ವಿಷಯಕ್ಕೆ ಹೋಗಿ

ಭಾರತಿ ಮದಭಾವಿ ಅವರ ನನ್ನೊಳಗಿನ ನಾನು ಕವನ ಸಂಕಲನದ ಕುರಿತು ಡಾ. ವ್ಹಾಯ್.ಎಂ.ಯಾಕೊಳ್ಳಿ ಅವರ ಬರಹ

ಕವಿತೆಯಂದರೆ ಮನದ ಮಾತು.ತನ್ನೊಂದಿಗೆ ತಾನು ಸದಾ ಸ್ಪಂದಿಸುವ ,ತನ್ನ ಭಾವನೆಗೆ ತಾನು ನಿಷ್ಠನಾಗಿರುವ ,ತನ್ನೊಳಗನ್ನು ಬಿಚ್ಚಿ‌ಮಾತನಾಡುಕವಿತೆಯಂದರೆ ಮನದ ಮಾತು.ತನ್ನೊಂದಿಗೆ ತಾನು ಸದಾ ಸ್ಪಂದಿಸುವ ,ತನ್ನ ಭಾವನೆಗೆ ತಾನು ನಿಷ್ಠನಾಗಿರುವ ,ತನ್ನೊಳಗನ್ನು ಬಿಚ್ಚಿ‌ಮಾತನಾಡುವ ಸಂವಾದ.
ಹೀಗಾಗಿ ವರುಷಕ್ಕೆ ಸಾವಿರಾರು ಕವನ ಸಮಕಲನ ಬಂದರು ಪ್ರತಿ ಸಂಕಲನವೂ ಒಂದಿಷ್ಟು ಹೊಸತನ್ನು ,ವಿಶಿಷ್ಟತೆಯನ್ನು ಹೊತ್ತು ತಂದಿರುತ್ತದೆ.ಅದಕ್ಕೆ ಕವಿ ಪಂಪ ಕಾವ್ಯವನ್ನು ಉರಿತು " ಇದು ನಿಚ್ಚಂ ಪೊಸತು ಅರ್ಣವಂಬೋಲ್ ಅತಿಗಂಭೀರಂ " ಎಂದದಗದ್ದು.‌ನಮ್ಮ ಹೊರಿಯರು ಕವಿತೆಯನ್ನು  ಉದಧಿ,ಸಮುದ್ರಕ್ಕೆ ಹೋಲೊಸಿದರು.ಕಾರಣ ಸಮುದ್ರ ದ ಪ್ರತಿ ಅಲೆಯೂ ಒಡಲೊಳಗಿಂದ ಬರುವ ಹೊಸಾಲೆ.ಮತ್ತು ನಿತ್ಯ ನೂತನ ಅಲ್ಲಿ ಹಳತೆಂಬುದು ಇಲ್ಲ.

ಗೋಕಾವಿ ನಾಡಿನ ಭರವಸೆಯ ಕವಯಿತ್ರಿ ಶ್ರೀ ಮತಿ ಭಾರತಿ‌ ಮದಭಾವಿಯವರು ಕಾವ್ಯ ಕ್ಷೇತ್ರಕ್ಕೆ ಹೊಸಬರೇನೂ ಅಲ್ಲ.ಸಾಹಿತ್ಯ ಸಂಘಟನೆಯ ಮೂಲಕ ,ಭಾವಯಾನ ' ಎಂಬ ಸಂಘಟನೆಯ ಮೂಲಕ ಪ್ರತಿ ತಿಂಗಳೂ ಅನೃಕ ಸಾಹಿತ್ಯ ಕಾರ್ಯಕ್ರಮ ಮಾಡುತ್ತಾ ಬಂದವರು.  ಅವರು ತಾವು ಮಾತ್ರವಲ್ಲ, ತಮ್ಮ ಸುತ್ತಲಿನ ವರನ್ನು ಸೇರಿಸಿಕೊಂಡು ಸಾಹಿತ್ಯ ಚಟುವಟಿಕೆಯಲ್ಲಿ ನಿತ್ಯ ಕೃಷಿ‌ ಮಾಡುತ್ತ ಬಂದಿದ್ದಾರೆ.
ಸಂಕಲನಕ್ಕೆ ಮುನ್ನುಡಿ ಬರೆದ ಹಿರಿಯ ಸಾಹಿತಿಗಳಾದ ಶ್ರೀ ಚಂದ್ರಶೇಖರ ಅವರು ಗುರುತಿಸಿದಂತೆ ಒಂದು ತಾಲೂಕು ಪ್ರದೇಶದಲ್ಲಿ ಮಹಿಳೆಯರೇ ಸ್ವಂತ ಸಂಘಟನೆ ಕಟ್ಟಿಕೊಂಡು ಸಾಹಿತ್ಯ ಪರ ಕೆಲಸ ಮಾಡುತ್ತಿರುವದು ಗೋಕಾವಿಯಲ್ಲಿ‌ ಮಾತ್ರ ಎನಿಸುತ್ತದೆ.ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವ್ಯಾಪ್ತಿ ಇದಕ್ಕೂ ಮಿಗಿಲಾದುದು.

ನನ್ನೊಳಗಿನ ನಾನು "ಶ್ರೀ ಮತಿ ಭಾರತಿ‌ ಮದಭಾವಿಯವರ ಮೊದಲ ಸಂಕಲನ ಇದರಲ್ಲಿ ೫೧ ಕವಿತೆಗಳಿವೆ. "ನನ್ನೊಳಗಿನ‌ ನಾನು- ತುಂಬ ಚಂದದ ಶೀರ್ಷಿಕೆ. ಕವಿತೆಯಂದರೆ ತನ್ನತ್ವದ ಹುಡುಕಾಟವೇ.ಎಷಟೋ ತನಗರಿಯದಂತೆಯೆ‌ ಕವಿತೆಯಲ್ಲಿ ತನ್ನತ್ವ ಪ್ರಕಟವಾಗಿ ಬಿಟ್ಟಿರುತ್ತದೆ. ಹೀಗಾಗಿ ಪ್ರತಿ ಕವಿ ಯ ಕೆಲಸ ತನ್ನೊಳಗೆ ಹುದುಗಿರುವ ತನ್ನನ್ನು ಹುಡುಕಿ ಹೊರಗೆಳೆಯುವ ಕಾರ್ಯವೇ.ಅದು ಅಂತರಂಗದ ಶೋಧ.ಪ್ರತೊಯೊಬ್ಬರೊಳಗೂ ಒಬ್ನ ಪ್ರಾಮಾಣಿಕಸಾತ್ವಿಕ, ಹೋರಾಟಗಾರ,ಪ್ರೇಮಿ,ಯುವಕ..ತುಂಟ...ಹೀಗೆ ಏನೇನೋ ಆಗಿರುವ ವ್ಯಕ್ತಿ ಇದ್ದೇ ಇರುತ್ತಾನೆ.ನಮ್ಮ ಮುಂದೆ ಕಾಣುವ ದೈಹಿಕ ವ್ಯಕ್ತಿಯ‌ ಒಳಗೆ ಹುದುಗಿರುವ ಹತ್ತಾರು ವ್ಯಕ್ತಿತ್ವಗಳನ್ನು ಕವಿತೆಯ‌ ಮೂಲಕಹುಡುಕುವ ಕಾರ್ಯವನ್ನು ಪ್ರತಿಯೊಬ್ಬ ಕವಿ‌ ಮಾಡಬೇಕಾಗುತ್ತದೆ.ಎಷ್ಟೊ ಸಲ ಬಹಿರಂಗವಾಗಿ ವ್ಯಕ್ತ ಮಾಡಲಾರದ ನೋವು ನಲಿವು ಗಳನ್ನು ಕಾವ್ಯದ ಮೂಲಕ ವ್ಯಕ್ತ ಮಾಡತ್ತಿರುತ್ತಾನೆ ಅದನ್ನೆ ಕವಿ ಕುವೆಂಪು 

