ವಿಷಯಕ್ಕೆ ಹೋಗಿ

ಭಾರತೀಯ ಶಾಸ್ತ್ರೀಯ ನೃತ್ಯ: ಭರತನಾಟ್ಯ ಶಾಸ್ತ್ರ

ಭಾರತೀಯ ಶಾಸ್ತ್ರೀಯ ನೃತ್ಯಗಳು
ನೃತ್ಯವು ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಪ್ರಾಚೀನ ಕಲೆಯಾಗಿದೆ.ಭಾರತದಲ್ಲಿನ ನೃತ್ಯಗಳನ್ನು ಮುಖ್ಯವಾಗಿ ಶಾಸ್ತ್ರೀಯ ಹಾಗು ಜನಪದ ನೃತ್ಯ[೧]ಗಳೆಂದು ವಿಂಗಡಿಸಲಾಗಿದೆ.ಭಾರತದ ವಿವಿಧ ಭಾಗಗಳಲ್ಲಿ ಹುಟ್ಟಿಕೊಂಡಿರುವ ಸ್ಥಳೀಯ ಸಂಪ್ರದಾಯಗಳಿಗೆ ಹಾಗು ಅಲ್ಲಿನ ಸಂಸ್ಕೃತಿಗೆ ಅನುಗುಣವಾಗಿ ವಿವಿಧ ರೀತಿಯ ನೃತ್ಯಗಳು ಅಭಿವೃದ್ಧಿಗೊಂಡಿವೆ.ಭಾರತದಲ್ಲಿನ ಸಂಗೀತ ನಾಟ್ಯ ಅಕಾಡೆಮಿಯು ಎಂಟು ಸಾಂಪ್ರದಾಯಿಕ ನೃತ್ಯಗಳನ್ನು ಭಾರತೀಯ ಶಾಸ್ತ್ರೀಯ ನೃತ್ಯಗಳಾಗಿ ಗುರುತಿಸಿದೆ.ಶಾಸ್ತ್ರೀಯ ನೃತ್ಯಗಳು ಐತಿಹಾಸಿಕವಾಗಿ ಶಾಲೆ ಅಥವಾ ಗುರು-ಶಿಷ್ಯ ಪರಂಪರೆಯನ್ನು ಒಳಗೊಂಡಿವೆ ಮತ್ತು ಶಾಸ್ತ್ರೀಯ ಪಠ್ಯಗಳು, ದೈಹಿಕ ವ್ಯಾಯಾಮಗಳು ಮತ್ತು ನೃತ್ಯದ ಸಂಗ್ರಹವನ್ನು ಆಧಾರವಾಗಿರುವ ನಾಟಕ ಅಥವಾ ಸಂಯೋಜನೆ, ಗಾಯಕರು ವ್ಯವಸ್ಥಿತವಾಗಿ ಮಾಡಲು ವ್ಯಾಪಕ ತರಬೇತಿಯ ಅಗತ್ಯವಿರುತ್ತದೆ. ಜಾನಪದ ನೃತ್ಯವು ಕೆಲವು ಮೌಖಿಕ ಸಂಪ್ರದಾಯಗಳಲ್ಲಿ ಒಂದಾಗಿದೆ.ಜಾನಪದ ನೃತ್ಯಗಳಲ್ಲಿ ಹಲವಾರು ಶೈಲಿಗಳಿವೆ.ಅವು ಆಯಾ ರಾಜ್ಯ,ಜನಾಂಗ ಅಥವಾ ಭೌಗೋಳಿಕ ಪ್ರದೇಶಗಳ ಸಂಪ್ರದಾಯಕ್ಕೆ ಅನುಗುಣವಾಗಿ ಬದಲಾಗುತ್ತವೆ.ನಾಟ್ಯಶಾಸ್ತ್ರವನ್ನು[೨] ಬರೆದವರು ಭರತಮುನಿ.ಅವು ಒಂದು ತಲೆಮಾರಿನಿಂದ ಮುಂದಿನ ಪೀಳಿಗೆಗೆ ಬಾಯಿ ಮಾತು ಮತ್ತು ಪ್ರಾಸಂಗಿಕ ಜಂಟಿ ಅಭ್ಯಾಸದ ಮೂಲಕ ಸಾಗುತ್ತವೆ.

ನೃತ್ಯದ ಮೂಲ

ಪುರಾಣವೇದಗಳ ಪ್ರಕಾರ ನೃತ್ಯವು ೧೦೦೦ ಬಿ.ಸಿಯಲ್ಲೆ ಹುಟ್ಟಿಕೊಂಡಿದೆ.ಹಿಂದೂ ಪುರಾಣಗಳಲ್ಲಿ, ಶಿವನ ನೃತ್ಯವು ವಿಶ್ವವನ್ನು ಸೃಷ್ಟಿಸುತ್ತದೆ ಮತ್ತು ನಾಶಪಡಿಸುತ್ತದೆ. ಭಾರತದಾದ್ಯಂತ ಅನೇಕ ವಿಭಿನ್ನ ಐತಿಹಾಸಿಕ ಶಿಲ್ಪಗಳು ಎ.ಡಿ. 1000 ಕ್ಕಿಂತ ಮೊದಲು, ಭಾರತೀಯ ಸಾಂಸ್ಕೃತಿಕ ಇತಿಹಾಸದಲ್ಲಿನ ನೃತ್ಯದ ಮಹತ್ವವನ್ನು ಮತ್ತು ಅದರ ಸಂಪ್ರದಾಯಗಳ ಸಮೃದ್ಧಿಯನ್ನು ವಿವರಿಸುತ್ತದೆ. ನರ್ತಕರ ಅನೇಕ ಶಾಸ್ತ್ರೀಯ ರೂಪಗಳು ಪ್ರಾಚೀನ ಶಿಲ್ಪಗಳನ್ನು ಆಧರಿಸಿವೆ.ಇಂದಿಗೂ ಧಾರ್ಮಿಕ ಆಚರಣೆಗಳಲ್ಲಿ ನಾಟಕ[೩] ಮತ್ತು ನೃತ್ಯಗಳಿಗೆ ಮುಖ್ಯವಾದ ಸ್ಥಾನವಿದೆ.ನೃತ್ಯವು ಸಾಮಾನ್ಯವಾಗಿ ಒಂದು ನಿರ್ದಿಷ್ಟ ಹಿಂದೂ ದೇವರೊಂದಿಗೆ ಅಥವಾ ರಾಮಾಯಣ ಮತ್ತು ಮಹಾಭಾರತದ ಕಥೆ ಅಥವಾ ಪ್ರಸಂಗದೊಂದಿಗೆ ಸಂಬಂಧ ಹೊಂದಿರುತ್ತದೆ.ಭಾರತೀಯ ನೃತ್ಯದ ಸಿದ್ಧಾಂತಗಳು ಮತ್ತು ತಂತ್ರಗಳು ನಾಟಕದ ಪರಿಕಲ್ಪನೆಯಲ್ಲಿ ಒಂದು ಅವಿಭಾಜ್ಯ ಅಂಗವಾಗಿದೆ ಮತ್ತು ಈ ಪ್ರತಿಪಾದನೆಗಳ ಪೂರ್ಣ ಪರಿಣಾಮಗಳನ್ನು ಅರಿತುಕೊಳ್ಳದೆ ಅರ್ಥಮಾಡಿಕೊಳ್ಳಲು ಸಾಧ್ಯವಾಗದ್ದಂತೆ ಭರತರು ಸೂಕ್ತವಾಗಿ ಮಾಡಿದ್ದಾರೆ.ಭಾರತೀಯ ನೃತ್ಯದ ತಂತ್ರವನ್ನು ನಿಯಂತ್ರಿಸುವ ತತ್ವಗಳು ಹಾಗು ಶಾಸ್ತ್ರೀಯ ನಾಟಕದ ತಂತ್ರಗಳನ್ನು ನಿಯಂತ್ರಿಸುವ ತತ್ವಗಳು ಸಮಾನವಾಗಿರುತ್ತದೆ.

