ವಿಷಯಕ್ಕೆ ಹೋಗಿ

ಮತಾಂಧಿಗಳ ಅಟ್ಟಹಾಸಕ್ಕೆ ಪ್ರಾಚೀನ ವಿಶ್ವ ವಿದ್ಯಾಲಯಗಳ ಕಗ್ಗೊಲೆ…!

ಭಾರತ ಯಾವಾಗಲೂ ಜಗತ್ತಿಗೆ ಶಿಕ್ಷಣದ ಮೂಲವಾಗಿದೆ. ವೇದದ ಕಾಲದಿಂದ ಇಂದಿನ ಆಧುನಿಕ ಯುಗದವರೆಗೆ, ಭಾರತವು ಅನೇಕ ವಿದ್ವಾಂಸರು, ಪಂಡಿತರು, ಕವಿಗಳು, ವಿಜ್ಞಾನಿಗಳು ಮತ್ತು ದಾರ್ಶನಿಕರಿಗೆ ನೆಲೆಯಾಗಿದೆ
ಹಾಗಾದರೆ ಭಾರತದಲ್ಲಿನ ಶಿಕ್ಷಣ ವಯವಸ್ಥೆ ಹೇಗಿತ್ತು…?
ಭಾರತ ಮೇಧಾವಿಗಳ ಬೀಡಾದುದ್ದು ಹೇಗೆ…?

ಹಾಗೂ ಮತಾಂಧಿಗಳು ಭಾರತದ ಶಿಕ್ಷಣ ಕೇಂದ್ರಗಳನ್ನು ವಿಧ್ವಂಸಗೊಳ್ಳಿಸಿದ್ದು ಹೇಗೆ…?

ಈ ಪ್ರಶ್ನೆ ನನಗೆ ಮೂಡಿದ್ದು ನನ್ನ ಕಾಲೇಜಿನಲ್ಲಿ ನಳಂದ ಹಾಗೂ ತಕ್ಷಶಿಲೆಯ ಕುರಿತಂತೆ ಪಠ್ಯಕ್ರಮದಲ್ಲಿ ಇರುವ ವ್ಯಾಖ್ಯಾನವನ್ನ ನಮ್ಮ ಪ್ರಾಧ್ಯಾಪಕರು ಭೋದಿಸುತ್ತಿರುವಾಗ. ಅದರ ಬಗ್ಗೆ ತಿಳಿದುಕೊಳ್ಳುವ ಹಂಬಲ ಹೆಚ್ಚಾಗಿತು. ಪಠ್ಯ ಪುಸ್ತಕದಲ್ಲಿ ಇದ್ದಿದ್ದಂತೂ ಎರಡೇ ವಾಕ್ಯ. ಅದರಲ್ಲಿಯೂ ಈ ವಿಶಾಲ ಶಿಕ್ಷಣ ಕೇಂದ್ರಗಳ ನಾಶದ ಬಗ್ಗೆಯಂತೂ ಅಲ್ಲಿ ಉಲ್ಲೇಖವಿರಲಿಲ್ಲ ಅದಕ್ಕೆ ಬೇರೆ ಮಾರ್ಗಗಳನ್ನು ಹುಡುಕುತ್ತ ಹೋದೆ. ಮತಾಂಧತೆಯ ಉಗ್ರ ರೂಪವನ್ನ ಕಂಡೆ. ವೈಭವಾಯುತವಾಗಿದ್ದ ಈ ಶಿಕ್ಷಣ ಕೇಂದ್ರಗಳು ಕ್ಷಣಮಾತ್ರದಲ್ಲಿ ರೋಪ್ಪನೆ ನಾಶವಾಗಿ ಹೋಯ್ತಲ್ಲ ಎಂಬ ಬೆಂಕಿಯ ಕಾವು ಹೆಚ್ಚಾಗ ತೊಡಗಿತು.

ಭಾರತದ ಪ್ರಾಚೀನ ಶಿಕ್ಷಣ ಕೇಂದ್ರಗಳು:

ನಮಗೆ ತಕ್ಷಶಿಲಾ ಮತ್ತು ನಳಂದ ಹೊರತುಪಡಿಸಿ ಭಾರತದ ಇನ್ನ್ಯಾವುದೇ ಪ್ರಾಚೀನ ವಿಶ್ವವಿದ್ಯಾಲಯಗಳ ಬಗ್ಗೆ ಅರಿವೇ ಇಲ್ಲದಂತಾಗಿದೆ.
ತಕ್ಷಶಿಲಾ ಹಾಗೂ ನಳಂದ ವಿಶ್ವದ ಅತ್ಯಂತ ಪ್ರಾಚೀನ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ – ಆದರೆ ಪ್ರಾಚೀನ ಭಾರತದಲ್ಲಿ ಅಸ್ತಿತ್ವದಲ್ಲಿದ್ದ ಏಕೈಕ ಜ್ಞಾನ ಕೇಂದ್ರಗಳು ಇವುಗಳಷ್ಟೇ ನಾ…?
ವೇದ ಕಾಲದಿಂದಲೂ ಭಾರತೀಯ ಸಮಾಜ, ಶಿಕ್ಷಣಕ್ಕೆ ಪ್ರಾಮುಖ್ಯತೆಯನ್ನು ನೀಡುತ್ತಾ ಬರುತ್ತಿದೆ. ಆಗ ಗುರುಕುಲ ಮತ್ತು ಋಷಿ ಮುನಿಗಳ ನಿಜಾಶ್ರಮಗಳು ಕಲಿಕೆಯ ಕೇಂದ್ರಗಳಾಗಿದ್ದವು. ಕಾಲ ಕ್ರಮೇಣ, ವಿಕಾಸದತ್ತ ದಾಪುಗಾಲಿಡುತ್ತಿದ್ದ ಪ್ರಾಚೀನ ಭಾರತದಾದ್ಯಂತ ಹೆಚ್ಚಿನ ಸಂಖ್ಯೆಯ ಕಲಿಕಾ ಕೇಂದ್ರಗಳನನ್ನು ಸ್ಥಾಪಿಸಲಾಯಿತು, ಅವುಗಳಲ್ಲಿ ತಕ್ಷಶಿಲಾ ಮತ್ತು ನಳಂದ ಪ್ರಸಿದ್ಧವಾದವುಗಳಾಗಿವೆ. ಪ್ರಾಚೀನ ಭಾರತದಾದ್ಯಂತ ಪ್ರವರ್ಧಮಾನಕ್ಕೆ ಬಂದ ಪ್ರಮುಖ ಪ್ರಾಚೀನ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ

ತಕ್ಷಶಿಲಾ ವಿಶ್ವವಿದ್ಯಾಲಯ:

ಟ್ಯಾಕ್ಸಿಲಾ ಎಂದು ಏನು ಇಂದು ಕರೆಯಲ್ಪಡುತ್ತದೋ, ಅದೇ ತಕ್ಷಶಿಲಾ ವಿಶ್ವ ವಿದ್ಯಾಲಯ, ಸುಮಾರು 2700 ವರ್ಷಗಳ ಹಿಂದೆ ಸ್ಥಾಪಿತವಾಗಿ, ಸೂಮಾರು 10500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೆಲೆಯಾಗಿತ್ತು. ಅಲ್ಲಿ ಪ್ರಪಂಚದಾದ್ಯಂತದಿಂದ ಬಂದ ವಿದ್ಯಾರ್ಥಿಗಳು ವೇದಗಳು, ವ್ಯಾಕರಣ, ತತ್ವಶಾಸ್ತ್ರ, ಆಯುರ್ವೇದ, ಕೃಷಿ, ಶಸ್ತ್ರಚಿಕಿತ್ಸೆ, ರಾಜ್ಯಾಶಾಸ್ತ್ರ, ಬಿಲ್ವಿದ್ಯೆ, ಯುದ್ಧ, ಖಗೋಳವಿಜ್ಞಾನ, ವಾಣಿಜ್ಯ, ಭವಿಷ್ಯ, ಸಂಗೀತ, ನೃತ್ಯ, ಮುಂತಾದ 64 ಕ್ಕೂ ಹೆಚ್ಚು ವಿವಿಧ ಅಧ್ಯಯನ ಕ್ಷೇತ್ರಗಳಲ್ಲಿ ಪರಿಣತಿಯನ್ನು ಪಡೆಯಲು ಬರುತ್ತಿದ್ದರು. ಈ ವಿಶ್ವವಿದ್ಯಾಲಯದ ಪ್ರಸಿದ್ಧ ಪದವೀಧರರಲ್ಲಿ ಚಾಣಕ್ಯ, ಪಾಣಿನಿ, ಚರಕ, ವಿಷ್ಣು ಶರ್ಮಾ, ಜೀವಕಾ ಮುಂತಾದವರು ಸೇರಿದ್ದಾರೆ. ಇದು ವಿಶ್ವದ ಅತ್ಯಂತ ಹಳೆಯ ವಿಶ್ವವಿದ್ಯಾಲಯ. ಇದನ್ನ ತಿಳಿದ ಮೇಲೆ ಪ್ರಾಚೀನ ಭಾರತದ ತಕ್ಷಶಿಲಾ ವಿಶ್ವವಿದ್ಯಾಲಯದ ಬಗ್ಗೆ ಇನ್ನಷ್ಟು ಅಧ್ಯಯನ ಮಾಡಬೇಕೆಂಬ ಹಂಬಲ ಎನ್ನಲ್ಲಿ ಜಾಸ್ತಿಯೇ ಆಯ್ತು

ನಳಂದ ವಿಶ್ವವಿದ್ಯಾಲಯ

ನಳಂದ ವಿಶ್ವವಿದ್ಯಾಲಯವನ್ನು 5 ನೇ ಶತಮಾನದ ಆರಂಭದಲ್ಲಿ ಆಧುನಿಕ ಬಿಹಾರದಲ್ಲಿ ಗುಪ್ತಾ ರಾಜವಂಶಸ್ತನಾದ ಶಕ್ರಾದಿತ್ಯ ಸ್ಥಾಪಿಸಿದ ಮತ್ತು ಈ ವಿಶ್ವ ವಿದ್ಯಾಲಯ12 ನೇ ಶತಮಾನದವರೆಗೆ ಅಂದರೆ 600 ವರ್ಷಗಳ ಕಾಲ ಪ್ರವರ್ಧಮಾನದಲ್ಲಿತ್ತು. ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ವಸತಿ ನಿಲಯಗಳನ್ನು ಹೊಂದಿರುವ ವಿಶ್ವದ ಮೊದಲ ವಿಶ್ವವಿದ್ಯಾಲಯ ಇದಾಗಿದೆ. ಇಲ್ಲಿ ದೊಡ್ಡ ಸಾರ್ವಜನಿಕ ಉಪನ್ಯಾಸ ಸಭಾಂಗಣಗಳು ಸಹ ಇತ್ತು. ಕೊರಿಯಾ, ಜಪಾನ್, ಚೀನಾ, ಟಿಬೆಟ್, ಇಂಡೋನೇಷ್ಯಾ, ಪರ್ಷಿಯಾ ಮತ್ತು ಟರ್ಕಿಯಂತಹ ದೇಶಗಳ ವಿದ್ಯಾರ್ಥಿಗಳು ಈ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ಬರುತ್ತಿದ್ದರಂತೆ, ಈಗ ಯೋಚಿಸಿ ಭಾರತದ ಭವ್ಯತೆಯ ಬಗ್ಗೆ…