ಕವಿಯ ಹಾರದಯವೊಂದು ವೀಣೆ 
ಲೋಕವದನೆ ಮಿಡಿವುದು

ಎಂದಿದ್ದರು. ಈ ಅರ್ಥದಲ್ಲಿ ಸಂಕಲನದ ಶೀರ್ಷಿಕೆಯೆ ಬಹು ಮುಖ್ಯವಾಗಿ ನನಗೆ ಕಂಡಿದೆ.

ಇಡೀ ಸಂಕಲನ ಹೆಣ್ಣಿನ ಮೌನ ನೋವು ನಿರಾಶೆ , ಆಕೆಯ ಕೈಗೂಡದ ಆಸೆಗಳನ್ನು ಅನಾವರಣ ಮಾಡಿವೆ.  ಇಲ್ಲಿನ ವಿಶೇಷ ಹೆಣ್ಣು ಬಾಯಿ ಕಚ್ಚಿ ಹಿಡಿದ,  ತನಗಾದ ನೋವನ್ನು ,ಒಟ್ಟು‌ ಮಹಿಳೆ ಎದುರಿಸುವ ಸಂಕಟವನ್ನು ಮುಕ್ತವಾಗಿ ಹೇಳಿದ್ದು.ಯಾವ ಚರಿತ್ರೆಯ ಪುಸ್ತಕವೂ ಅವಳ ನೋವನ್ನು ಸಂಪೂರ್ಣ ಬಿಡಿಸಿಟ್ಟಿಲ್ಲ.

ಕವನಗಳು, ಕಥೆಗಳು
ವಿಮರ್ಶೆಗಳು 
ಅವಳ ಬದುಕೊಂದು
ಇದೆಲ್ಲ ಮೀರಿದ ಕಾದಂಬರಿ
ಅದೇ ಅವಳ ಮೌನ
ನಾರಿ ಅವಳ ..ಹೆಸರು(ಹೆಣ್ಣಿನ ಮೌನ)

ಅಂದರೆ ಯಾವ ಬರಹ‌ಕೂಡ ಮಹಿಳೆಯ ನೋವು ವಿವರಿಸ ಲು ಸಾದ್ಯವಾಗಿಲ್ಲ.ಅದು ಜನಪದ ಗರತಿ‌ ಗುರುತಿಸಿದಂತೆ ಹಾಡಲ್ಕ ಅವಳ ಒಡಲುರಿ.ಹೆಣ್ಣು ಎಂದರೆ ಏನು ? ಎಂಬ ವ್ಯಖ್ಯಾನವನ್ನು ಪದಗಳಲ್ಲಿ ಹಿಡಿದಿಡುವ ಕವಯಿತ್ರಿ
ಇಟ್ಟಂತೆವಬಾಳಿ
ನಗುಮುಖವ ತೋರುತ
ನೋವನ್ನು ಬದಿಗೆ ಸರಿಸಿ
ನಲಿವನ್ನು‌ಕೈಚಾಚಿ
ಬರಮಾಡಿಕೊಳ್ಳುವ.ಮನೆ ದೀಪ ಬೆಳಗಿಸುವ

ಅವಳಚಿತ್ರವನ್ನು  ಬಿಡಿಸುತ್ತಾರೆ.ಇಷ್ಟೆಲ್ಲ ತ್ಯಾಗ ಮಾಡಿದರೂ ಅವಳೇ ಪ್ರತಿ ಸಲ ಸೋಲವ
ಬೆಕಾಗಿರುವ ಸ್ಥತಿ ಕೋಪ ತರಿಸಿದೆ ಅದಕ್ಕ ಇನ್ನೊಂದು ಕವಿತೆಯಲ್ಲಿ

ಅನುದಿನವು ಅನುಕ್ಷಣವು 
ಅನುರಾಗ ಬಂಧನವು
ಹಸಿರಾಗಿಸುವ ಹೊಣೆಯ
ಬರೀ‌ನನಗೆ ಸೀಮಿತವೇನು?
ನನ್ನೊಲವೆ?

ಎಂಬ ಪ್ರಶ್ನೆ ಇಂದು ನಿನ್ನೆಯದಲ್ಲ.ಸೀತೆಯ ಕಾಲದ್ದೂ ಆಗಿದೆ.ಹೆಣ್ಣು ಕಣ್ಣೀರು ಹಾಕುವದನ್ನು ಕವಿತೆ ಒಪ್ಪುವದಿಲ್ಲ ಅದಕ್ಕೆ ಗಂಗೆ ಗೆ  " ಮರೆತೇಕೆ ಕುಳಿತಿರುವೆ ತಾಯಿ ಗಂಗೆ ಹೆಣ್ಣಿನಾ ಕಂಗಳಲ್ಲಿ? ನಿನ್ನ ಸ್ಥಾನವಿರುವದು ಶಿವನ ಜಡೆಯಲ್ಕಿ ನೆನಪಿರಲಿ" ಎಂದು ವ್ಯಂಗ್ಯವಾಡುತ್ತಾರೆ.ತಲಾ ತಲಾಂತರದಿಂದಲೂ ಕೇವಲ ಹೊಗಳಿಕೆಯ ನಡುವೆ ಮುಳುಗಿಸಿರುವದರ ಬಗೆಗೆ ಅವರಿಗೆ ಕೋಪವಿದೆ.."ಹ್ಯಾಪಿ ಬರ್ತಡೇ‌"ಎಂಬ ಕವಿತೆಯಲ್ಲಿ 

ಆ ಬಿನ್ನಾಣವಿಲ್ಲ ,ಬಿಂಕವಿಲ್ಲ
ಅಳಿಸಿ ಆಗಿರುವೆ ಸಪ್ಪೆ ಸಾರು
ಅತ್ತೆ ಮಾವನ ಆದೇಶಕ್ಕೆ 
ಗಂಡ ಮಕಗಕಳ ಆರ್ಭಟಕ್ಕೆ
ಮರೆತು ಹೋಗಿದೆ
ನನಗೆ ನನ್ನದೆ ಹೆಸರು..

