ವಿಷಯಕ್ಕೆ ಹೋಗಿ

ಆದಿಲ್ ಶಾಹಿ ಕಾಲದ ವಾಸ್ತುಶಿಲ್ಪ

ಆದಿಲ್‌ಶಾಹಿ ಕಾಲದ ವಾಸ್ತುಶಿಲ್ಪ

ಶಂಕರ ನಿಂಗನೂರ
ಎಸ್.ಆರ್.ಇ.ಎಸ್.ಪ್ರ.ದ.ಕಾಲೇಜು, ಕಲ್ಲೋಳಿ


ಆದಿಲ್‌ಶಾಹಿ ಕಾಲದ ವಾಸ್ತುಶಿಲ್ಪವನ್ನು ಬಿಜಾಪುರದಲ್ಲಿ ಕಾಣಬಹುದು. ಈ ಶೈಲಿ ಬಹುಮನಿ ಕಟ್ಟಡಗಳ ಭವ್ಯತೆಯನ್ನು ಉಳಿಸಿಕೊಂಡಿದೆ. ಈ ಶೈಲಿಯ ಇನ್ನೊಂದು ವೈಶಿಷ್ಟ, ಗೋಪುರದ ವಿನ್ಯಾಸ, ಗಾತ್ರದಲ್ಲಿ ಗೋಪುರಗಳು ಚಿಕ್ಕದಾಗಿದ್ದು ಅಲಂಕಾರದಿಂದ ಕೂಡಿದೆ. ಇಲ್ಲಿಯ ವಾಸ್ತುಶಿಲ್ಪದ ಲಕ್ಷಣಗಳಲ್ಲಿ ಮುಖ್ಯವಾದವು. ಇಲ್ಲಿಯ ಗೊಮ್ಮಟ ಬಹುತೇಕ ವರ್ತುಲ ಆಕಾರದಲ್ಲಿ ಅದರ ನೆಲಗಟ್ಟಿನಲ್ಲಿ ಹೂವಿನ ದಳದಂತೆ ಆಕಾರವನ್ನು ಕಾಣಬಹುದು. ಕಮಾನಿನ ಆಕಾರ ತುಂಬ ವಿಶೇಷವಾದದ್ದು. ಆದರ ಗೆರೆಗಳ ತುದಿ ಹಿಂದಿನ ಕೋನ ಸಂಧಿಗಳನ್ನು ಕಳೆದುಕೊಂಡು ನಯವಾಗಿ ಬಾಗಿಸಲಾಗಿದೆ. ಬಿಜಾಪುರದ ವಾಸ್ತುಶಿಲ್ಪದಲ್ಲಿ ಕಂಬಗಳು ಇರುವುದಿಲ್ಲ. ಅವುಗಳ ಜಾಗದಲ್ಲಿ ಆಯತಾಕಾರದ ವೇದವಿನ್ಯಾಸದ ದಪ್ಪಗೋಡೆಗಳಿರುತ್ತವೆ. ಗೋಡೆಯ ಚೌಕವು ಬಹುತೇಕ ಕಟ್ಟಡಗಳಲ್ಲಿ ಅಲಂಕಾರವಾಗಿರುತ್ತವೆ.