ಈ ವಿಶ್ವವಿದ್ಯಾನಿಲಯದ ಗ್ರಂಥಾಲಯವು ಪ್ರಾಚೀನ ಜಗತ್ತಿನ ಅತಿದೊಡ್ಡ ಗ್ರಂಥಾಲಯವಾಗಿತ್ತು ಮತ್ತು ವ್ಯಾಕರಣ, ತರ್ಕ, ಸಾಹಿತ್ಯ, ಜ್ಯೋತಿಷ್ಯ ಹಾಗೂ ಖಗೋಳವಿಜ್ಞಾನದಂತಹ ವಿವಿಧ ವಿಷಯಗಳ ಬಗ್ಗೆ ಸಾವಿರಾರು ಸಂಪುಟಗಳ ಗ್ರಂಥ ಮಾಲೆಯನ್ನು ಹೊಂದಿತ್ತು. ಗ್ರಂಥಾಲಯದ ಕಟ್ಟಡವನ್ನು “ಧರ್ಮಗಂಜ” ಎಂದು ಕರೆಯಲಾಗುತ್ತಿತ್ತು ಮತ್ತು ಇದು ಮೂರು ದೊಡ್ಡ ಕಟ್ಟಡಗಳನ್ನು ಹೊಂದಿತ್ತು ಅವು ಯಾವುವು ಎಂದರೆ ರತ್ನಸಾಗರ, ರತ್ನದಾಧಿ, ಮತ್ತು ರತ್ನರಂಜಕ. ರತ್ನದಾಧಿಯಲ್ಲಿ, ಪ್ರಜ್ಞಾಪರಮಿತ ಸೂತ್ರ ಮತ್ತು ಸಮಾಜಗುಹ್ಯ ಸೇರಿದಂತೆ ಅತ್ಯಂತ ಪವಿತ್ರ ಗ್ರಂಥಗಳು ಸಂಗ್ರಹಿಸಿದಲಾಗುತ್ತಿತ್ತು.

2010 ರಲ್ಲಿ, ಭಾರತ ಸರ್ಕಾರ ಪ್ರಾಚೀನ ನಳಂದ ವಿಶ್ವವಿದ್ಯಾಲಯವನ್ನು ಆಧುನಿಕ ನಳಂದ ಅಂತರಾಷ್ಟ್ರೀಯ ವಿಶ್ವವಿದ್ಯಾಲಯವಾಗಿ ಮರುನೇಮಿಸಿ ಹಾಗೂ ಮರುಸ್ಥಾಪಿಸಿ, ಸ್ನಾತಕೋತ್ತರ ಸಂಶೋಧನೆಗಾಗಿ ಮೀಸಲಿಡುವ ಯೋಜನೆಗಳನ್ನು ಅಂಗೀಕರಿಸುವ ಮಸೂದೆಯನ್ನು ಜಾರಿಗೆ ತಂದಿತ್ತು. ಚೀನಾ, ಸಿಂಗಾಪುರ ಮತ್ತು ಜಪಾನ್ ಸೇರಿದಂತೆ ಅನೇಕ ಪೂರ್ವ ಏಷ್ಯಾದ ದೇಶಗಳು ನಳಂದ ವಿಶ್ವವಿದ್ಯಾಲಯದ ಪುನಶ್ಚೇತನ ಕಾರ್ಯಕ್ಕೆ ಧನಸಹಾಯ ನೀಡಲು ಮುಂದಾಗಿವೆ.

ನಳಂದ ವಿಶ್ವವಿದ್ಯಾಲಯದ ಅವಶೇಷಗಳು

ವಿಕ್ರಮಶಿಲ ವಿಶ್ವವಿದ್ಯಾಲಯ:

ವಿಕ್ರಮಶಿಲ ವಿಶ್ವವಿದ್ಯಾಲಯವನ್ನು 8 ನೇ ಶತಮಾನದ ಉತ್ತರಾರ್ಧದಲ್ಲಿ ಪಾಲ ರಾಜವಂಶದ ಧರ್ಮಪಾಲನಿಂದ ಸ್ಥಾಪಿಸಲಾಯ್ತು. ಇದು ಆಧುನಿಕ ಬಿಹಾರದ ಭಾಗಲ್ಪುರ್ ಜಿಲ್ಲೆಯಲ್ಲಿದೆ. ಈ ವಿಶ್ವವಿದ್ಯಾಲಯವು 100 ಕ್ಕೂ ಹೆಚ್ಚು ಶಿಕ್ಷಕರು ಮತ್ತು 1000 ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ನಳಂದ ವಿಶ್ವವಿದ್ಯಾಲಯಕ್ಕೆ ನೇರ ಸ್ಪರ್ಧೆಯನ್ನು ನೀಡಿತು. ಈ ವಿಶ್ವವಿದ್ಯಾಲಯವು ತಂತ್ರದ ಬಗೆಗಿನ ವಿಶೇಷ ಅಧ್ಯಯ್ಯನಕ್ಕೆ ಹೆಸರುವಾಸಿಯಾಗಿತ್ತು. ಈ ವಿಶ್ವವಿದ್ಯಾನಿಲಯದ ಅತ್ಯಂತ ಜನಪ್ರಿಯ ಪದವೀಧರರಲ್ಲಿ ಒಬ್ಬರು ಬೌದ್ಧಧರ್ಮದ ಶರ್ಮಾ ಸಂಪ್ರದಾಯದ ಸ್ಥಾಪಕರಾದ ಅತಿಯಾ ದೀಪಂಕರ, ಶ್ರೀಯುತರು ಟಿಬೆಟ್‌ನಲ್ಲಿ ಬೌದ್ಧಧರ್ಮವನ್ನು ಪುನರುಜ್ಜೀವನಗೊಳಿಸಿದರು.