ಹೀಗೆ ತನ್ನ ಹೆಸರನ್ನೂ‌ಮರೆತ ದುಸ್ತಿತಿ ಆಕೆಯದು.ಇಲ್ಲಿನ‌ಕವಿತೆಗಳ ಧನಾತ್ಮಕ ಅಂಶವೆಂದರೆ - ತನ್ನ ಎಲ್ಲ ನೋವಿಗೂ ಹೆದರದ ಸ್ತ್ರೀ- ಅದನ್ನು ಅನುಭವಿಸಿಯೂ - ಅದನ್ನೆಲ್ಲ ಮರೆತು ತನ್ನಂತೆ ನೋವು ಅನುಭವಿಸುವ ಇತರೆ ಜೀವಿಗಳಿಗೆ ಆಸರೆಯಾಗುವ ನಿರ್ಧಾರ ಮಾಡುವದು." ಉಸಿರಾಗಬಯಸುವೆ" ಕವಿತೆಬ

ಉಸಿರಾಗ ಬಯಸುವೆ 
ಉಸಿರಿಲ್ಲದವರಿಗೆ
ನೆಲೆಯಾಗ ಬಯಸುವೆ 
ನೆಲೆ ಇಲ್ಲದವರಿಗೆ
ಎನ್ನುತ್ತಾರೆ.ಹಾಗೆಯೆ ಸ್ತ್ರೀಯನ್ನು ಹೊರ ಹೊರಗೆ ಅನುಕಂಪ ತೋರಿಸಿ ಅವಳನ್ನು Exploit ಮಾಡುತ್ತಲೆ ಬಂದ ಸಮಾಜವನ್ನು ಅವರ‌ ಕವಿತೆ ಧಿಕ್ಕರಿಸುತ್ತದೆ." ಸೋಲುವ ಜಾಯಮಾನ ನನ್ನದಲ್ಲ" ಕವಿತೆ ತುಸು ವಾಚ್ಯವಾಗಿಯೆ ತಾನು ಏನು ಎನ್ನುವದನ್ನು ಬಣ್ಣಿಸುತ್ತ

ಕಣ್ಣೀರು ಹಾಕುತ್ತೇನೆ
ಹಾಗಂತ ಅಸಹಾಯಕ ಳೇನಲ್ಕ
ಇರುವದನ್ನೇಬಹೇಳುತ್ತೇನೆ 
ಯಾರ ಸಾಂತ್ವನವೂ ಬೇಕಿಲ್ಲ
ಪುಟಿದೇಳುವ ಶಕ್ತಿಯೊದೆ
ಹಾಗಂತ ಬಜಾರಿಯೆನಲ್ಲ
ನನ್ನಂತೆ ನಾನು
ಯಾರ ಹೋಲಿಕೆ ನನಗಿಲ್ಲ

ನಾಲ್ಕೇ ನಾಲ್ಕು ಸಾಲುಗಳಲ್ಲಿ ಸ್ತ್ರೀ ಅಸ್ಮಿತೆಯ ಇಡಿ ಚಿತ್ರವನ್ನು ಬಿಡಿಸುತ್ತಾರೆ " ಸಾಂತ್ವನ " ಕವಿತೆಯಲ್ಲಿ.ಸಂಕಲನದ ಒಂದು ಶ್ರೇಷ್ಠ ಕವಿತೆ " ಅಹಲ್ಯೆ" .ಪುರಾಣದ ಕಥೆವೊದನ್ನು  ಹೊಸ ದೃಷ್ಟಿಕೋನದಿಂದ ನೋಡುತ್ತಾದೆ.ಸತ್ಯ ಒಪ್ಪಿಕೊಂಡ ಅಹಲ್ಯೆ ತನ್ನ ಗಂಡನ ರೂಪದಲ್ಲಿ ಬಂದ  ಚಂದ್ರ ,ಚಂದ್ರನೆಂದು ಗೊತ್ತಿದ್ದೇ ಅವನನ್ನು ಸ್ವೀಕರಿಸಿದ್ದು ಎಂಬ ಹೊಸ ನೋಟವ ನ್ನು ಸ್ಪೋಟಿಸುತ್ತದೆ." ಬುದ್ದಿ ಎಚ್ಚರಿಸಿದರೂ ದೇಹ ಕೇಳಲಿಲ್ಲ" ಎಂಬ ಸಾಲುಗಳು ಪುರಾಣದ ಕಥೆಯನ್ಮು ಇನ್ನೊಂದು ನೆಲೆಯಲ್ಲಿ ನೋಡುವ ಸಾಧ್ಯತೆಯನ್ನು ಕಾಣಿಸಿದೆ.ಪರಂಪರೆಯನ್ನು ಧಿಕ್ಕರಿಸುವ ,ವಿಮರ್ಶಿಸುವ ಧೈರ್ಯ ತಾಳಿದೆ.

ಕಲಿಗಾಲಮೋ, ಹಣಕೊಟ್ಟರೆ..ಮೊದಲಾದ ಕವಿತೆಗಳಲ್ಲಿ ತಾಯ್ತನದ ಭಾವನೆಗಳು  ಖುಷಿ, ನೋವುಗಳು ಕವಿತೆಯಾಗಿವೆ.ಮಕ್ಕಳ ಅಗಲಿಕೆ ನೀಡುವ ದುಃಖ ಉಂಟಾಗುವ ನೀರವ ಭಾವಗಳನ್ಮು ವಿವರಿಸಿವೆ. ಭಾವಯಾನ ಅವರೇ ಸ್ನೆಹಿತೆಯರು‌ ಕೂಡಿ ಕಟ್ಟಿದ ಸಂಘಟನೆ.ಅದರ ವಿವಿಧ ವಿಶೇಷತೆಗಳನ್ನು 

ಬದುಕಿನಾ ಕಲ್ಪನೆಯ 
ಭಾವನೆಗಳ ಬೆನ್ನೇರಿ
ಕಾಣುವುದೇ ಭಾವಯಾನ
ಮುಗಿಯದ ಸುಂದರ ಪಯಣ

ಎನ್ನುತ್ತ ಅಲ್ಲಿ-

ಬದುಕಿನಾ ಪಾಠಗಳ ಓದಿಸಿ
ಹೊಸ ಚಿತ್ರ ಅರ್ಥೈಸಸಿ
ಹುಡುಕಾಡಿ ತಡಕಾಡಿ
ಬಗೆ ಬಗೆಯ ಹೊಸ ಭಾಷ್ಯ ಬರೆಯುವದು.

