ವಿಷಯಕ್ಕೆ ಹೋಗಿ

ಚರಿತ್ರೆ

 
* ಪುರುಷೋತ್ತಮ ಬಿಳಿಮಲೆ
'ಚರಿತ್ರೆ' ಮತ್ತು 'ಇತಿಹಾಸ' ಎಂಬ ಎರಡು ಪದಗಳನ್ನು ನಾವು ಅಷ್ಟೇನೂ ವ್ಯತ್ಯಾಸವಿಲ್ಲದೆ ಬಳಸುತ್ತಿದ್ದೇವೆ. ಇಂಗ್ಲಿಷಿನ ’ಹಿಸ್ಟರಿ’ ಪದಕ್ಕೆ ಸಂವಾದಿಯಾದ ಪದಗಳವು. ಸಾರ್ವಜನಿಕ ವಿಷಯಗಳನ್ನು ಅವಿಚ್ಛಿನ್ನವಾದಒಂದುಕ್ರಮವನ್ನು ಅನುಸರಿಸಿ ಬರೆದಿಟ್ಟ ವಿಷಯಗಳ ಸಂಗ್ರಹವೇಚರಿತ್ರೆ. ’ಹೀಗೆಯೇಇತ್ತು’ ಎಂಬರ್ಥದಲ್ಲಿಇತಿಹಾಸ ಎಂಬ ಪದವನ್ನು ಸಷ್ಟಿಸಿಕೊಳ್ಳಲಾಗಿದೆ. ಇತಿಹಾಸಅಥವಚರಿತ್ರೆ ಎಂಬ ಹೆಸರಿನಲ್ಲಿ ’ಏನನ್ನು ಬರೆದಿಡಲಾಗುತ್ತದೆಯೋ ಅವು ಕಟ್ಟುಕತೆ’ಗಳಲ್ಲ ಎಂದು ಹೇಳಲಾಗುತ್ತದೆ. ಜನಪದರಲ್ಲಿ ಈ ಎರಡೂ ಪದಗಳು ಬಳಕೆಯಲ್ಲಿ ಇಲ್ಲ. ಅದರರ್ಥಅವರಿಗೆಚರಿತ್ರೆಇಲ್ಲಎಂದುಅರ್ಥವಲ್ಲ. ಪದಶಃ ನೋಡಿದಾಗ ’ಕಥೆ’ಗೆ ಹೇಳಿದ್ದು, ನಿರೂಪಿಸಿದ್ದು ಎಂಬ ಅರ್ಥವಿದೆ ನಿಜ. ಆದರೆ ಸಾಮಾನ್ಯಾರ್ಥದಲ್ಲಿ ’ಕತೆ’ ಎಂದಾಕ್ಷಣ ಕಲ್ಪಿಸಿದ್ದು, ಕಟ್ಟುಕತೆ, ನಿಜವಲ್ಲದ್ದು ಎಂಬ ಅರ್ಥವೇ ಸುರಿಸುತ್ತದೆ. ’ಏಕೆಂದರೆ’ ನಿಜವಲ್ಲದ್ದು ಎಂಬ ಅರ್ಥದಲ್ಲಿಅವರು ’ಅಜ್ಜಿಕತೆ’ ಎಂಬ ಪದವನ್ನು ಬಳಸುತ್ತಾರೆ.ಅಜ್ಜಿಕತೆಗೆ ’ನಿಜವಾದಘಟನೆಯೊಂದರ ನಿರೂಪಣೆ’ ಎಂಬ ಅರ್ಥಎಲ್ಲಿಯೂಇಲ್ಲ. ಜನಪದ ವಿದ್ವಾಂಸರು ’ಕತೆ’ ಎಂಬುದನ್ನು ಉಳಿಸಿಕೊಂಡು ’ಅಜ್ಜಿ’ಯನ್ನು ಬಿಟ್ಟರು ಮತ್ತು ’ಕತೆ’ಗೆಅಜ್ಜಿಕತೆಯಅರ್ಥವನ್ನೇಕೊಟ್ಟುಕೊಂಡರು.