ಶಾಸ್ತ್ರೀಯ ನೃತ್ಯ

ಭಾರತದ ಶಾಸ್ತ್ರೀಯ ನೃತ್ಯವು ಒಂದು ರೀತಿಯ ನೃತ್ಯ-ನಾಟಕವನ್ನು ಅಭಿವೃದ್ಧಿಪಡಿಸಿದೆ.ನರ್ತಕರು ಸನ್ನೆಗಳ ಮೂಲಕ ಕಥೆಯನ್ನು ಪ್ರತ್ಯೇಕವಾಗಿ ನಿರ್ವಹಿಸುತ್ತಾರೆ.ಶಾಸ್ತ್ರೀಯ ನೃತ್ಯಗಳು ಹೆಚ್ಚಾಗಿ ಹಿಂದೂ ಪುರಾಣದ ಕಥೆಗಳನ್ನು ತೋರುತ್ತದೆ.ಪ್ರತಿಯೊಂದು ರೂಪವು ಒಂದು ನಿರ್ದಿಷ್ಟ ಪ್ರದೇಶದ ಅಥವಾ ಜನರ ಗುಂಪಿನ ಸಂಸ್ಕೃತಿ ಮತ್ತು ನೀತಿಯನ್ನು ಪ್ರತಿನಿಧಿಸುತ್ತದೆ. ಸಂಗೀತ ನಾಟ್ಯ ಅಕಾಡೆಮಿಯು [೪]ಎಂಟು ಶಾಸ್ತ್ರೀಯ ಶೈಲಿ ನೃತ್ಯಗಳನ್ನು ಗುರುತಿಸಿದೆ.ಅವು ಭರತನಾಟ್ಯ (ತಮಿಳುನಾಡು), ಕಥಕ್ (ಉತ್ತರ, ಪಶ್ಚಿಮ ಮತ್ತು ಮಧ್ಯ ಭಾರತ),ಕಥಕ್ಕಳಿ (ಕೇರಳ),ಕೂಚಿಪೂಡಿ (ಆಂಧ್ರಪ್ರದೇಶ), ಒಡಿಸ್ಸಿ (ಒಡಿಶಾ), ಮಣಿಪುರಿ (ಮಣಿಪುರ) ), ಮೋಹಿನಿಯಾಟ್ಟಂ (ಕೇರಳ) ಮತ್ತು ಸತ್ರಿಯಾ (ಅಸ್ಸಾಂ).ಶಾಸ್ತ್ರೀಯ ನೃತ್ಯವನ್ನು ಜಾನಪದ ನೃತ್ಯದಿಂದ ಪ್ರತ್ಯೇಕಿಸಲಾಗಿದೆ ಏಕೆಂದರೆ ಇದನ್ನು ನಾಟ್ಯಶಾಸ್ತ್ರದ ನಿಯಮಗಳಿಂದ ನಿಯಂತ್ರಿಸಲಾಗುತ್ತದೆ ಮತ್ತು ಎಲ್ಲಾ ಶಾಸ್ತ್ರೀಯ ನೃತ್ಯಗಳು ಅವುಗಳಿಗೆ ಅನುಗುಣವಾಗಿ ನಡೆಯುತ್ತದೆ.

ಭರತನಾಟ್ಯ

ಭರತನಾಟ್ಯವು ದಕ್ಷಿಣ ಭಾರತದ ಒಂದು ಪಾರಂಪರಿಕ ನೃತ್ಯ ಕಲೆ. ಭರತಮುನಿಯಿಂದ ರಚಿಸಲ್ಪಟ್ಟ ನಾಟ್ಯ ಶಾಸ್ತ್ರ ಕೃತಿಯಲ್ಲಿ ಇದರ ಮೊದಲ ಉಲ್ಲೇಖವಿರುವುದರಿಂದ ಭರತನಾಟ್ಯ ಎಂದು ಕರೆಯಲ್ಪಟ್ಟಿದೆ. ಪುರಂದರ ದಾಸವರೇಣ್ಯರು "ಆಡಿದನೋ ರಂಗ " ಎನ್ನುವ ಪದದಲ್ಲಿ ಭರತನಾಟ್ಯದ ವರ್ಣನೆಯನ್ನು ಮಾಡಿದ್ದಾರೆ. ಇದು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಪ್ರಚಲಿತವಿದೆ.

ಭರತನಾಟ್ಯದ ಭಂಗಿ

ಭರತ ಪದದ ಅರ್ಥ

ಭರತನಾಟ್ಯ ಪದವು ಭರತ ಎಂಬ ಪದದಿಂದ ಕೂಡಿದೆ. "ಭ"ಎಂದರೆ ಭಾವ, "ರ" ಎಂದರೆ ರಾಗ, "ತ" ಎಂದರೆ ತಾಳ ಎಂದು ಅರ್ಥವಿದೆ. ಅಂದರೆ ಭಾವ, ರಾಗ ಮತ್ತು ತಾಳಯುತವಾದ ನೃತ್ಯಕ್ಕೆ ಭರತನಾಟ್ಯ ಎಂದು ಕರೆಯುವುದು ರೂಢಿ.