ಗೋಳಗುಮ್ಮಟ

ಇದು ಮಹಮದ್ ಆದಿಲ್‌ಶಾಹ್ನ (1627-57) ಸಮಾಧಿ ಸ್ಮಾರಕ, ಬಿಜಾಪುರದ ವಾಸ್ತುಶಿಲ್ಪಕ್ಕೆ ವಿಶಿಷ್ಟತೆಯನ್ನು ತಂದುಕೊಟ್ಟಿರುವ ಅದ್ವಿತೀಯ ಕಲಾಕೃತಿ. ಇದರ ಬೃಹದಾಕಾರದ ಅದ್ಭುತ ರಚನೆ ಅಚ್ಚರಿಯನ್ನುಂಟು ಮಾಡುವಂಥದು. ಇಲ್ಲಿ ಒಂದು ಧ್ವನಿ ಏಳು ಸಾರಿ ಪ್ರತಿಧ್ವನಿಸುತ್ತದೆ. ಊರಿನ ಪೂರ್ವಭಾಗದಲ್ಲಿರುವ ಈ ಕಟ್ಟಡ ಉದ್ಯಾನವಿರುವ ವಿಶಾಲವಾದ ಪ್ರಾಕಾರದ ಮಧ್ಯದಲ್ಲಿದೆ. ಸುಮಾರು 200 ಅಡಿಗಳಷ್ಟು ಉದ್ದ ಅಗಲಗಳ ಚೌಕಾಕೃತಿಯ ನೆಲಗಟ್ಟಿನ ಮೇಲೆ ಇದು ನಿರ್ಮಿತವಾಗಿದೆ. ಎತ್ತರ ಸಹ ಸುಮಾರು 200 ಅಡಿಗಳಷ್ಟಿದೆ. ಇದರ ಮೇಲೆ ವರ್ತುಲಾಕೃತಿಯ ಬೃಹತ್ ಗೋಪುರವಿದೆ. ಇದರ ವ್ಯಾಸ 114 ಅಡಿ ಇಷ್ಟು ದೊಡ್ಡ ಗೋಪುರವನ್ನು ಬೇರೆ ಯಾವುದೇ ಕಟ್ಟಡ ಹೊಂದಿಲ್ಲ. ಕಟ್ಟಡದ ಒಳಭಾಗದಲ್ಲಿ 135 ಅಡಿ ಚೌಕಾಕೃತಿಯ ಒಂದು ಸಮಾಧಿ ಕೋಣೆ ಇದೆ. ಇದರ ಎತ್ತರ 178 ಅಡಿಗಳು. ಇದರಲ್ಲಿ 110 ಅಡಿಗಳಷ್ಟು ಎತ್ತರದಿಂದ ಗೋಪುರದ ಆಕೃತಿ ಪ್ರಾರಂಭವಾಗುತ್ತದೆ. ಅಲ್ಲಿ ಗೋಪುರದ ಒಳಭಾಗದ ಸುತ್ತಲೂ ಬರುವಂತೆ ಹಲವಾರು ಅಡಿಗಳಷ್ಟು ಅಗಲದ ಮೊಗಸಾಲೆಯಿದೆ. ಈ ಕೋಣೆಯ ಒಳಭಾಗದ ವಿಸ್ತೀರ್ಣ 18,000 ಚ.ಅ.ಗಿಂತಲೂ ಹೆಚ್ಚಾಗಿದೆ. ಒಂದೇ ಗೋಪುರವನ್ನು ಇದು ಇಡೀ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡದು ಎನ್ನಲಾಗಿದೆ. ಗಾತ್ರದಿಂದ ಮಾತ್ರವಲ್ಲದೆ ಈ ಕಟ್ಟಡ ವಾಸ್ತುಶಿಲ್ಪ ವಿನ್ಯಾಸಗಳ ದೃಷ್ಟಿಯಿಂದಲೂ ಮೆಚ್ಚುವಂಥದು. ಮೇಲಿರುವ ಗುಮ್ಮಟವೇ ಕಟ್ಟಡದ ಪ್ರಮುಖ ಆಕರ್ಷಣೆ. ಇಟ್ಟಿಗೆ ಮತ್ತು ಗಾರೆಗಳಿಂದ ಕೂಡಿದ ಸುಮಾರು 10 ಅಡಿಗಳಷ್ಟು ದಪ್ಪದ ಗೋಡೆಯಿಂದ ಇದು ನಿರ್ಮಿತವಾಗಿದೆ.

ಇಬ್ರಾಹಿಂ ರೋಜಾ

ಎರಡನೇ ಇಬ್ರಾಹಿಂ ಆದಿಲ್ ಷಾ ತನ್ನ ಸಮಾಧಿ ಮಂದಿರವಾಗಿ ಇದನ್ನು ಕಟ್ಟಿಸಿಕೊಂಡ. ಇದರಲ್ಲಿ ಎರಡು ಮುಖ್ಯ ಕಟ್ಟಡಗಳಿವೆ. ವಿನ್ಯಾಸ ಪರಿಪೂರ್ಣತೆಯನ್ನು ಮುಟ್ಟಿದೆ. ಕಟ್ಟಡ ಕಪಿಲವರ್ಣದ ಕಲ್ಲಿನದು. ಕಟ್ಟಡ ಅಷ್ಟೇನೂ ದೊಡ್ಡದಲ್ಲ. ಆದರೆ ರಚನೆಯ ತಂತ್ರ, ಅಲಂಕಾರ ಮತ್ತು ಉಪಯುಕ್ತತೆಯ ದೃಷ್ಟಿಯಿಂದ ಇದು ಅಪೂರ್ವವಾದದ್ದು. ಎರಡೂ ಕಟ್ಟಡಗಳು 260 ಅಡಿ ಉದ್ದ 150 ಅಡಿ ಅಗಲವಿರುವ ಜಗತಿಯ ಮೇಲಿವೆ. ರೋಜಾದಲ್ಲಿ ಮಧ್ಯ ಹಜಾರದ ಸುತ್ತಲೂ ಕಮಾನು ಸಾಲುಗಳಿಂದ ಸುತ್ತುವರೆದ ಮೊಗಸಾಲೆ ಮತ್ತು ಗುಮ್ಮಟ ಇವೆ. ತೆಳುವಾಗಿಯೂ ಉದ್ದವಾಗಿಯೂ ಇರುವ ಮಿನಾರ್‌ಗಳು ಕಟ್ಟಡದ ಮೇಲೆ ಇವೆ. ಹೊರ ಗೋಡೆಯ ಮೇಲೆ ಕಲ್ಲಿನಲ್ಲಿ ಖುರಾನಿನ ವಾಕ್ಯಗಳನ್ನು ಕೊರೆಯಲಾಗಿದೆ. ಉತ್ತರದಲ್ಲಿ ತಾಜಮಹಲ್ ಇರುವಂತೆ ದಕ್ಷಿಣದಲ್ಲಿ ಇಬ್ರಾಹಿಂ ರೋಜಾ ಇದೆ ಎಂದು ಅಭಿಪ್ರಾಯಪಡಲಾಗಿದೆ.

