ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮೇ, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕರ್ನಾಟಕ ವಿಶ್ವವಿದ್ಯಾಲಯದ ಶಿಲ್ಪಿ ರ‍್ಯಾಂಗ್ಲರ್ ಡಾ.ಡಿ.ಸಿ.ಪಾವಟೆ

ಕರ್ನಾಟಕ ವಿಶ್ವವಿದ್ಯಾಲಯದ ಶಿಲ್ಪಿ ರ‍್ಯಾಂಗ್ಲರ್ ಡಾ.ಡಿ.ಸಿ.ಪಾವಟೆ ಒಂ ದು ಕ್ಷೇತ್ರದಲ್ಲಿ ಸಾಧಿಸಬೇಕಾದುದೆಲ್ಲವನ್ನೂ ಸಾಧಿಸಿ, ತಮ್ಮ ಪಾಲಿನ ಕರ್ತವ್ಯವನ್ನು ನಿರ್ವಹಿಸುವಲ್ಲಿ ದಕ್ಷತೆಯನ್ನು ತೋರಿ, ಯಶಸ್ಸುಗಳಿಸಿದ ಕೆಲವೇ ಮಹತ್ವದ ವ್ಯಕ್ತಿಗಳಲ್ಲಿ ಪದ್ಮಭೂಷಣ ಡಾ.ಡಿ.ಸಿಪಾವಟೆ ಅವರು ಒಬ್ಬರು. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮಮದಾಪುರ ಎಂಬ ಗ್ರಾಮದಲ್ಲಿ ಅಗಸ್ಟ ೨, ೧೮೯೯ ರಂದು ಚಿಂತಪ್ಪ ಮತ್ತು ಶಾಂತವೀರಮ್ಮ ಎಂಬ ಆದರ್ಶ ದಂಪತಿಗಳ ಉದರದಲ್ಲಿ ಜನಿಸಿದ ಡಾ.ಡಿ.ಸಿ.ಪಾವಟೆ ಅವರು ಒಂದುವರೆ ವರ್ಷದವರಿದ್ದಾಗಲೇ ತಾಯಿಯನ್ನು ಕಳೆದುಕೊಂಡು ತಂದೆಯ ಪಾಲನೆ-ಪೋಷಣೆಯಲ್ಲಿಯೇ ಬೆಳೆದು ದೊಡ್ಡವರಾದರು. ಮಮದಾಪುರ, ಗೋಕಾಕ ಮತ್ತು ರಬಕವಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪಡೆದು, ್ಲ ಧಾರವಾಡದ ಕರ್ನಾಟಕ ಕಾಲೇಜನ್ನು ಸೇರಿ ಉಚ್ಛ ಶಿಕ್ಷಣವನ್ನುಪೂರೈಸಿದರು. ಮುಂದೆ ೧೯೨೪-೨೫ ರ ಅವಧಿಯಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣವನ್ನು ಕೈಗೊಂಡು, ಗಣಿತಶಾಸ್ತçದಲ್ಲಿನ ಸಾಧನೆಗಾಗಿ ರ‍್ಯಾಂಗ್ಲರ್ ಪದವಿ ಪಡೆದು ನಾಡಿಗೆ ಕೀರ್ತಿ ತಂದರು. ಸತತ ಪ್ರಯತ್ನ, ಶ್ರದ್ಧೆ ಮತ್ತು ಜಾಣ್ಮೆಯಿಂದ ಅಧ್ಯಯನ ಮಾಡಿದರೆ ಎಂಥ ಪದವಿಯನ್ನಾದರೂ ಪಡೆಯಬಹುದು ಎಂಬುದನ್ನು ತಮ್ಮ ಸಾಧನೆಯ ಮೂಲಕ ತೋರಿಸಿಕೊಟ್ಟರು. ಈ ಸಂದರ್ಭದಲ್ಲಿ ಡಾ.ಪಾವಟೆ ಅವರು ಅನೇಕ ಮಿತ್ರರನ್ನು ಸಂಪಾದಿಸಿಕೊಂಡರಲ್ಲದೆ, ಛಲಬಿಡದ ವಿಕ್ರಮನಂತೆ ಫ್ರಾನ್ಸ್ ದೇಶಕ್ಕೆ ಹೋಗಿ ಫ್ರೆಂಚ್ ಭ...