ಶ್ಲೋಕಸಂಪಾದಿಸಿ

ಭಕಾರೋ ಭಾವಸಂಯುಕ್ತೋ, ರೇಕೋ ರಾಗೇಣ ಸಂಶ್ರೀತಃ, ತಕಾರಸ್ ತಾಳ ಇತ್ಯಾಹುಹು ಭರತಾರ್ಥ ವಿಚಕ್ಶಣೈ ಹಿ

ಹಿನ್ನೆಲೆಸಂಪಾದಿಸಿ

  • ಪ್ರಾಚೀನ ಕಾಲದಲ್ಲಿ ಭರತ ನಾಟ್ಯಂನ್ನು ದೇವಾಲಯಗಳಲ್ಲಿ (ದೇವಸ್ಥಾನ) ದೇವದಾಸಿಯರ ಮೂಲಕ "ಸಾದಿರ್ ಆಟಂ " (ಆಸ್ಥಾನ ನೃತ್ಯ) ಎಂದು ಮಾಡುತ್ತಿದ್ದರು. ಇ ಕೃಷ್ಣ ಅಯ್ಯರ್ ಮತ್ತು ರುಕ್ಮಿಣಿ ದೇವಿ ಅರುಂಡೆಲ್ ೧೯೩೦ ರಲ್ಲಿ "ಭರತನಾಟ್ಯಂ" ಎಂದು "ಸಾದಿರ್ ಆಟಂ"ನ್ನು ಮರುನಾಮಕರಣ ಮಾಡಿದರು [೧][೨][೩] ದೇವಸ್ಥಾನಗಳಲ್ಲಿ ಪ್ರಾಚೀನ ಶಿಲ್ಪಗಳು ಅನೇಕ ಭರತ ನಾಟ್ಯಂನ ಕರಣಗಳು ಅಥವಾ ನೃತ್ಯ ಭಂಗಿಗಳನ್ನು ಆಧರಿಸಿವೆ.
  • ವಾಸ್ತವವಾಗಿ, ಹಲವು ಗ್ರಂಥಗಳಲ್ಲಿ ಚಿತ್ರಿಸಲಾಗಿರುವ ಅಪ್ಸರೆಯರು ಸ್ವರ್ಗದಲ್ಲಿ ಮಾಡಿರುವ ನೃತ್ಯದ ಭೂಮಿ ಮೇಲಿನ ಆವೃತ್ತಿ ಎಂದು ಭರತ ನಾಟ್ಯಂನ್ನು ಹೇಳಬಹುದು. ಸಂಪ್ರದಾಯದಂತೆ ಗುಡಿಯಲ್ಲಿರುವ ದೇವರು ಅಲ್ಲಿಯ ಮುಖ್ಯ ಅತಿಥಿ ಎಂದು ಪರಿಗಣಿಸಲ್ಪಟ್ಟು,ಅವರಿಗೆ ಅರ್ಪಿಸುವ ಹದಿನಾರು ಉಪಚಾರಗಳಲ್ಲಿ ಸಂಗೀತ ಮತ್ತು ನೃತ್ಯವೂ ಒಳಗೊಂಡಿತ್ತು.
  • ಆದುದರಿಂದ,ಭಾರತೀಯ ಆಡಳಿತಗಾರರು ಮಾಡಿದಂತೆ ಸಾಂಪ್ರದಾಯಿಕವಾಗಿ ನಿರ್ವಹಿಸಲ್ಪಡುವ ಹಲವು ಹಿಂದೂ ದೇವಾಲಯಗಳು, ತರಬೇತಿ ಹೊಂದಿದ ಸಂಗೀತಗಾರರು ಮತ್ತು ನೃತ್ಯಗಾರರನ್ನು ಪೋಷಿಸಿವೆ. ಕಲಿಯುಗದಲ್ಲಿ ಭಾರತದ ಹೆಚ್ಚಿನ ಎಲ್ಲಾ ನೃತ್ಯ ಹಾಗೂ ಸಂಗೀತ ಪ್ರಕಾರಗಳು ಭಕ್ತಿಯನ್ನಾಧರಿಸಿವೆ.
  • ಆದುದರಿಂದ ಭರತನಾಟ್ಯಂ ಮತ್ತು ಕರ್ನಾಟಕ ಸಂಗೀತದ ಬೇರುಗಳು ಭಕ್ತಿ ರಸದಲ್ಲಿ ಆಳವಾಗಿ ಬೇರೂರಿವೆ ಭರತ ನಾಟ್ಯಂನ್ನು ಸಂಗೀತದ ದೃಶ್ಯ ರೂಪಕ,ಭಕ್ತಿಯ ಒಂದು ಅಭಿವ್ಯಕ್ತಿ ಎಂದು ಹೇಳಲಾಗುತ್ತದೆ. ಭರತನಾಟ್ಯಂನಲ್ಲಿ ಸಂಗೀತ ಮತ್ತು ನೃತ್ಯ ಬೇರ್ಪದಿಸಲಾಗದ ರಚನೆಗಳು ಮತ್ತು ಕೇವಲ ಸಂಗೀತದ ಅನುಭೂತಿಯಿಂದ ಮಾತ್ರ ನೃತ್ಯವನ್ನು ಆಸ್ವಾದಿಸಲು ಸಾದ್ಯ.
  • ಭರತನಾಟ್ಯವು ಮೂರು ಮುಖ್ಯ ಅಂಶಗಳನ್ನು ಒಳಗೊಂಡಿದೆ. ನೃತ್ತ (ಲಯಬದ್ಧ ಚಲನೆ) ನಾಟ್ಯ (ನಾಟಕೀಯತೆ) ಮತ್ತು ನೃತ್ಯ (ನೃತ್ತ ಮತ್ತು ನಾಟ್ಯದ ಸಂಯೋಜನೆ)ತಮಿಳುನಾಡು ವಿಶೇಷವಾಗಿ ತಂಜಾವೂರು, ಯಾವಾಗಲೂ ಕಲಿಕೆ ಮತ್ತು ಸಂಸ್ಕೃತಿಯ ಸ್ಥಾನ ಮತ್ತು ಕೇಂದ್ರವಾಗಿದೆ. ಭರತನಾಟ್ಯವು ೧೭೯೮-೧೮೨೪ ರಲ್ಲಿ ಮರಾಠ ರಾಜ ಸರಬೋಜಿಯ ಆಸ್ಥಾನದಲ್ಲಿದ್ದ ಚಿನ್ನಯ್ಯ ,ಪೊನ್ನಯ್ಯ ,ಸಿವಾನಂದಂ ಮತ್ತು ವಡಿವೇಲು ಎಂಬ ನಾಲ್ವರು ಸಹೋದರರ ಕೊಡುಗೆಯಿಂದ ಈಗಿನ ರೂಪ ಪಡೆದಿದೆ.
  • ಈ ನಾಲ್ವರು ಭರತನಾಟ್ಯದ ಎಲ್ಲ ಅಂಶಗಳನ್ನು ಅಂದರೆ ಅಳರಿಪು, ಜಥಿಸ್ವರಂ, ವರ್ಣಂ, ಶಬ್ದಂ, ಪದಂ ಮತ್ತು ತಿಲ್ಲಾನ ವನ್ನು ರೂಪಿಸಿದರು. ಈ ನಾಲ್ಕು ಸಹೋದರರ ವಂಶಸ್ಥರು ತಂಜಾವೂರುನಲ್ಲಿ ಭರತ ನಾಟ್ಯಂ ನೃತ್ಯ ಶಿಕ್ಷಕರ ಮೂಲ ಪರಂಪರೆ ಬೆಳೆಸಿದರು. ಮೂಲತಃ, ಅವರು ಸ್ವತಃ ಒಂದು ಸಮುದಾಯವಾಗಿ ರೂಪುಗೊಂಡರು ಮತ್ತು ಅವರಲ್ಲಿ ಹೆಚ್ಚಿನವರು ಶೈವ ಪಂಥವನ್ನು ಅನುಸರಿಸುವ ಬ್ರಾಹ್ಮಣರಾಗಿದ್ದರು.