ಜಾಮೀಮಸೀದಿ

ಒಂದನೇ ಆದಿಲ್‌ಷಾಹ್ನ ಕಾಲದಲ್ಲಿ ಇದು ನಿರ್ಮಾಣಗೊಂಡಿತು. ಇದು ಆಯತಾಕಾರದ ದೊಡ್ಡ ಕಟ್ಟಡ. 450 ಅಡಿ ಉದ್ದ, 225 ಅಡಿ ಅಗಲವಿದೆ. ಕಮಾನುಗಳನ್ನು ಹೊಂದಿದೆ. ಗೋಪುರ ಅರ್ಧಗೋಲಾಕಾರದಲ್ಲಿದೆ. ಒಳಭಾಗದಲ್ಲಿ ಅಲಂಕಾರವಿಲ್ಲದೆ ಸರಳವಾಗಿದೆ.ಪ್ರಾರ್ಥನಾ ಹಜಾರ 208 ಅಡಿ ಉದ್ದ 107 ಅಡಿ ಅಗಲವಿದೆ. ಕಂಬಗಳಿಂದ ಕೂಡಿದೆ. ಕಮಾನುಗಳು ಇದನ್ನು 5 ಹಜಾರಗಳನ್ನಾಗಿ ವಿಭಾಗಿಸುವಂತಿದೆ. ಇಲ್ಲಿಯ ಗೋಡೆಗಳ ಮೇಲೆ ಬಗೆಬಗೆಯ ಚಿತ್ರದ ಕೆಲಸಗಳೂ, ವರ್ಣ ವಿನ್ಯಾಸಗಳು ಕಂಡುಬರುತ್ತವೆ. ಗಗನಮಹಲ್ ಸುಮಾರು 1561ರ ನಿರ್ಮಾಣ. ಹಿಂದೆ ಇದು ರಾಜರ ನಿವಾಸ ಹಾಗೂ ಸಭಾಸದನ, ಪ್ರಸಿದ್ದ ಚಾಂದ್‌ಬೀಬಿ ಆಡಳಿತ ನಡೆಸುತ್ತಿದ್ದುದು ಇಲ್ಲಿಂದಲೇ. ಔರಂಗಜೇಬ್ ಬಿಜಾಪುರವನ್ನು ಆಕ್ರಮಿಸಿದ ಅನಂತರ ತನ್ನ ವಿಜಯದ ದರ್ಬಾರನ್ನು ನಡೆಸಿದ್ದು ಹಾಗೂ ಕೊನೆಯ ಆದಿಲ್‌ಶಾಹೀ ರಾಜ ಸಿಕಂದರನಿಗೆ ಬೆಳ್ಳಿಯ ಸಂಕೋಲೆಯನ್ನು ತೊಡಿಸಿ ಔರಂಗಜೇಬನ ಎದುರು ತಂದಿದ್ದು ಈ ಸಭಾಂಗಣದಲ್ಲಿ ಬಿಜಾಪುರದ ಕೋಟೆ ಬಹುಶಃ ಭಾರತದ ಬೃಹತ್ ಕೋಟೆಗಳಲ್ಲೊಂದು. ಒಂದು ಕಾಲದಲ್ಲಿ ಇಡೀ ಭಾರತದಲ್ಲೇ ವೈಭವದ ನಗರವಾಗಿ ಬೆಳೆದಿದ್ದ ಬಿಜಾಪುರದ ಎಲ್ಲ ಕಡೆಯಲ್ಲೂ ಆ ಕಾಲದ ಭವ್ಯ ಕಟ್ಟಡಗಳ ಅವಶೇಷಗಳನ್ನು ಕಾಣಬಹುದು. ಕೇಂದ್ರ ಪುರಾತತ್ವ ಇಲಾಖೆ ಮುಖ್ಯವಾದ ಕೆಲವನ್ನು ಆರಿಸಿ ರಕ್ಷಿಸಿರುವುದರ ಸಂಖ್ಯೆಯೇ ಸುಮಾರು 300 ರಷ್ಟು, ಈ ಪ್ರಾಚೀನ ಕಟ್ಟಡಗಳ ಜೊತೆಗೆ ಮಹಾಲಕ್ಷ್ಮಿ ದೇವಾಲಯ, ನರಸಿಂಹ ದೇವಾಲಯ, ಸಿದ್ದೇಶ್ವರ ದೇವಾಲಯ ಮುಂತಾದವು ಪ್ರಸಿದ್ಧವಾಗಿವೆ.