ವಿಕ್ರಮಶಿಲಾ ವಿಶ್ವವಿದ್ಯಾಲಯದ ಅವಶೇಷಗಳು

ವಲಾಭಿ ವಿಶ್ವವಿದ್ಯಾಲಯ:

ವಲಾಭಿ ವಿಶ್ವವಿದ್ಯಾಲಯವನ್ನು ಆಧುನಿಕ ಗುಜರಾತಿನ ಸೌರಾಷ್ಟ್ರದಲ್ಲಿ 6 ನೇ ಶತಮಾನದಲ್ಲಿ ಸ್ಥಾಪಿಸಲಾಗಿತ್ತು. 7 ನೇ ಶತಮಾನದಲ್ಲಿ ಈ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ಚೀನಾದ ಪ್ರವಾಸಿ ಇಟ್ಸಿಂಗ್ ಇದನ್ನು ಉತ್ತಮ ಕಲಿಕೆಯ ಕೇಂದ್ರವೆಂದು ಬಣ್ಣಿಸಿದ್ದಾನೆ. ಪ್ರಸಿದ್ಧ ಬೌದ್ಧ ವಿದ್ವಾಂಸರಾದ ಗುಣಮತಿ ಮತ್ತು ಸ್ತಿರಮತಿ, ಈ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರುವರಾಗಿದ್ದರು ಎನ್ನಲಾಗಿದೆ. ಮತ್ತು ದೇಶಾದ್ಯಂತದ ವಿದ್ಯಾರ್ಥಿಗಳು ಈ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ಬರುತ್ತಿದ್ದರು. ಇಲ್ಲಿನ ಶಿಕ್ಷಣದ ಉತ್ತಮ ಗುಣಮಟ್ಟದ ಕಾರಣ, ಈ ವಿಶ್ವವಿದ್ಯಾಲಯದ ಪದವೀಧರರಿಗೆ ಉನ್ನತ ಕಾರ್ಯನಿರ್ವಾಹಕ ಹುದ್ದೆಗಳನ್ನು ನೀಡಲಾಗಿತ್ತು.

ಪುಷ್ಪಗಿರಿ ವಿಶ್ವವಿದ್ಯಾಲಯ:

ಪುಷ್ಪಗಿರಿ ವಿಶ್ವವಿದ್ಯಾಲಯವನ್ನು ಪ್ರಾಚೀನ ಕಳಿಂಗ ಸಾಮ್ರಾಜ್ಯದಲ್ಲಿ (ಆಧುನಿಕ ಒಡಿಶಾ) ಸ್ಥಾಪಿಸಲಾಗಿತ್ತು. ಇದು 3 ನೇ ಶತಮಾನದಲ್ಲಿ ಸ್ಥಾಪನೆಯಾಯಿತು ಮತ್ತು ಮುಂದಿನ 800 ವರ್ಷಗಳವರೆಗೆ ಅಂದರೆ 11 ನೇ ಶತಮಾನದವರೆಗೆ ಜೀವಂತಿಕೆಯನ್ನು ಹೊಂದಿತ್ತು. ಈ ವಿಶ್ವವಿದ್ಯಾನಿಲಯದ ಆವರಣವು ಪಕ್ಕದಲ್ಲಿನ ಮೂರು ಬೆಟ್ಟಗಳಾದ ಲಲಿತಗಿರಿ, ರತ್ನಗಿರಿ ಮತ್ತು ಉದಯಗಿರಿಗಳಲ್ಲಿ ಹರಡಿತು. ಇದು ತಕ್ಷಶಿಲಾ, ನಳಂದ ಮತ್ತು ವಿಕ್ರಮಶಿಲ ವಿಶ್ವವಿದ್ಯಾಲಯಗಳ ಜೊತೆಗೆ ಪ್ರಾಚೀನ ಭಾರತದ ಉನ್ನತ ಶಿಕ್ಷಣದ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿತ್ತು. 639 ರಲ್ಲಿ ಚೀನಾದ ಪ್ರವಾಸಿಗ ಕ್ಸುವಾನ್‌ಜಾಂಗ್ (ಹುಯೆನ್ ತ್ಸಾಂಗ್) ಈ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದ. ಇತ್ತೀಚೆಗೆ ಅಶೋಕ ಚಕ್ರವರ್ತಿಯ ಕೆಲವು ಕುರುಹುಗಳು ಇಲ್ಲಿ ಕಂಡುಬಂದಿದೆ, ಮತ್ತು ಪುಷ್ಪಗಿರಿ ವಿಶ್ವವಿದ್ಯಾಲಯವನ್ನು ಅಶೋಕ ಚಕ್ರವರ್ತಿ ಸ್ವತಃ ಸ್ಥಾಪಿಸಿದನೆಂದು ಸೂಚಿಸಲಾಗಿದೆ.

ಓದಂತಪುರಿ ವಿಶ್ವವಿದ್ಯಾಲಯ:

ಒದಂತಪುರಿ ವಿಶ್ವವಿದ್ಯಾನಿಲಯವನ್ನು 8 ನೇ ಶತಮಾನದ ಉತ್ತರಾರ್ಧದಲ್ಲಿ ಅದೇ ಪಾಲಾ ರಾಜವಂಶದ ಅದೇ ಧರ್ಮಪಾಲ ಮಗಧದಲ್ಲಿ ಸ್ಥಾಪಿಸಿದ (ಇದು ಆಧುನಿಕ ಬಿಹಾರದಲ್ಲಿದೆ) ವಿಕ್ರಮಶಿಲ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಪ್ರಸಿದ್ಧ ಆಚಾರ್ಯ “ಶ್ರೀ ಗಂಗಾ” ಈ ಒದಂತಪುರಿ ವಿಶ್ವವಿದ್ಯಾಲಯದ ಪದವೀಧರರಾಗಿದ್ದರು. ಪ್ರಾಚೀನ ಟಿಬೆಟಿಯನ್ ದಾಖಲೆಗಳ ಪ್ರಕಾರ ಈ ವಿಶ್ವವಿದ್ಯಾಲಯದಲ್ಲಿ ಸುಮಾರು 12,000 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದರು. ಪ್ರಾಚೀನ ಟಿಬೆಟಿಯನ್ ಗ್ರಂಥಗಳು ಇದನ್ನು ಆ ಕಾಲದ ಐದು ಶ್ರೇಷ್ಠ ವಿಶ್ವವಿದ್ಯಾಲಯಗಳಲ್ಲಿ ಒಂದೆಂದು ಉಲ್ಲೇಖಿಸುತ್ತವೆ.

