ವಿಷಯಕ್ಕೆ ಹೋಗಿ

ಕರ್ನಾಟಕದ ಜನಪ್ರಿಯ ಹಬ್ಬಗಳು ಮತ್ತು ಉತ್ಸವಗಳು

ಕರ್ನಾಟಕದ ಜನಪ್ರಿಯ ಹಬ್ಬಗಳು ಮತ್ತು ಉತ್ಸವಗಳು

  

ಕರ್ನಾಟಕವು ಸಾಂಸ್ಕೃತಿಕವಾಗಿ ಶ್ರೀಮಂತ ರಾಜ್ಯವಾಗಿದ್ದು ಪ್ರತಿವರ್ಷವೂ ಹಲವಾರು ಉತ್ಸವಗಳನ್ನು ಆಚರಿಸುತ್ತದೆ. ಈ ಉತ್ಸವಗಳು ಧಾರ್ಮಿಕ ಕೊಡುಗೆಯಾಗಿ ಅಥವಾ ವಿಜಯನಗರ ಸಾಮ್ರಾಜ್ಯ, ಮೌರ್ಯರು, ಚಾಲುಕ್ಯರು ಮುಂತಾದ ವಿವಿಧ ಆಡಳಿತಗಾರರ ಪರಂಪರೆಯಿಂದ ಹುಟ್ಟಿದವು.

ಈ ಸುಂದರ ರಾಜ್ಯದ ಸಂಸ್ಕೃತಿಯನ್ನು ಗುರುತಿಸಲು ಇಲ್ಲಿಯ ಕೆಲವು ಪ್ರಮುಖ ಹಬ್ಬಗಳ ಕಡೆಗೆ ಗಮನ ಹರಿಸೋಣ ಇವುಗಳಲ್ಲಿ ಕೆಲವು ಹಬ್ಬಗಳು ಇಲ್ಲಿ ಮಾತ್ರ ಆಚರಿಸಲ್ಪಡುತ್ತವೆ.

ಕರ್ನಾಟಕವು ಒಂದು ಸುಂದರವಾದ ರಾಜ್ಯವಾಗಿದ್ದು, ಚಾಲುಕ್ಯರು, ವಿಜಯನಗರ ಸಾಮ್ರಾಜ್ಯ, ಒಡೆಯರುಗಳು ಮುಂತಾದ ಹಲವು ಪ್ರಬಲ ರಾಜವಂಶಗಳ ಪರಂಪರೆಯನ್ನು ಹೊಂದಿದೆ. ಈ ರಾಜವಂಶಗಳ ಪರಂಪರೆಯು ಶತಮಾನಗಳಿಂದ ನಡೆಯುತ್ತಾ ಬಂದಿರುವುದಾಗಿದ್ದು ಮತ್ತು ಇಲ್ಲಿಯವರೆಗೂ ಆಚರಿಸಲ್ಪಡುತ್ತಿರುವ ಉತ್ಸವಗಳ ರೂಪದಲ್ಲಿ ಅಥವಾ ದೊಡ್ಡ ಹಬ್ಬಗಳ ರೂಪದಲ್ಲಿ ಉಳಿದಿರುವ ಅವಶೇಷಗಳು ಅಥವಾ ಸ್ಮಾರಕಗಳ ರೂಪದಲ್ಲಿ ಕಾಣಬಹುದಾಗಿದೆ.

ಹಂಪಿ, ಪಟ್ಟದಕಲ್ಲು, ಮೈಸೂರು ಮುಂತಾದ ಕರ್ನಾಟಕದ ಹಲವು ಸ್ಥಳಗಳು, ಹಿಂದಿನ ಸಾಂಸ್ಕೃತಿಕ ಸಂಪ್ರದಾಯಗಳು ಮತ್ತು ಪರಂಪರೆಯ ಪ್ರಭಾವವನ್ನು ಹೊಂದಿವೆ.ಇವುಗಳು ರಾಜ್ಯದ ಕೆಲವು ಪ್ರಮುಖ ಪ್ರವಾಸೀ ತಾಣಗಳಾಗಿವೆ. ಈ ಸ್ಥಳಗಳಿಗೆ ಭೇಟಿ ನೀಡಬಹುದಾದ ಅತ್ಯುತ್ತಮ ಸಮಯವೆಂದರೆ ಈ ಪ್ರದೇಶಗಳಲ್ಲಿ ನಡೆಯುವ ಪ್ರಮುಖ ಮತ್ತು ವಿಶೇಷ ಉತ್ಸವಗಳ ಸಂಧರ್ಭದಲ್ಲಿ.