ನಾರಿಯರ ಒಲವು ಒಗ್ಗಟ್ಟು 
ಬತ್ತದಾ ಒರತೆ ಇದು
ಎಂದೆಂದೂ ಸಾಗಿಹುದು
ಮುಗಿಯದಾ ಪಯಣವು

ಇದಕ್ಕೆ ಸಾಕ್ಷಿಯಾಗಿರುವ ಹತ್ತಾರು ಕಾರ್ಯ ಚಟುವಟಿಕೆಗಳು ನಿರಂತರ ನಡೆದಿರುವದು ಕವಿತೆಯನ್ನು ಸಮಕಾಲೀನ ಗೊಳಿಸಿವೆ..
ಸಂಕಲನ ಮಹಿಳೆ ,ಅವಳ ನೋವು ನಲಿವು ನೆನಪುಗಳ ಭಾವಯಾನವೇ ! ಬಸವಣ್ಣನವರ ಕುರಿತು, ಕಾರ್ಮಿಕ ದಿನಾಚರಣೆ ಇಂತಹ ಒಂದೆರಡು ಕವಿತೆ ಬಿಟ್ಟರೆ ಇಡಿ ಸಂಕಲನ ನೆನಪಿನ ಭಾವಯಾನವೇ ಆಗಿದೆ. ಶ್ರೀ ಮತಿ‌ ಮದಭಾವಿಯವರು‌ ಈಚೆಗೆ ಎರಡನೆಯ ಸಂಕಲನವನ್ನೂ ತಂದಿದ್ದಾರೆ .ಅವರ ಕಾವ್ಯಯಾನ‌ ನಿರಂತರವಾಗಿರಲಿ ಎಂದು ಹಾರೈಸುತ್ತೇನೆ.ವ ಸಂವಾದ.
ಹೀಗಾಗಿ ವರುಷಕ್ಕೆ ಸಾವಿರಾರು ಕವನ ಸಮಕಲನ ಬಂದರು ಪ್ರತಿ ಸಂಕಲನವೂ ಒಂದಿಷ್ಟು ಹೊಸತನ್ನು ,ವಿಶಿಷ್ಟತೆಯನ್ನು ಹೊತ್ತು ತಂದಿರುತ್ತದೆ.ಅದಕ್ಕೆ ಕವಿ ಪಂಪ ಕಾವ್ಯವನ್ನು ಉರಿತು " ಇದು ನಿಚ್ಚಂ ಪೊಸತು ಅರ್ಣವಂಬೋಲ್ ಅತಿಗಂಭೀರಂ " ಎಂದದಗದ್ದು.‌ ನಮ್ಮ ಹೊರಿಯರು ಕವಿತೆಯನ್ನು  ಉದಧಿ,ಸಮುದ್ರಕ್ಕೆ ಹೋಲೊಸಿದರು. ಕಾರಣ ಸಮುದ್ರದ ಪ್ರತಿ ಅಲೆಯೂ ಒಡಲೊಳಗಿಂದ ಬರುವ ಹೊಸಾಲೆ ಮತ್ತು ನಿತ್ಯ ನೂತನ ಅಲ್ಲಿ ಹಳತೆಂಬುದು ಇಲ್ಲ.

ಗೋಕಾವಿ ನಾಡಿನ ಭರವಸೆಯ ಕವಯಿತ್ರಿ ಶ್ರೀ ಮತಿ ಭಾರತಿ‌ ಮದಭಾವಿಯವರು ಕಾವ್ಯ ಕ್ಷೇತ್ರಕ್ಕೆ ಹೊಸಬರೇನೂ ಅಲ್ಲ. ಸಾಹಿತ್ಯ ಸಂಘಟನೆಯ ಮೂಲಕ ,ಭಾವಯಾನ ' ಎಂಬ ಸಂಘಟನೆಯ ಮೂಲಕ ಪ್ರತಿ ತಿಂಗಳೂ ಅನೃಕ ಸಾಹಿತ್ಯ ಕಾರ್ಯಕ್ರಮ ಮಾಡುತ್ತಾ ಬಂದವರು.  ಅವರು ತಾವು ಮಾತ್ರವಲ್ಲ, ತಮ್ಮ ಸುತ್ತಲಿನ ವರನ್ನು ಸೇರಿಸಿಕೊಂಡು ಸಾಹಿತ್ಯ ಚಟುವಟಿಕೆಯಲ್ಲಿ ನಿತ್ಯ ಕೃಷಿ‌ ಮಾಡುತ್ತ ಬಂದಿದ್ದಾರೆ.
ಸಂಕಲನಕ್ಕೆ ಮುನ್ನುಡಿ ಬರೆದ ಹಿರಿಯ ಸಾಹಿತಿಗಳಾದ ಶ್ರೀ ಚಂದ್ರಶೇಖರ ಅವರು ಗುರುತಿಸಿದಂತೆ ಒಂದು ತಾಲೂಕು ಪ್ರದೇಶದಲ್ಲಿ ಮಹಿಳೆಯರೇ ಸ್ವಂತ ಸಂಘಟನೆ ಕಟ್ಟಿಕೊಂಡು ಸಾಹಿತ್ಯ ಪರ ಕೆಲಸ ಮಾಡುತ್ತಿರುವದು ಗೋಕಾವಿಯಲ್ಲಿ‌ ಮಾತ್ರ ಎನಿಸುತ್ತದೆ.ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವ್ಯಾಪ್ತಿ ಇದಕ್ಕೂ ಮಿಗಿಲಾದುದು.

ನನ್ನೊಳಗಿನ ನಾನು "ಶ್ರೀ ಮತಿ ಭಾರತಿ‌ ಮದಭಾವಿಯವರ ಮೊದಲ ಸಂಕಲನ ಇದರಲ್ಲಿ ೫೧ ಕವಿತೆಗಳಿವೆ. "ನನ್ನೊಳಗಿನ‌ ನಾನು- ತುಂಬ ಚಂದದ ಶೀರ್ಷಿಕೆ. ಕವಿತೆಯಂದರೆ ತನ್ನತ್ವದ ಹುಡುಕಾಟವೇ.ಎಷಟೋ ತನಗರಿಯದಂತೆಯೆ‌ ಕವಿತೆಯಲ್ಲಿ ತನ್ನತ್ವ ಪ್ರಕಟವಾಗಿ ಬಿಟ್ಟಿರುತ್ತದೆ. ಹೀಗಾಗಿ ಪ್ರತಿ ಕವಿ ಯ ಕೆಲಸ ತನ್ನೊಳಗೆ ಹುದುಗಿರುವ ತನ್ನನ್ನು ಹುಡುಕಿ ಹೊರಗೆಳೆಯುವ ಕಾರ್ಯವೇ.ಅದು ಅಂತರಂಗದ ಶೋಧ.ಪ್ರತೊಯೊಬ್ಬರೊಳಗೂ ಒಬ್ನ ಪ್ರಾಮಾಣಿಕಸಾತ್ವಿಕ, ಹೋರಾಟಗಾರ,ಪ್ರೇಮಿ,ಯುವಕ..ತುಂಟ...ಹೀಗೆ ಏನೇನೋ ಆಗಿರುವ ವ್ಯಕ್ತಿ ಇದ್ದೇ ಇರುತ್ತಾನೆ.ನಮ್ಮ ಮುಂದೆ ಕಾಣುವ ದೈಹಿಕ ವ್ಯಕ್ತಿಯ‌ ಒಳಗೆ ಹುದುಗಿರುವ ಹತ್ತಾರು ವ್ಯಕ್ತಿತ್ವಗಳನ್ನು ಕವಿತೆಯ‌ ಮೂಲಕಹುಡುಕುವ ಕಾರ್ಯವನ್ನು ಪ್ರತಿಯೊಬ್ಬ ಕವಿ‌ ಮಾಡಬೇಕಾಗುತ್ತದೆ.ಎಷ್ಟೊ ಸಲ ಬಹಿರಂಗವಾಗಿ ವ್ಯಕ್ತ ಮಾಡಲಾರದ ನೋವು ನಲಿವು ಗಳನ್ನು ಕಾವ್ಯದ ಮೂಲಕ ವ್ಯಕ್ತ ಮಾಡತ್ತಿರುತ್ತಾನೆ ಅದನ್ನೆ ಕವಿ ಕುವೆಂಪು 