ಶೈಲಿಗಳು

ಭರತನಾಟ್ಯವು ತನ್ನದೆ ಆದ ಶೈಲಿಗಳನ್ನು ಹೊಂದಿದೆ. ಅವುಗಳೇಂದರ

  • ತಂಜಾವುರು ಶೈಲಿ,
  • ಕಲಾಕ್ಷೇತ್ರ ಶೈಲಿ,
  • ಮೆಲ್ತೂರು ಶೈಲಿ,
  • ಪಂದನಲ್ಲೂರ್ ಶೈಲಿ,
  • ಕಾಂಚೀಪುರಂ ಶೈಲಿ,
  • ಮೈಸೂರು ಶೈಲಿ[೪]

ವೇಶಭೂಷಣ

ತುಯ್ಯ ಸೀರೆ

ದೇವದಾಸಿಯರು ನರ್ತಿಸುತ್ತಿದ್ದಾಗ ಉಪಯೋಗಿಸುತ್ತಿದ್ದ ಉಡುಗೆ-ತೊಡುಗೆಗಳು ಪರಿಷ್ಕಾರವಾಗುತ್ತಲೇ ಬಂದು, ಇಂದು ನಾವು ಹೊಲಿದ ರೀತಿಯ ಉಡುಪನ್ನು ನೋಡಬದುದಾಗಿದೆ. ಸಾಂಪ್ರದಾಯಿಕ ಬಣ್ಣಗಳಾದ ಹಸಿರು, ಹಳದಿ, ಕೆಂಪು ಮತ್ತು ಕಿತ್ತಳೆ ಬಣ್ಣಗಳ ಉಡುಪುಗಳನ್ನು ಕಾಣಬಹುದು. ಹಿಂದೆ ಒಂಭತ್ತು ಗಜದ ಸೀರೆಯನ್ನು ಉಡುತಿದ್ದರು. ಪೈಜಾಮದ ಮೇಲೆ ಈ ಸೀರೆಯನ್ನು ಕಚ್ಚೆ ಕಟ್ಟುತ್ತಿದ್ದು, ಸೀರೆಯ ಸೆರಗನ್ನು ಉದ್ದವಾಗಿ ಬಿಟ್ಟು ಒಂದು ಬಾರಿ ಸೊಂಟಕ್ಕೆ ಅದನ್ನು ಸುತ್ತಿ ತದನಂತರ ಅದನ್ನು ಅನೇಕ ನೆರಿಗೆಗಳು ಬರುವಂತೆ ಸೊಂಟಕ್ಕೆ ಮಧ್ಯದಿಂದ ಬೀಸಣಿಗೆಯಂತೆ ಅಗಲಿಸುತ್ತಿದ್ದರು. ಮೇಲೆ ಉದ್ದಕ್ಕೆ ಸೊಂಟದವರೆಗೂ ಚೋಲಿಯನ್ನು ಧರಿಸಿ, ಚೋಲಿಯ ತೋಳುಗಳು ಮೊಣಕೈವರೆಗೂ ಬರುವಂತೆ ಇರುತ್ತಿತ್ತು. ಇದಕ್ಕೆ ತುಯ್ಯ ಸೀರೆ ಎಂದು ಕರೆಯುತ್ತಿದ್ದರು. ಇದರೊಂದಿಗೆ ಕಂಠಕ್ಕೆ ಸಣ್ಣ ಹಾರ ಹಾಗೂ ಉದ್ದನೆಯ ಇನ್ನೊಂದು ಹಾರವನ್ನು ಹಾಕುತ್ತಿದ್ದರು. ಸೊಂಟಕ್ಕೆ ಗೆಜ್ಜೆಡಾಬು, ಕೈಗಳಿಗೆ ಕುಸುರಿ ಕೆಲಸ ಮಾಡಿದ ಬಳೆಗಳು, ಕಿವಿಗೆ ಓಲೆ-ಝುಮುಕಿ. ಕೆನ್ನೆ ಸರಪಳಿ, ಮೂಗಿಗೆ ಮೂಗುನತ್ತು ಹಾಗೂ ಬುಲ್ಲಾಕು, ತೊಳ ಬಂದಿಗಳು, ಕಾಲಿಗೆ ಕಾಲಂದುಗೆ, ಕೈಗಳ ಬೇರಳುಗಳಿಗೆ ಉಂಗುರಗಳು, ಕಾಲಲ್ಲಿ ಬೆಳ್ಳಿ ಗೆಜ್ಜೆಗಳು, ಜಡೆ ಬಿಲ್ಲೆ ಹಾಗೂ ಕುಚ್ಚುಗಳನ್ನು ಧರಿಸುತ್ತಿದ್ದರು.

ಪೈಜಾಮದ ಉಡುಪು

ಇದರಲ್ಲಿ ಹಲವಾರು ವಿಧಗಳಿವೆ.