ಸೋಮಪುರ ವಿಶ್ವವಿದ್ಯಾಲಯ:

ಸೋಮಪುರ ಮಹಾವಿಹರವನ್ನು 8 ನೇ ಶತಮಾನದ ಉತ್ತರಾರ್ಧದಲ್ಲಿ ಬಂಗಾಳದಲ್ಲಿ ಧರ್ಮಪಾಲ ಸ್ಥಾಪಿಸಿದ. ಅಂದರೆ ಸ್ವತಃ ಧರ್ಮಪಾಲನೆ ಮೂರು ವಿಶ್ವವಿದ್ಯಾನಿಲಯವನ್ನ ಸ್ಥಾಪಿಸಿದ್ದ ಎಂದು ಆಯ್ತು. ಈ ವಿಶ್ವವಿದ್ಯಾನಿಲಯವು 27 ಎಕರೆಯಿಂದ ಕೂಡಿದ್ದು, ಅದರಲ್ಲಿ ಮುಖ್ಯ ಕಟ್ಟಡವೆ ತನ್ನ ಕಂಬದ ಬಾಹುವನ್ನು 21 ಎಕ್ಕರೆಗಳಲ್ಲಿ ಚಾಚಿಕೊಂಡು ಮೆರೆಯುತ್ತಿದೆ. ಇದು ಬೌದ್ಧ ಧರ್ಮ, ಜಿನ ಧರ್ಮ (ಜೈನ ಧರ್ಮ) ಮತ್ತು ಸನಾತನ ಧರ್ಮ (ಹಿಂದೂ ಧರ್ಮ) ದ ಕಲಿಕೆಯ ಪ್ರಮುಖ ಕೇಂದ್ರವಾಗಿತ್ತು. ಈ ಮೂರು ಸಂಪ್ರದಾಯಗಳ ಪ್ರಭಾವವನ್ನು ಚಿತ್ರಿಸುವ ಅಲಂಕಾರಿಕ ವಿನ್ಯಾಸವನ್ನು ಇಂದಿಗೂ ಅದರ ಹೊರಗಿನ ಗೋಡೆಗಳಲ್ಲಿ ಕಾಣಬಹುದು.

ಸೋಮಪುರ ವಿಶ್ವವಿದ್ಯಾಲಯ.

ಇತರ ಪ್ರಾಚೀನ ವಿಶ್ವವಿದ್ಯಾಲಯಗಳು:

ಮೇಲೆ ತಿಳಿಸಿದ ಪಟ್ಟಿ ಪ್ರಾಚೀನ ಭಾರತೀಯ ವಿಶ್ವವಿದ್ಯಾಲಯಗಳ ಸಂಪೂರ್ಣ ಪಟ್ಟಿಯಲ್ಲ. ಈ ಮೇಲೆ ಧರ್ಮಪಾಲನಿಂದ ಸ್ಥಾಪಿತವಾದ ಮೂರು ವಿಶ್ವವಿದ್ಯಾಲಯದ ಬಗ್ಗೆ ನಾವು ನೋಡಿದೆವು
ಆದರೆ ಮಹಾಶಯ ತನ್ನ ಸಾಮ್ರಾಜ್ಯದಾದ್ಯಂತ ಒಟ್ಟು50 ಶಿಕ್ಷಣ ಕೇಂದ್ರಗಳನ್ನ ಸ್ಥಾಪಿಸಿದನಂತೆ ಎಂದು ಹೇಳಲಾಗುತ್ತದೆ. ಉದಾಹರಣೆಗೆ, ಬಂಗಾಳದಲ್ಲಿ ಮಾರ್ಚ್ 23, 2013 ರಂದು ಉತ್ಖನನದ ಮೂಲಕ ಕಂಡು ಬಂದ ಮುನ್ಶಿಗಂಜ್ ವಿಹಾರವನ್ನು 9 ನೇ ಶತಮಾನದಲ್ಲಿ ಸ್ಥಾಪಿಸಲಾಗಿತ್ತು ಎಂದು ಹೇಳಲಾಗುತ್ತದೆ ಮತ್ತು ಚೀನಾ, ಟಿಬೆಟ್, ನೇಪಾಳ ಮತ್ತು ಥೈಲ್ಯಾಂಡ್‌ನಂತಹ ದೂರದ ಸ್ಥಳಗಳಿಂದ ಬಂದ 8000 ವಿದ್ಯಾರ್ಥಿಗಳಿಗೆ ಅದು ನೆಲೆಯಾಗಿತ್ತು ಎಂಬ ಹೊಸ ದಾಖಲೆಯು ಇದೆ.

ಪ್ರಾಚೀನ ಭಾರತೀಯ ವಿಶ್ವವಿದ್ಯಾಲಯಗಳ ನಾಶ:

ನಾವು ಮೇಲೆ ನೋಡಿದಂತೆ, ಅಲ್ಲಿ ತಿಳಿಸಲಾದ ಅನೇಕ ವಿಶ್ವವಿದ್ಯಾಲಯಗಳು ಸುಮಾರು 12 ನೇ ಶತಮಾನದಲ್ಲೆ ಕೊನೆಗೊಂಡಿವೆ. 1193 ರಲ್ಲಿ ಟರ್ಕಿಯಿಂದ ಭಾರತಕ್ಕೆ ಆಕ್ರಮಣ ಮಾಡಲು ಬಂದ ಮತಾಂಧ ಬಖ್ತಿಯಾರ್ ಖಿಲ್ಜಿ ನಳಂದ, ಸೋಮಪುರ,ವಿಕ್ರಮಶಿಲಾ ಮತ್ತು ಮುಂತಾದ ವಿಶ್ವವಿದ್ಯಾಲಯಗಳನ್ನು ನಾಶಮಾಡಿ ಹೋದ.ಮುಗ್ಧ ಭಾರತೀಯರ ರುಧಿರಾಭಿಷೇಕವನ್ನೇ ಮಾಡಿಬಿಟ್ಟ. ಪರಕೀಯರ ಆಕ್ರಮಣದಿಂದಾಗಿ ಭಾರತಕ್ಕೆ ಆದ ನಷ್ಟ ಒಂದಾ.. ಎರಡ ಅಬ್ಬಬ್ಬಾ…!