ಕವಿಯ ಹಾರದಯವೊಂದು ವೀಣೆ 
ಲೋಕವದನೆ ಮಿಡಿವುದು

ಎಂದಿದ್ದರು. ಈ ಅರ್ಥದಲ್ಲಿ ಸಂಕಲನದ ಶೀರ್ಷಿಕೆಯೆ ಬಹು ಮುಖ್ಯವಾಗಿ ನನಗೆ ಕಂಡಿದೆ.

ಇಡೀ ಸಂಕಲನ ಹೆಣ್ಣಿನ ಮೌನ ನೋವು ನಿರಾಶೆ , ಆಕೆಯ ಕೈಗೂಡದ ಆಸೆಗಳನ್ನು ಅನಾವರಣ ಮಾಡಿವೆ.  ಇಲ್ಲಿನ ವಿಶೇಷ ಹೆಣ್ಣು ಬಾಯಿ ಕಚ್ಚಿ ಹಿಡಿದ,  ತನಗಾದ ನೋವನ್ನು ,ಒಟ್ಟು‌ ಮಹಿಳೆ ಎದುರಿಸುವ ಸಂಕಟವನ್ನು ಮುಕ್ತವಾಗಿ ಹೇಳಿದ್ದು.ಯಾವ ಚರಿತ್ರೆಯ ಪುಸ್ತಕವೂ ಅವಳ ನೋವನ್ನು ಸಂಪೂರ್ಣ ಬಿಡಿಸಿಟ್ಟಿಲ್ಲ.

ಕವನಗಳು, ಕಥೆಗಳು
ವಿಮರ್ಶೆಗಳು 
ಅವಳ ಬದುಕೊಂದು
ಇದೆಲ್ಲ ಮೀರಿದ ಕಾದಂಬರಿ
ಅದೇ ಅವಳ ಮೌನ
ನಾರಿ ಅವಳ ..ಹೆಸರು(ಹೆಣ್ಣಿನ ಮೌನ)

ಅಂದರೆ ಯಾವ ಬರಹ‌ಕೂಡ ಮಹಿಳೆಯ ನೋವು ವಿವರಿಸ ಲು ಸಾದ್ಯವಾಗಿಲ್ಲ.ಅದು ಜನಪದ ಗರತಿ‌ ಗುರುತಿಸಿದಂತೆ ಹಾಡಲ್ಕ ಅವಳ ಒಡಲುರಿ.ಹೆಣ್ಣು ಎಂದರೆ ಏನು ? ಎಂಬ ವ್ಯಖ್ಯಾನವನ್ನು ಪದಗಳಲ್ಲಿ ಹಿಡಿದಿಡುವ ಕವಯಿತ್ರಿ
ಇಟ್ಟಂತೆವಬಾಳಿ
ನಗುಮುಖವ ತೋರುತ
ನೋವನ್ನು ಬದಿಗೆ ಸರಿಸಿ
ನಲಿವನ್ನು‌ಕೈಚಾಚಿ
ಬರಮಾಡಿಕೊಳ್ಳುವ.ಮನೆ ದೀಪ ಬೆಳಗಿಸುವ

ಅವಳಚಿತ್ರವನ್ನು  ಬಿಡಿಸುತ್ತಾರೆ.ಇಷ್ಟೆಲ್ಲ ತ್ಯಾಗ ಮಾಡಿದರೂ ಅವಳೇ ಪ್ರತಿ ಸಲ ಸೋಲವ
ಬೆಕಾಗಿರುವ ಸ್ಥತಿ ಕೋಪ ತರಿಸಿದೆ ಅದಕ್ಕ ಇನ್ನೊಂದು ಕವಿತೆಯಲ್ಲಿ

ಅನುದಿನವು ಅನುಕ್ಷಣವು 
ಅನುರಾಗ ಬಂಧನವು
ಹಸಿರಾಗಿಸುವ ಹೊಣೆಯ
ಬರೀ‌ನನಗೆ ಸೀಮಿತವೇನು?
ನನ್ನೊಲವೆ?

ಎಂಬ ಪ್ರಶ್ನೆ ಇಂದು ನಿನ್ನೆಯದಲ್ಲ.ಸೀತೆಯ ಕಾಲದ್ದೂ ಆಗಿದೆ.ಹೆಣ್ಣು ಕಣ್ಣೀರು ಹಾಕುವದನ್ನು ಕವಿತೆ ಒಪ್ಪುವದಿಲ್ಲ ಅದಕ್ಕೆ ಗಂಗೆ ಗೆ  " ಮರೆತೇಕೆ ಕುಳಿತಿರುವೆ ತಾಯಿ ಗಂಗೆ ಹೆಣ್ಣಿನಾ ಕಂಗಳಲ್ಲಿ? ನಿನ್ನ ಸ್ಥಾನವಿರುವದು ಶಿವನ ಜಡೆಯಲ್ಕಿ ನೆನಪಿರಲಿ" ಎಂದು ವ್ಯಂಗ್ಯವಾಡುತ್ತಾರೆ.ತಲಾ ತಲಾಂತರದಿಂದಲೂ ಕೇವಲ ಹೊಗಳಿಕೆಯ ನಡುವೆ ಮುಳುಗಿಸಿರುವದರ ಬಗೆಗೆ ಅವರಿಗೆ ಕೋಪವಿದೆ.."ಹ್ಯಾಪಿ ಬರ್ತಡೇ‌"ಎಂಬ ಕವಿತೆಯಲ್ಲಿ 

ಆ ಬಿನ್ನಾಣವಿಲ್ಲ ,ಬಿಂಕವಿಲ್ಲ
ಅಳಿಸಿ ಆಗಿರುವೆ ಸಪ್ಪೆ ಸಾರು
ಅತ್ತೆ ಮಾವನ ಆದೇಶಕ್ಕೆ 
ಗಂಡ ಮಕಗಕಳ ಆರ್ಭಟಕ್ಕೆ
ಮರೆತು ಹೋಗಿದೆ
ನನಗೆ ನನ್ನದೆ ಹೆಸರು..

