ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮೇ, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಗುಪ್ತ ಸಾಮ್ರಾಜ್ಯ

ಗುಪ್ತರ ಸಾಮ್ರಾಜ್ಯ ಗುಪ್ತರ ಏಳಿಗೆಗೆ ಮುನ್ನ ಉತ್ತರ ಭಾರತದ ಪರಿಸ್ಥಿತಿ ಕ್ರಿ.ಶ 150 ರಿಂದ 300 ರವರೆಗೆ ಉತ್ತರ ಭಾರತವನ್ನು  ಅನೇಕ ಸಣ್ಣ ಪುಟ್ಟ ರಾಜ್ಯಗಳು ಆಳುತ್ತಿದ್ದವು . ಅವುಗಳಲ್ಲಿ ಕೆಲವು ರಾಜಪ್ರಭುತ್ವವನ್ನು ಇನ್ನು ಕೆಲವು ಗಣರಾಜ್ಯಗಳನ್ನು ಹೊಂದಿದ್ದವು ( ಕುಶಾನರ ಪತನಾನಂತರ ಗುಪ್ತರು ಏಳಿಗೆಗೆ ಬರುವವರೆಗೆ ) a. ರಾಜಪ್ರಭುತ್ವ - ನಾಗರು ,ಅಹಿಚ್ಚತ್ರರು ,ಅಯೋದ್ಯ , ವಾಕಟಕರು b. ಮೌಕರಿಗಳು ಮತ್ತು ಗುಪ್ತರು c. ಗಮರಾಜ್ಯಗಳಲ್ಲಿ - ಅರ್ಜುನಯಾನರು ಮಾಳ್ವರು , ಯಾದೇಯರು ,ಸಿಬಿಗಳು ,ಕುಲುಟರು ಹಾಗೇಯೇ ಪಶ್ಚಿಮ ಭಾರತದಲ್ಲಿ ಕ್ಷತ್ರಪರು ( ರುದ್ರದಾಮನ ) ಹಾಗೂ ದಕ್ಷಿಣದಲ್ಲಿ ಶಾತವಾಹನರು ಏಳಿಗೆ ಹೊಂದಲು ಹವಣಿಸುತ್ತಿದ್ದರು ಈ ರಾಜ್ಯಗಳಲ್ಲೆ ಸ್ವಲ್ಪ ಮಟ್ಟಿಗೆ ಪ್ರಾಮುಖ್ಯತೆಯನ್ನು ಪಡೆದವರು ,ವಾಕಟಕರು ಹಾಗೂ ಗುಪ್ತರು ಗುಪ್ತರು ,ಮೌರ್ಯರು ಮತ್ತು ಶಾತವಾಹನರ ಕಾಲದಲ್ಲಿ ಸಾಮ್ರಜ್ಯದ ಗುಪ್ತಾಚಾರ ಅಧಿಕಾರಿಗಳಾಗಿದ್ದರು ಗುಪ್ತರ ಮೂಲ ಪುರುಷ - ಮಹಾರಾಜ ಶ್ರೀಗುಪ್ತ ಶ್ರೀಗುಪ್ತನ ಮಗನ ಹೆಸರು - ಘಟೋತ್ಕಚ ಗುಪ್ತ ಮಹಾರಾಜ ರೆಂಬ ಬಿರುದನ್ನು ಹೊಂದಿದ್ದವನು - 1 ನೇ ಚಂದ್ರಗುಪ್ತ 1 ನೇ ಚಂದ್ರಗುಪ್ತನ ರಾಜಧಾನಿ - ಪಾಟಲಿಪುತ್ರ 1 ನೇ ಚಂದ್ರಗುಪ್ತನ ಪತ್ನಿಯ ಹೆಸರು - ಲಿಚ್ಚವಿ ವಂಶದ ರಾಜಕುಮಾರಿ ಕುಮಾರ ದೇವಿ 1 ನೇ ಚಂದ್ರಗುಪ್ತನ ಮಗನ ಹೆಸರು - ಸಮುದ್ರಗುಪ್ತ ಸಮುದ್ರಗುಪ್ತ ಗುಪ್ತರ ಪ್ರಸಿದ್ದ ದೊರೆ - ಸಮುದ್ರಗುಪ್ತ

ಮತಾಂಧಿಗಳ ಅಟ್ಟಹಾಸಕ್ಕೆ ಪ್ರಾಚೀನ ವಿಶ್ವ ವಿದ್ಯಾಲಯಗಳ ಕಗ್ಗೊಲೆ…!