ಉಪಲಿ ಬುರುಜ್

ಅಲಿ ಆದಿಲಶಾಹನ ಕಾಲದಲ್ಲಿ ದಂಡಾಧಿಕಾರಿಯಾಗಿದ್ದ ಹೈದರಖಾನನ್ನು ಸನ್ 1583 ರಲ್ಲಿ ಕಟ್ಟಿಸಿದನು. ಇದರ ಎತ್ತರ 95 ಫೂಟು ಇದ್ದು, ಮೇಲೆ ಎರಡು ತೋಪುಗಳುಂಟು. ಒಂದು 30 ಫಟು 8 ಒಂಚಿನದಾಗಿದೆ. ಇನ್ನೊಂದು 19 ಫೂಟು 8 ಇಂಚಿನದಾಗಿದೆ. ಈ ಬುರುಜ ಕಾವಲುಗಾರರಿಗಾಗಿ ಕಟ್ಟಿಸಿದ್ದಾಗಿದೆ. ಗೋಪುರದ ಮೇಲ್ಭಾಗವು ನಗರದ ಒಂದು ಆದರ್ಶ ನೋಟವನ್ನು ನೀಡುತ್ತದೆ. ಗೋಪುರದ ಮೇಲೆ ದೊಡ್ಡ ಗಾತ್ರದ ಎರಡು ಬಂದೂಕುಗಳಿವೆ. ಮೇಲ್ವಿಚಾರಣೆ ಉದ್ದೇಶಗಳಿಗಾಗಿ ಬಳಸಲಾದ ಈ ಗೋಪುರವನ್ನು ಈಗ ಬೇಲಿಯಿಂದ ಸುತ್ತುವರಿದಿದೆ. ಉಪಲಿ ಬುರುಜ್ ಮೇಲಕ್ಕೆ ತಲುಪಲು ವೃತ್ತಾಕಾರದ ಮೆಟ್ಟಿಲುಗಳನ್ನು ಕಟ್ಟಲಾಗಿದೆ. ಆದಾಗ್ಯೂ ಈ ಗೋಪುರವನ್ನು ಹೊರತುಪಡಿಸಿ ಈ ಪ್ರದೇಶದಲ್ಲಿ ಸಿಟಾಡೆಲ್ ಗೋಡೆಯು ಅತೀವವಾದ ಸಾಕ್ಷ್ಯಾಧಾರಗಳಿಲ್ಲ.

ಗಗನ ಮಹಲ್

ಅರಕಿಲ್ಲೆ ವ್ಯಾಪ್ತಿಯಲ್ಲಿ ಅತ್ಯುತ್ತಮ ಕಟ್ಟಡವೆಂದರೆ ಗಗನ ಮಹಲ್, 1561ರ ಆಸುಪಾಸಿನಲ್ಲಿ ಸುಲ್ತಾನರ ಅರಮನೆ ಮತ್ತು ದರ್ಬಾರ್ ಹಾಲ್ ಎಂದು ಕಟ್ಟಲ್ವಟ್ಟ ಈ ಕಟ್ಟಡದ ಪ್ರಮುಖ ಆಕರ್ಷಣೆಯೆಂದರೆ, 60 ಅಡಿ 90 ಇಂಚುಗಳಷ್ಟು ಅಗಲವಿರುವ ಅದ್ಭುತವಾದ ಕಮಾನು. ಈ ಸುಂದರ ಕಟ್ಟಡ ಇತಿಹಾಸದ ಅನೇಕ ಸ್ಮರಣೀಯ ಘಟನೆಗಳಿಗೆ ಮೂಕ ಸಾಕ್ಷಿ.
ವಿಜಯಪುರವನ್ನು ಆಕ್ರಮಿಸಿಕೊಂಡು ಅದನ್ನು ಗೆದ್ದ ಔರಂಗಜೇಬ, ಸಿಕಂದರ್ ಅಲಿ ಶಾ ನನ್ನು ಬೆಳ್ಳಿ ಸರಪಳಿಯಲ್ಲಿ ಬಂಧಿಸಿಟ್ಟದ್ದು ಇಲ್ಲಿಯೇ ಈ ಸುಂದರ ಕಟ್ಟಡದ ಛಾವಣೆಯೇ ಇಲ್ಲವಾದರು ಇದರ ನಿಗೂಢ ಸೌಂದರ್ಯಕ್ಕೆ ಮತ್ತು ಸುತ್ತಲಿನ ಮನಮೋಹಕ ಉದ್ಯಾನದ ಚೆಲುವಿಗೆ ಮಾರುಹೋಗಿ ಇದನ್ನು ಸಂದರ್ಶಿಸುವ ಯಾತ್ರಿಕರು ಗಗನಮಹಲ್ನ ಮಹತ್ವವನ್ನು ಇನ್ನಷ್ಟು ಹೆಚ್ಚಿಸುತ್ತಾರೆ.