ಹೀಗೆ ತನ್ನ ಹೆಸರನ್ನೂ‌ಮರೆತ ದುಸ್ತಿತಿ ಆಕೆಯದು.ಇಲ್ಲಿನ‌ಕವಿತೆಗಳ ಧನಾತ್ಮಕ ಅಂಶವೆಂದರೆ - ತನ್ನ ಎಲ್ಲ ನೋವಿಗೂ ಹೆದರದ ಸ್ತ್ರೀ- ಅದನ್ನು ಅನುಭವಿಸಿಯೂ - ಅದನ್ನೆಲ್ಲ ಮರೆತು ತನ್ನಂತೆ ನೋವು ಅನುಭವಿಸುವ ಇತರೆ ಜೀವಿಗಳಿಗೆ ಆಸರೆಯಾಗುವ ನಿರ್ಧಾರ ಮಾಡುವದು." ಉಸಿರಾಗಬಯಸುವೆ" ಕವಿತೆಬ

ಉಸಿರಾಗ ಬಯಸುವೆ 
ಉಸಿರಿಲ್ಲದವರಿಗೆ
ನೆಲೆಯಾಗ ಬಯಸುವೆ 
ನೆಲೆ ಇಲ್ಲದವರಿಗೆ
ಎನ್ನುತ್ತಾರೆ.ಹಾಗೆಯೆ ಸ್ತ್ರೀಯನ್ನು ಹೊರ ಹೊರಗೆ ಅನುಕಂಪ ತೋರಿಸಿ ಅವಳನ್ನು Exploit ಮಾಡುತ್ತಲೆ ಬಂದ ಸಮಾಜವನ್ನು ಅವರ‌ ಕವಿತೆ ಧಿಕ್ಕರಿಸುತ್ತದೆ." ಸೋಲುವ ಜಾಯಮಾನ ನನ್ನದಲ್ಲ" ಕವಿತೆ ತುಸು ವಾಚ್ಯವಾಗಿಯೆ ತಾನು ಏನು ಎನ್ನುವದನ್ನು ಬಣ್ಣಿಸುತ್ತ

ಕಣ್ಣೀರು ಹಾಕುತ್ತೇನೆ
ಹಾಗಂತ ಅಸಹಾಯಕ ಳೇನಲ್ಕ
ಇರುವದನ್ನೇಬಹೇಳುತ್ತೇನೆ 
ಯಾರ ಸಾಂತ್ವನವೂ ಬೇಕಿಲ್ಲ
ಪುಟಿದೇಳುವ ಶಕ್ತಿಯೊದೆ
ಹಾಗಂತ ಬಜಾರಿಯೆನಲ್ಲ
ನನ್ನಂತೆ ನಾನು
ಯಾರ ಹೋಲಿಕೆ ನನಗಿಲ್ಲ

ನಾಲ್ಕೇ ನಾಲ್ಕು ಸಾಲುಗಳಲ್ಲಿ ಸ್ತ್ರೀ ಅಸ್ಮಿತೆಯ ಇಡಿ ಚಿತ್ರವನ್ನು ಬಿಡಿಸುತ್ತಾರೆ " ಸಾಂತ್ವನ " ಕವಿತೆಯಲ್ಲಿ.ಸಂಕಲನದ ಒಂದು ಶ್ರೇಷ್ಠ ಕವಿತೆ " ಅಹಲ್ಯೆ" .ಪುರಾಣದ ಕಥೆವೊದನ್ನು  ಹೊಸ ದೃಷ್ಟಿಕೋನದಿಂದ ನೋಡುತ್ತಾದೆ.ಸತ್ಯ ಒಪ್ಪಿಕೊಂಡ ಅಹಲ್ಯೆ ತನ್ನ ಗಂಡನ ರೂಪದಲ್ಲಿ ಬಂದ  ಚಂದ್ರ ,ಚಂದ್ರನೆಂದು ಗೊತ್ತಿದ್ದೇ ಅವನನ್ನು ಸ್ವೀಕರಿಸಿದ್ದು ಎಂಬ ಹೊಸ ನೋಟವ ನ್ನು ಸ್ಪೋಟಿಸುತ್ತದೆ." ಬುದ್ದಿ ಎಚ್ಚರಿಸಿದರೂ ದೇಹ ಕೇಳಲಿಲ್ಲ" ಎಂಬ ಸಾಲುಗಳು ಪುರಾಣದ ಕಥೆಯನ್ಮು ಇನ್ನೊಂದು ನೆಲೆಯಲ್ಲಿ ನೋಡುವ ಸಾಧ್ಯತೆಯನ್ನು ಕಾಣಿಸಿದೆ.ಪರಂಪರೆಯನ್ನು ಧಿಕ್ಕರಿಸುವ ,ವಿಮರ್ಶಿಸುವ ಧೈರ್ಯ ತಾಳಿದೆ.

ಕಲಿಗಾಲಮೋ, ಹಣಕೊಟ್ಟರೆ..ಮೊದಲಾದ ಕವಿತೆಗಳಲ್ಲಿ ತಾಯ್ತನದ ಭಾವನೆಗಳು  ಖುಷಿ, ನೋವುಗಳು ಕವಿತೆಯಾಗಿವೆ.ಮಕ್ಕಳ ಅಗಲಿಕೆ ನೀಡುವ ದುಃಖ ಉಂಟಾಗುವ ನೀರವ ಭಾವಗಳನ್ಮು ವಿವರಿಸಿವೆ. ಭಾವಯಾನ ಅವರೇ ಸ್ನೆಹಿತೆಯರು‌ ಕೂಡಿ ಕಟ್ಟಿದ ಸಂಘಟನೆ.ಅದರ ವಿವಿಧ ವಿಶೇಷತೆಗಳನ್ನು 

ಬದುಕಿನಾ ಕಲ್ಪನೆಯ 
ಭಾವನೆಗಳ ಬೆನ್ನೇರಿ
ಕಾಣುವುದೇ ಭಾವಯಾನ
ಮುಗಿಯದ ಸುಂದರ ಪಯಣ

ಎನ್ನುತ್ತ ಅಲ್ಲಿ-

ಬದುಕಿನಾ ಪಾಠಗಳ ಓದಿಸಿ
ಹೊಸ ಚಿತ್ರ ಅರ್ಥೈಸಸಿ
ಹುಡುಕಾಡಿ ತಡಕಾಡಿ
ಬಗೆ ಬಗೆಯ ಹೊಸ ಭಾಷ್ಯ ಬರೆಯುವದು.