  1. ಕಾಲಕ್ರಮೇಣ ಸೀರೆಯನ್ನು ಕಚ್ಚೆಹಾಕಿ ಉಡುವುದು ಕಡಿಮೆಯಾಗಿ ಪೈಜಾಮ ರೀತಿಯಲ್ಲಿ ಹಾಕಿ ಕೊಳ್ಳುವ ಉಡುಪಾಗಿ ಬದಲಾಯಿತು. ಪೈಜಾಮದಂತೆ ಹೊಲಿದ ಉಡುಪಿಗೆ ಮಧ್ಯದಲ್ಲಿ ಅನೇಕ ಮಡಿಕೆಗಳಿರುವ ಬಟ್ಟೆಯಿದ್ದು, ಚೋಲಿಯ ಮೇಲೆ ಸೆರಗಿನಂತಹ ಒಂದು ಬಟ್ಟೆ ಹೊದ್ದಿರುತ್ತಾರೆ. ಬಟ್ಟೆಯ ಮಡಿಕೆಯು ಮಂಡಿಗಿಂತ ಎರಡು ಇಂಚಿನಷ್ಟು ಉದ್ದವಿರುತ್ತದೆ.
  2. ಇನ್ನೊಂದು ರೀತಿಯ ಉಡುಪು ಸೀರೆಯ ರೀತಿಯದು. ಒಳಗೆ ಪೈಜಾಮವನ್ನು ಮಂಡಿಯವರೆಗೂ ಹಾಕಿ, ಅದರ ಮೇಲೆ ಸೀರೆಯನ್ನು ಮಂಡಿಯಿಂದ ಮುಕ್ಕಾಲು ಇಂಚಿನಷ್ಟು ಕೆಳಗೆ ಬರುವಂತೆ ಸೀರೆಯನ್ನು ಮಡಚಿ ಹೊಲಿದು, ತದನಂತರ ಅನೇಕ ಬಾರಿ ಮಡಚಿ, ನೆರಿಗೆ ಬರುವ ರೀತಿಯಾಗಿಸುವುದು, ನಂತರ ಸೆರಗನ್ನು ಹೊದ್ದು, ಸುತ್ತಿ ತಂದು ಎಡಪಕ್ಕದಲ್ಲಿ ಮಡಚಿದ ನೆರಿಗೆಗಳನ್ನು ಇಳಿಬಿಡುವುದು.
  3. ನೆರಿಗೆಯು ಮೂರು ಮೆಟ್ಟಿಲುಗಳಾಗಿ ಇರುವುದು ಇನ್ನೊಂದು ವಿಧ.
  4. ಪೈಜಾಮ ಉಡುಪಿನ ನೆರಿಗೆಯು ಸೊಂಟದ ಎಡಪಕ್ಕದಿಂದ ಬಲಕಾಲಿನವರೆಗೂ ಕರ್ಣ ರೇಖೆಯಲ್ಲಿ ನೆರಿಗೆಯಾಗಿ ಧರಿಸುವುದು.
  5. ಪೈಜಾಮದಲ್ಲಿ ಉದ್ದನೆಯ ನೆರಿಗೆ ಇದ್ದು, ಮೇಲುಗಡೆಯಲ್ಲಿ ಚಿಕ್ಕದಾದ ನೆರಿಗೆ ಇರುವುದು, ನೆರಿಗೆಯಲ್ಲಿ ಮಧ್ಯೆ ಒಂದು ಪಟ್ಟಿಯಂತಹ ಜರಿ ಇರುವುದು.
  6. ಪೈಜಾಮದ ಉಡುಪಿನಲ್ಲಿ ಮೊಣಕಾಲಿನಿಂದ ಕೆಳಗೆ ಉದ್ದದ ನೆರಿಗೆ ಇದ್ದು,ಈ ನೆರಿಗೆಯ ಕೆಳಗೆ ಮೂರು ಇಂಚಿನ ಮತ್ತೊಂದು ನೆರಿಗೆ ಇದ್ದು ಅದಕ್ಕೆ ಕುಚ್ಚನ್ನು ಕಟ್ಟಿರುತ್ತಾರೆ.

ಪಾಠಕ್ರಮ

ಅಂಗ ಸಾಧನೆಯಿಂದ ಆರಂಭವಾಗಿ ತಿಲ್ಲಾನದೊಂದಿಗೆ ಮುಗಿಯುತ್ತದೆ

  • ಅಂಗ ಸಾಧನೆ,
  • ಅಡವುಗಳು,
  • ಜತಿ
  • ಅಲರಿಪು,
  • ಜತಿಸ್ವರ,
  • ದೇವರನಾಮ,
  • ಶಬ್ದಂ,
  • ವರ್ಣ,
  • ಜಾವಳಿ,
  • ಶ್ಲೋಕ,
  • ತಿಲ್ಲಾನ[೫]

ಹಸ್ತ ಮುದ್ರೆಗಳು

ನಂದಿಕೇಶ್ವರನ ಅಭಿನಯದರ್ಪಣದಪ್ರಕಾರ ಭರತನಾಟ್ಯದಲ್ಲಿ ೨ ವಿಧವಾದ ಹಸ್ತಮುದ್ರೆಗಳಿವೆ.

ಅಸಂಯುತ ಹಸ್ತಗಳು

ಒಂದು ಕೈಯಿಂದ ಮಾಡುವ ಹಸ್ತಗಳು.ಇದು ೨೮ ಹಸ್ತಗಳಿವೆ.ಅವುಗಳು

ಒಂದು ಕೈಯಿಂದ ಮಾಡುವ ಹಸ್ತಗಳು.ಇದು ೨೮ ಹಸ್ತಗಳಿವೆ.ಅವುಗಳು

  1. ಪತಾಕ
  2. ತ್ರಿಪತಾಕ
  3. ಅರ್ಧಪತಾಕ
  4. ಕತ್ತರೀ ಮುಖ
  5. ಮಯೂರ
  6. ಅರ್ಧಚಂದ್ರ
  7. ಅರಾಳ
  8. ಶುಖತುಂಡ
  9. ಮುಷ್ಠಿ
  10. ಶಿಖರ
  11. ಕಪಿತ್ಥ
  12. ಕಟಕಾಮುಖ
  13. ಸೂಚಿ
  14. ಚಂದ್ರಕಲಾ
  15. ಪದ್ಮಕೋಶ
  16. ಸರ್ಪಶೀರ್ಷ
  17. ಮೃಗಶೀರ್ಷ
  18. ಸಿಂಹಮುಖ
  19. ಲಾಂಗೂಲ
  20. ಆಲಪದ್ಮ
  21. ಚತುರ
  22. ಭ್ರಮರ
  23. ಹಂಸಾಸ್ಯ
  24. ಹಂಸಪಕ್ಷ
  25. ಸಂದಂಶ
  26. ಮುಖುಳ
  27. ತಾಮ್ರಚೂಡ
  28. ತ್ರಿಶೂಲ.                                                 ಸಂಯುತ ಹಸ್ತ

    ಎರಡು ಕೈಗಳನ್ನು ಉಪಯೋಗಿಸಿ ಮಾಡುವ ಹಸ್ತಗಳು. ಇವು ೨೪ ಹಸ್ತಗಳಿವೆ.