ಬಾರಾ ಕಮಾನ್

ವಿಜಯಪುರದಲ್ಲಿ ನೂರಾರು ಸಮಾಧಿ ಕಟ್ಟಡಗಳಿವೆ. ಬಾದಶಹರು, ಸರದಾರರು, ಸಾಧು ಸಂತರು ಇತ್ಯಾದಿಯಾಗಿ ಎಲ್ಲರೂ ತಮ್ಮ ತಮ್ಮ ಅಭಿರುಚಿಗೆ ತಕ್ಕಂತೆ ಸಮಾಧಿ ಕಟ್ಟಡಗಳನ್ನು ಕಟ್ಟಿಸಿಕೊಂಡಿದ್ದಾರೆ. ಅವುಗಳಲ್ಲಿ ಗೋಳಗುಮ್ಮಟ, ಇಬ್ರಾಹಿಮ ರೋಜಾ ಹಾಗೂ ಅಲಿ ರೋಜಾ ಅಥವಾ ಬಾರಾ ಕಮಾನ್ ವಾಸ್ತು ಶಿಲ್ಪಗಳು ಪ್ರಪಂಚದಲ್ಲಿಯೇ ಖ್ಯಾತಿಯನ್ನು ಗಳಿಸಿವೆ.
ಒಂದು ದಂತ ಕಥೆಯ ಪಕ್ರಾರ ಎರಡನೆಯ ಇಬ್ರಾಹಿಮ ಆದಿಲ್ ಶಹನು ಸೂಕ್ಷ್ಮ ಕೆತ್ತನೆ ಕಲಾ ಕುಸುರಿಯ ಕಟ್ಟಡ ಇಬ್ರಾಹಿಂ ರೋಜಾವನ್ನು ಕಟ್ಟಿದನು ಆತನ ಮಗ ಮಹ್ಮದ್ ಆದಿಲ್ ಶಹನಿಗೆ ಸೂಕ್ಷ್ಮತೆಯ ಕುಸುರಿ ಕೆಲಸಕ್ಕೆ ಅವಕಾಶವೆ ಇರಲಿಲ್ಲ. ಆದ್ದರಿಂದ ಅಪ್ಪನನ್ನು ಮೀರಿಸಬೇಕಾದರೆ ಭವ್ಯವಾದ ಅಷ್ಟೆ ಸರಳ ಗಾಂಭೀರ್ಯದ ಕಟ್ಟಡ ಗೋಳ ಗುಮ್ಮಟವನ್ನು ಕಟ್ಟಬೇಕಾಯಿತು. ಆತನ ಮಗ ಎರಡನೇಯ ಅಲಿ ಆದಿಲ್ ಶಾಹನು ಇವರಿಬ್ಬರನ್ನು ಮೀರಿಸುವ ಕಟ್ಟಡದ ಯೋಜನೆಯನ್ನು ಹಾಕಿ “ಅಲಿರೋಜಾ” ಕಟ್ಟಲು ಪ್ರಾರಂಭಿಸಿದನಂತೆ, ದೌರ್ಬಾಗ್ಯದಿಂದ ಅದು ಪೂರ್ತಿಯಾಗಲಿಲ್ಲ. ಅರೆ ಕೆಲಸಕ್ಕೆ ಪರ್ಯಾಯ ಶಬ್ದವಾಗಿ “ಬಾರಾಕಮಾನ್” ಆಯಿತು. ಕಟ್ಟಡದ ತಳಪಾಯ ಹಾಗೂ ಕಟ್ಟೋಣದ ಕ್ಷೇತ್ರವು ಗೋಳಗುಮ್ಮಟ್ಟಕ್ಕಿಂತ ದೊಡ್ಡದಾಗಿದೆ ಎಂಬುದನ್ನು ಊಹಿಸಿಕೊಂಡಾಗ ಕಟ್ಟಡ ಪೂರ್ತಿಗೊಂಡಿದ್ದರೆ ಪ್ರಪಂಚದಲ್ಲಿಯೇ ಅದೊಂದು ಅದ್ಭುತ ಕಟ್ಟಡವಾಗುತ್ತಿತ್ತು!

