ಹಾಗೂ ಸಾಮಾಜಿಕ
ವಲಯಗಳಲ್ಲಿ ಗೌರವಯುತ ಸ್ಥಾನಗಳನ್ನು ಅಲಂಕರಿಸಿ, ಪ್ರಮುಖ ಪಾತ್ರಗಳನ್ನು ನಿರ್ವಹಿಸಿ, ಕರ್ನಾಟಕದ ಸಂಸ್ಕöÈತಿಗೆ ಗಣನೀಯ ಕೊಡುಗೆಯನ್ನು ನೀಡಿರುವ ಅಂಶವನ್ನು ಶಿಲಾಶಾಸನಗಳು
ಸ್ಪಷ್ಟವಾಗಿ ವಿವರಿಸುತ್ತದೆ. ಆದರೆ, ೧೨ನೆಯ ಶತಮಾನದ ನಂತರದ ಭಾಗದವರೆಗೂ, ಅನನ್ಯ
ಯೋಗಿನಿ ಹಾಗೂ ವಚನಕಾರ್ತಿಯಾದ ಅಕ್ಕಮಹಾದೇವಿ ಹಾಗೂ ಇತರ ವಚನಕಾರ್ತಿಯರು
ಬರುವವರೆಗೂ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಮುಖವಾಗಿ ಮಹಿಳೆಯರು ಕಾಣಿಸಿಕೊಳ್ಳಲಿಲ್ಲ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಚನಕಾರ್ತಿಯರ ಪೈಕಿ, ಅಕ್ಕಮಹಾದೇವಿಗೆ ತನ್ನದೇ ಆದ ತೇಜಸ್ಸು ಇತ್ತು.ಆಕೆಯು ‘ಕರ್ನಾಟಕದ ಸಿಸ್ಟರ್ ಸುಪೀರಿಯರ್’ ಹಾಗೂ ‘ಭಾರತದ ಅತ್ಯಂತ ಪ್ರಮುಖ
ಯೋಗಿನಿ’ ಆಗಿದ್ದಳು.ಕಲ್ಯಾಣದ ಕಳಚುರಿ ಬಿಜ್ಜಳನ ಆಸ್ಥಾನದಲ್ಲಿ ಬಸವೇಶ್ವರನ ಸಮಕಾಲೀನ ಮಹಿಳಾ
ಸಂತಳಾದ ಅಕ್ಕ ಮಹಾದೇವಿಯು, ಚನ್ನ ಮಲ್ಲಿಕಾರ್ಜುನನ ಮಹಾನ್ ಭಕ್ತೆಯಾಗಿದ್ದಳು.ಚನ್ನನ ದಯೆಯನ್ನು ಪಡೆದ ಮಂದಿಯು, ದೈಹಿಕ ಅವಶ್ಯಕತೆಗಳಿಗೆ ಚಿಂತೆ ಮಾಡುವ
ಅಗತ್ಯವಿಲ್ಲ ಎಂದು ಅಕ್ಕ ನಂಬಿದ್ದಳು.ತನ್ನ ಸ್ವಾಮಿಯ ಸಲುವಾಗಿ ಅಂತ್ಯವಿಲ್ಲದ ಹಾಗೂನಿರಂತರ ಯಾತನೆಯನ್ನು ಅನುಭವಿಸಲು ದೇಹವನ್ನು ದಂಡಿಸಲು ಅಕ್ಕ ಸಿದ್ಧಳಾಗಿದ್ದಳು.ಅಕ್ಕನಿಗೆ, ಚನ್ನಮಲ್ಲಿಕಾರ್ಜುನನಿಲ್ಲದ
ಮಾತು ಕೃತಿ ಹಾಗೂ ಸ್ವಾತಂತ್ರವು ಭ್ರಮೆ.
ಆತನು ಸರ್ವಾಂತರ್ಯಾಮಿಯೆಂದು ನಾವು
ಕಂಡುಕೊಂಡರೆ, ಮೋಕ್ಷವನ್ನು ಪಡೆಯಬಹುದು
ಎಂಬುದನ್ನು ಕಂಡುಕೊಂಡಿದ್ದಳು.
ಆಧ್ಯಾತ್ಮಿಕ ಹಾಗೂ ಸಾಹಿತ್ಯಕ ವಲಯಗಳಲ್ಲಿ
ಅಕ್ಕ ಮಹಾದೇವಿಯು ಅನರ್ಘ್ಯ ರತ್ನ.
ಅಕ್ಕ ಮಹಾದೇವಿ ಎಂಬ ಆಕೆಯ ಹೆಸರು
ಅನ್ವರ್ಥದಾದುದು - ಅಕ್ಕ ಎಂದರೆ
ಹಿರಿಯಕ್ಕ, ಹಾಗೂ ಮಹಾದೇವಿ ಎಂದರೆ ಮಹಾನ್ ಆತ್ಮ ಎಂದು.ಸಾಹಿತ್ಯ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಆಕೆಯು ನೀಡಿದ ಅಮೂಲ್ಯ
ಕೊಡುಗೆ, ಸಾರೋಕ್ತಿಗಳು ಎಂದೆಂದಿಗೂ ಪೂಜನೀಯವಾದ ವಚನಗಳೆಂಬ ಅದ್ಭುತವಾದ
ಕೃತಿಗಳು.ಸಂಸಾರ ಸಾಗರವನ್ನು ದಾಟಲು ಮನುಷ್ಯನಿಗೆ ಮಾರ್ಗದರ್ಶನ, ಜ್ಞಾನ ಹಾಗೂ
ಅನುಭಾವಗಳೆಂಬ ದಾರಿ ದೀವಿಗೆಗಳು ಮಾನವರಿಗೆ ಸೇವೆ ಸಲ್ಲಿಸುತ್ತದೆ.ಸಾಮಾನ್ಯ ಜನರಿಗೆ
ಚಿರಪರಿಚಿತವಾದ ವಿಷಯ ಹಾಗೂ ಭಾಷೆಗಳನ್ನು ಬಳಸಿ, ಅತ್ಯಂತ ಸರಳ ಹಾಗೂ ಚುಟುಕಾದ
ವಾಕ್ಯಗಳಲ್ಲಿ, ಅಕ್ಕನು ಸ್ಪಷ್ಟವಾಗಿ ಎದ್ದುಕಾಣುವ ಹಾಗೆ, ಆಳವಾದ ವ್ಯಾವಹಾರಿಕ ತತ್ವಜ್ಞಾನವನ್ನು
ವಿವರಿಸಿದ ರೀತಿಯು, ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತಿದೆ. ಸಗುಣ ಹಾಗೂ ನಿರ್ಗುಣ
ಬ್ರಹ್ಮನಾದ ದೇವನ ಸರ್ವಶಕ್ತಿ, ಸರ್ವಜ್ಞತೆ ಹಾಗೂ ವಿಶ್ವವ್ಯಾಪಕತೆ ಯನ್ನು ಆಕೆಯು ಸ್ಫುಟವಾಗಿ
ವಿವರಿಸಿದ್ದಾಳೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