    1. ಅಂಜಲಿ
    2. ಕಪೋತ
    3. ಕರ್ಕಟ
    4. ಸ್ವಸ್ತಿಕ
    5. ಡೋಲಾಹಸ್ತ
    6. ಪುಷ್ಪಪುಟ
    7. ಉತ್ಸಂಗ
    8. ಶಿವಲಿಂಗ
    9. ಕಟಕಾವರ್ಧನ
    10. ಕತ್ತರಿಸ್ವಸ್ತಿಕ
    11. ಶಕಟ
    12. ಶಂಖ
    13. ಸಂಪುಟ
    14. ಚಕ್ರ
    15. ಪಾಶ
    16. ಕೀಲಕ
    17. ಮತ್ಸ
    18. ಕೂರ್ಮ
    19. ವರಾಹ
    20. ಗರುಡ
    21. ನಾಗಬಂಧ
    22. ಕಟ್ವಾ
    23. ಭೇರುಂಡ
    24. ಅವಹಿತ್ಥ


    ಚತುರ್ವಿಧ ಅಭಿನಯ

    ಅಭಿ ಎಂದರೆ ಮನಸ್ಸಿನ ಭಾವ, ನಯ ಎಂದರೆ ಪ್ರದರ್ಶಿಸು ಎಂದು ಅರ್ಥ. ಒಟ್ಟಾರೆಯಾಗಿ ಅಭಿನಯ ಎಂದರೆ ಮನಸ್ಸಿನ ಭಾವನೆಗಳನ್ನು ಮುಖದ ಮೂಲಕ ಪ್ರೇಕ್ಷಕರಿರ ಮುಂದೆ ಪ್ರದರ್ಶಿಸುವು ಎಂದು ಅರ್ಥ. ಅಭಿನಯದಲ್ಲಿ ನಾಲ್ಕು ವಿಧಗಳು, ಅವುಗಳೆಂದರೆ

    1. ಆಂಗಿಕ ಅಭಿನಯ
    2. ವಾಚಿಕ ಅಭಿನಯ
    3. ಆಹಾರ್ಯ ಅಭಿನಯ ಮತ್ತು
    4. ಸಾತ್ವಿಕ ಅಭಿನಯ

    ಆಂಗಿಕ ಅಭಿನಯ

    ಆಂಗಿಕಾಭಿನಯ ದಲ್ಲಿ ಎರಡು ವಿಧಗಳು

    1. ಪದಾರ್ಥಾಭಿನಯ - ಮಾತಿನ ಅಥವಾ ಹಾಡಿನ ಒಂದೊಂದು ಶಬ್ದದ ಅರ್ಥವನ್ನು ತೋರಿಸುವುದು.
    2. ವಾಕ್ಯಾರ್ಥಾಭಿನಯ - ಒಂದು ವಾಕ್ಯದ ಒಳಾರ್ಥ ಅಥವಾ ಅದರ ಮನೋಭಾವವನ್ನು ತೋರಿಸುವುದು. ಇದರಲ್ಲಿ ಮೂರು ವಿಧಗಳು. ಅವುಗಳೆಂದರೆ,
    • ಶಾಖಾ - ಶಾಖಾ ಎಂದರೆ ಕವಲು. ಇಲ್ಲಿ ಕೈಗಳ ವಿವಿಧ ಚಲನೆಗಳಲ್ಲಿ ಶಬ್ದಾರ್ಥ ತಿಳಿಸುತ್ತದೆ. ಅವು ಅಭಿನಯ ಹಸ್ತ ರೀತಿ ಮತ್ತು ನೃತ್ತ ಹಸ್ತ ರೀತಿಗಳ ವಿನಿಯೋಗ.
    • ಅಂಕುರ - ಅಭಿನಯ ಹಸ್ತ ರೀತಿಯನ್ನು ಕಾರ್ಯರೂಪದಲ್ಲಿ ಪ್ರಯೋಗಿಸಿದರೆ ಅದು ಅಂಕುರ.
    • ನೃತ್ತ - ನೃತ್ತಹಸ್ತಗಳನ್ನು ನರ್ತನ ವಿಭಾಗದಲ್ಲಿ ಪ್ರಯೋಗಿಸಿದಾಗ ಅದು ನೃತ್ತ.

    ನರ್ತಕರು ನೃತ್ಯ ಪ್ರದರ್ಶಿಸುವಾಗ ಅವರ ಚಲನ ಮತ್ತು ಭಾವಸೂಚನೆಗಳು ಪ್ರೇಕ್ಷಕನ ಮನಸ್ಸನ್ನು ಸುಲಭವಾಗಿ ಆಕರ್ಷಿಸುತ್ತದೆ. ಇದಕ್ಕೆ ಮಾನವನ ದೇಹದ ಭಾಗಗಳು ಮುಖ್ಯವಾಗುತ್ತದೆ. ಈ ದೇಹದ ಭಾಗಗಳಲ್ಲಿ ಮೂರು ವಿಧಗಳು. ಅವುಗಳೆಂದರೆ,

    1. ಅಂಗ
    2. ಪ್ರತ್ಯಾಂಗ
    3. ಉಪಾಂಗ

    ಇವುಗಳ ಸಹಾಯದಿಂದ ಆಂಗಿಕಾಭಿನಯ ಸಾಧ್ಯ.

    ಅಂಗಗಳು

    ಶಿರ, ಹಸ್ತ, ವಕ್ಷ, ಪಾರ್ಶ್ವ, ಕಟಿ ಮತ್ತು ಪಾದಗಳು.

    ಪ್ರತ್ಯಾಂಗಗಳು

    ಸ್ಕಂದ, ಬಾಹು, ಪೃಷ್ಠ, ಉದರ, ಊರು ಮತ್ತು ಜಂಘೆ.

    ಉಪಾಂಗಗಳು

    ದೃಷ್ಠಿ, ಭ್ರೂಪುಟ, ತಾರಾ, ಕಪೋಲ, ನಾಸಿಕ, ಹನು, ಅಧರ, ದಶನಾ, ಜಿಹ್ವಾ, ಚುಬಕ ಮತ್ತು ವದನ. ಇದರೊಂದಿಗೆ ಹಿಮ್ಮಡಿ, ಹರಡು, ಕಾಲು, ಕೈಬೆರಳುಗಳು, ಅಂಗಾಲು ಮತ್ತು ಅಂಗೈಗಳು ಅಂಗಾಂತರಗಳೆನಿಸಿವೆ. ಆಂಗಿಕ ಅಭಿನಯಕ್ಕೆ ಸಹಾಯಕವಾಗುವ ದೈಹಿಕಭಾಗಗಳಿಗೆ ಶಾರೀರಕ, ಮುಖಜ ಮತ್ತು ಚೇಷ್ಟಾಕೃತ ಎಂಬ ವಿಧಗಳಿವೆ. ಶಾರೀರಿಕ ಅಭಿನಯ ದೇಹದ ಭಾಗಗಳಿಗೆ ಸಂಬಂಧಿಸಿದೆ, ಮುಖಜ ಅಭಿನಯ ಮುಖಕ್ಕೆ ಸಂಬಂಧಿಸಿದರೆ, ಚೇಷ್ಟಾಕೃತ ಅಭಿನಯ ದೇಹದ ಚಲನವಲನಗಳಿಗೆ ಸಂಬಂಧಿಸಿದೆ.