ಅಸರ್ ಮಹಲ್

ಸುಮಾರು 1646 ರಲ್ಲಿ ಮೊಹಮ್ಮದ್ ಆದಿಲ್ ಷಾ ಅವರಿಂದ ಅಸರ್ ಮಹಲ್ ಅನ್ನು ನಿರ್ಮಿಸಲಾಯಿತು, ಇದನ್ನು ನ್ಯಾಯ ಸಭಾಂಗಣವಾಗಿ ಬಳಸಲಾಗುತ್ತಿತ್ತು. ಈ ಕಟ್ಟಡವನ್ನು ಪ್ರವಾದಿಗಳ ಗಡ್ಡದಿಂದ ಕೂದಲಿಗೆ ಬಳಸಲಾಗುತ್ತಿತ್ತು. ಮೇಲಿನ ಮಹಡಿಯಲ್ಲಿನ ಕೊಠಡಿಗಳು ಹಸಿಚಿತ್ರಗಳಿಂದ ಅಲಂಕರಿಸಲ್ಪಟ್ಟಿವೆ ಮತ್ತು ಮುಂಭಾಗವನ್ನು ಚೌಕದ ತೊಟ್ಟಿಯಿಂದ ಅಲಂಕರಿಸಲಾಗುತ್ತದೆ. ಇಲ್ಲಿ ಮಹಿಳೆಯರು ಒಳಗೆ ಅನುಮತಿಸಲಾಗುವುದಿಲ್ಲ. ಪ್ರತಿವರ್ಷ ಈ ಸ್ಥಳದಲ್ಲಿ ಉರ್ಸ್ (ಉತ್ಸವ) ನಡೆಯುತ್ತದೆ. ಸಭಾಂಗಣದ ಮುಂದೆ, ಮೂರು ಟ್ಯಾಂಕ್ಗಳು ದೊಡ್ಡ ತೊಟ್ಟಿಯನ್ನು ನೋಡಬಹುದು, ಇದು ಕೇಂದ್ರದಲ್ಲಿದ್ದು ಸುಮಾರು 15 ಅಡಿಗಳು (4.6 ಮೀ) ಆಳವಾಗಿರುತ್ತದೆ ಆದರೆ ಇತರ ಎರಡು ಗಾತ್ರಗಳು ಹಾಗೂ ಆಳದಲ್ಲಿ ತುಲನಾತ್ಮಕವಾಗಿ ಸಣ್ಣದಾಗಿರುತ್ತವೆ. ಅಸ್ಸರ್ ಮಹಲ್ ಹಿಂದೆ ಸಿಟಾಡೆಲ್ನ ಉಳಿದಿವೆ. ಅಸರ್ ಮಹಲ್ನ ಹಿಂದೆ ಕೇವಲ ಒಂದು ಕಿಲೋಮೀಟರ್ ದೂರದಲ್ಲಿರುವ ಸಿಟಾಡೆಲ್ ಗೋಡೆಯ ಮೇಲಿರುವ ಹಳೆಯ ಮಸೀದಿಯನ್ನು ಕಾಣಬಹುದು. ಈ ಮಸೀದಿಯ ಕೆಳಗಿನ ಆರ್ಕ್ನೊಂದಿಗೆ ದೊಡ್ಡ ಪ್ರವೇಶವಿದೆ. ಅನೇಕ ಕಲ್ಲುಗಳು ಶಾಸನಗಳನ್ನು ಹೊಂದಿವೆ. ಈ ಸೈಟ್ ಭಾರತದ ಪುರಾತತ್ತ್ವ ಶಾಸ್ತ್ರದ ಸಮೀಕ್ಷೆಯ ನಿರ್ವಹಣೆಗೆ ಒಳಪಟ್ಟಿದೆ.

ಮಲಿಕ್ ಎ ಮೈದಾನ

ಸುಮಾರು 1646 ರಲ್ಲಿ ಮೊಹಮ್ಮದ್ ಆದಿಲ್ ಷಾ ಅವರಿಂದ ಅಸರ್ ಮಹಲ್ ಅನ್ನು ನಿರ್ಮಿಸಲಾಯಿತು, ಇದನ್ನು ನ್ಯಾಯ ಸಭಾಂಗಣವಾಗಿ ಬಳಸಲಾಗುತ್ತಿತ್ತು. ಈ ಕಟ್ಟಡವನ್ನು ಪ್ರವಾದಿಗಳ ಗಡ್ಡದಿಂದ ಕೂದಲಿಗೆ ಬಳಸಲಾಗುತ್ತಿತ್ತು. ಮೇಲಿನ ಮಹಡಿಯಲ್ಲಿನ ಕೊಠಡಿಗಳು ಹಸಿಚಿತ್ರಗಳಿಂದ ಅಲಂಕರಿಸಲ್ಪಟ್ಟಿವೆ ಮತ್ತು ಮುಂಭಾಗವನ್ನು ಚೌಕದ ತೊಟ್ಟಿಯಿಂದ ಅಲಂಕರಿಸಲಾಗುತ್ತದೆ. ಇಲ್ಲಿ ಮಹಿಳೆಯರು ಒಳಗೆ ಅನುಮತಿಸಲಾಗುವುದಿಲ್ಲ. ಪ್ರತಿವರ್ಷ ಈ ಸ್ಥಳದಲ್ಲಿ ಉರ್ಸ್ (ಉತ್ಸವ) ನಡೆಯುತ್ತದೆ. ಸಭಾಂಗಣದ ಮುಂದೆ, ಮೂರು ಟ್ಯಾಂಕ್ಗಳು ದೊಡ್ಡ ತೊಟ್ಟಿಯನ್ನು ನೋಡಬಹುದು, ಇದು ಕೇಂದ್ರದಲ್ಲಿದ್ದು ಸುಮಾರು 15 ಅಡಿಗಳು (4.6 ಮೀ) ಆಳವಾಗಿರುತ್ತದೆ ಆದರೆ ಇತರ ಎರಡು ಗಾತ್ರಗಳು ಹಾಗೂ ಆಳದಲ್ಲಿ ತುಲನಾತ್ಮಕವಾಗಿ ಸಣ್ಣದಾಗಿರುತ್ತವೆ. ಅಸ್ಸರ್ ಮಹಲ್ ಹಿಂದೆ ಸಿಟಾಡೆಲ್ನ ಉಳಿದಿವೆ. ಅಸರ್ ಮಹಲ್ನ ಹಿಂದೆ ಕೇವಲ ಒಂದು ಕಿಲೋಮೀಟರ್ ದೂರದಲ್ಲಿರುವ ಸಿಟಾಡೆಲ್ ಗೋಡೆಯ ಮೇಲಿರುವ ಹಳೆಯ ಮಸೀದಿಯನ್ನು ಕಾಣಬಹುದು. ಈ ಮಸೀದಿಯ ಕೆಳಗಿನ ಆರ್ಕ್ನೊಂದಿಗೆ ದೊಡ್ಡ ಪ್ರವೇಶವಿದೆ. ಅನೇಕ ಕಲ್ಲುಗಳು ಶಾಸನಗಳನ್ನು ಹೊಂದಿವೆ. ಈ ಸೈಟ್ ಭಾರತದ ಪುರಾತತ್ತ್ವ ಶಾಸ್ತ್ರದ ಸಮೀಕ್ಷೆಯ ನಿರ್ವಹಣೆಗೆ ಒಳಪಟ್ಟಿದೆ.