ನಳಂದ ವಿಶ್ವವಿದ್ಯಾನಿಲಯದ ದೊಡ್ಡ ಗ್ರಂಥಾಲಯವನ್ನು ಖಿಲ್ಜಿಯ ಸೈನ್ಯದ ಸೈನಿಕರು ವಶಪಡಿಸಿಕೊಂಡು ನಾಶಪಡಿಸಿದರು, ದರೋಡೆ ಮಾಡಿದರು ಮತ್ತು ಸುಟ್ಟುಹಾಕಿದರು!. ಎಷ್ಟೋ ಮಹಾ ಗ್ರಂಥಗಳು ಸುಟ್ಟು ಭಸ್ಮಗೊಂಡವು. ಹಾಗೂ ಮೂರು ತಿಂಗಳವರೆಗೆ ಆ ಸುಟ್ಟ ಗ್ರಂಥಗಳು ಉರಿಯುತ್ತಿದ್ದವು. ಸಾವಿರಾರು ವರ್ಷಗಳಿಂದ ಎಚ್ಚರಿಕೆಯಿಂದ ಸಂರಕ್ಷಿಸಲ್ಪಟ್ಟ ಹಲವಾರು ಪ್ರಾಚೀನ ಭಾರತೀಯ ಮಹಾ ಗ್ರಂಥಗಳು ಕ್ಷಣಮಾತ್ರದಲ್ಲಿ ಈ ಬೆಂಕಿಯಲ್ಲಿ ವಿಲೀನಗೊಂಡಿತು. ಬಹುಶಃ ಅವುಗಳಿದ್ದಿದ್ದರೆ ಭಾರತದ ಭವ್ಯತೆ ಜಗತ್ತಿಗೆ ಇನ್ನು ಅಚ್ಚುಕಟ್ಟಾಗಿ ಗೊತ್ತಾಗುತ್ತಿತ್ತೋ ಏನೋ.!?ಅದಕ್ಕಿಂತ ಕಠೋರವಾದುದು ಇದು, ಖಿಲ್ಜಿಯ ಸೈನ್ಯ ವಿಶ್ವವಿದ್ಯಾಲಯದ ಸಾವಿರಾರು ಸನ್ಯಾಸಿಗಳನ್ನು ಜೀವಂತವಾಗಿ ಸುಟ್ಟುಹಾಕಿತು!!..
ಮತ್ತು ಅವರ ಶಿರಚ್ಛೇದನ ಮಾಡಲಾಗಿತ್ತು. ನಳಂದ ಮತ್ತು ಉತ್ತರ ಭಾರತದ ಇತರ ಸ್ಥಳಗಳಲ್ಲಿನ ಈ ಕಲಿಕಾ ಕೇಂದ್ರಗಳ ನಾಶ ಗಣಿತ, ಖಗೋಳವಿಜ್ಞಾನ, ರಸವಿದ್ಯೆ ಮತ್ತು ಅಂಗರಚನಾಶಾಸ್ತ್ರದಲ್ಲಿನ ಪ್ರಾಚೀನ ಭಾರತದ ಹೊಸ ಚಿಂತನೆಗಳ ನಾಶಕ್ಕೆ ಕಾರಣವಾಗಿದ್ದವು ಎಂದು ಹೇಳಬಹುದು.

ಯುಗ ಪುರುಷರ ಅವತಾರಕ್ಕೆ ಕಾರಣವಾದ ಶಿಕ್ಷಣ ಕೇಂದ್ರಗಳು ಅವನತಿಯ ಅವತರಾ ತಾಳಿ ನಾಶವಾಗಿದ್ವು.

ಅಂದಹಾಗೆ, ಪ್ರಾಚೀನ ಕಾಲದಿಂದ 18ನೇ ಶತಮಾನದ ವರೆಗೂ ಈ ರೀತಿ ಮತಾಂಧಿಗಳು ಭಾರತದಲ್ಲಿದ್ದರೆಂದು ವಿಶೇಷವಾಗೇನು ಹೇಳಬೇಕಿಲ್ಲ.
ಆದರೂ ಪರಕೀಯರ ಆಕ್ರಮಣಕ್ಕೆ, ಭಾರತ ತುತ್ತಾದರು ಭಾರತ ಆಗಲೂ ವಿಶ್ವಗುರುವಾಗಿತ್ತು ಈಗಲೂ ವಿಶ್ವಗುರುವಾಗಿದೆ ಹಾಗೂ ಮುಂದೆಯೂ ವಿಶ್ವಗುರು ಆಗಿರುತ್ತದೆ ಎಂಬುದು ಸುಳ್ಳಲ್ಲ…!! ಹಾಗೂ ಅದು ಉತ್ಪ್ರೇಕ್ಷೆಯ ಮಾತೇ ಅಲ್ಲ.


ಕೃಪೆ: ಸ್ಕಂದ ದಿಕ್ಷಿತ ಅವರ ಬ್ಲಾಗ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಭಾರತದ ರಾಷ್ಟ್ರೀಯ ಹಬ್ಬಗಳು