ನಾರಿಯರ ಒಲವು ಒಗ್ಗಟ್ಟು 
ಬತ್ತದಾ ಒರತೆ ಇದು
ಎಂದೆಂದೂ ಸಾಗಿಹುದು
ಮುಗಿಯದಾ ಪಯಣವು

ಇದಕ್ಕೆ ಸಾಕ್ಷಿಯಾಗಿರುವ ಹತ್ತಾರು ಕಾರ್ಯ ಚಟುವಟಿಕೆಗಳು ನಿರಂತರ ನಡೆದಿರುವದು ಕವಿತೆಯನ್ನು ಸಮಕಾಲೀನ ಗೊಳಿಸಿವೆ..
ಸಂಕಲನ ಮಹಿಳೆ ,ಅವಳ ನೋವು ನಲಿವು ನೆನಪುಗಳ ಭಾವಯಾನವೇ ! ಬಸವಣ್ಣನವರ ಕುರಿತು, ಕಾರ್ಮಿಕ ದಿನಾಚರಣೆ ಇಂತಹ ಒಂದೆರಡು ಕವಿತೆ ಬಿಟ್ಟರೆ ಇಡಿ ಸಂಕಲನ ನೆನಪಿನ ಭಾವಯಾನವೇ ಆಗಿದೆ. ಶ್ರೀ ಮತಿ‌ಮದಭಾವಿಯವರು‌ಈಚೆಗೆ ಎರಡನೆಯ ಸಂಕಲನವನ್ನೂ ತಂದಿದ್ದಾರೆ .ಅವರ ಕಾವ್ಯಯಾನ‌ನಿರಂತರವಾಗಿರಲಿ ಎಂದು ಹಾರೈಸುತ್ತೇನೆ.

ಡಾ, Y,M ಯಾಕೊಳ್ಳಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೊಳಂಬರ ಇತಿಹಾಸ

ನೊಳಂಬ ಕರ್ನಾಟಕದ ಈಗಿನ ಚಿತ್ರದುರ್ಗ ಜಿಲ್ಲೆ ಮತ್ತು ಅದರ ಸುತ್ತ ಮುತ್ತಣ ಪ್ರದೇಶವನ್ನೊಳಗೊಂಡಿದ್ದ ನೊಳಂಬಳಿಗೆ ಸಾಸಿರ ಎಂಬ ಪ್ರಾಂತ್ಯದ ಅಧಿಪತಿಗಳಾಗಿ 8ನೆಯ ಶತಮಾನದಲ್ಲಿ ಆಳ್ವಿಕೆಯನ್ನಾರಂಭಿಸಿ, ಮುಂದಿನ ಎರಡು ಶತಮಾನಗಳಲ್ಲಿ ಪ್ರಾಬಲ್ಯಗಳಿಸಿ, ಈಗಿನ ಚಿತ್ರದುರ್ಗ, ತುಮಕೂರು, ಕೋಲಾರ, ಬೆಂಗಳೂರು, ಜಿಲ್ಲೆಗಳನ್ನೂ ನೆರೆಯ ಅನಂತಪುರ, ಚಿತ್ತೂರು, ಧರ್ಮಪುರಿ ಜಿಲ್ಲೆಗಳನ್ನೂ ಒಳಗೊಂಡಿದ್ದ ನೊಳಂಬವಾಡಿ 32000 ಪ್ರಾಂತ್ಯದ ಪ್ರಭುಗಳಾಗಿ 11ನೆಯ ಶತಮಾನದ ಮಧ್ಯದವರೆಗೆ ಆಳ್ವಿಕೆ ನಡೆಸಿದ ಸಾಮಂತ ರಾಜರ ಮನೆತನ. ತಲಕಾಡಿನ ಗಂಗರೂ ರಾಷ್ಟ್ರಕೂಟರೂ ಕಲ್ಯಾಣ ಚಾಳುಕ್ಯರೂನೊಳಂಬರಿಗೆ ಸ್ವಲ್ಪಕಾಲ ಅಧೀನರಾಗಿದ್ದರು. ಕದಂಬ, ಗಂಗ ಮತ್ತು ಕಲ್ಯಾಣ ಚಾಳುಕ್ಯರೊಂದಿಗೆ ಇವರು ವಿವಾಹ ಸಂಬಂಧ ಬೆಳೆಸಿದ್ದರು. ಬಾಣರು, ವೈದುಂಬರು, ಚೋಳರು ಮುಂತಾದವರಿಗೂ ಇವರಿಗೂ ರಾಜಕೀಯ ಸಂಬಂಧವಿತ್ತು. ನದಿಯ ಲಾಂಛನ ಹೊಂದಿದ್ದ ಇವರ ರಾಜಧಾನಿ ಪೆಂಜೀರು ಅಥವಾ ಹೆಂಜೇರು. ಆಂಧ್ರ ಪದೇಶದ ಅನಂತಪುರ ಜಿಲ್ಲೆಯ ಹೇಮಾವತಿಯೇ ಇದೆಂದು ಗುರುತಿಸಲಾಗಿದೆ. ನೊಳಂಬ ಎಂಬ ಹೆಸರು ಹೇಗೆ ಬಂತೆಂಬುದು ಸ್ಪಷ್ಟವಾಗಿಲ್ಲ. ಈಶ್ವರ ವಂಶಜನಾದ ಕಂಚೀಪತಿ ಎಂದು ಶಾಸನವೊಂದರಲ್ಲಿ ವರ್ಣಿತನಾಗಿರುವ ತ್ರಿಣಯನ ಪಲ್ಲವ ಎಂಬುವನು ನೊಳಂಬರ ಮೂಲಪುರುಷ. ಇವನ ವಂಶದಲಿ ಹುಟ್ಟಿದವನು ಮಂಗಳ ನೊಳಂಬಾಧಿ ರಾಜ (ಸು. 730-ಸು. 775). ಹೇಮಾವತಿ ಶಾಸನದ ಪ್ರಕಾರ ಇವನು ಕಿರಾತ ನೃಪತಿಯನ್ನು ಜಯಿಸಿದ; ಕರ್ಣಾಟರಿಂ...