ಭಾರತ ಯಾವಾಗಲೂ ಜಗತ್ತಿಗೆ ಶಿಕ್ಷಣದ ಮೂಲವಾಗಿದೆ. ವೇದದ ಕಾಲದಿಂದ ಇಂದಿನ ಆಧುನಿಕ ಯುಗದವರೆಗೆ, ಭಾರತವು ಅನೇಕ ವಿದ್ವಾಂಸರು, ಪಂಡಿತರು, ಕವಿಗಳು, ವಿಜ್ಞಾನಿಗಳು ಮತ್ತು ದಾರ್ಶನಿಕರಿಗೆ ನೆಲೆಯಾಗಿದೆ ಹಾಗಾದರೆ ಭಾರತದಲ್ಲಿನ ಶಿಕ್ಷಣ ವಯವಸ್ಥೆ ಹೇಗಿತ್ತು…? ಭಾರತ ಮೇಧಾವಿಗಳ ಬೀಡಾದುದ್ದು ಹೇಗೆ…? ಹಾಗೂ ಮತಾಂಧಿಗಳು ಭಾರತದ ಶಿಕ್ಷಣ ಕೇಂದ್ರಗಳನ್ನು ವಿಧ್ವಂಸಗೊಳ್ಳಿಸಿದ್ದು ಹೇಗೆ…? ಈ ಪ್ರಶ್ನೆ ನನಗೆ ಮೂಡಿದ್ದು ನನ್ನ ಕಾಲೇಜಿನಲ್ಲಿ ನಳಂದ ಹಾಗೂ ತಕ್ಷಶಿಲೆಯ ಕುರಿತಂತೆ ಪಠ್ಯಕ್ರಮದಲ್ಲಿ ಇರುವ ವ್ಯಾಖ್ಯಾನವನ್ನ ನಮ್ಮ ಪ್ರಾಧ್ಯಾಪಕರು ಭೋದಿಸುತ್ತಿರುವಾಗ. ಅದರ ಬಗ್ಗೆ ತಿಳಿದುಕೊಳ್ಳುವ ಹಂಬಲ ಹೆಚ್ಚಾಗಿತು. ಪಠ್ಯ ಪುಸ್ತಕದಲ್ಲಿ ಇದ್ದಿದ್ದಂತೂ ಎರಡೇ ವಾಕ್ಯ. ಅದರಲ್ಲಿಯೂ ಈ ವಿಶಾಲ ಶಿಕ್ಷಣ ಕೇಂದ್ರಗಳ ನಾಶದ ಬಗ್ಗೆಯಂತೂ ಅಲ್ಲಿ ಉಲ್ಲೇಖವಿರಲಿಲ್ಲ ಅದಕ್ಕೆ ಬೇರೆ ಮಾರ್ಗಗಳನ್ನು ಹುಡುಕುತ್ತ ಹೋದೆ. ಮತಾಂಧತೆಯ ಉಗ್ರ ರೂಪವನ್ನ ಕಂಡೆ. ವೈಭವಾಯುತವಾಗಿದ್ದ ಈ ಶಿಕ್ಷಣ ಕೇಂದ್ರಗಳು ಕ್ಷಣಮಾತ್ರದಲ್ಲಿ ರೋಪ್ಪನೆ ನಾಶವಾಗಿ ಹೋಯ್ತಲ್ಲ ಎಂಬ ಬೆಂಕಿಯ ಕಾವು ಹೆಚ್ಚಾಗ ತೊಡಗಿತು. ಭಾರತದ ಪ್ರಾಚೀನ ಶಿಕ್ಷಣ ಕೇಂದ್ರಗಳು: ನಮಗೆ ತಕ್ಷಶಿಲಾ ಮತ್ತು ನಳಂದ ಹೊರತುಪಡಿಸಿ ಭಾರತದ ಇನ್ನ್ಯಾವುದೇ ಪ್ರಾಚೀನ ವಿಶ್ವವಿದ್ಯಾಲಯಗಳ ಬಗ್ಗೆ ಅರಿವೇ ಇಲ್ಲದಂತಾಗಿದೆ. ತಕ್ಷಶಿಲಾ ಹಾಗೂ ನಳಂದ ವಿಶ್ವದ ಅತ್ಯಂತ ಪ್ರಾಚೀನ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ – ಆದರೆ ಪ್ರಾಚೀನ ಭಾರತದಲ್

ಪ್ರಾಚೀನ ಭಾರತದ ನಲಂದಾ ವಿಶ್ವವಿದ್ಯಾಲಯ: ವಿಡಿಯೋ

ಪ್ರಾಚೀನ ಭಾರತದ ವಿಶ್ವ ಪ್ರಸಿದ್ಧ ನಲಂದಾ ವಿಶ್ವವಿದ್ಯಾಲಯದ ಕರಿತು ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ. ನಲಂದಾ ವಿಶ್ವವಿದ್ಯಾಲಯ: ವಿಡಿಯೋ ನೋಡಲು ಕ್ಲಿಕ್ಕಿಸಿ

