ಗಜಲ್
ಹೇಳದೇ ಅದೆಷ್ಟು ಮಾತುಗಳು ನಮ್ಮ ನಡುವೆ ಉಳಿದು ಹೋದವು
ಮನದಲ್ಲಿ ಮುಚ್ಚಿಕೊಂಡೆ ಅದೆಷ್ಟು ಕಾಲ ಮೌನದಿ ಮುರಿದು ಹೋದವು
ಹೊರಗೆ ಬರದೆ ಒಳಗೆ ಇರಿಸಿಕೊಂಡ ಪದಗಳೆ ಬೆಂಕಿ ಕೆಂಡವಾಗಿವೆ
ಕುದಿವ ಕುಲುಮೆಯದು ಆರಿಸುವ ದಾರಿ ಸಿಗದೆ ಸರಿದು ಹೋದವು
ಆವ ಲೋಕದ ದೇವತೆ ಕರುಣಿಸಿದಂತೆ ಬಂದು ಮಿಂಚಿ ಮರೆಯಾದೆ
ಕೊಟ್ಟ ಕೊಂಡ ಜೀವದೊಡವೆ ಮೌನದಿ ಇಲ್ಲೇ ಉಳಿದು ಹೋದವು
ಬರುತಲೆ ಇದ್ದಾರೆ ಕಾಣದ ಲೋಕಕ್ಕೆ ಸಂದರೆಂದು ತಿಳಿದ ಮಂದಿ
ಪ್ರಾಣ ತುದಿಯಲಿಡಿದ ಜೀವದ ಹಂಬಲ ತಿಳಿಯದೆ ನಡೆದು ಹೋದವು
ಇತಿಹಾಸ ಮರುಕಳಿಸುವದೆಂಬ ಶಾಲೆಯ ಪಾಠ ಮರೆಯದಾದನು
ಯಯಾ
ತನ್ನ ದಿನಗಳ ಯಜ್ಞ ಕುಂಡಕೆ ಅರ್ಪಿಸಿ ಕಾದ ತಪನೆಗಳು
ಸವೆದು ಹೋದವು
ಡಾ. ವ್ಹಾಯ್.ಎಂ.ಯಾಕೊಳ್ಳಿ
ಕವಿ-ಸಾಹಿತಿ, ಸವದತ್ತಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