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ

ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ ಭೂಗೋಳವು ಇತಿಹಾಸದೊಡನೆ ನಿಕಟ ಸಂಬಂಧ ಹೊಂದಿದೆ. ಯಾವುದೇ ಪ್ರದೇಶದ ಮಾನವನ ಜೀವನಕ್ರಮ ಮತ್ತು ಇತಿಹಾಸ ಅಲ್ಲಿನ ಭೌಗೋಳಿಕ ಲಕ್ಷಣಗಳನ್ನು ಅವಲಂಬಿಸಿರುತ್ತದೆ. ಪ್ರಕೃತಿ ಲಕ್ಷಣಗಳಲ್ಲಿ ಬದಲಾವಣೆಯಾಗುತ್ತಲೇ ಇರುತ್ತದೆ. ಅದಕ್ಕೆ ತಕ್ಕಂತೆ ಮಾನವನ ಇತಿಹಾಸದ ಬೆಳವಣಿಗೆಯೂ ಮಾರ್ಪಡುತ್ತದೆ. ಏಕೆಂದರೆ ಪ್ರಕೃತಿಯ ಮೇಲ್ಬಾಗದ ಅವಯವಗಳಾದ ಗಾಳಿ, ನದಿ, ಪರ್ವತ, ಸಮುದ್ರ, ಭೂಗುಣ, ಖನಿಜ ಸಂಪತ್ತು ಇತ್ಯಾದಿಗಳ ಕೈವಾಡ ಆಯಾ ದೇಶದ ಇತಿಹಾಸವನ್ನು ನಿರ್ಧರಿಸುತ್ತದೆ. ಆದ್ದರಿಂದ ಒಂದು ದೇಶದ ಅಥವಾ ಜನಾಂಗದ ಇತಿಹಾಸ ಅರಿಯಲು ಭೂಗೋಳದ ತಿಳಿವಳಿಕೆ ಅತ್ಯವಶ್ಯ. ವಿದೇಶಿ ಪ್ರವಾಸಿಗರ ವರದಿಗಳು ಭೌಗೋಳಿಕ ಪರಿಜ್ಞಾನವಿಲ್ಲದ ಇತಿಹಾಸದ ಅಧ್ಯಯನ ಕೂಡ ವ್ಯರ್ಥ, ಉದಾಹರಣೆಗೆ ಅಶೋಕನ ಸಾಮ್ರಾಜ್ಯ ತುಂಬ ವಿಶಾಲವಾಗಿತ್ತು: ಅತಿ ದೊಡ್ಡದು ಎನ್ನುವಾಗ ಭೌಗೋಳಿಕ ಮೇರೆಗಳ ಚಿತ್ರ ಅತ್ಯವಶ್ಯ. ಅವನ ರಾಜ್ಯ ಪಶ್ಚಿಮದಲ್ಲಿ ಆಫ್ಘಾನಿಸ್ತಾನ, ಉತ್ತರದಲ್ಲಿ ನೇಪಾಳ, ಪೂರ್ವದಲ್ಲಿ ಕಾಮರೂಪ ಹಾಗೂ ದಕ್ಷಿಣದಲ್ಲಿ ನಲ್ಲೂರಿನವರೆಗೂ ವಿಸ್ತರಿಸಿದ್ದಿತು ಎಂದು ವಿವರಿಸಲು ಹಾಗೂ ಸುಲಭ ಗ್ರಹಿಕೆಗೂ ಭೌಗೋಳಿಕ ಅರಿವು ಅವಶ್ಯ. ಹಾಗೆಯೇ ಕಾಲಗಣನೆ (Chronology) ಕೂಡ. ಅದು ಯಾವ ಕಾಲದಲ್ಲಿ ಈ ಘಟನ ಸಂಭವಿಸಿತು: ಅಶೋಕ ಅಥವಾ ಮಹಾತ್ಮಾ ಗಾಂಧಿ ಜೀವಿಸಿದ್ದರು ಎಂಬುದನ್ನು ತಿಳಿಸುತ್ತದೆ, ರಿಚರ್ಡ್ ಹಕ್ಕೂಯತ್ ಹೇಳುವಂತೆ: ಭೂಗೋಳ...

ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture)

1.1 ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture) ಭಾರತದ ಸಾಂಸ್ಕೃತಿಕ ಪರಂಪರೆಯು ವಿಶಾಲವಾದ ವ್ಯಾಪ್ತಿಯನ್ನು ಹೊಂದಿದೆ. ಮಾನವನ ಉಗಮದೊಂದಿಗೆ ಉಗಮವಾಗಿ ಬೆಳೆದು ಸಾಗಿ ಬಂದ ಪರಂಪರೆಯು ಅವನ ಜೀವನ ಮೌಲ್ಯಗಳು, ವಸತಿ ರಕ್ಷಣೆ, ಆಹಾರ, ವಿಹಾರ, ಉಡುಗೆ-ತೊಡುಗೆ, ಮನರಂಜನೆ, ವ್ಯಾಪಾರ, ವಾಣಿಜ್ಯ, ಸಂಗೀತ, ಕಲೆ, ವಾಸ್ತುಶಿಲ್ಪ, ಚಿತ್ರಕಲೆ, ಶಿಕ್ಷಣ, ಧರ್ಮಗಳು, ರೂಢಿ-ಸಂಪ್ರದಾಯಗಳು, ಭಾಷೆ, ನಟನೆ, ನಂಬಿಕೆ, ನೃತ್ಯ, ಆಚರಣೆ, ಹವ್ಯಾಸ, ಸಾಹಿತ್ಯ, ವಿಧಿ-ವಿಧಾನಗಳನ್ನು ಒಳಗೊಂಡಿದೆ. ಈ ಅಂಶಗಳಲ್ಲಿ ಕೆಲವು ಕಾಲಕ್ಕೆ ತಕ್ಕಂತೆ ಮತ್ತು ಪ್ರಾದೇಶಿಕವಾಗಿ ಭಿನ್ನತೆ ಹಾಗೂ ಬದಲಾವಣೆಗೊಂಡಿದ್ದರೂ ನಿರಂತರವಾಗಿ ಸಾಗಿ ಬಂದಿವೆ. ಅವುಗಳ ಗುಣ ಲಕ್ಷಣಗಳು ಈ ಕೆಳಗಿನಂತಿವೆ: 1. ಸಾಂಪ್ರದಾಯಕ ಜೀವನ ವಿಧಾನ: ಭಾರತೀಯರ ಜೀವನ ವಿಧಾನ ಪಾರಂಪರಗತವಾಗಿ ಪೂರ್ವಜರಿಂದ ಸಾಗಿ ಬಂದಿದೆ. ಪಾರಂಪರಗತವಾಗಿ ಭಾರತೀಯರದು ಕೃಷಿ ಪ್ರಧಾನವಾದ ಜೀವನ ವಿಧಾನವಾಗಿದ್ದು, ಭೂಮಿಯನ್ನು 'ಭೂದೇವಿ' ಎಂದು ಆರಾಧಿಸುತ್ತಾರೆ. ಭೂಮಿಯನ್ನು ಹಸನಗೊಳಿಸಿ, ಹದ ಮಾಡಿ, ಉತ್ತಿ-ಬಿತ್ತುವ ಪೂರ್ವದಲ್ಲಿ ಭೂದೇವಿಗೆ ಪೂಜೆ ಸಲ್ಲಿಸುವ ಮೂಲಕ ಕೃಷಿ ಕಾಯಕವನ್ನು ಪ್ರಾರಂಭಿಸುತ್ತಾರೆ. ಕಾಲಕಾಲಕ್ಕೆ ಮಳೆಯಾಗಿ, ಸಮೃದ್ಧವಾದ ಬೆಳೆಯನ್ನು ಕೊಡುವ ಮೂಲಕ ನಿನ್ನ ಮಕ್ಕಳನ್ನು ಸಲಹು ತಾಯಿ ಎಂದು ಬೇಡಿಕೊಳ್ಳುತ್ತಾರೆ. ಕೃಷಿ ಸಲಕರಣಗಳಲ್ಲಿ, ಬಿತ್ತುವ ಬೀಜಗಳಲ್...