ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಆಗಸ್ಟ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸುರೇಶ ಮುದ್ದಾರ ಅವರ "ಸಂಬಂಧಗಳೆ ಹಾಗೆ"ಕವಿತೆ: ಡಾ. ವ್ಹಾಯ್.ಎಂ.ಯಾಕೊಳ್ಳಿ ಅವರ ವಿಮರ್ಶೆ

ಸಂಬಂಧಗಳೆ ಹಾಗೆ ಎಷ್ಟೋ ವರ್ಷ ಒಟ್ಟಿಗಿದ್ದ  ಗಟ್ಟಿ ಸಂಬಂಧಗಳು ಯಾವುದೋ ಬಿರುಗಾಳಿಗೆ ಸಿಕ್ಕು ನೆಲಕ್ಕುರುಳಿವೆ ಯಾವುದೋ ಗತಕಾಲದ ವೈಭವದ ಸಾಮ್ರಾಜ್ಯದಂತೆ ಎಂದೂ ಶಿಥಿಲಗೊಳ್ಳುವುದಿಲ್ಲವೆಂಬ ಸಂಬಂಧಗಳೂ ಸ್ವಾರ್ಥಕ್ಕೊ, ಸೆಳೆತಕ್ಕೊ, ಅನುಮಾನಕ್ಕೊ ಅವಮಾನಕ್ಕೊ ಸಿಲುಕಿ ನಲುಗಿ ಹೋಗಿವೆ ಚಾಡಿ ಮಾತಿಗೆ ಕಿವಿಗೊಟ್ಟ ಅರಮನೆಗಳಂತೆ ಅಂದು ಅರಮನೆಯ ಸಿಂಹಾಸನಕ್ಕೆ ಹೃದಯವಿದ್ದಿದ್ದರೆ ಕಿಟಕಿ, ಬಾಗಿಲುಗಳೆಲ್ಲ ತೆರೆದುಕೊಂಡಿದ್ದರೆ ಅರಮನೆಯಲ್ಲಿ  ಸ್ವಚ್ಛ ಗಾಳಿ ಶುಭ್ರ ಬೆಳಕು ತುಂಬಿಕೊಂಡಿರುತ್ತಿತ್ತು ಆದರೆ, ಅರಮನೆಯ ಸಿಂಹಾಸನಕ್ಕಂದು ತುಕ್ಕು ಹಿಡಿದೂ ಕಿಟಕಿ, ಬಾಗಿಲು, ಗೋಡೆಳೆಲ್ಲ ಬಿರುಕು ಬಿಟ್ಟವು ಅದಕ್ಕಾಗಿ ಅಲ್ಲವೆ ಅರಮನೆಗೊಂದು ಮಹಾಮನೆ ಹುಟ್ಟಿಕೊಂಡಿದ್ದು, ನೆತ್ತರ ಕೋಡಿ ಹರಿದ್ದದ್ದು, ಕಲ್ಯಾಣದ ತುಂಬೆಲ್ಲ ಬೆಳಕು ಚೆಲ್ಲಿದ್ದು  ವಜ್ರ ವೈಡ್ಯೂರ್ಯಗಳಿಂದ ಮೆರೆದ ವೈಭವದ ಸಾಮ್ರಾಜ್ಯವಿಂದು ಪಾಳು ಬಿದ್ದ ಅರಮನೆಗಳನ್ನು ಕೋಟೆಗಳನ್ನು ಸುತ್ತುತ್ತ ಕರುಳು ಹಿಂಡಿದ ಒಂದೊಂದು ಕತೆ ಹೇಳುತ್ತ ವ್ಯಥೆ ಪಡುತ್ತಿದೆ ನಮ್ಮವರೆ ನನಗೆ ಈ ಗತಿ ತಂದರಲ್ಲ ಎಂದು.   ಹೌದು ಈ ಸಂಬಂಧಗಳೆ ಹಾಗೆ ನಿನ್ನೆ ಇದ್ದದ್ದು ಇಂದು ಯಾರದೋ ಇಂದು ಇದ್ದದ್ದು ನಾಳೆ ಇನ್ನ್ಯಾರದೊ ಕೋಟೆ ಕೊತ್ತಲು ಅರಮನೆಗಳ  ಸಂಬಂಧ ಶಿಥಿಲುಗೊಂಡಿದೆ ಗೋಡೆಗಳ ಬಿರುಕಿನಿಂದ ಹಕ್ಕಿಗಳು ಕಟ್ಟಿದ  ಗೂಡುಗಳಲ್ಲಿನ ಸಂಬಂಧ   ಗಟ್ಡಿಗೊಂಡಿದೆ  ಬೆಚ