ಕರ್ನಾಟಕದಲ್ಲಿ ಆಚರಿಸಲಾಗುವ ಇತರ ಪ್ರಮುಖ ಉತ್ಸವಗಳ ಜೊತೆಗೆ ಈ ಉತ್ಸವಗಳ ಬಗ್ಗೆ ತಿಳಿಯಿರಿ.

ಗೌರಿ ಹಬ್ಬ

ಈ ಹಬ್ಬವನ್ನು ಮುಖ್ಯವಾಗಿ ಕರ್ನಾಟಕದಲ್ಲಿ ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲಿ ಆಚರಿಸಲಾಗುತ್ತಿದ್ದು ಈ ಹಬ್ಬವು ಗಣೇಶ ಚತುರ್ಥಿ ಹಬ್ಬದ ಮುಂಚಿನ ದಿನ ಆಚರಿಸಲಾಗುತ್ತದೆ. ಗಣೇಶ ದೇವರ ತಾಯಿ ಹಾಗೂ ಶಿವನ ಪತ್ನಿಯಾದ ಗೌರಿ ದೇವಿಯನ್ನು ಪೂಜಿಸುವ ಈ ಹಬ್ಬವನ್ನು ಮದುವೆಯಾದ ಸ್ತ್ರೀಯರಿಂದ ಆಚರಿಸಲಾಗುತ್ತದೆ.

ಈ ಹಬ್ಬದ ದಿನ ಸ್ತ್ರೀಯರು ಗೌರಿಯ ಸಣ್ಣ ಪ್ರತಿಮೆಯನ್ನು ಅಲಂಕಾರ ಮಾಡಿ ಪೂಜಿಸುವುದು ಕಂಡುಬರುತ್ತದೆ. ಇದನ್ನು ವೀಕ್ಷಿಸಲು ಕುಟುಂಬದವರು ಮತ್ತು ನೆರೆಹೊರೆಯವರನ್ನು ಆಹ್ವಾನಿಸುತ್ತಾರೆ.

ಯುಗಾದಿ

ಕಲ್ಯಾಣ್ ಕನುರಿ ಯುಗಾದಿಯು ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ ಮತ್ತು ಕರ್ನಾಟಕದಲ್ಲಿ ಹಿಂದೂಗಳಿಂದ ಆಚರಿಸಲಾಗುತ್ತದೆ. ಚೈತ್ರ ಮಾಸದ ಮೊದಲ ದಿನದಂದು ಹಿಂದೂ ಲಿನಿಸೋಲಾರ್ ಕ್ಯಾಲೆಂಡರ್ ನ ಪ್ರಕಾರ ಈ ಉತ್ಸವ ನಡೆಯುತ್ತದೆ.

ಇದು ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಏಪ್ರಿಲ್ ಅಥವಾ ಮೇ ಸಮಯದಲ್ಲಿ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ. ಹಿಂದೂಗಳಿಗೆ ಹೊಸ ವರ್ಷ; ವಾಸ್ತವವಾಗಿ, ಇದು ಅಕ್ಷರಶಃ ಹೊಸ ಯುಗದ ಆರಂಭವನ್ನು ಸೂಚಿಸುತ್ತದೆ.

ಈ ಆಚರಣೆಯ ಸಮಯದಲ್ಲಿ ಬಾಗಿಲುಗಳನ್ನು ಮಾವಿನ ಎಲೆಗಳಿಂದ ತೋರಣದಿಂದ ಅಲಂಕರಿಸಲಾಗುತ್ತದೆ . ಮನೆಯ ದ್ವಾರದ ಮುಂದೆ ರೋಮಾಂಚಕವಾದ ಮತ್ತು ಸುಂದರವಾದ ದೊಡ್ಡ ದೊಡ್ಡ ರಂಗೋಲಿಗಳನ್ನು ಬಿಡಿಸಲಾಗುತ್ತದೆ. ಜೀವನದಲ್ಲಿ ಎಲ್ಲಾ ಸುವಾಸನೆಗಳನ್ನು ಅನುಭವಿಸುವ ಕಾರಣಕ್ಕಾಗಿ ಅದನ್ನು ಪ್ರತಿಬಿಂಬಿಸುವ ಸಲುವಾಗಿ ಸಿಹಿ, ಉಪ್ಪು, ಕಹಿ ಮತ್ತು ಹುಳಿ ಇವೆಲ್ಲವನ್ನು ಹೊಂದಿರುವ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ.