ಹಲವು ಪ್ರಥಮ ಅಧ್ವರ್ಯು ಪ್ರೊ. ಕೆ.ಜಿ.ಕುಂದಣಗಾರ

ಹಲವು ಪ್ರಥಮಗಳ ಅಧ್ವರ್ಯ ಕೆ . ಜಿ. ಕುಂದಣಗಾರ 20ನೆಯ ಶತಮಾನದ ಆರಂಭಕಾಲೀನ ಪಂಡಿತ ಪ್ರಮುಖರಲ್ಲಿ ಪ್ರೊ.ಕೆ.ಜಿ. ಕುಂದಣಗಾರ ಅವರದು  ಬಹು ದೊಡ್ಡ ಹೆಸರು. ಶ್ರೇಷ್ಠ ಸಂಶೋಧಕರಾಗಿ, ವಿಮರ್ಶಕರಾಗಿ, ಸೃಜನಶೀಲ ಬರಹಗಾರರಾಗಿ, ಹರಟೆ-ಪ್ರಬಂಧಕಾರರಾಗಿ ಅವರು ಮಾಡಿದ ಕಾರ್ಯ ಬಹು ಮೌಲಿಕವಾದುದು. ಉತ್ತರ ಕರ್ನಾಟಕದ ಮೊದಲ ಕನ್ನಡ ಎಂ.ಎ. ಪದವೀಧರ, ಮೊದಲ ಕನ್ನಡ ಪ್ರಾಧ್ಯಾಪಕ, ಮೊದಲ ಕನ್ನಡ ಪಿಎಚ್‌.ಡಿ. ಪದವಿಗಳ ಮಾರ್ಗದರ್ಶಿ ಹೀಗೆ ಹಲವು ಹತ್ತು ಪ್ರಥಮಗಳಲ್ಲಿ ಪ್ರಥಮರಾಗಿ, ಗುರುಗಳ  ಗುರುವಾಗಿ ಕನ್ನಡವನ್ನು ಕಟ್ಟಿ ಬೆಳೆಸಿದವರು ಪ್ರೊ.ಕುಂದಣಗಾರ ಅವರು. ಅಸಂಖ್ಯಾತ ಕನ್ನಡ ವಿದ್ಯಾರ್ಥಿಗಳ, ಅಧ್ಯಾಪಕರ ಬಳಗವನ್ನು ನಿರ್ಮಿಸಿ, ಕನ್ನಡ ಪರಂಪರೆಯ ನಿರ್ಮಾತೃವೆನಿಸಿದರು.  ಇಂಥ ಒಬ್ಬ ಆದರ್ಶವ್ಯಕ್ತಿ ನಡೆದು ಬಂದ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ. ಅವರು ಜನಿಸಿದ್ದು ಗೋಕಾಕ ತಾಲೂಕಿನ ಕೌಜಲಗಿ ಎಂಬ ಚಿಕ್ಕಗ್ರಾಮದಲ್ಲಿ. ಪತ್ತಾರರ ಮನೆತನದ ಗಿರಿಯಪ್ಪ-ಶಾಕಾಂಬರಿ ದಂಪತಿಗಳ ಆರುಜನ ಮಕ್ಕಳಲ್ಲಿ ಶ್ರೀ ಕಲ್ಲಪ್ಪನವರು ಆಗಸ್ಟ್  14, 1895ರಂದು ಜನಿಸಿದರು. ಇವರು ಹುಟ್ಟಿದ ಎರಡೇ ವರ್ಷಕ್ಕೆ ತಂದೆ, ಅದಾದ ಮರುವರ್ಷವೇ ತಾಯಿ ಕಣ್ಮುಚ್ಚಿದರು. ಸ್ವಲ್ಪೇ ದಿನದಲ್ಲಿ ಸಹೋದರ-ಸಹೋದರಿಯರನ್ನು ಕಳೆದುಕೊಂಡು ಕಷ್ಟಗಳ ಸರಮಾಲೆಯನ್ನು ಎದುರಿಸಿದರು. ಕಲ್ಲಪ್ಪ ಆರೇಳು ವರ್ಷದವನಾಗುತ್ತಲೆ ವಿದ್ಯಾಭ್ಯಾಸವನ್ನು ಕೈಗೊಳ್ಳುವಂತಹ ಪರಿಸರ ಇರದೇ ಇ...