ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಏಪ್ರಿಲ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಶಾಸ್ತ್ರೀ

ಉತ್ತರ ಪ್ರದೇಶದ ಮುಘಲ್ ಸರೈನಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರನ್ನು ರೈಲಿನಿಂದ ಹೊರದೂಡಿ ಕೊಲ್ಲಲಾಯ್ತು. ನೇತಾಜಿ ಸುಭಾಷ್ ಚಂದ್ರ ಬೋಸ್ ಕಥೆ ಏನಾಯಿತು ಎಂಬುದು ಸ್ಪಷ್ಟವಾಗಿ ಯಾರಿಗೂ ತಿಳಿಯಲೇ ಇಲ್ಲ. ಹೋಮಿ ಜಹಾಂಗೀರ್ ಭಾಭಾ ಎಂಬ ಅಣು ವಿಜ್ಞಾನಿ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದರು. ಈ ಎಲ್ಲ ಸಾವುಗಳ ಬಗ್ಗೆ ತನಿಖೆಯಾಗಬೇಕು ಎಂದು ಯಾರು ಎಷ್ಟೇ ಬೊಬ್ಬೆ ಹೊಡೆದರೂ ಆಳುವವರು ಕೇಳುವವರಾಗಿರಲಿಲ್ಲ. ಇಂದಿಗೆ 55 ವರ್ಷದ ಕೆಳಗೆ (ಜನವರಿ 11, 1966) ಈ ದೇಶದ ಪ್ರಧಾನಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದರು. ಆಗ ದೇಶಕ್ಕೆ ದೇಶವೇ ದುಃಖದಲ್ಲಿ ಮುಳುಗಿತು. ತನ್ನ ನಾಯಕನನ್ನು ಕಳೆದುಕೊಂಡ ಕಾಂಗ್ರೆಸ್ ಆಗಲಿ, ಆಗಿನ ಭಾರತ ಸರ್ಕಾರವಾಗಲಿ ಯಾವುದೇ ತನಿಖೆಯನ್ನು ನಿರ್ದೇಶಿಸಲಿಲ್ಲ. ಹೆಜ್ಜೆ ಹೆಜ್ಜೆಗೂ ಅನುಮಾನಗಳೇ ಇರುವ ಅವರ ಸಾವಿನ ಸುತ್ತ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಂದು ನಿಷ್ಪಕ್ಷಪಾತ ತನಿಖೆ ನಡೆಸಬೇಕಿತ್ತು. ತನಿಖೆ ಒತ್ತಟ್ಟಿಗಿರಲಿ. ಪ್ರಧಾನಿಯಾಗಿ ಸತ್ತ ಲಾಲ್ ಬಹದ್ದೂರ್ ಶಾಸ್ತ್ರಿಯವರ ಹೆಣದ ಬಳಿ ಅವರ ಕುಟುಂಬದವರು ಹೋಗದಂತೆ ಮಾಡಿತ್ತು ಅಧಿಕಾರದ ಮದದಲ್ಲಿದ್ದ ನಮ್ಮದೇ ದೇಶದ ಸರ್ಕಾರ. ಇಂದು ನಾನು ಪರಿಚಯಿಸುತ್ತಿರುವ ಪುಸ್ತಕ ಧಾತ್ರಿ ಪ್ರಕಾಶನದ ಶ್ರೀ ಎಸ್ ಉಮೇಶ್ ಬರೆದಿರುವ ‘ತಾಷ್ಕೆಂಟ್ ಡೈರಿ.’ ಮೈಸೂರಿನವರಾದ ಉಮೇಶ್ ಅವರು ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿರುವ ತಾಷ್ಕೆಂಟ್ ಫೈಲ್ಸ್, ಅನುಜ್ ಧರ್ ಬರೆದಿರುವ “Your Prime