ಹಂಪಿ ಉತ್ಸವ

ಹಂಪಿ ಕರ್ನಾಟಕದ ಒಂದು ಪ್ರಸಿದ್ಧ ಐತಿಹಾಸಿಕ ನಗರವಾಗಿದ್ದು, ಇದು ಯುನೆಸ್ಕೋ ವಿಶ್ವ ಪರಂಪರೆ ತಾಣಗಳಾಗಿ ಘೋಷಿಸಲ್ಪಟ್ಟಿದೆ ಮತ್ತು ಇದನ್ನು ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ನಿರ್ಮಿಸಲಾಗಿದೆ.

ಹಂಪಿ ಉತ್ಸವವು ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ನಡೆಯುತ್ತಿರುವ ಒಂದು ವೈಭವೋಪೇತ ಉತ್ಸವವಾಗಿದ್ದು, ಇಲ್ಲಿಯವರೆಗೂ ಮುಂದುವರೆಯುತ್ತಿದೆ. ಇದೊಂದು ಮೂರು ದಿನಗಳ ಕಾಲ ನಡೆಯುವ ಈ ಉತ್ಸವವು ಇಲ್ಲಿಯ ವಾರ್ಷಿಕ ಉತ್ಸವವಾಗಿದೆ.

ಭಾರತದ ಎಲ್ಲೆಡೆಯಿಂದ ಪ್ರಸಿದ್ಧವಾದ ಕಲಾವಿದರು ವಿವಿಧ ಜಾನಪದ ಮತ್ತು ಶಾಸ್ತ್ರೀಯ ನೃತ್ಯ ಪ್ರಕಾರಗಳನ್ನು, ಅದ್ಭುತ ಸಂಗೀತ ಪ್ರದರ್ಶನಗಳನ್ನು ಮತ್ತು ಇನ್ನೂ ಹೆಚ್ಚಿನದನ್ನು ಇಲ್ಲಿ ಪ್ರದರ್ಶಿಸುತ್ತಾರೆ. ಇಲ್ಲಿಯ ಇನ್ನೊಂದು ಆಕರ್ಷಣೆಯೆಂದರೆ ಈ ಸಮಯದಲ್ಲಿ ಸ್ಮಾರಕಗಳನ್ನು ದೀಪಗಳಿಂದ ಅಲಂಕಾರಗೊಳಿಸಲಾಗುತ್ತದೆ ಇದರ ಬೆಳಕು ರಾತ್ರಿಹೊತ್ತಿನಲ್ಲಿ ಸುಂದರವಾಗಿ ಕಾಣುತ್ತದೆ. ಇದು ನೋಡಲು ಯೋಗ್ಯವಾದುದಾಗಿದೆ.

ಕಂಬಳ

ಇದನ್ನು ದಕ್ಷಿಣ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಆಚರಿಸಲಾಗುತ್ತದೆ . ಕಂಬಳವು ಒಂದು ವಾರ್ಷಿಕ ಉತ್ಸವವಾಗಿದ್ದು, ಕೋಣಗಳನ್ನು ಓಟ ಈ ಸಂಧರ್ಭದಲ್ಲಿ ನಡೆಸಲಾಗುತ್ತೆ. ಇದು ನವೆಂಬರ್ ನಿಂದ ಮಾರ್ಚ್ ತಿಂಗಳುಗಳ ಅವಧಿಯಲ್ಲಿ ನಡೆಸಲಾಗುತ್ತದೆ. ದಕ್ಷಿಣ ಕರ್ನಾಟಕದ ಸಣ್ಣ ಪುಟ್ಟ ಹಳ್ಳಿಗಳಲ್ಲಿ ಸುಮಾರು 45 ಕಡೆ ಈ ಓಟವನ್ನು ನಡೆಸಲಾಗುತ್ತದೆ.