ಮೂಲತಃಜನಪದರಲ್ಲಿಇದ್ದ ’ಕತೆ’ ಪದಕ್ಕೆ (ಚರಿತ್ರೆ-ನಿಜವಾದದ್ದರ ನಿರೂಪಣೆ ಎಂಬ ಅರ್ಥದಲ್ಲಿದ್ದ) ’ದಂತಕತೆ’ ಎಂಬ ಹೊಸಪದವನ್ನು ಸಷ್ಟಿಸಿಕೊಂಡರು.ಈಚಿನ ದಿನಗಳಲ್ಲಿ ದಂತಕತೆಗೆ ವಿದ್ವಾಂಸರು ’ಐತಿಹ್ಯ’ ಎಂಬ ಇನ್ನೊಂದು ಪದವನ್ನು ಬಳಕೆಗೆ ತಂದಿದ್ದಾರೆ. ಇಂಗ್ಲಿಷಿನ ಲೆಜೆಂಡ್‌ಪದಕ್ಕೆ ಸಂವಾದಿಯಾಗಿ ’ಐತಿಹ್ಯ’ ಬಳಕೆಯಲ್ಲಿದೆ.ಮೂಲತಃಅದು ಲ್ಯಾಟಿನ್ ಪದವಾಗಿದ್ದು, ’ಪ್ರಾರ್ಥನಾ ಮಂದಿರಗಳಲ್ಲಿ ಪಠಣ ಮಾಡಬಹುದಾದ ವಿಷಯಗಳಿಗೆ’ ಸಂಬಂಸಿತ್ತು.ಈ ಪಠಣ ಮಾಡಬಹುದಾದ ವಿಷಯಗಳು ಬೈಬಲ್‌ನಲ್ಲಿರುವ ಸಂಗತಿಗಳು ಮತ್ತು ಸಾಧು ಸಂತರಜೀವನಚರಿತ್ರೆಗೆ ಸೀಮಿತವಾಗಿತ್ತು.ಈ ಅರ್ಥದಲ್ಲಿ ಲೆಜೆಂಡ್ ಪದವು ’ಒಂದುಕಾಲದಲ್ಲಿ ನಡೆದ ಸತ್ಯಸಂಗತಿ’ಯನ್ನು ಸಂಕೇತಿಸುತ್ತದೆ.ಇದುದಂತಕತೆ-ಕತೆ-ಅಥವಾಐತಿಹ್ಯದಅರ್ಥವೇಆಗಿದೆ. ಇತಿಹಾಸದ ನಿರೂಪಕರು ಲಿಖಿತ ದಾಖಲೆಗಳನ್ನು ಆಧರಿಸಿಕೊಂಡು ’ಒಂದುಕಾಲದಲ್ಲಿ ನಡೆದ ಸತ್ಯಸಂಗತಿ’ಯನ್ನುತಾವುಕಂಡಂತೆ ನಿರೂಪಿಸಿದರೆ, ಐತಿಹ್ಯದ ನಿರೂಪಕರು (ಕತೆಅಥವಾದಂತಕತೆಯ ನಿರೂಪಕರು) ಮೌಖಿಕ ಪರಂಪರೆಯ ದಾಖಲೆಗಳನ್ನು ಆಧರಿಸಿಕೊಂಡು ’ಒಂದುಕಾಲದಲ್ಲಿ ನಡೆದ ಸತ್ಯಸಂಗತಿ’ಯನ್ನುತಾವುಕಂಡಂತೆ ನಿರೂಪಿಸುತ್ತಾರೆ. ಒಂದು, ಲಿಖಿತ ದಾಖಲೆಗಳನ್ನು ಲಿಖಿತರೂಪದಲ್ಲಿ ಮಂಡಿಸಿದರೆ, ಇನ್ನೊಂದುಕಂಠಸ್ವ ದಾಖಲೆಗಳನ್ನು ಮೌಖಿಕರೂಪದಲ್ಲಿ ಮಂಡಿಸುತ್ತದೆ.ಎರಡೂ ಬೇರೆ ಬೇರೆ ಸತ್ಯಗಳನ್ನು ಪ್ರಕಟಿಸುತ್ತದೆ.
