ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನವರಿ, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸುರೇಶ ಮುದ್ದಾರರ ಕವಿತೆ: ವರಗುರು, ಶ್ರೀದತ್ತನಿಗೆ

ವರಗುರು, ಶ್ರೀದತ್ತನಿಗೆ             ಅನುದಿನವು ಮೂಡನದಿ ಉದಯಿಸುವ ರವಿಯಂತೆ ಚಣಚಣವು ನೀ ಬರುವೆ ಮಿಂಚಿನಂತೆ ಬಂದು ಮೂಡಲ ಮನೆಯ ಮುತ್ತುಗಳ ರಾಶಿಯಲಿ ನಿನ್ನ ಹಾಡಿನು ಉಲಿದು ಕಿರಣದಂತೆ  ಆಗಸದ ಕಡಲಾಚೆ  ನಿನ್ನಿರವು ನಿಂತಿಹುದು ಆಳದಲಿ ಬಹು ಆಳ ನಿನ್ನಾತ್ಮವು ಬದುಕಿನಾ ಬಂಡಿಯಲಿ ಬೆಂದು ಬಂದರು ನೀನು ಮುಕುಟರತ್ನವು ನಿನ್ನ ಬದುಕಿನಿರವು ಸಾಧನೆಯ ಕೇರಿಯಲಿ ನಿಂದು ನೀ ಕೈಮಾಡಿ ಕರೆದು ತೋರಿಸಿದೆ ಗುರು ದರುಶನ ತಾಂಬುಲದ ತುಟಿಯಂತೆ ಮುಡಿಯಲ್ಲಿ ಮಲ್ಲಿಗೆಯು  ಸಂಜೆ ಹೊನ್ನಿನ ನೀರ ಕಡಲಾಚೆಯು ಗರಿ ಬಿಚ್ಚಿ ನೀ ಹಾಡೆ ಅರಳು ಮರಳಿನ ಮೇಲೆ ಬೆಳಗು ಮೂಡಲು ಅಲ್ಲಿ ಉಯ್ಯಾಲೆಯು ನಾದಲೀಲೆಗೆ ನಮನ ಗಂಗಾವತರಣದಲಿ ಶ್ರಾವಣದಿ ಸಖೀಗೀತ ನಭೋವಾಣಿಯು ಹೃದಯ ಸಮುದ್ರದಿ ಮಿಂದು ಸೂರ್ಯಪಾನವ ಮಾಡಿ ಬಾಲಬೋಧೆಗೆ ನಿಂತ ಶ್ರೀಮಾತೆಗೆ ಉತ್ತರಾಯಣ ಕಾಲ ಯಕ್ಷ ಯಕ್ಷಿಗೆ ನಮನ ಕಾವ್ಯವೈಖರಿಯಿಂದ ವಿನಯ ಸಂಚಯವು ಮುಕ್ತಕಂಠದಿ ಹಾಡಿ ನಾಕುತಂತಿಯ ಮೀಟಿ ಜೀವಲಹರಿಯೆ ನಮ್ಮ ಒಲವೇ ಬದುಕು ಚೈತನ್ಯಪೂಜೆಗದು ಮತ್ತೆ ಶ್ರಾವಣ ಬಂತು ಸಾಹಿತ್ಯ ಮೇರುವಿನ ವಿರಾಟ್ ಸ್ವರೂಪವು ಕನ್ನಡದ ವರಕವಿಯೆ ಭೂತಾಯಿ ವರಸುತನೆ ಚತುರೋಕ್ತಿ ನುಡಿಗಳ ಶಬ್ಧಗಾರುಡಿಗ ಅರವಿಂದರನುಯಾಯಿ ಭಗವತಿಯ ವೇದದನಿ ಧಾರಾನಗರದಿ ನಿಂದ ದತ್ತಾತ್ರೇಯ ಯುಗಯುಗದ ವಾತ್ಸಲ್ಯ ರಸದ ಹೊನಲನು ಹರಿಸಿ ಒಲವ ಬಳ್ಳಿಯನೆಲ್ಲ ಹಬ್ಬಿತಬ್ಬಿ ನನ್ನಾತ್ಮ ನೀ ಗುರುವೆ ಸ್ವಚ್ಛಂದದಾಯಕನೆ ನೆಲೆಸೆನ್ನ ಹೃದಯದೊಳು ಅಂಬಿಕಾತನ