ಭಾರತದ ರಾಷ್ಟ್ರೀಯ ಹಬ್ಬಗಳು.Indian National Festivals ಭಾರತದ ರಾಷ್ಟ್ರೀಯ ಹಬ್ಬಗಳು ನಮ್ಮ ಭಾರತ ದೇಶವು ಜಾತ್ಯತೀತ ದೇಶವಾಗಿದೆ, ಇಲ್ಲಿ ಎಲ್ಲಾ ಜಾತಿ ಧರ್ಮದ ಜನರು ಎಲ್ಲಾ ಟೀಜ್ ಹಬ್ಬವನ್ನು ಬಹಳ ಆಡಂಬರದಿಂದ ಆಚರಿಸುತ್ತಾರೆ. ರಾಖಿ, ದೀಪಾವಳಿ, ದಸರಾ, ಈದ್, ಕ್ರಿಸ್‌ಮಸ್ ಮತ್ತು ಅನೇಕ ಜನರು ಒಟ್ಟಾಗಿ ಹಬ್ಬವನ್ನು ಆಚರಿಸುತ್ತಾರೆ. ಭಾರತದ ದೇಶದಲ್ಲಿ ಹಬ್ಬಗಳಿಗೆ ಕೊರತೆಯಿಲ್ಲ, ಧರ್ಮದ ಪ್ರಕಾರ ವಿಭಿನ್ನ ಹಬ್ಬಗಳಿವೆ. ಆದರೆ ಅಂತಹ ಕೆಲವು ಹಬ್ಬಗಳಿವೆ, ಅವು ಯಾವುದೇ ಜಾತಿಯವರಲ್ಲ, ಆದರೆ ನಮ್ಮ ರಾಷ್ಟ್ರವನ್ನು ನಾವು ರಾಷ್ಟ್ರೀಯ ಹಬ್ಬ ಎಂದು ಕರೆಯುತ್ತೇವೆ. ಭಾರತದ ರಾಷ್ಟ್ರೀಯ ಹಬ್ಬ. (Indian national festivals in Kannada ). 1947 ರಿಂದ ದೇಶದ ಸ್ವಾತಂತ್ರ್ಯದ ನಂತರ, ಈ ರಾಷ್ಟ್ರೀಯ ಹಬ್ಬಗಳು ನಮ್ಮ ಜೀವನದ ಭಾಗವಾದವು, ಅಂದಿನಿಂದ ನಾವು ಅವರನ್ನು ಬಹಳ ಉತ್ಸಾಹದಿಂದ ಆಚರಿಸುತ್ತೇವೆ. ಈ ಹಬ್ಬವು ನಮ್ಮ ರಾಷ್ಟ್ರೀಯ ಏಕತೆಯನ್ನು ತೋರಿಸುತ್ತದೆ. ಭಾರತದ ಪ್ರಮುಖ ರಾಷ್ಟ್ರೀಯ ಹಬ್ಬಗಳು – 1. ಸ್ವಾತಂತ್ರ್ಯ ದಿನ15 ಆಗಸ್ಟ್ 2. ಗಣರಾಜ್ಯೋತ್ಸವ 26 ಜನವರಿ 3. ಗಾಂಧಿ ಜಯಂತಿ 2 ಅಕ್ಟೋಬರ್ ಇದು ರಾಷ್ಟ್ರೀಯ ಹಬ್ಬ, ಇದು ರಾಷ್ಟ್ರೀಯ ರಜಾದಿನವೂ ಆಗಿದೆ. ಇದಲ್ಲದೆ, ಶಿಕ್ಷಕರ ದಿನ, ಮಕ್ಕಳ ದಿನವೂ ರಾಷ್ಟ್ರೀಯ ರಜಾದಿನವಾಗಿದೆ, ಇವುಗಳನ್ನು ನಮ್ಮ ದೇಶದ ಮಹಾನ್ ಸ್ವಾತಂತ್ರ್ಯ ಹೋರಾಟದ ನೆನಪಿಗಾಗಿ ಆಚರಿಸಲಾಗುತ್ತದೆ. ಇದಲ

ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture)

1.1 ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture) ಭಾರತದ ಸಾಂಸ್ಕೃತಿಕ ಪರಂಪರೆಯು ವಿಶಾಲವಾದ ವ್ಯಾಪ್ತಿಯನ್ನು ಹೊಂದಿದೆ. ಮಾನವನ ಉಗಮದೊಂದಿಗೆ ಉಗಮವಾಗಿ ಬೆಳೆದು ಸಾಗಿ ಬಂದ ಪರಂಪರೆಯು ಅವನ ಜೀವನ ಮೌಲ್ಯಗಳು, ವಸತಿ ರಕ್ಷಣೆ, ಆಹಾರ, ವಿಹಾರ, ಉಡುಗೆ-ತೊಡುಗೆ, ಮನರಂಜನೆ, ವ್ಯಾಪಾರ, ವಾಣಿಜ್ಯ, ಸಂಗೀತ, ಕಲೆ, ವಾಸ್ತುಶಿಲ್ಪ, ಚಿತ್ರಕಲೆ, ಶಿಕ್ಷಣ, ಧರ್ಮಗಳು, ರೂಢಿ-ಸಂಪ್ರದಾಯಗಳು, ಭಾಷೆ, ನಟನೆ, ನಂಬಿಕೆ, ನೃತ್ಯ, ಆಚರಣೆ, ಹವ್ಯಾಸ, ಸಾಹಿತ್ಯ, ವಿಧಿ-ವಿಧಾನಗಳನ್ನು ಒಳಗೊಂಡಿದೆ. ಈ ಅಂಶಗಳಲ್ಲಿ ಕೆಲವು ಕಾಲಕ್ಕೆ ತಕ್ಕಂತೆ ಮತ್ತು ಪ್ರಾದೇಶಿಕವಾಗಿ ಭಿನ್ನತೆ ಹಾಗೂ ಬದಲಾವಣೆಗೊಂಡಿದ್ದರೂ ನಿರಂತರವಾಗಿ ಸಾಗಿ ಬಂದಿವೆ. ಅವುಗಳ ಗುಣ ಲಕ್ಷಣಗಳು ಈ ಕೆಳಗಿನಂತಿವೆ: 1. ಸಾಂಪ್ರದಾಯಕ ಜೀವನ ವಿಧಾನ: ಭಾರತೀಯರ ಜೀವನ ವಿಧಾನ ಪಾರಂಪರಗತವಾಗಿ ಪೂರ್ವಜರಿಂದ ಸಾಗಿ ಬಂದಿದೆ. ಪಾರಂಪರಗತವಾಗಿ ಭಾರತೀಯರದು ಕೃಷಿ ಪ್ರಧಾನವಾದ ಜೀವನ ವಿಧಾನವಾಗಿದ್ದು, ಭೂಮಿಯನ್ನು 'ಭೂದೇವಿ' ಎಂದು ಆರಾಧಿಸುತ್ತಾರೆ. ಭೂಮಿಯನ್ನು ಹಸನಗೊಳಿಸಿ, ಹದ ಮಾಡಿ, ಉತ್ತಿ-ಬಿತ್ತುವ ಪೂರ್ವದಲ್ಲಿ ಭೂದೇವಿಗೆ ಪೂಜೆ ಸಲ್ಲಿಸುವ ಮೂಲಕ ಕೃಷಿ ಕಾಯಕವನ್ನು ಪ್ರಾರಂಭಿಸುತ್ತಾರೆ. ಕಾಲಕಾಲಕ್ಕೆ ಮಳೆಯಾಗಿ, ಸಮೃದ್ಧವಾದ ಬೆಳೆಯನ್ನು ಕೊಡುವ ಮೂಲಕ ನಿನ್ನ ಮಕ್ಕಳನ್ನು ಸಲಹು ತಾಯಿ ಎಂದು ಬೇಡಿಕೊಳ್ಳುತ್ತಾರೆ. ಕೃಷಿ ಸಲಕರಣಗಳಲ್ಲಿ, ಬಿತ್ತುವ ಬೀಜಗಳಲ್