ಇತಿಹಾಸದ ಬರಹಗಾರರುತಮ್ಮ ಬರಹಕ್ಕೆಯಾವುದಾದರೂಆಧಾರವನ್ನುಕೊಡುವ ಹಾಗೇ ಐತಿಹ್ಯದ ನಿರೂಪಕರೂತಮ್ಮ ವಿವರಣೆಗೆಅಗತ್ಯವಾದಆಧಾರವೊಂದನ್ನುಕೊಡುತ್ತಾರೆ. ಆ ಆಧಾರಗಳು ಯಾವುವೂ ಆಗಬಹುದು. ಅವಶೇಷ, ಪಳೆಯುಳಿಕೆ, ವಸ್ತು-ಸ್ಥಳ, ಕೆರೆ, ಕಟ್ಟೆ, ಗುಡ್ಡ, ಬೆಟ್ಟ, ಬಂಡೆ, ದಿನ್ನೆ, ಉಡುಗೆ-ತೊಡುಗೆ, ಆಯುಧ, ಪ್ರಾಣಿ, ಸಸ್ಯ, ಮನುಷ್ಯ-ಹೀಗೆ ಯಾವುದು ಬೇಕಾದರೂಐತಿಹ್ಯಕ್ಕೆಆಧಾರ ಆಗಬಹುದು. ಭೌತಿಕಆಧಾರವೊಂದುಇಲ್ಲದೆಐತಿಹ್ಯ ಹುಟ್ಟಲಾರದು. ಉದಾಹರಣೆಗೆ ಹಂಪಿಯಲ್ಲಿರುವ ಸುಗ್ರೀವಗುಹೆಯಎದುರಿಗೆ ಬಂಡೆಯಲ್ಲಿ ಬಿಳಿಯದಾದ ಗೆರೆಗಳ ಉದ್ದನೆಯ ಸಾಲಿದೆ.ಅದು ಸೀತೆಯ ಸೆರಗೆಂದುಜನ ಹೇಳುತ್ತಾರೆ.ಮಂಡ್ಯಜಿಲ್ಲೆಯ ಬೆಳ್ಳೂರಿನ ಸಮೀಪದಅನಂತಗಿರಿಯಲ್ಲಿರುವ ’ಭೀಮನ ಹೆಜ್ಜೆ’ಯೂಇನ್ನೊಂದುಉದಾಹರಣೆ.ಇದೇರೀತಿಕಲ್ಲಿದ್ದರೆ-ಭೀಮನಕಲ್ಲು, ಕೆರೆಯಿದ್ದರೆಜಟಾಯುತೀರ್ಥ, ಗುಹೆಯಿದ್ದರೆ ಪಾಂಡವರ ಗುಹೆ, ಸಿದ್ಧವಾಗುತ್ತದೆ.

ಐತಿಹ್ಯ ನಿರೂಪಕನಿಗೆತಾನು ನಿರೂಪಿಸುತ್ತಿರುವುದು ನಿಜವಾದದ್ದನ್ನೇಎಂಬುದನ್ನು ಸಾಬೀತುಪಡಿಸಲುಇರುವ ಬಹಳ ಬಲವಾದಆಧಾರವೆಂದರೆ ಈ ಭೌತಿಕ ಸಾಮಗ್ರಿಗಳೇ. ನಿರೂಪಕನ ಪೀಠಿಕಾರೂಪದ ಮಾತಿನಿಂದಅದು ಸ್ಪಷ್ಟವಾಗುತ್ತದೆ.ಸರಿಯಾದ ಸ್ಥಳ, ನಿರ್ದಿಷ್ಟ ಸಮಯ ಮತ್ತು ವ್ಯಕ್ತಿಯ ಬಗ್ಗೆ ಯಾವಆತಂಕವೂಇಲ್ಲದೆ, ತಡವರಿಕೆಯೂಇಲ್ಲದೆ ವಿಷಯ ಮಂಡನೆ ಮಾಡುವಆತ, ಕಣ್ಣೆದುರುಇರುವ ಭೌತಿಕ ಅಧಾರಗಳಿಂದಲೇ ಅದನ್ನುಇನ್ನಷ್ಟು ಗಟ್ಟಿಗೊಳಿಸುತ್ತಾನೆ. ’ಇವೆಲ್ಲ ಸಾಮಾನ್ಯಜನರಿಗೂ ತಿಳಿದಿರುತ್ತದೆ.ಕಣ್ಣಿದ್ದವರಿಗೆಕಾಣುತ್ತದೆ.ನಿಮಗಿನ್ನೂ ತಿಳಿದಿಲ್ಲವೇ ಎಂಬ ಧಾಟಿಯಲ್ಲಿಆತನ ನಿರೂಪಣೆಇರುತ್ತದೆ.