ಇದು ಮೂಲತ: ವಾಗಿ ಹಳ್ಳಿ ಜನರ ಮನೋರಂಜನೆಗಾಗಿ ನಡೆಸಲಾಗುತ್ತಿತ್ತು. ಈ ಕಂಬಳದಲ್ಲಿ ಒಬ್ಬ ರೈತನಿಂದ ನಿಯಂತ್ರಿಸಲ್ಪ ಎರಡು ಜೊತೆ ಕೋಣಗಳನ್ನು ನಿಗದಿ ಪಡಿಸಲಾದ ಗದ್ದೆಗಳಲ್ಲಿ ಓಡಿಸಲಾಗುತ್ತದೆ. ಪಂದ್ಯವನ್ನು ಗೆಲ್ಲುವ ರೈತರಿಗೆ ನಗದು ಬಹುಮಾನವನ್ನು ನೀಡಲಾಗುತ್ತದೆ.

ಮಹಾ ಮಸ್ತಕಾಭಿಷೇಕ

ಜೈನರಿಗೆ ಇದೊಂದು ಪ್ರಮುಖವಾದ ಹಬ್ಬವಾಗಿದ್ದು ಇದನ್ನು ಶ್ರವಣಬೆಳಗೊಳದಲ್ಲಿ ಪ್ರತೀ 12 ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ. ಶ್ರವಣಬೆಳಗೊಳ ಕರ್ನಾಟಕದ ಒಂದು ಸಣ್ಣ ಹಳ್ಳಿಯಾಗಿದ್ದು ಇದು 57 ಅಡಿ ಎತ್ತರದ ಗೋಮೇಟೇಶ್ವರ ಅಥವಾ ಬಾಹುಬಲಿಯ ಪ್ರತಿಮೆಯನ್ನು ಹೊಂದಿದೆ.

ಈ ಉತ್ಸವದ ಸಮಯದಲ್ಲಿ ಸಾವಿರಾರು ಯಾತ್ರಿಕರು, ವಿಶೇಷವಾಗಿ ಜೈನ ಭಕ್ತರು ಈ ಪ್ರದೇಶಕ್ಕೆ ಗುಂಪು ಗುಂಪಾಗಿ ಭೇಟಿ ನೀಡುತ್ತಾರೆ. ರಾಜ್ಯದ ಈ ಉತ್ಸವದ ಸಮಯದಲ್ಲಿ, ಬಾಹುಬಲಿಯ ದೈತ್ಯಾಕಾರದ ಮೂರ್ತಿಯನ್ನು ತೊಳೆದು ನೀರು, ಹಾಲು, ಕಬ್ಬು ರಸ, ಅರಿಶಿನ, ಇತ್ಯಾದಿಗಳೊಂದಿಗೆ ಸ್ನಾನ ಮಾಡಿಸಲಾಗುತ್ತದೆ. 

ಪಟ್ಟದಕಲ್ಲು ನೃತ್ಯೋತ್ಸವ

ಈ ವಾರ್ಷಿಕ ನೃತ್ಯ ಉತ್ಸವವು ಜನವರಿಯಲ್ಲಿ ಪಟ್ಟದಕಲ್ಲು ಎಂಬ ಸಣ್ಣ ಪಟ್ಟಣದಲ್ಲಿ ನಡೆಯುತ್ತದೆ. ಪಟ್ಟದಕಲ್ ಇಲ್ಲಿಯ 7ರಿಂದ 8ನೇ ಶತಮಾನಗಳಷ್ಟು ಹಳೆಯದಾದ ಮಂತ್ರಮುಗ್ದಗೊಳಿಸುವ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಇದರ ವಾಸ್ತುಶಿಲ್ಪ ಸೌಂದರ್ಯತೆಯಿಂದಾಗಿ ಇವು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಗುರುತಿಸಲ್ಪಟ್ಟಿದೆ.

