ಇಂದು ಸಂಜೆಗೊಂದು*ಗಜಲ್...* ಓದಿನೊಂದಿಗೆ, - ಮೇಳಿ ಹಾಲು ಕುಡಿದ ಅಂಗೈ ಎದೆಗೆ ಮೊಳೆ ಹೊಡೆದು ಶಿಲುಬೆಗೇರಿಸಿದ್ದಾರೆ ಬೆವರ ಹೊನ್ನಿರಲಿ ಅನ್ನ ಬೇಯಿಸಿದ ಮಣ್ಣಿನ ಕುಡಿಗಳನು ನೇಣಿಗೇರಿಸಿದ್ದಾರೆ - ಸೊಂಟ ಬಿದ್ದ ಮುಳ್ಳು ನಾಲಿಗೆಯ ಕುಶಾಲಿ ಮಾತುಗಳು ಒಡಲಾಗ್ನಿ ನಂದಿಸಲಿಲ್ಲ ಹೆಗಲ ಮೇಲಿನ ಹಸಿರು ಗಿಣಿಗಳನು ಗದರಿಸಿ ಚದುರಿಸುವ ಹುನ್ನಾರ ನಡೆಸಿದ್ದಾರೆ - ಮೊಳೆತ ಬೆಳೆಸಾಲದ ಇಳುವರಿಗೆ ಹೆದರಿ ಗಳೆ ಸಾಮಾನುಗಳು ಗುಳೆ ಹೊರಟಿವೆ ಬಿಗಿದ ನೆಲದ ಬೆತ್ತಲ ನೆತ್ತಿ ಚೂರಿದ ನೇಗಿಲ ಕುಲಕ್ಕೆ ಹಸಿವಿನ ಬುತ್ತಿ ಹೊರೆಸಿದ್ದಾರೆ - ವಸುಂಧರೆಯ ಹೊಕ್ಕುಳ ಬೇರು ಇದ್ದಿಲು ಗಣಿಗಾರಿಕೆಯಲಿ ಬೂದಿಯಾಗಿದೆ ರಾಜ ವ್ಯಾಪಾರಿಯಾಗಿ ಮಣ್ಣಿನ ಧ್ಯಾನ ಮಾಡುವ ಮಕ್ಕಳು ಭಿಕಾರಿಯಾಗಿದ್ದಾರೆ - ಅಳಿದುಳಿದವರು ಉಟ್ಟ ಬಟ್ಟೆಯಲಿ ಉರಿವ ಧರೆ ಮೇಲೆ ನೆತ್ತರದ ಹಾದಿ ಮಾಡುತ್ತಿದ್ದಾರೆ ತಟ್ಟೆ ತುಂಬಿಸಿ ಹೊಟ್ಟೆ ಇಂಬಾಗಿಸಿದವರು ರೈತರ ನೋವಿನ ಧ್ವನಿಗೆ ಕಿವುಡಾಗಿದ್ದಾರೆ - ಮಣ್ಣಿನ ಮೂರ್ತಿಗೆ 'ಸಾಚಿ' ನಿತ್ಯ ತಿಳಿನೀರು ಬಸಿದರೂ ಅರೆಹೊಟ್ಟೆ ತುಂಬುತ್ತಿಲ್ಲ ಕಳ್ಳರು ಉಳುವ ಯೋಗಿಯನು ಉಳ್ಳವರೆದುರಿಗೆ ನೊಗ ಹೊರಿಸಿ ನಿಲ್ಲಿಸಿದ್ದಾರೆ - ಸಹದೇವ ಯರಗೊಪ್ಪ, ಗದಗ ::::::::::::::::::::::::::::::::::::::::::::::::::::::::::::::::::::::::::::::::::: ಗಜಲ್ ವಿವರಣೆ: ಡಾ. ವಾಯ್.ಎಂ.ಯಾಕೊಳ್ಳಿ ನಮ್ಮ ನಡುವಿನ ಶ್ರೇಷ್ಠ ಗಜಲ್ ಕಾರರಲ್ಲಿ ಸ...
ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಸಂಶೋಧನಾ ವೇದಿಕೆ. ಶಂಕರ ನಿಂಗನೂರ