ಜೊತೆಗೆ ಭೌತಿಕಆಧಾರವನ್ನು ಮತ್ತೆ ಮತ್ತೆಆತಉಲ್ಲೇಖಿಸುತ್ತಾನೆ. ಇದರಿಂದಾಗಿ ನಿರೂಪಣೆಯಲ್ಲಿರಬಹುದಾದಅಮೂರ್ತ ಅಂಶಗಳೆಲ್ಲಾ ಗೌಣವಾಗಿಬಿಡುತ್ತದೆ. ’ಅದುಅಲ್ಲಿಇರುವುದರಿಂದಲೇ ನಾನದನ್ನು ನಂಬಿದೆ, ಇಲ್ಲದಿದ್ದರೆ ನಾನೆಲ್ಲಿ ನಂಬುತ್ತಿದ್ದೆ.ನನಗೂ ನಿಮ್ಮ ಹಾಗೆ ಆಧಾರವಿಲ್ಲದೆ ನಂಬಲಿಕ್ಕೆ ಆಗುವುದಿಲ್ಲ’ ಎಂದು ಹೇಳುವ ಮೂಲಕ ತನ್ನ ನಿರೂಪಣೆಯನ್ನು ನಿಲ್ಲಿಸುತ್ತಾನೆ. ಈ ಬಗೆಯ ಮುಕ್ತಾಯವುಆತಕಂಡ ಸತ್ಯವನ್ನುಇನ್ನಷ್ಟು ಬಲಪಡಿಸುವತಂತ್ರಎಂಬುದನ್ನು ಗಮನಿಸಬೇಕು.

ವಿವರಣೆ ಮತ್ತು ವ್ಯಾಪ್ತಿಯದಷ್ಟಿಯಿಂದಐತಿಹ್ಯಗಳು ಪುರಾಣಕ್ಕಿಂತಕಿರಿದು. ಬಹುಮಟ್ಟಿಗೆ ಅವು ಒಂದು ನಿರ್ದಿಷ್ಟಜಾತಿ-ಬುಡಕಟ್ಟುಗಳಿಗೆ ಬದ್ಧವಾಗಿರುತ್ತದೆ.ಇಂಥಐತಿಹ್ಯಗಳು ತಮ್ಮ ಸೀಮಿತ ವಲಯವನ್ನು ಭೇದಿಸಿಕೊಂಡು ಹೊರ ಪ್ರಪಂಚಕ್ಕೆ ಕಾಲಿರಿಸಿದೊಡನೆ, ಅವುಗಳ ಅರ್ಥವಂತಿಕೆಯು ಬಹಳ ತೀವ್ರವಾದ ಸವಾಲುಗಳನ್ನು ಎದುರಿಸುತ್ತವೆ. ಸಮುದಾಯ ಬದ್ಧತೆಯಿಂದತನ್ನನ್ನು ಬಿಡಿಸಿಕೊಂಡ ಐತಿಹ್ಯಗಳು ವಿಶಾಲ ಕ್ಷೇತ್ರದಲ್ಲಿ ಬದುಕುಳಿಯಬೇಕಾದರೆ ಸಾರ್ವಜನಿಕರಿಗೆ ಇಷ್ಟವಾಗುವ ರೀತಿಯಲ್ಲಿ ಬೆಳೆಯಬೇಕಾಗುತ್ತದೆ. ಕೇವಲ ಸ್ವಕೀಯವಾಗಿದ್ದ ಪ್ರತೀಕಗಳನ್ನು ಬದಲಾಯಿಸಿಕೊಂಡು ಸಾರ್ವತ್ರಿಕ ಪ್ರತೀಕಗಳಿಗೆ ಮೈ ಒಡ್ಡಿಕೊಳ್ಳಬೇಕಾಗುತ್ತದೆ.ಈ ಸಾರ್ವತ್ರಿಕೀಕರಣವು ಮೂರುರೀತಿಯಲ್ಲಿ ಸಾತವಾಗುತ್ತದೆ.ಮೊದಲನೆಯದು ಸ್ಥಳದ ಬದ್ಧತೆಯನ್ನು ಮೀರುವುದು, ಎರಡನೆಯದು ವ್ಯಕ್ತಿ ನಿಷ್ಠತೆಯನ್ನು ಮೀರುವುದು ಮತ್ತುಕೊನೆಯದುಕಾಲದ ಬದ್ಧತೆಯನ್ನು ಮೀರುವುದು. ಈ ನಿಟ್ಟಿನಲ್ಲಿಐತಿಹ್ಯಗಳು ಬಯಸುವ ಭೌತಿಕ ಆಧಾರಗಳನ್ನು ಪುರಾಣಗಳು ಬಯಸುವುದಿಲ್ಲ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ

ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ ಭೂಗೋಳವು ಇತಿಹಾಸದೊಡನೆ ನಿಕಟ ಸಂಬಂಧ ಹೊಂದಿದೆ. ಯಾವುದೇ ಪ್ರದೇಶದ ಮಾನವನ ಜೀವನಕ್ರಮ ಮತ್ತು ಇತಿಹಾಸ ಅಲ್ಲಿನ ಭೌಗೋಳಿಕ ಲಕ್ಷಣಗಳನ್ನು ಅವಲಂಬಿಸಿರುತ್ತದೆ. ಪ್ರಕೃತಿ ಲಕ್ಷಣಗಳಲ್ಲಿ ಬದಲಾವಣೆಯಾಗುತ್ತಲೇ ಇರುತ್ತದೆ. ಅದಕ್ಕೆ ತಕ್ಕಂತೆ ಮಾನವನ ಇತಿಹಾಸದ ಬೆಳವಣಿಗೆಯೂ ಮಾರ್ಪಡುತ್ತದೆ. ಏಕೆಂದರೆ ಪ್ರಕೃತಿಯ ಮೇಲ್ಬಾಗದ ಅವಯವಗಳಾದ ಗಾಳಿ, ನದಿ, ಪರ್ವತ, ಸಮುದ್ರ, ಭೂಗುಣ, ಖನಿಜ ಸಂಪತ್ತು ಇತ್ಯಾದಿಗಳ ಕೈವಾಡ ಆಯಾ ದೇಶದ ಇತಿಹಾಸವನ್ನು ನಿರ್ಧರಿಸುತ್ತದೆ. ಆದ್ದರಿಂದ ಒಂದು ದೇಶದ ಅಥವಾ ಜನಾಂಗದ ಇತಿಹಾಸ ಅರಿಯಲು ಭೂಗೋಳದ ತಿಳಿವಳಿಕೆ ಅತ್ಯವಶ್ಯ. ವಿದೇಶಿ ಪ್ರವಾಸಿಗರ ವರದಿಗಳು ಭೌಗೋಳಿಕ ಪರಿಜ್ಞಾನವಿಲ್ಲದ ಇತಿಹಾಸದ ಅಧ್ಯಯನ ಕೂಡ ವ್ಯರ್ಥ, ಉದಾಹರಣೆಗೆ ಅಶೋಕನ ಸಾಮ್ರಾಜ್ಯ ತುಂಬ ವಿಶಾಲವಾಗಿತ್ತು: ಅತಿ ದೊಡ್ಡದು ಎನ್ನುವಾಗ ಭೌಗೋಳಿಕ ಮೇರೆಗಳ ಚಿತ್ರ ಅತ್ಯವಶ್ಯ. ಅವನ ರಾಜ್ಯ ಪಶ್ಚಿಮದಲ್ಲಿ ಆಫ್ಘಾನಿಸ್ತಾನ, ಉತ್ತರದಲ್ಲಿ ನೇಪಾಳ, ಪೂರ್ವದಲ್ಲಿ ಕಾಮರೂಪ ಹಾಗೂ ದಕ್ಷಿಣದಲ್ಲಿ ನಲ್ಲೂರಿನವರೆಗೂ ವಿಸ್ತರಿಸಿದ್ದಿತು ಎಂದು ವಿವರಿಸಲು ಹಾಗೂ ಸುಲಭ ಗ್ರಹಿಕೆಗೂ ಭೌಗೋಳಿಕ ಅರಿವು ಅವಶ್ಯ. ಹಾಗೆಯೇ ಕಾಲಗಣನೆ (Chronology) ಕೂಡ. ಅದು ಯಾವ ಕಾಲದಲ್ಲಿ ಈ ಘಟನ ಸಂಭವಿಸಿತು: ಅಶೋಕ ಅಥವಾ ಮಹಾತ್ಮಾ ಗಾಂಧಿ ಜೀವಿಸಿದ್ದರು ಎಂಬುದನ್ನು ತಿಳಿಸುತ್ತದೆ, ರಿಚರ್ಡ್ ಹಕ್ಕೂಯತ್ ಹೇಳುವಂತೆ: ಭೂಗೋಳ...

