ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಅಕ್ಟೋಬರ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಭಾರತಿ ಮದಭಾವಿ ಅವರ ನನ್ನೊಳಗಿನ ನಾನು ಕವನ ಸಂಕಲನದ ಕುರಿತು ಡಾ. ವ್ಹಾಯ್.ಎಂ.ಯಾಕೊಳ್ಳಿ ಅವರ ಬರಹ

ಕವಿತೆಯಂದರೆ ಮನದ ಮಾತು.ತನ್ನೊಂದಿಗೆ ತಾನು ಸದಾ ಸ್ಪಂದಿಸುವ ,ತನ್ನ ಭಾವನೆಗೆ ತಾನು ನಿಷ್ಠನಾಗಿರುವ ,ತನ್ನೊಳಗನ್ನು ಬಿಚ್ಚಿ‌ಮಾತನಾಡುಕವಿತೆಯಂದರೆ ಮನದ ಮಾತು.ತನ್ನೊಂದಿಗೆ ತಾನು ಸದಾ ಸ್ಪಂದಿಸುವ ,ತನ್ನ ಭಾವನೆಗೆ ತಾನು ನಿಷ್ಠನಾಗಿರುವ ,ತನ್ನೊಳಗನ್ನು ಬಿಚ್ಚಿ‌ಮಾತನಾಡುವ ಸಂವಾದ. ಹೀಗಾಗಿ ವರುಷಕ್ಕೆ ಸಾವಿರಾರು ಕವನ ಸಮಕಲನ ಬಂದರು ಪ್ರತಿ ಸಂಕಲನವೂ ಒಂದಿಷ್ಟು ಹೊಸತನ್ನು ,ವಿಶಿಷ್ಟತೆಯನ್ನು ಹೊತ್ತು ತಂದಿರುತ್ತದೆ.ಅದಕ್ಕೆ ಕವಿ ಪಂಪ ಕಾವ್ಯವನ್ನು ಉರಿತು " ಇದು ನಿಚ್ಚಂ ಪೊಸತು ಅರ್ಣವಂಬೋಲ್ ಅತಿಗಂಭೀರಂ " ಎಂದದಗದ್ದು.‌ನಮ್ಮ ಹೊರಿಯರು ಕವಿತೆಯನ್ನು  ಉದಧಿ,ಸಮುದ್ರಕ್ಕೆ ಹೋಲೊಸಿದರು.ಕಾರಣ ಸಮುದ್ರ ದ ಪ್ರತಿ ಅಲೆಯೂ ಒಡಲೊಳಗಿಂದ ಬರುವ ಹೊಸಾಲೆ.ಮತ್ತು ನಿತ್ಯ ನೂತನ ಅಲ್ಲಿ ಹಳತೆಂಬುದು ಇಲ್ಲ. ಗೋಕಾವಿ ನಾಡಿನ ಭರವಸೆಯ ಕವಯಿತ್ರಿ ಶ್ರೀ ಮತಿ ಭಾರತಿ‌ ಮದಭಾವಿಯವರು ಕಾವ್ಯ ಕ್ಷೇತ್ರಕ್ಕೆ ಹೊಸಬರೇನೂ ಅಲ್ಲ.ಸಾಹಿತ್ಯ ಸಂಘಟನೆಯ ಮೂಲಕ ,ಭಾವಯಾನ ' ಎಂಬ ಸಂಘಟನೆಯ ಮೂಲಕ ಪ್ರತಿ ತಿಂಗಳೂ ಅನೃಕ ಸಾಹಿತ್ಯ ಕಾರ್ಯಕ್ರಮ ಮಾಡುತ್ತಾ ಬಂದವರು.  ಅವರು ತಾವು ಮಾತ್ರವಲ್ಲ, ತಮ್ಮ ಸುತ್ತಲಿನ ವರನ್ನು ಸೇರಿಸಿಕೊಂಡು ಸಾಹಿತ್ಯ ಚಟುವಟಿಕೆಯಲ್ಲಿ ನಿತ್ಯ ಕೃಷಿ‌ ಮಾಡುತ್ತ ಬಂದಿದ್ದಾರೆ. ಸಂಕಲನಕ್ಕೆ ಮುನ್ನುಡಿ ಬರೆದ ಹಿರಿಯ ಸಾಹಿತಿಗಳಾದ ಶ್ರೀ ಚಂದ್ರಶೇಖರ ಅವರು ಗುರುತಿಸಿದಂತೆ ಒಂದು ತಾಲೂಕು ಪ್ರದೇಶದಲ್ಲಿ ಮಹಿಳೆಯರೇ ಸ್ವಂತ ಸಂಘಟನ