ಈ ಉತ್ಸವದ ಸಮಯದಲ್ಲಿ ಈ ದೇವಾಲಯಗಳ ಮುಂದೆ ದೇಶದೆಲ್ಲೆಡೆಯ ಶಾಸ್ತ್ರೀಯ ನೃತ್ಯ ಕಲಾವಿದರು ಇಲ್ಲಿ ಒಟ್ಟು ಸೇರಿ ತಮ್ಮ ಉತ್ತಮ ನೃತ್ಯ ಪ್ರದರ್ಶನವನ್ನು ಕೊಡುತ್ತಾರೆ. ನೀವು ಶಾಸ್ತ್ರೀಯ ನೃತ್ಯವನ್ನು ಪ್ರೋತ್ಸಾಹಿಸುವವರಾಗಿದ್ದಲ್ಲಿ ಅಥವಾ ಈ ಶಾಸ್ತ್ರೀಯ ನೃತ್ಯದ ವಿವಿಧ ಬಗೆಗಳಾದ ಭರತನಾಟ್ಯ, ಕೂಚುಪುಡಿ, ಕಥಕ್ ಇತ್ಯಾದಿಗಳನ್ನು ನೋಡಲು ಇಚ್ಚಿಸುವವರಾಗಿದ್ದಲ್ಲಿ, ಜನವರಿ ತಿಂಗಳಲ್ಲಿ ಪಟ್ಟದಕಲ್ಲು ಕಡೆಗೆ ನಿಮ್ಮ ಪ್ರವಾಸವನ್ನು ಯೋಜಿಸಿ.

ಮೈಸೂರು ದಸರಾ

ದಸರಾವನ್ನು ದೇಶದ ಎಲ್ಲಾ ಕಡೆ ಆಚರಿಸಿದರೂ ಮೈಸೂರು ದಸರ ಎಲ್ಲಾ ಕಡೆಗಳಿಗಿಂತಲೂ ವಿಭಿನ್ನವಾದುದಾಗಿದೆ. ಇದು 10 ದಿನಗಳ ವಾರ್ಷಿಕ ಉತ್ಸವವಾಗಿದ್ದು, ಇದು ನವರಾತ್ರಿ ಪ್ರಾರಂಭದೊಂದಿಗೆ ಆರಂಭವಾಗುತ್ತದೆ ಮತ್ತು ವಿಜಯದಶಮಿ ದಿನದಂದು ಕೊನೆಗೊಳ್ಳುತ್ತದೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ.

ವಿಜಯನಗರ ಸಾಮ್ರಾಜ್ಯದ ಕಾಲದಿಂದಲೇ ದಸರಾವನ್ನು ಸಂಪೂರ್ಣ ವೈಭವದಿಂದ ಆಚರಿಸಲಾಗುತ್ತದೆ.ಈ ಉತ್ಸವದ ಸಮಯದಲ್ಲಿ ನಡೆಯುವ ಕೆಲವು ಆಕರ್ಷಣೆಗಳಲ್ಲಿ ಜಂಬೂ ಸವಾರಿಯಂತಹ ಸಾಂಪ್ರದಾಯಿಕ ಮೆರವಣಿಗೆಯನ್ನು ಮೈಸೂರು ಅರಮನೆಯಲ್ಲಿ ವಿಶೇಷ ದರ್ಬಾರ್ ಇತ್ಯಾದಿಗಳನ್ನು ಒಳಗೊಂಡಿದೆ.

ಈ ಸಮಯದ ಇನ್ನೊಂದು ಆಕರ್ಷಣೆಯೆಂದರೆ ಮೈಸೂರು ಅರಮನೆಯನ್ನು ಸಂಜೆ7 ರಿಂದ ಸಂಜೆ 10ರ ವರೆಗೆ ದಸರದ ಎಲ್ಲಾ ದಿನಗಳಲ್ಲಿ ಸುಮಾರು 100,000 ಬಲ್ಬುಗಳ ಸಹಾಯದಿಂದ ಸುಂದರವಾಗಿ ಬೆಳಗಿಸಿ ಅಲಂಕರಿಸಲಾಗುತ್ತದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೊಳಂಬರ ಇತಿಹಾಸ