ಕರ್ನಾಟಕದ ಪ್ರದರ್ಶನ ಕಲೆಗಳು OEC HISTORY

ಕರ್ನಾಟಕದ ಜಾನಪದ ಕಲೆಗಳು ಗ್ರಾಮೀಣ ಬದುಕಿನ ಅನಕ್ಷರಸ್ಥರಲ್ಲಿನ ಜಾನಪದ ಕಲೆಗಳು, ಹಾಡು, ಗಾದೆ ನಗರ ಬದುಕಿನ ಜನಕ್ಕೆ ವಿಶಿಷ್ಟ ಸಂವೇದನೆಯನ್ನುಂಟು ಮಾಡಿವೆ. ಗ್ರಾಮಗಳ ದೈನಿಕ ಬದುಕು ಆರಂಭವಾಗುವುದೇ ಇಂಥ ಜನಪದ ಹಾಡು-ಹಬ್ಬ ಆಚರಣೆಗಳಿಂದ. ಇವೊತ್ತಿನ ವಿಜ್ಞಾನಯುಗ ಪರಂಪರಾಗತ ಕಲೆಗಳನ್ನು ಮರೆಸುವಂತೆ ನಾಗಾಲೋಟಕ್ಕೆ ಓಡುತ್ತಿದೆ. ಹೀಗಿದ್ದೂ ನಗರ ಬದುಕಿನ ಈ ಜನಕ್ಕೆ `ಜನಪದ' ಮನರಂಜನೆಯನ್ನೀಯುವ ಮಟ್ಟಕ್ಕೆ ಸೀಮಿತವಾಗಿದೆಯೇನೋ ಅನ್ನುವ ಸಂಶಯ ಮೂಡಿದೆ. ಇದು ವಾಸ್ತವವೂ ಕೂಡ. ಈ ಜಾನಪದ ಪ್ರಕಾರವನ್ನು ಸಂಸ್ಕೃತಿಯ ಒಂದು ಭಾಗವೆಂದು ಭಾವಿಸಬೇಕಾಗಿರುವುದರಿಂದ ಇದರ ಉಳಿವು ನಮ್ಮ ಕೈಲಿದೆ. ಕಲಾವಿದರಿಗೆ ಪ್ರಶಸ್ತಿ, ಪುರಸ್ಕಾರ ನೀಡಿ ಗ್ರಾಮೀಣ ಪ್ರತಿಭೆಗಳನ್ನು ಹುಡುಕಿ ಈ ಪ್ರಕಾರದ ಜೀವಂತಿಕೆಗೆ ಶ್ರಮಿಸಬೇಕಾದ ಅಗತ್ಯವಿದೆ. ಅನೇಕ ಗ್ರಾಮೀಣ ಕಲೆ ಮತ್ತು ಆಚರಣೆಗಳು ಸಮಾಜದ ಮುಖ್ಯವಾಹಿನಿಗೆ ಬಾರದೆ ಎಲೆಮರೆಯ ಕಾಯಾಗಿ ಮರೆಯಲ್ಲಿಯೇ ಅಳಿದು ಹೋಗುತ್ತಿವೆ. ಅದರ ಸೊಗಡನ್ನು ಉಳಿಸುವ ಮತ್ತು ಮುಂದಿನ ತಲೆಮಾರಿಗೆ ಇದರ ಸವಿಯನ್ನು ಉಳಿಸಿ ಉಣಬಡಿಸುವ ಗುರುತರವಾದ ಜವಾಬ್ದಾರಿಯು ಪ್ರಜ್ಞಾವಂತ ನಾಗರಿಕರ ಜವಾಬ್ದಾರಿಯಾಗಿದೆ. ವೀರಗಾಸೆ ವೀರಗಾಸೆಯು ಸಾಮೂಹಿಕ ನೃತ್ಯವನ್ನೊಳಗೊಂಡ ಕರ್ನಾಟಕದ ಒಂದು ಜನಪದ ಕಲೆ. ಶೈವ ಸಂಪ್ರದಾಯದ ಧಾರ್ಮಿಕ ವೀರನೃತ್ಯ. ನೃತ್ಯದ ನಡುವೆ ಕನಿಷ್ಠ ಎರಡು ಜನ ಕಲಾವಿದರುಗಳು ಸೇರಿ ಒಡಪು ಹೇಳುವ ಕಾರ್ಯಕ್ರಮ ನಡೆಸಿಕೊಟ್ಟರೆ, ಗರಿಷ್ಠ ಮೂವತ್...