DSC-2 ಭಾರತದ ಸಾಂಸ್ಕೃತಿಕ ಪರಂಪರೆ::ಪೌರಾಣಿಕ ಐತಿಹ್ಯಗಳು: ಮಹಾಭಾರತ ಮತ್ತು ರಾಮಾಯಣ, ಪಂಚತಂತ್ರ

ಐತಿಹ್ಯ ಗಳು: ಇಂಗ್ಲೀಷಿನ Legend ಎಂಬ ಪದಕ್ಕೆ ಸಮನಾಗಿ ಇಂದು ನಾವು ‘ಐತಿಹ್ಯ’ ಎಂಬುದನ್ನು ಪ್ರಯೋಗಿಸುತ್ತಿದ್ದೇವೆ. ಜಾನಪದ ಶಾಸ್ತ್ರವಾಗಿ ಬೆಳೆಯುವುದಕ್ಕಿಂತ ಹಿಂದಿನಿಂದಲೇ ‘ಐತಿಹ್ಯ’ ಎಂಬ ಶಬ್ದಪ್ರಯೋಗ ನಮ್ಮಲ್ಲಿ ತಕ್ಕಷ್ಟು ರೂಢವಾಗಿದೆ. ಸಾಮಾನ್ಯರು ಇತಿಹಾಸವೆಂದು ನಂಬಿಕೊಂಡು ಬಂದ ಘಟನೆ ಅಥವಾ ಕಥನವೆಂಬ ಅರ್ಥದಲ್ಲಿ ಅದು ಪ್ರಯೋಗಗೊಳ್ಳುತ್ತಿದ್ದುದನ್ನು ನಾವು ಆಗೀಗ ಕಾಣುತ್ತೇವೆ. ಜಾನಪದ ಶಾಸ್ತ್ರವಾಗಿ ಬೆಳೆಯುತ್ತ ಬಂದದ್ದರಿಂದ ಅದೊಂದು ನಿಶ್ಚಿತ ಪರಿಕಲ್ಪನೆಯಾಯಿತೆಂದು ಹೇಳಬೇಕಾಗುತ್ತದೆ. ಐತಿಹ್ಯದ ಮೂಲವಾದ `Legend’ ಎಂಬ ಪದ ಮಧ್ಯಕಾಲೀನ ಲ್ಯಾಟಿನ್ನಿನ ಲೆಜಂಡಾ (Legenda) ಎಂಬ ರೂಪದಿಂದ ನಿಷ್ಪನ್ನವಾದುದು. ಇದರರ್ಥ ಪಠಿಸಬಹುದಾದದ್ದು, ಎಂದು”.ಇದಕ್ಕೆ ಯುರೋಪಿನಲ್ಲಿ ಸಾಧುಸಂತರ ಕಥೆಗಳು ಎಂಬಂಥ ಅರ್ಥಗಳು ಮೊದಲಲ್ಲಿ ಪ್ರಚಲಿತವಿದ್ದುದಾಗಿ ತಿಳಿದು ಬರುತ್ತದೆ.“ಲೆಜೆಂಡಾ” ಅಥವಾ “ಐತಿಹ್ಯ” ವೆಂಬುದು ಈ ಅರ್ಥಗಳಿಂದ ಸಾಕಷ್ಟು ದೂರ ಸರಿದಿದೆಯೆಂದು ಬೇರೆ ಹೇಳಬೇಕಾಗಿಲ್ಲ. ಐತಿಹ್ಯವೆಂದರೆ ಈಗ ವ್ಯಕ್ತಿ, ಸ್ಥಳ ಅಥವಾ ಘಟನೆಯೊಂದರ ಸುತ್ತ ಸಾಂಪ್ರದಾಯಿಕವಾಗಿ ಮತ್ತು ಯಾವುಯಾವುವೋ ಮೂಲ ಸಂಗತಿಗಳ ಮೇಲೆ ಆಧರಿತವಾಗಿ ಬಂದ ಕಥನ ಎಂದು ಸಾಮಾನ್ಯವಾದ ಅರ್ಥ ಪಡೆದುಕೊಂಡಿದೆ. “ಐತಿಹ್ಯ” ಕೆಲವು ವೇಳೆ ಸತ್ಯ ಘಟನೆಯೊಂದರಿಂದಲೇ ಹುಟ್ಟಿಕೊಂಡಿರಬಹುದು; ಎಂದರೆ, ಅದು ನಿಜವಾದ ಚರಿತ್ರೆಯನ್ನೊಳಗೊಂಡಿರಬಹುದು. ಆದರೆ ಯಾವತ್ತೂ ಅದರಲ್ಲಿ ಚರಿತ್ರೆಯೇ ಇರುತ