ನೊಳಂಬ ಕರ್ನಾಟಕದ ಈಗಿನ ಚಿತ್ರದುರ್ಗ ಜಿಲ್ಲೆ ಮತ್ತು ಅದರ ಸುತ್ತ ಮುತ್ತಣ ಪ್ರದೇಶವನ್ನೊಳಗೊಂಡಿದ್ದ ನೊಳಂಬಳಿಗೆ ಸಾಸಿರ ಎಂಬ ಪ್ರಾಂತ್ಯದ ಅಧಿಪತಿಗಳಾಗಿ 8ನೆಯ ಶತಮಾನದಲ್ಲಿ ಆಳ್ವಿಕೆಯನ್ನಾರಂಭಿಸಿ, ಮುಂದಿನ ಎರಡು ಶತಮಾನಗಳಲ್ಲಿ ಪ್ರಾಬಲ್ಯಗಳಿಸಿ, ಈಗಿನ ಚಿತ್ರದುರ್ಗ, ತುಮಕೂರು, ಕೋಲಾರ, ಬೆಂಗಳೂರು, ಜಿಲ್ಲೆಗಳನ್ನೂ ನೆರೆಯ ಅನಂತಪುರ, ಚಿತ್ತೂರು, ಧರ್ಮಪುರಿ ಜಿಲ್ಲೆಗಳನ್ನೂ ಒಳಗೊಂಡಿದ್ದ ನೊಳಂಬವಾಡಿ 32000 ಪ್ರಾಂತ್ಯದ ಪ್ರಭುಗಳಾಗಿ 11ನೆಯ ಶತಮಾನದ ಮಧ್ಯದವರೆಗೆ ಆಳ್ವಿಕೆ ನಡೆಸಿದ ಸಾಮಂತ ರಾಜರ ಮನೆತನ. ತಲಕಾಡಿನ ಗಂಗರೂ ರಾಷ್ಟ್ರಕೂಟರೂ ಕಲ್ಯಾಣ ಚಾಳುಕ್ಯರೂನೊಳಂಬರಿಗೆ ಸ್ವಲ್ಪಕಾಲ ಅಧೀನರಾಗಿದ್ದರು. ಕದಂಬ, ಗಂಗ ಮತ್ತು ಕಲ್ಯಾಣ ಚಾಳುಕ್ಯರೊಂದಿಗೆ ಇವರು ವಿವಾಹ ಸಂಬಂಧ ಬೆಳೆಸಿದ್ದರು. ಬಾಣರು, ವೈದುಂಬರು, ಚೋಳರು ಮುಂತಾದವರಿಗೂ ಇವರಿಗೂ ರಾಜಕೀಯ ಸಂಬಂಧವಿತ್ತು. ನದಿಯ ಲಾಂಛನ ಹೊಂದಿದ್ದ ಇವರ ರಾಜಧಾನಿ ಪೆಂಜೀರು ಅಥವಾ ಹೆಂಜೇರು. ಆಂಧ್ರ ಪದೇಶದ ಅನಂತಪುರ ಜಿಲ್ಲೆಯ ಹೇಮಾವತಿಯೇ ಇದೆಂದು ಗುರುತಿಸಲಾಗಿದೆ. ನೊಳಂಬ ಎಂಬ ಹೆಸರು ಹೇಗೆ ಬಂತೆಂಬುದು ಸ್ಪಷ್ಟವಾಗಿಲ್ಲ. ಈಶ್ವರ ವಂಶಜನಾದ ಕಂಚೀಪತಿ ಎಂದು ಶಾಸನವೊಂದರಲ್ಲಿ ವರ್ಣಿತನಾಗಿರುವ ತ್ರಿಣಯನ ಪಲ್ಲವ ಎಂಬುವನು ನೊಳಂಬರ ಮೂಲಪುರುಷ. ಇವನ ವಂಶದಲಿ ಹುಟ್ಟಿದವನು ಮಂಗಳ ನೊಳಂಬಾಧಿ ರಾಜ (ಸು. 730-ಸು. 775). ಹೇಮಾವತಿ ಶಾಸನದ ಪ್ರಕಾರ ಇವನು ಕಿರಾತ ನೃಪತಿಯನ್ನು ಜಯಿಸಿದ; ಕರ್ಣಾಟರಿಂ...

