👉 ಪ್ರಚಲಿತ
ಭಾರತ ರತ್ನ ಸಿ.ಎನ್.ಆರ್. ರಾವ್ ಅವರಿಗೆ ‘ಇನಿ’ ಅಂತರರಾಷ್ಟ್ರೀಯ ಪ್ರಶಸ್ತಿ
=====================
ಬೆಂಗಳೂರು: ನವೀಕರಿಸಬಹುದಾದ ಇಂಧನ ಮೂಲ ಗಳು ಮತ್ತು ಇಂಧನ ಶೇಖರಣೆಗೆ ಸಂಬಂಧಿಸಿದ ಕ್ಷೇತ್ರ ದಲ್ಲಿ ಮಹತ್ವದ ಸಂಶೋಧನೆಗಾಗಿ ಖ್ಯಾತ ವಿಜ್ಞಾನಿ ಸಿ.ಎನ್.ಆರ್.ರಾವ್ ಅವರು ಅಂತರರಾಷ್ಟ್ರೀಯ ‘ಇನಿ’ ( Eni) ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಈ ಪ್ರಶಸ್ತಿ ಇಂಧನ ಕೇಂದ್ರದ ಮುಂಚೂಣಿ ಮತ್ತು ಅತ್ಯುನ್ನತ ಪ್ರಶಸ್ತಿಯಾಗಿದ್ದು, ಇಂಧನ ಸಂಶೋ ಧನೆಯ ನೋಬೆಲ್ ಪ್ರಶಸ್ತಿ ಎಂದೇ ಪರಿಗಣಿಸಲಾಗುತ್ತದೆ.
=======
ಪ್ರೊ.ರಾವ್ ಅವರು ಜಲಜನಕ ಆಧಾರಿತ ಇಂಧನದ ಮೇಲೆ ಅಧ್ಯ ಯನ ನಡೆಸಿದ್ದಾರೆ. ಈ ಇಂಧನ ಮೂಲ ಮಾತ್ರ ಇಡೀ ಮನುಕುಲಕ್ಕೆ ಉಪಯೋಗವಾಗಬಲ್ಲ ಏಕೈಕ ಮೂ ಲವಾಗಿ ಹೊರ ಹೊಮ್ಮಿದೆ. ಜಲಜನಕದ ಶೇಖರಣೆ, ದ್ಯುತಿರಸಾಯನ ವಿಜ್ಞಾನ ಮತ್ತು ವಿದ್ಯುದ್ರಸಾಯನ ಕ್ರಿಯೆ ಯಿಂದಲೂ ಜಲಜನಕ ಉತ್ಪಾದನೆ, ಸೌರಶಕ್ತಿಯಿಂದ ಜಲಜನಕ ಉತ್ಪಾದನೆ ಇವರ ಪ್ರಮುಖ ಸಾಧನೆಗಳಾಗಿವೆ.
========
ವಿಶೇಷವಾಗಿ ಲೋಹದ ಆಕ್ಸೈಡ್, ಕಾರ್ಬನ್ ನ್ಯಾನೊ ಟ್ಯೂಬ್‌ಗಳು, ಗ್ರಾಫೇನ್, ಬೊರಾನ್–ನೈಟ್ರೋಜನ್–ಕಾರ್ಬನ್ ಹೈಬ್ರಿಡ್ ವಸ್ತುಗಳು, ಮಾಲಿಬ್ಡಿನಮ್ ಸಲ್ಫೈಡ್ ಇವುಗಳನ್ನು ಇಂಧನ ಕ್ಷೇತ್ರದಲ್ಲಿ ಅನ್ವಯಗೊಳಿಸಿದ್ದು ಮಾತ್ರವಲ್ಲದೆ, ಹಸಿರು ಜಲಜನಕ ಉತ್ಪಾದನೆಗೆ ಇವರು ಕೊಡುಗೆ ನೀಡಿದ್ದಾರೆ. ಪ್ರಶಸ್ತಿಯ ಆಯ್ಕೆಗೆ ಈ ಅಂಶಗಳನ್ನು ಪ್ರಧಾನವಾಗಿ ಪರಿಗಣಿಸಲಾಗಿದೆ ಎಂದು ಭಾರತ ಸರ್ಕಾರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ತಿಳಿಸಿದೆ.
==========
‘ಈ ಪ್ರಶಸ್ತಿ ಪಡೆದ ಏಷ್ಯಾದ ಮತ್ತು ಭಾರತದ ಮೊದಲ ವಿಜ್ಞಾನಿ ಎಂಬ ಹಿರಿಮೆಗೆ ರಾವ್ ಪಾತ್ರರಾಗಿದ್ದಾರೆ. ವಿಶೇಷವಾಗಿ ಮುದ್ರಿತ ಚಿನ್ನದ ಪದಕ ಮತ್ತು ನಗದು ಒಳಗೊಂಡ ಈ ಪ್ರಶಸ್ತಿಯನ್ನು ಇಟಲಿಯ ಅಧ್ಯಕ್ಷ ಸರ್ಗಿಯೊ ಮಾಟ್ಟರೆಲ್ಲಾ ಅಕ್ಟೋಬರ್ 14 ರಂದು ಪ್ರೊ.ರಾವ್ ಅವರಿಗೆ ಪ್ರದಾನ ಮಾಡಲಿದ್ದಾರೆ’ ಎಂದು ಜವಾ ಹರ್ ಲಾಲ್ ನೆಹರೂ ವೈಜ್ಞಾನಿಕ ಸಂಶೋಧನಾ ಕೇಂದ್ರದ ಪ್ರಕಟಣೆ ತಿಳಿಸಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