    ವಾಚಿಕ ಅಭಿನಯ

    ನೃತ್ಯದಲ್ಲಿ ಹಾಡುಗಳು ಸೇರಿದಾಗ ವಾಚಿಕಾಭಿನಯವಾಗುತ್ತದೆ. ಹಾಡುಗಾರನ ಸಂಗೀತದಿಂದ ಪ್ರೇಕ್ಷಕರಲ್ಲಿ ರಸವು ಸೃಷ್ಠಿಯಾಗುತ್ತದೆ. ಭರತನಾಟ್ಯಕ್ಕೆ ಹೊಂದುವುದು ಕರ್ನಾಟಕ ಶಾಸ್ತ್ರೀ ಸಂಗೀತ. ಹಂಸಧ್ವನಿ, ಆರಭಿ, ಮೋಹನ, ಹಂಸಾನಂದಿ ಮೂಂತಾದ ರಾಗಗಳ ಕೃತಿಗಳನ್ನು, ದೇವರನಾಮಗಳನ್ನು, ಭಜನೆಗಳನ್ನು ಹಾಡುತ್ತಾರೆ. ಕಲ್ಯಾಣಿ, ವಸಂತ, ತೋಡಿ, ಹೇಮಾವತಿ ರಾಗಗಳನ್ನು ಜತಿಸ್ವರದಲ್ಲಿ ಬಳಸುತ್ತಾರೆ. ನಾಯಕ - ನಾಯಕಿಯರಿಗೆ ಸಂಬಂಧಿಸಿರುವ ಪದಂ, ಜಾವಳಿ, ಅಷ್ಟಪದಿಗಳಿಗೆ ಸರಿಯಾಗಿ ರಾಗ ಮತ್ತು ತಾಳವನ್ನು ಸಂಯೋಜಿಸಿರುತ್ತಾರೆ. ಮನಸ್ಸಿನಲ್ಲಿ ಉಕ್ಕಿ ಬರುವ ಎಲ್ಲಾ ಭಾವನೆಗಳಿಗೂ ದೈಹಿಕಪ್ರತಿಕ್ರಿಯೆಗಳು ಆಂಗಿಕವಾಗಿದ್ದಾಗ ಅದು ನರ್ತನ,ಲಯಬದ್ಧವಾದ ನಾದ ವಿನ್ಯಾಸವಾಗಿದ್ದಾಗ ಅದು ಸಂಗೀತ.

    ನವರಸಗಳು

    ನವರಸಗಳು ೯, ಅವುಗಳೆಂದರೆ

    1. ಶೃಂಗಾರ(ಪ್ರೀತಿ,ಪ್ರಣಯ)
    2. ಹಾಸ್ಯ(ಪರಿಹಾಸ)
    3. ಕರುಣ(ಮರುಕ)
    4. ರೌದ್ರ(ಭೀಕರ)
    5. ವೀರ(ಧೀರ,ಸಾಹಸಿ)
    6. ಭಯಾನಕ(ಹೆದರಿಕೆ)
    7. ಬೀಭತ್ಸ(ಅಸಯ್ಯ)
    8. ಅದ್ಬುತ(ಆಶ್ಚರ್ಯ)
    9. ಶಾಂತ(ಸಮಾದಾನ,ನೆಮ್ಮದಿ)

    ಗ್ರಂಥಋಣ ಮತ್ತು ಕರ್ತೃ

    1. ನಾಟ್ಯಶಾಸ್ತ್ರ - ಭರತಮುನಿ
    2. ಅಭಿನವ ದರ್ಪಣ - ನಂದಿಕೇಶ್ವರ
    3. ಭರತಾರ್ಣವ - 
    4. ನಂದಿಕೇಶ್ವರ
    5. ದಶರೂಪಕ - ಧನಂಜಯ
    6. ನೃತ್ಯಕಲೆ - ಯು.ಎಸ್.ಕೃಷ್ಣರಾವ್ ಮತ್ತು ಯು.ಕೆ.ಚಂದ್ರಭಾಗದೇವಿ
    7. ಶ್ರುತಗಾನ - ಜಿ.ಟಿ.ನಾರಯಣರಾವ್
    8. ವಿಮರ್ಶೆಯ ವ್ಯಾಪ್ತಿ - ಕೃಷ್ಣಮೂರ್ತಿ,ಕಿತ್ತೂರ
    9. ನಾದಲಹರಿ ಶಾಸ್ತ್ರ ಚಂದ್ರಿಕೆ - ಪ.ಸಿದ್ದರಾಮಯ್ಯ ಮಠಪತಿ
    10. ನೃತ್ಯಲೋಕ - ಕೆ.ಮುರಳೀಧರರಾವ್
    11. ದಶಾವತಾರ ಕಥೆಗಳು - ಜಿ.ವಿ.ಶಾಸ್ತ್ರಿ

ಕೃಪೆ: ವಿಕಿಪೀಡಿಯ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ

ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ ಭೂಗೋಳವು ಇತಿಹಾಸದೊಡನೆ ನಿಕಟ ಸಂಬಂಧ ಹೊಂದಿದೆ. ಯಾವುದೇ ಪ್ರದೇಶದ ಮಾನವನ ಜೀವನಕ್ರಮ ಮತ್ತು ಇತಿಹಾಸ ಅಲ್ಲಿನ ಭೌಗೋಳಿಕ ಲಕ್ಷಣಗಳನ್ನು ಅವಲಂಬಿಸಿರುತ್ತದೆ. ಪ್ರಕೃತಿ ಲಕ್ಷಣಗಳಲ್ಲಿ ಬದಲಾವಣೆಯಾಗುತ್ತಲೇ ಇರುತ್ತದೆ. ಅದಕ್ಕೆ ತಕ್ಕಂತೆ ಮಾನವನ ಇತಿಹಾಸದ ಬೆಳವಣಿಗೆಯೂ ಮಾರ್ಪಡುತ್ತದೆ. ಏಕೆಂದರೆ ಪ್ರಕೃತಿಯ ಮೇಲ್ಬಾಗದ ಅವಯವಗಳಾದ ಗಾಳಿ, ನದಿ, ಪರ್ವತ, ಸಮುದ್ರ, ಭೂಗುಣ, ಖನಿಜ ಸಂಪತ್ತು ಇತ್ಯಾದಿಗಳ ಕೈವಾಡ ಆಯಾ ದೇಶದ ಇತಿಹಾಸವನ್ನು ನಿರ್ಧರಿಸುತ್ತದೆ. ಆದ್ದರಿಂದ ಒಂದು ದೇಶದ ಅಥವಾ ಜನಾಂಗದ ಇತಿಹಾಸ ಅರಿಯಲು ಭೂಗೋಳದ ತಿಳಿವಳಿಕೆ ಅತ್ಯವಶ್ಯ. ವಿದೇಶಿ ಪ್ರವಾಸಿಗರ ವರದಿಗಳು ಭೌಗೋಳಿಕ ಪರಿಜ್ಞಾನವಿಲ್ಲದ ಇತಿಹಾಸದ ಅಧ್ಯಯನ ಕೂಡ ವ್ಯರ್ಥ, ಉದಾಹರಣೆಗೆ ಅಶೋಕನ ಸಾಮ್ರಾಜ್ಯ ತುಂಬ ವಿಶಾಲವಾಗಿತ್ತು: ಅತಿ ದೊಡ್ಡದು ಎನ್ನುವಾಗ ಭೌಗೋಳಿಕ ಮೇರೆಗಳ ಚಿತ್ರ ಅತ್ಯವಶ್ಯ. ಅವನ ರಾಜ್ಯ ಪಶ್ಚಿಮದಲ್ಲಿ ಆಫ್ಘಾನಿಸ್ತಾನ, ಉತ್ತರದಲ್ಲಿ ನೇಪಾಳ, ಪೂರ್ವದಲ್ಲಿ ಕಾಮರೂಪ ಹಾಗೂ ದಕ್ಷಿಣದಲ್ಲಿ ನಲ್ಲೂರಿನವರೆಗೂ ವಿಸ್ತರಿಸಿದ್ದಿತು ಎಂದು ವಿವರಿಸಲು ಹಾಗೂ ಸುಲಭ ಗ್ರಹಿಕೆಗೂ ಭೌಗೋಳಿಕ ಅರಿವು ಅವಶ್ಯ. ಹಾಗೆಯೇ ಕಾಲಗಣನೆ (Chronology) ಕೂಡ. ಅದು ಯಾವ ಕಾಲದಲ್ಲಿ ಈ ಘಟನ ಸಂಭವಿಸಿತು: ಅಶೋಕ ಅಥವಾ ಮಹಾತ್ಮಾ ಗಾಂಧಿ ಜೀವಿಸಿದ್ದರು ಎಂಬುದನ್ನು ತಿಳಿಸುತ್ತದೆ, ರಿಚರ್ಡ್ ಹಕ್ಕೂಯತ್ ಹೇಳುವಂತೆ: ಭೂಗೋಳ...

ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture)

1.1 ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture) ಭಾರತದ ಸಾಂಸ್ಕೃತಿಕ ಪರಂಪರೆಯು ವಿಶಾಲವಾದ ವ್ಯಾಪ್ತಿಯನ್ನು ಹೊಂದಿದೆ. ಮಾನವನ ಉಗಮದೊಂದಿಗೆ ಉಗಮವಾಗಿ ಬೆಳೆದು ಸಾಗಿ ಬಂದ ಪರಂಪರೆಯು ಅವನ ಜೀವನ ಮೌಲ್ಯಗಳು, ವಸತಿ ರಕ್ಷಣೆ, ಆಹಾರ, ವಿಹಾರ, ಉಡುಗೆ-ತೊಡುಗೆ, ಮನರಂಜನೆ, ವ್ಯಾಪಾರ, ವಾಣಿಜ್ಯ, ಸಂಗೀತ, ಕಲೆ, ವಾಸ್ತುಶಿಲ್ಪ, ಚಿತ್ರಕಲೆ, ಶಿಕ್ಷಣ, ಧರ್ಮಗಳು, ರೂಢಿ-ಸಂಪ್ರದಾಯಗಳು, ಭಾಷೆ, ನಟನೆ, ನಂಬಿಕೆ, ನೃತ್ಯ, ಆಚರಣೆ, ಹವ್ಯಾಸ, ಸಾಹಿತ್ಯ, ವಿಧಿ-ವಿಧಾನಗಳನ್ನು ಒಳಗೊಂಡಿದೆ. ಈ ಅಂಶಗಳಲ್ಲಿ ಕೆಲವು ಕಾಲಕ್ಕೆ ತಕ್ಕಂತೆ ಮತ್ತು ಪ್ರಾದೇಶಿಕವಾಗಿ ಭಿನ್ನತೆ ಹಾಗೂ ಬದಲಾವಣೆಗೊಂಡಿದ್ದರೂ ನಿರಂತರವಾಗಿ ಸಾಗಿ ಬಂದಿವೆ. ಅವುಗಳ ಗುಣ ಲಕ್ಷಣಗಳು ಈ ಕೆಳಗಿನಂತಿವೆ: 1. ಸಾಂಪ್ರದಾಯಕ ಜೀವನ ವಿಧಾನ: ಭಾರತೀಯರ ಜೀವನ ವಿಧಾನ ಪಾರಂಪರಗತವಾಗಿ ಪೂರ್ವಜರಿಂದ ಸಾಗಿ ಬಂದಿದೆ. ಪಾರಂಪರಗತವಾಗಿ ಭಾರತೀಯರದು ಕೃಷಿ ಪ್ರಧಾನವಾದ ಜೀವನ ವಿಧಾನವಾಗಿದ್ದು, ಭೂಮಿಯನ್ನು 'ಭೂದೇವಿ' ಎಂದು ಆರಾಧಿಸುತ್ತಾರೆ. ಭೂಮಿಯನ್ನು ಹಸನಗೊಳಿಸಿ, ಹದ ಮಾಡಿ, ಉತ್ತಿ-ಬಿತ್ತುವ ಪೂರ್ವದಲ್ಲಿ ಭೂದೇವಿಗೆ ಪೂಜೆ ಸಲ್ಲಿಸುವ ಮೂಲಕ ಕೃಷಿ ಕಾಯಕವನ್ನು ಪ್ರಾರಂಭಿಸುತ್ತಾರೆ. ಕಾಲಕಾಲಕ್ಕೆ ಮಳೆಯಾಗಿ, ಸಮೃದ್ಧವಾದ ಬೆಳೆಯನ್ನು ಕೊಡುವ ಮೂಲಕ ನಿನ್ನ ಮಕ್ಕಳನ್ನು ಸಲಹು ತಾಯಿ ಎಂದು ಬೇಡಿಕೊಳ್ಳುತ್ತಾರೆ. ಕೃಷಿ ಸಲಕರಣಗಳಲ್ಲಿ, ಬಿತ್ತುವ ಬೀಜಗಳಲ್...

Antiquity of Karnataka

Antiquity of Karnataka The Pre-history of Karnataka traced back to paleolithic hand-axe culture. It is also compared favourably with the one that existed in Africa and is quite distinct from the Pre-historic culture that prevailed in North India.The credit for doing early research on ancient Karnataka goes to Robert Bruce-Foote. Many locales of Pre-noteworthy period have been discovered scattered on the stream valleys of Krishna, Tungabhadra, Cauvery, Bhima, Ghataprabha, Malaprabha, Hemavathi, Shimsha, Manjra, Netravati, and Pennar and on their tributaries. The disclosure of powder hills at Kupgal and Kudatini in 1836 by Cuebold (a British officer in Bellary district), made ready for the investigation of Pre-notable examinations in India.   Some of the important sites representing the various stages of Prehistoric culture that prevailed in Karnataka are Hunasagi,Kaladevanahal li, Tegginahalli, Budihal, Piklihal, Kibbanahalli, Kaladgi, Khyad, Nyamati, Nittur, Anagavadi, Balehonnur a...