ಕರ್ನಾಟಕದ ಪ್ರದರ್ಶನ ಕಲೆಗಳು OEC HISTORY

ಕರ್ನಾಟಕದ ಜಾನಪದ ಕಲೆಗಳು ಗ್ರಾಮೀಣ ಬದುಕಿನ ಅನಕ್ಷರಸ್ಥರಲ್ಲಿನ ಜಾನಪದ ಕಲೆಗಳು, ಹಾಡು, ಗಾದೆ ನಗರ ಬದುಕಿನ ಜನಕ್ಕೆ ವಿಶಿಷ್ಟ ಸಂವೇದನೆಯನ್ನುಂಟು ಮಾಡಿವೆ. ಗ್ರಾಮಗಳ ದೈನಿಕ ಬದುಕು ಆರಂಭವಾಗುವುದೇ ಇಂಥ ಜನಪದ ಹಾಡು-ಹಬ್ಬ ಆಚರಣೆಗಳಿಂದ. ಇವೊತ್ತಿನ ವಿಜ್ಞಾನಯುಗ ಪರಂಪರಾಗತ ಕಲೆಗಳನ್ನು ಮರೆಸುವಂತೆ ನಾಗಾಲೋಟಕ್ಕೆ ಓಡುತ್ತಿದೆ. ಹೀಗಿದ್ದೂ ನಗರ ಬದುಕಿನ ಈ ಜನಕ್ಕೆ `ಜನಪದ' ಮನರಂಜನೆಯನ್ನೀಯುವ ಮಟ್ಟಕ್ಕೆ ಸೀಮಿತವಾಗಿದೆಯೇನೋ ಅನ್ನುವ ಸಂಶಯ ಮೂಡಿದೆ. ಇದು ವಾಸ್ತವವೂ ಕೂಡ. ಈ ಜಾನಪದ ಪ್ರಕಾರವನ್ನು ಸಂಸ್ಕೃತಿಯ ಒಂದು ಭಾಗವೆಂದು ಭಾವಿಸಬೇಕಾಗಿರುವುದರಿಂದ ಇದರ ಉಳಿವು ನಮ್ಮ ಕೈಲಿದೆ. ಕಲಾವಿದರಿಗೆ ಪ್ರಶಸ್ತಿ, ಪುರಸ್ಕಾರ ನೀಡಿ ಗ್ರಾಮೀಣ ಪ್ರತಿಭೆಗಳನ್ನು ಹುಡುಕಿ ಈ ಪ್ರಕಾರದ ಜೀವಂತಿಕೆಗೆ ಶ್ರಮಿಸಬೇಕಾದ ಅಗತ್ಯವಿದೆ. ಅನೇಕ ಗ್ರಾಮೀಣ ಕಲೆ ಮತ್ತು ಆಚರಣೆಗಳು ಸಮಾಜದ ಮುಖ್ಯವಾಹಿನಿಗೆ ಬಾರದೆ ಎಲೆಮರೆಯ ಕಾಯಾಗಿ ಮರೆಯಲ್ಲಿಯೇ ಅಳಿದು ಹೋಗುತ್ತಿವೆ. ಅದರ ಸೊಗಡನ್ನು ಉಳಿಸುವ ಮತ್ತು ಮುಂದಿನ ತಲೆಮಾರಿಗೆ ಇದರ ಸವಿಯನ್ನು ಉಳಿಸಿ ಉಣಬಡಿಸುವ ಗುರುತರವಾದ ಜವಾಬ್ದಾರಿಯು ಪ್ರಜ್ಞಾವಂತ ನಾಗರಿಕರ ಜವಾಬ್ದಾರಿಯಾಗಿದೆ. ವೀರಗಾಸೆ ವೀರಗಾಸೆಯು ಸಾಮೂಹಿಕ ನೃತ್ಯವನ್ನೊಳಗೊಂಡ ಕರ್ನಾಟಕದ ಒಂದು ಜನಪದ ಕಲೆ. ಶೈವ ಸಂಪ್ರದಾಯದ ಧಾರ್ಮಿಕ ವೀರನೃತ್ಯ. ನೃತ್ಯದ ನಡುವೆ ಕನಿಷ್ಠ ಎರಡು ಜನ ಕಲಾವಿದರುಗಳು ಸೇರಿ ಒಡಪು ಹೇಳುವ ಕಾರ್ಯಕ್ರಮ ನಡೆಸಿಕೊಟ್ಟರೆ, ಗರಿಷ್ಠ ಮೂವತ್...