ಕರ್ನಾಟಕದ ಪ್ರದರ್ಶನ ಕಲೆಗಳು OEC HISTORY

ಕರ್ನಾಟಕದ ಜಾನಪದ ಕಲೆಗಳು ಗ್ರಾಮೀಣ ಬದುಕಿನ ಅನಕ್ಷರಸ್ಥರಲ್ಲಿನ ಜಾನಪದ ಕಲೆಗಳು, ಹಾಡು, ಗಾದೆ ನಗರ ಬದುಕಿನ ಜನಕ್ಕೆ ವಿಶಿಷ್ಟ ಸಂವೇದನೆಯನ್ನುಂಟು ಮಾಡಿವೆ. ಗ್ರಾಮಗಳ ದೈನಿಕ ಬದುಕು ಆರಂಭವಾಗುವುದೇ ಇಂಥ ಜನಪದ ಹಾಡು-ಹಬ್ಬ ಆಚರಣೆಗಳಿಂದ. ಇವೊತ್ತಿನ ವಿಜ್ಞಾನಯುಗ ಪರಂಪರಾಗತ ಕಲೆಗಳನ್ನು ಮರೆಸುವಂತೆ ನಾಗಾಲೋಟಕ್ಕೆ ಓಡುತ್ತಿದೆ. ಹೀಗಿದ್ದೂ ನಗರ ಬದುಕಿನ ಈ ಜನಕ್ಕೆ `ಜನಪದ' ಮನರಂಜನೆಯನ್ನೀಯುವ ಮಟ್ಟಕ್ಕೆ ಸೀಮಿತವಾಗಿದೆಯೇನೋ ಅನ್ನುವ ಸಂಶಯ ಮೂಡಿದೆ. ಇದು ವಾಸ್ತವವೂ ಕೂಡ. ಈ ಜಾನಪದ ಪ್ರಕಾರವನ್ನು ಸಂಸ್ಕೃತಿಯ ಒಂದು ಭಾಗವೆಂದು ಭಾವಿಸಬೇಕಾಗಿರುವುದರಿಂದ ಇದರ ಉಳಿವು ನಮ್ಮ ಕೈಲಿದೆ. ಕಲಾವಿದರಿಗೆ ಪ್ರಶಸ್ತಿ, ಪುರಸ್ಕಾರ ನೀಡಿ ಗ್ರಾಮೀಣ ಪ್ರತಿಭೆಗಳನ್ನು ಹುಡುಕಿ ಈ ಪ್ರಕಾರದ ಜೀವಂತಿಕೆಗೆ ಶ್ರಮಿಸಬೇಕಾದ ಅಗತ್ಯವಿದೆ. ಅನೇಕ ಗ್ರಾಮೀಣ ಕಲೆ ಮತ್ತು ಆಚರಣೆಗಳು ಸಮಾಜದ ಮುಖ್ಯವಾಹಿನಿಗೆ ಬಾರದೆ ಎಲೆಮರೆಯ ಕಾಯಾಗಿ ಮರೆಯಲ್ಲಿಯೇ ಅಳಿದು ಹೋಗುತ್ತಿವೆ. ಅದರ ಸೊಗಡನ್ನು ಉಳಿಸುವ ಮತ್ತು ಮುಂದಿನ ತಲೆಮಾರಿಗೆ ಇದರ ಸವಿಯನ್ನು ಉಳಿಸಿ ಉಣಬಡಿಸುವ ಗುರುತರವಾದ ಜವಾಬ್ದಾರಿಯು ಪ್ರಜ್ಞಾವಂತ ನಾಗರಿಕರ ಜವಾಬ್ದಾರಿಯಾಗಿದೆ. ವೀರಗಾಸೆ ವೀರಗಾಸೆಯು ಸಾಮೂಹಿಕ ನೃತ್ಯವನ್ನೊಳಗೊಂಡ ಕರ್ನಾಟಕದ ಒಂದು ಜನಪದ ಕಲೆ. ಶೈವ ಸಂಪ್ರದಾಯದ ಧಾರ್ಮಿಕ ವೀರನೃತ್ಯ. ನೃತ್ಯದ ನಡುವೆ ಕನಿಷ್ಠ ಎರಡು ಜನ ಕಲಾವಿದರುಗಳು ಸೇರಿ ಒಡಪು ಹೇಳುವ ಕಾರ್ಯಕ್ರಮ ನಡೆಸಿಕೊಟ್ಟರೆ, ಗರಿಷ್ಠ ಮೂವತ್...

ನರಗುಂದ ಬಾಬಾಸಾಹೇಬರ ಇತಿಹಾಸ||History of Babasaheb Nargund

ನರಗುಂದ ಬಾಬಾಸಾಹೇಬರ ಇತಿಹಾಸ||History of Babasaheb Nargund ಕರ್ನಾಟಕದ ನರಗುಂದದ(ಗದಗ ಜಿಲ್ಲೆಯಲ್ಲಿರುವ) ದೊರೆಗಳು 1700ರಲ್ಲಿ ಮೊಘಲರ ದುರಾಕ್ರಮಣ ದ ವಿರುದ್ಧ ಹೋರಾಡುತ್ತ ನರಗುಂದ ಮತ್ತು ರಾಮದುರ್ಗಗಳನ್ನು ಯುದ್ಧದಲ್ಲಿ ಗೆದ್ದು ಸ್ವರಾಜ್ಯ ಸ್ಥಾಪಿಸಿದ್ದರು. ಮುಂದೆ ಅದೇ ವಂಶದ ದೊರೆಗಳು ಟಿಪ್ಪು ಸುಲ್ತಾನ್ ವಿರುದ್ಧವೂ ಯುದ್ದ ನಡೆಸಿ ಗೆಲುವು ಸಾಧಿಸಿ ತಮ್ಮ ಸಂಸ್ಥಾನದ ಸ್ವರಾಜ್ಯವನ್ನು ಉಳಿಸಿಕೊಂಡಿದ್ದರು. ದಾದಾಜಿ ರಾವ್ ಎಂಬ ನರಗುಂದದ ರಾಜನ ಮಗನಾದ ಭಾಸ್ಕರ್ ರಾವ್ ಭಾವೆ ತನ್ನ 28ನೇ ವಯಸ್ಸಿನಲ್ಲಿ ಅಂದರೆ 1842 ನೇ ಇಸವಿಯಲ್ಲಿ ನರಗುಂದದ ರಾಜನಾದ. ಬಾಬಾ ಸಾಹೇಬ್ ಎಂದು ಜನಪ್ರಿಯರಾಗಿದ್ದ ಈತ ಪರಾಕ್ರಮಿ, ಉದಾರಿ ಆಗಿದ್ದ. ವಿದೇಶಿಯರಿಂದಲೂ ಮೆಚ್ಚುಗೆ ಪಡೆದಿದ್ದ ವ್ಯಕ್ತಿತ್ವ ಆತನದು. ಜರ್ಮನಿಯಿಂದ ಬಂದಿದ್ದರು ಎಂಬ ವಿದ್ವಾಂಸ ಬಾಬಾ ಸಾಹೇಬನ ಕುರಿತು ‘ಅವರು ಸದ್ಗುಣ ಮತ್ತು ಕೀರ್ತಿ ವಂತರು. ಚಿಕ್ಕಮಕ್ಕಳಿಗೆ ಪಾಲಕನಾಗಿಯೂ ವಿದ್ಯಾವಂತರಿಗೆ ಆಶ್ರಯದಾತನೂ, ಬಡವರಿಗೆ ಉದಾರಿಯೂ ಆಗಿದ್ದವರು’ ಎಂದು ಅಭಿಪ್ರಾಯಪಟ್ಟಿದ್ದರು. ಬಾಬಾ ಸಾಹೇಬನ ಏಕೈಕ ಪುತ್ರ ಅಕಾಲಿಕ ಮರಣ ಹೊಂದಿದಾಗ ದತ್ತು ಪುತ್ರನನ್ನು ಪಡೆಯಲು ಬ್ರಿಟಿಷ್ ಕಂಪನಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದ. ಸತತ ಐದು ವರ್ಷಗಳ ಕಾಲ ಬ್ರಿಟಿಷರ ಜೊತೆ ಅನುಸಂಧಾನ ಮಾಡಿದರೂ ಅವರಿಂದ ಸಕಾರಾತ್ಮಕ ಸ್ಪಂದನೆ ಸಿಗಲಿಲ್ಲ. ಬ್ರಿಟಿಷ್ ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿದ್ದ ಬಾಬಾಸಾಹೇಬರ ಹಿ...