ಬಿ.ಎ. ಪ್ರಥಮ ವರ್ಷದ ಮಾದರಿ ಪ್ರಶ್ನೆ ಪತ್ರಿಕೆಗಳು

ಎಸ್.ಆರ್.ಇ.ಎಸ್. ಪ್ರಥಮ ದರ್ಜೆ ಕಾಲೇಜು, ಕಲ್ಲೋಳಿ ಕರ್ನಾಟಕದ  ಸಾಂಸ್ಕೃತಿಕ ಇತಿಹಾಸ(OCE) BA Ist Semester Model question Paper Total Marks : 60.    Total time: 2 hours Section A *Q.1 ಬೇಕಾದ ಎರಡು ಪ್ರಶ್ನೆಗಳಿಗೆ ಟಿಪ್ಪಣಿ ಬರೆಯಿರಿ.   ೨×೫=೧೦* ೧. ಕರ್ನಾಟಕದ ಪ್ರಾಚೀನತೆ ೨. ಶಿಕ್ಷಣ ಪದ್ಧತಿ ಮತ್ತು ಅಗ್ರಹಾರ ೩. ದಸರಾ ಮತ್ತು ಮಹಾಮಸ್ತಕಾಭಿಷೇಕ ೪. ಪ್ರದರ್ಶನ ಕಲೆಗಳು Section B *Q. 2. ಬೇಕಾದ ಎರಡು ಪ್ರಶ್ನೆಗಳಿಗೆ ಉತ್ತರಿಸಿ. 2×10=20* ೧. ಪ್ರಾಚೀನ ಕರ್ನಾಟಕ ಅಧ್ಯಯನದ ಶಾಸನಗಳು ತಿಳಿಸಿರಿ‌. ೨. ಪ್ರಾಚೀನ ಕರ್ನಾಟಕದ ಕೃಷಿ ಪದ್ಧತಿ ಹಾಗೂ ನಿರಾವರಿ ವ್ಯವಸ್ಥೆಯನ್ನು ವಿವರಿಸಿ. ೩. ಭೂದತ್ತಿ ಎಂದರೇನು? ಪ್ರಕಾರಗಳನ್ನು ವಿವರಿಸಿರಿ. ೪. ಕರ್ನಾಟಕ ಹಿಂದೂ ಧರ್ಮದ ವಿವಿಧ ಪಂಥಗಳಾದ ಶೈವ, ವೈಷ್ಣವ, ಭಾಗವತ ಪಂಥಗಳ ಕುರಿತು ಬರೆಯಿರಿ. Section C *Q.3. ಬೇಕಾದ ಎರಡು ಪ್ರಶ್ನೆಗಳಿಗೆ ಉತ್ತರಿಸಿರಿ. ನಕಾಶೆ ಪ್ರಶ್ನೆ ಕಡ್ಡಾಯ. 2×15=30* ೧. ೩ನೇ ಶತಮಾನದಿಂದ ೧೦ನೇ ಶತಮಾನದ ವರೆಗಿನ ಸಾಹಿತ್ಯದ ಬೆಳವಣಿಗೆಯನ್ನು ತಿಳಿಸಿರಿ. ೨. ಪ್ರಾಚೀನ ಕರ್ನಾಟಕದ ಸಾಮಾಜಿಕ ಜೀವನವನ್ನು ವಿವರಿಸಿರಿ. ೩. ಪ್ರಾಚೀನ ಕರ್ನಾಟಕದ ಕಲೆ ಮತ್ತು ವಾಸ್ತುಶಿಲ್ಪವನ್ನು ತಿಳಿಸಿರಿ. ೪. ಕರ್ನಾಟಕದ ಜೈನ ಮತ್ತು ಬೌದ್ಧ ಕೇಂದ್ರಗಳ ಕುರಿತು ಬರೆಯಿರಿ. ----------------------- DSC 1: ಕರ್ನಾಟಕ ರಾಜಕೀಯ ಇತ...