ಭಾರತ ರತ್ನ ಸಿ.ಎನ್‌.ಆರ್. ರಾವ್ ಅವರಿಗೆ ‘ಇನಿ’ ಅಂತರರಾಷ್ಟ್ರೀಯ ಪ್ರಶಸ್ತಿ

👉 ಪ್ರಚಲಿತ ಭಾರತ ರತ್ನ ಸಿ.ಎನ್‌.ಆರ್. ರಾವ್ ಅವರಿಗೆ ‘ಇನಿ’ ಅಂತರರಾಷ್ಟ್ರೀಯ ಪ್ರಶಸ್ತಿ ===================== ಬೆಂಗಳೂರು: ನವೀಕರಿಸಬಹುದಾದ ಇಂಧನ ಮೂಲ ಗಳು ಮತ್ತು ಇಂಧನ ಶೇಖರಣೆಗೆ ಸಂಬಂಧಿಸಿದ ಕ್ಷೇತ್ರ ದಲ್ಲಿ ಮಹತ್ವದ ಸಂಶೋಧನೆಗಾಗಿ ಖ್ಯಾತ ವಿಜ್ಞಾನಿ ಸಿ.ಎನ್‌.ಆರ್‌.ರಾವ್‌ ಅವರು ಅಂತರರಾಷ್ಟ್ರೀಯ ‘ಇನಿ’ ( Eni) ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿ ಇಂಧನ ಕೇಂದ್ರದ ಮುಂಚೂಣಿ ಮತ್ತು ಅತ್ಯುನ್ನತ ಪ್ರಶಸ್ತಿಯಾಗಿದ್ದು, ಇಂಧನ ಸಂಶೋ ಧನೆಯ ನೋಬೆಲ್‌ ಪ್ರಶಸ್ತಿ ಎಂದೇ ಪರಿಗಣಿಸಲಾಗುತ್ತದೆ. ======= ಪ್ರೊ.ರಾವ್‌ ಅವರು ಜಲಜನಕ ಆಧಾರಿತ ಇಂಧನದ ಮೇಲೆ ಅಧ್ಯ ಯನ ನಡೆಸಿದ್ದಾರೆ. ಈ ಇಂಧನ ಮೂಲ ಮಾತ್ರ ಇಡೀ ಮನುಕುಲಕ್ಕೆ ಉಪಯೋಗವಾಗಬಲ್ಲ ಏಕೈಕ ಮೂ ಲವಾಗಿ ಹೊರ ಹೊಮ್ಮಿದೆ. ಜಲಜನಕದ ಶೇಖರಣೆ, ದ್ಯುತಿರಸಾಯನ ವಿಜ್ಞಾನ ಮತ್ತು ವಿದ್ಯುದ್ರಸಾಯನ ಕ್ರಿಯೆ ಯಿಂದಲೂ ಜಲಜನಕ ಉತ್ಪಾದನೆ, ಸೌರಶಕ್ತಿಯಿಂದ ಜಲಜನಕ ಉತ್ಪಾದನೆ ಇವರ ಪ್ರಮುಖ ಸಾಧನೆಗಳಾಗಿವೆ. ======== ವಿಶೇಷವಾಗಿ ಲೋಹದ ಆಕ್ಸೈಡ್‌, ಕಾರ್ಬನ್‌ ನ್ಯಾನೊ ಟ್ಯೂಬ್‌ಗಳು, ಗ್ರಾಫೇನ್, ಬೊರಾನ್–ನೈಟ್ರೋಜನ್‌–ಕಾರ್ಬನ್‌ ಹೈಬ್ರಿಡ್‌ ವಸ್ತುಗಳು, ಮಾಲಿಬ್ಡಿನಮ್ ಸಲ್ಫೈಡ್‌ ಇವುಗಳನ್ನು ಇಂಧನ ಕ್ಷೇತ್ರದಲ್ಲಿ ಅನ್ವಯಗೊಳಿಸಿದ್ದು ಮಾತ್ರವಲ್ಲದೆ, ಹಸಿರು ಜಲಜನಕ ಉತ್ಪಾದನೆಗೆ ಇವರು ಕೊಡುಗೆ ನೀಡಿದ್ದಾರೆ. ಪ್ರಶಸ್ತಿಯ ಆಯ್ಕೆಗೆ ಈ ಅಂಶಗಳನ್ನು ಪ್ರಧಾನವಾಗಿ ಪರಿಗಣಿಸಲಾಗಿದೆ ಎಂದು ಭಾರತ