ನರಗುಂದ ಬಾಬಾಸಾಹೇಬರ ಇತಿಹಾಸ||History of Babasaheb Nargund

ನರಗುಂದ ಬಾಬಾಸಾಹೇಬರ ಇತಿಹಾಸ||History of Babasaheb Nargund ಕರ್ನಾಟಕದ ನರಗುಂದದ(ಗದಗ ಜಿಲ್ಲೆಯಲ್ಲಿರುವ) ದೊರೆಗಳು 1700ರಲ್ಲಿ ಮೊಘಲರ ದುರಾಕ್ರಮಣ ದ ವಿರುದ್ಧ ಹೋರಾಡುತ್ತ ನರಗುಂದ ಮತ್ತು ರಾಮದುರ್ಗಗಳನ್ನು ಯುದ್ಧದಲ್ಲಿ ಗೆದ್ದು ಸ್ವರಾಜ್ಯ ಸ್ಥಾಪಿಸಿದ್ದರು. ಮುಂದೆ ಅದೇ ವಂಶದ ದೊರೆಗಳು ಟಿಪ್ಪು ಸುಲ್ತಾನ್ ವಿರುದ್ಧವೂ ಯುದ್ದ ನಡೆಸಿ ಗೆಲುವು ಸಾಧಿಸಿ ತಮ್ಮ ಸಂಸ್ಥಾನದ ಸ್ವರಾಜ್ಯವನ್ನು ಉಳಿಸಿಕೊಂಡಿದ್ದರು. ದಾದಾಜಿ ರಾವ್ ಎಂಬ ನರಗುಂದದ ರಾಜನ ಮಗನಾದ ಭಾಸ್ಕರ್ ರಾವ್ ಭಾವೆ ತನ್ನ 28ನೇ ವಯಸ್ಸಿನಲ್ಲಿ ಅಂದರೆ 1842 ನೇ ಇಸವಿಯಲ್ಲಿ ನರಗುಂದದ ರಾಜನಾದ. ಬಾಬಾ ಸಾಹೇಬ್ ಎಂದು ಜನಪ್ರಿಯರಾಗಿದ್ದ ಈತ ಪರಾಕ್ರಮಿ, ಉದಾರಿ ಆಗಿದ್ದ. ವಿದೇಶಿಯರಿಂದಲೂ ಮೆಚ್ಚುಗೆ ಪಡೆದಿದ್ದ ವ್ಯಕ್ತಿತ್ವ ಆತನದು. ಜರ್ಮನಿಯಿಂದ ಬಂದಿದ್ದರು ಎಂಬ ವಿದ್ವಾಂಸ ಬಾಬಾ ಸಾಹೇಬನ ಕುರಿತು ‘ಅವರು ಸದ್ಗುಣ ಮತ್ತು ಕೀರ್ತಿ ವಂತರು. ಚಿಕ್ಕಮಕ್ಕಳಿಗೆ ಪಾಲಕನಾಗಿಯೂ ವಿದ್ಯಾವಂತರಿಗೆ ಆಶ್ರಯದಾತನೂ, ಬಡವರಿಗೆ ಉದಾರಿಯೂ ಆಗಿದ್ದವರು’ ಎಂದು ಅಭಿಪ್ರಾಯಪಟ್ಟಿದ್ದರು. ಬಾಬಾ ಸಾಹೇಬನ ಏಕೈಕ ಪುತ್ರ ಅಕಾಲಿಕ ಮರಣ ಹೊಂದಿದಾಗ ದತ್ತು ಪುತ್ರನನ್ನು ಪಡೆಯಲು ಬ್ರಿಟಿಷ್ ಕಂಪನಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದ. ಸತತ ಐದು ವರ್ಷಗಳ ಕಾಲ ಬ್ರಿಟಿಷರ ಜೊತೆ ಅನುಸಂಧಾನ ಮಾಡಿದರೂ ಅವರಿಂದ ಸಕಾರಾತ್ಮಕ ಸ್ಪಂದನೆ ಸಿಗಲಿಲ್ಲ. ಬ್ರಿಟಿಷ್ ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿದ್ದ ಬಾಬಾಸಾಹೇಬರ ಹಿ...